Yashasvi Jaiswal: 162 ವಾರಗಳ ಹಿಂದೆ ಜೈಸ್ವಾಲ್ ಬಗ್ಗೆ ರೋಹಿತ್ ನುಡಿದ ಭವಿಷ್ಯ ನಿಜವಾಯ್ತು..!

|

Updated on: Feb 03, 2024 | 3:19 PM

Yashasvi Jaiswal: ಸುಮಾರು 162 ವಾರಗಳ ಹಿಂದೆ, ಯಶಸ್ವಿ ಜೈಸ್ವಾಲ್ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದಾಗ ರೋಹಿತ್ ಶರ್ಮಾ, ಜೈಸ್ವಾಲ್ ಅವರ ಪೋಟೋವನ್ನು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮುಂದಿನ ಸೂಪರ್ಸ್ಟಾರ್ ಎಂದು ಕಾಮೆಂಟ್ ಮಾಡಿದ್ದರು.

Yashasvi Jaiswal: 162 ವಾರಗಳ ಹಿಂದೆ ಜೈಸ್ವಾಲ್ ಬಗ್ಗೆ ರೋಹಿತ್ ನುಡಿದ ಭವಿಷ್ಯ ನಿಜವಾಯ್ತು..!
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಕ್
Follow us on

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯುತ್ತಿದೆ. ಅದರಂತೆ ಮೊದಲ ಇನ್ನಿಂಗ್ಸ್ ಆಡಿ ಮುಗಿಸಿರುವ ಟೀಂ ಇಂಡಿಯಾ (Team India) ಎರಡನೇ ದಿನದಾಟದ ಮೊದಲ ಸೆಷನ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 396 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಬಿಟ್ಟರೆ ಉಳಿದ ಬ್ಯಾಟರ್​ಗಳಿಂದ ಒಂದೇ ಒಂದು ಬಿಗ್ ಇನ್ನಿಂಗ್ಸ್ ಬರಲಿಲ್ಲ. ಹೀಗಾಗಿ ತಂಡ 400ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಒಂದು ವೇಳೆ ಜೈಸ್ವಾಲ್‌ಗೆ ಯಾರದರೊಬ್ಬರು ಸಾಥ್ ನೀಡಿದ್ದರೆ ಭಾರತದ ಸ್ಕೋರ್ 500 ರನ್​ಗಳ ಗಡಿ ದಾಟುತ್ತಿತ್ತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಜೈಸ್ವಾಲ್ 209 ರನ್​ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರು. ಈ ಮೂಲಕ ತಾನು ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದರು. ಈ ನಡುವೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit Sharma) ಬರೋಬ್ಬರಿ 162 ವಾರಗಳ ಹಿಂದೆ ಜೈಸ್ವಾಲ್ ಬಗ್ಗೆ ನುಡಿದಿದ್ದ ಭವಿಷ್ಯದ ಪೋಸ್ಟ್ ಸೋಶಿಯಲ್ ಮೀಡಿಯಾ ಮತ್ತೊಮ್ಮೆ ಸಖತ್ ವೈರಲ್ ಆಗುತ್ತಿದೆ.

ಮುಂದಿನ ಸೂಪರ್​ಸ್ಟಾರ್

ವಾಸ್ತವವಾಗಿ, ಸುಮಾರು 162 ವಾರಗಳ ಹಿಂದೆ, ಯಶಸ್ವಿ ಜೈಸ್ವಾಲ್ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದಾಗ ರೋಹಿತ್ ಶರ್ಮಾ, ಜೈಸ್ವಾಲ್ ಅವರ ಪೋಟೋವನ್ನು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮುಂದಿನ ಸೂಪರ್ಸ್ಟಾರ್ ಎಂದು ಕಾಮೆಂಟ್ ಮಾಡಿದ್ದರು. ಇನ್ನು ವಿಶಾಖಪಟ್ಟಣಂ ಮೈದಾನದಲ್ಲಿ ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸಿದಾಗ ರೋಹಿತ್ ಶರ್ಮಾ ಕೂಡ ಡ್ರೆಸ್ಸಿಂಗ್ ರೂಂನಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು.

620 ರನ್ ಕಲೆಹಾಕಿದ್ದಾರೆ

ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಾಗಿನಿಂದ ತಮ್ಮ ಅಗಾದ ಪ್ರತಿಭೆಯಿಂದ ತಮ್ಮ ಆರಂಭಿಕ ಸ್ಥಾನವನ್ನು ಖಾಯಂ ಮಾಡಿಕೊಳ್ಳುವ ಯತ್ನದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಟೆಸ್ಟ್​ಗೂ ಮೊದಲು ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಭರವಸೆ ಆಟಗಾರ ಎನಿಸಿಕೊಂಡಿದ್ದ ಯಶಸ್ವಿ, ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತಗಳನ್ನು ಮಾಡಿದ್ದಾರೆ. ಇದು 22 ವರ್ಷದ ಯಶಸ್ವಿ ಜೈಸ್ವಾಲ್ ಅವರ ಆರನೇ ಟೆಸ್ಟ್ ಪಂದ್ಯವಾಗಿದ್ದು, ಇಲ್ಲಿಯವರೆಗೆ ಅವರು 65 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 620 ರನ್ ಕಲೆಹಾಕಿದ್ದಾರೆ.

ಪಂದ್ಯ ಹೀಗಿದೆ

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲ ಇನ್ನಿಂಗ್ಸ್ ಆಡಿ ಮುಗಿಸಿರುವ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ 290 ಎಸೆತಗಳಲ್ಲಿ 19 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 209 ರನ್ ಸಿಡಿಸದರೆ, ಶುಭ್​ಮನ್ ಗಿಲ್ 34 ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ರಜತ್ ಪಾಟಿದರ್ 32 ರನ್​ಗಳ ಕೊಡುಗೆ ನೀಡಿದರು. ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ತಲಾ 27 ರನ್ ಕಲೆಹಾಕಿದರೆ, ಆರ್ ಅಶ್ವಿನ್ 20 ರನ್​ಗಳ ಕಾಣಿಕೆ ನೀಡಿದರು.

ಭಾರತವನ್ನು 396 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ ಈ ಸುದ್ದಿ ಬರೆಯುವ ಹೊತ್ತಿಗೆ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕ ಝಾಕ್ ಕ್ರಾಲಿ 76 ರನ್​ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ