WPL 2024: ಡೆಲ್ಲಿಯಲ್ಲಿ ಟಾಸ್ ಗೆದ್ದ ಗುಜರಾತ್; ಆರ್ಸಿಬಿ ಮೊದಲು ಬೌಲಿಂಗ್
WPL 2024: ಬೆಂಗಳೂರಿನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋತಿರುವ ಗುಜರಾತ್ ಜೈಂಟ್ಸ್ ಇದೀಗ ದೆಹಲಿಯಲ್ಲಿ ಗೆಲುವಿನೊಂದಿಗೆ ಸೀಸನ್ ಆರಂಭಿಸುವ ಗುರಿಯನ್ನು ಹೊಂದಿದೆ. ಏತನ್ಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಗೆಲುವಿನ ನಾಗಲೋಟವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಲಿದೆ.
ಮಹಿಳೆಯರ ಪ್ರೀಮಿಯರ್ ಲೀಗ್ (WPL- 2024) ನ 13 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಜೈಂಟ್ಸ್ (GG) ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋತಿರುವ ಗುಜರಾತ್ ಜೈಂಟ್ಸ್ ಇದೀಗ ದೆಹಲಿಯಲ್ಲಿ ಗೆಲುವಿನೊಂದಿಗೆ ಸೀಸನ್ ಆರಂಭಿಸುವ ಗುರಿಯನ್ನು ಹೊಂದಿದೆ. ಏತನ್ಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಗೆಲುವಿನ ನಾಗಲೋಟವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಲಿದೆ. ಹೀಗಾಗಿ ಆರ್ಸಿಬಿ ಮೊದಲು ಬೌಲಿಂಗ್ ಮಾಡಲಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.
ಉಭಯ ತಂಡಗಳು
ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಏಕ್ತಾ ಬಿಶ್ತ್, ಸಿಮ್ರಾನ್ ಬಹದ್ದೂರ್, ಆಶಾ ಶೋಬನಾ, ರೇಣುಕಾ ಸಿಂಗ್.
ಗುಜರಾತ್ ತಂಡ: ಬೆತ್ ಮೂನಿ (ನಾಯಕಿ), ಲಾರಾ ವೊಲ್ವಾರ್ಡ್ಟ್, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಆಶ್ಲೀಗ್ ಗಾರ್ಡ್ನರ್, ಕ್ಯಾಥರಿನ್ ಬ್ರೈಸ್, ದಯಾಲನ್ ಹೇಮಲತಾ, ವೇದಾ ಕೃಷ್ಣಮೂರ್ತಿ, ಮೇಘನಾ ಸಿಂಗ್, ಮನ್ನತ್ ಕಶ್ಯಪ್, ಶಬ್ನಮ್ ಶಕೀಲ್.
WPL 2024: ಸ್ಮೃತಿ- ಪೆರ್ರಿ ಆಟಕ್ಕೆ ತಲೆಬಾಗಿದ ಯುಪಿ; ತವರಿನಲ್ಲಿ ಕೊನೆಯ ಪಂದ್ಯ ಗೆದ್ದ ಆರ್ಸಿಬಿ
ಗುಜರಾತ್ಗೆ 5 ಸೋಲು
ಬೆತ್ ಮೂನಿ ನಾಯಕತ್ವದಲ್ಲಿ ಗುಜರಾತ್ ಜೈಂಟ್ಸ್ ಗೆಲುವಿನ ಖಾತೆ ತೆರೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಬಾರಿ ಗುಜರಾತ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಯಾವುದೇ ಶ್ರೇಷ್ಠ ಸಾಧನೆ ತೋರಲು ಸಾಧ್ಯವಾಗಲಿಲ್ಲ. ಡಬ್ಲ್ಯುಪಿಎಲ್ 2024ರ ಮೊದಲ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮುಂಬೈ ಇಂಡಿಯನ್ಸ್ 5 ವಿಕೆಟ್‌ಗಳಿಂದ ಸೋಲಿಸಿತ್ತು. ಇದಾದ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಏಕಪಕ್ಷೀಯವಾಗಿ 8 ವಿಕೆಟ್ ಗಳಿಂದ ಸೋಲಿಸಿತು. ಮೂರನೇ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲು ಮತ್ತು ನಾಲ್ಕನೇ ಟೆಸ್ಟ್‌ನಲ್ಲಿ 25 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.
ಗೆಲುವಿನ ಲಯದಲ್ಲಿ ಆರ್ಸಿಬಿ
ಇನ್ನು ಆರ್ಸಿಬಿ ವಿಚಾರಕ್ಕೆ ಬರುವುದಾದರೆ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ ಸ್ಮೃತಿ ಮಂಧಾನ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಈ ಸೀಸನ್ನಲ್ಲಿ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮಂಧಾನ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಸಂತಸ ತಂದಿದೆ. ಇದಾದ ಬಳಿಕ ಮಧ್ಯಮ ಕ್ರಮಾಂಕ ಕೂಡ ರನ್ ಗಳಿಸುತ್ತಿದೆ. ಬೌಲಿಂಗ್‌ನಲ್ಲಿ ಸೋಫಿ ಡಿವೈನ್, ಸೋಫಿ ಮೊಲಿನಕ್ಸ್, ಆಶಾ ಶೋಭನಾ ಮತ್ತು ರೇಣುಕಾ ಸಿಂಗ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೆ ತಂಡ ಆಡಿರುವ ಐದು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ 2 ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Wed, 6 March 24