IND vs IRE 1st T20 Highlights: ಮಳೆಯಿಂದ ಪಂದ್ಯ ರದ್ದು; ಭಾರತಕ್ಕೆ 2 ರನ್ ಜಯ

|

Updated on: Aug 18, 2023 | 11:09 PM

India vs Ireland T20 Cricket Match Highlights: ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಡಕ್ವರ್ತ್ ಲೂಯಿಸ್ ಪದ್ಧತಿಯಡಿಯಲ್ಲಿ ಭಾರತ 2 ರನ್ಗಳಿಂದ ಗೆದ್ದಿದೆ.

IND vs IRE 1st T20 Highlights: ಮಳೆಯಿಂದ ಪಂದ್ಯ ರದ್ದು; ಭಾರತಕ್ಕೆ 2 ರನ್ ಜಯ
ಭಾರತ- ಐರ್ಲೆಂಡ್

ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಡಕ್ವರ್ತ್ ಲೂಯಿಸ್ ಪದ್ಧತಿಯಡಿಯಲ್ಲಿ ಭಾರತ 2 ರನ್ಗಳಿಂದ ಗೆದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಕರ್ಟಿಸ್ ಕ್ಯಾಂಫರ್ ಅವರ 39 ರನ್ ಹಾಗೂ ಬ್ಯಾರಿ ಮೆಕಾರ್ಥಿ ಚೊಚ್ಚಲ ಟಿ20 ಅರ್ಧಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 139 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್ ಕಳೆದುಕೊಂಡು 47 ರನ್ ಕಲೆಹಾಕಿದಾಗ ಪಂದ್ಯಕ್ಕೆ ಮಳೆ ಎಂಟ್ರಿಕೊಟ್ಟಿತು. ಸಾಕಷ್ಟು ಸಮಯ ಕಾಯ್ದರು ಮಳೆ ನಿಲ್ಲದ ಕಾರಣ ಅಂಪೈರ್​ಗಳು ಪಂದ್ಯವನ್ನು ನಿಲ್ಲಿಸಲು ತೀರ್ಮಾನಿಸಿದರು. ಹೀಗಾಗಿ ಟೀಂ ಇಂಡಿಯಾ ಡಕ್‌ವರ್ತ್ ಲೂಯಿಸ್ ನಿಯಮದಡಿ ಮೊದಲ ಪಂದ್ಯವನ್ನು 2 ರನ್‌ಗಳಿಂದ ಗೆದ್ದುಕೊಂಡಿದೆ.

LIVE NEWS & UPDATES

The liveblog has ended.
  • 18 Aug 2023 11:00 PM (IST)

    ಭಾರತಕ್ಕೆ 2 ರನ್ ಜಯ

    ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯ ಆರಂಭವೇ ಮಳೆಯ ಅಬ್ಬರಕ್ಕೆ ತುತ್ತಾಗಿದ್ದು, ಮೊದಲ ಪಂದ್ಯವನ್ನು ಭಾರತ 2 ರನ್​ಗಳಿಂದ ಗೆದ್ದುಕೊಂಡಿದೆ.

  • 18 Aug 2023 10:29 PM (IST)

    ಮಳೆಯಿಂದಾಗಿ ಪಂದ್ಯ ಸ್ಥಗಿತ

    ಡಬ್ಲಿನ್‌ನಲ್ಲಿ ಭಾರೀ ಮಳೆ ಆರಂಭವಾಗಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ.


  • 18 Aug 2023 09:55 PM (IST)

    ಒಂದೇ ಓವರ್​ನಲ್ಲಿ 2 ವಿಕೆಟ್ ಪತನ

    7ನೇ ಓವರ್‌ನ ಎರಡನೇ ಎಸೆತದಲ್ಲಿ ಯಂಗ್, ಭಾರತಕ್ಕೆ ಮೊದಲ ಹೊಡೆತ ನೀಡಿದರು. ಯಶಸ್ವಿ 24 ರನ್ ಗಳಿಸಿ ಔಟಾದರು. ಮುಂದಿನ ಎಸೆತದಲ್ಲಿ ತಿಲಕ್ ವರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 18 Aug 2023 09:49 PM (IST)

    ಪವರ್ ಪ್ಲೇ ಅಂತ್ಯ

    ಪವರ್ ಪ್ಲೇ ನ ಕೊನೆಯ ಓವರ್​ನಲ್ಲಿ 12 ರನ್ ಬಂದವು. ಈ ಓವರ್​ನಲ್ಲಿ ಜೈಸ್ವಾಲ್ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

    6 ಓವರ್ ಅಂತ್ಯಕ್ಕೆ 45/0

  • 18 Aug 2023 09:45 PM (IST)

    5 ಓವರ್ ಅಂತ್ಯ

    ಐದನೇ ಓವರ್​ನ ಐದನೇ ಎಸೆತದಲ್ಲಿ ರುತುರಾಜ್ ಬ್ಯಾಕ್​ವರ್ಡ್​ ಸ್ಕ್ವೇರ್​ ಲೆಗ್​ನಲ್ಲಿ ಸಿಕ್ಸರ್ ಬಾರಿಸಿದರು.

    5 ಓವರ್ ಅಂತ್ಯಕ್ಕೆ 33/0

  • 18 Aug 2023 09:44 PM (IST)

    ಜೈಸ್ವಾಲ್ ಫೋರ್

    ಮೊದಲ ಓವರ್​ನಲ್ಲಿ ಯಶಸ್ವಿ 2 ಬೌಂಡರಿ ಹೊಡೆದರು. ಮೊದಲ ಬೌಂಡರಿ ಪಾಯಿಂಟ್​ ದಿಕ್ಕಿನಲ್ಲಿ ಬಂದರೆ, 2ನೇ ಬೌಂಡರಿ ಕವರ್​ನಲ್ಲಿ ಬಂತು.

  • 18 Aug 2023 09:39 PM (IST)

    ಟೀಮ್ ಇಂಡಿಯಾದ ಬ್ಯಾಟಿಂಗ್ ಆರಂಭ

    ಟೀಂ ಇಂಡಿಯಾದ ಬ್ಯಾಟಿಂಗ್ ಶುರುವಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ರಿತುರಾಜ್ ಗಾಯಕ್ವಾಡ್ ಕ್ರೀಸ್‌ನಲ್ಲಿದ್ದಾರೆ.

  • 18 Aug 2023 09:10 PM (IST)

    ಮೆಕಾರ್ಥಿ ಅರ್ಧಶತಕ 140 ರನ್ ಟಾರ್ಗೆಟ್

    ಐರ್ಲೆಂಡ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಮೆಕಾರ್ಥಿ ತಮ್ಮ ವೃತ್ತಿಜೀವನದ ಮೊದಲ ಅಂತರರಾಷ್ಟ್ರೀಯ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಅವರ ಇನ್ನಿಂಗ್ಸ್‌ನಿಂದಾಗಿ ಐರ್ಲೆಂಡ್ ಭಾರತಕ್ಕೆ 140 ರನ್‌ಗಳ ಗುರಿ ನೀಡಿದೆ. ಕೊನೆಯ ಐದು ಓವರ್‌ಗಳಲ್ಲಿ ಐರ್ಲೆಂಡ್ 52 ರನ್ ಕಲೆಹಾಕಿತು. ಇದರಲ್ಲಿ ಮೆಕಾರ್ಥಿ ಕೊಡುಗೆಯೇ ಹೆಚ್ಚಿತ್ತು.

  • 18 Aug 2023 09:08 PM (IST)

    ಐರ್ಲೆಂಡ್‌ನ 7ನೇ ವಿಕೆಟ್‌ ಪತನ

    18ನೇ ಓವರ್‌ನ 5ನೇ ಎಸೆತದಲ್ಲಿ ಅರ್ಷದೀಪ್ ಕರ್ಟಿಸ್ ಕ್ಯಾಂಫರ್ ಅವರನ್ನು ಬೌಲ್ಡ್ ಮಾಡಿದರು. ಕ್ಯಾಂಫರ್ 39 ರನ್ ಗಳಿಸಿ ಔಟಾದರು.

  • 18 Aug 2023 08:46 PM (IST)

    15 ಓವರ್ ಅಂತ್ಯ

    ಐರ್ಲೆಂಡ್​ ಇನ್ನಿಂಗ್ಸ್​ನ 15 ಓವರ್​ ಮುಗಿದಿದ್ದು, ತಂಡದ 7 ಮತ್ತು 8ನೇ ಕ್ರಮಾಂಕದ ಬ್ಯಾಟರ್​ಗಳು ಉತ್ತಮ ಜೊತೆಯಾಟ ನಡೆಸುತ್ತಿದ್ದಾರೆ. ಇಬ್ಬರು ಬೌಂಡರಿ ಹಾಗೂ ಸಿಕ್ಸರ್​ಗಳ ನೆರವಿನಿಂದ ತಂಡವನ್ನು ಶತಕದ ಗಡಿಗೆ ತಂದು ನಿಲ್ಲಿಸಿದ್ದಾರೆ.

    15 ಓವರ್ ಅಂತ್ಯಕ್ಕೆ 86/6

  • 18 Aug 2023 08:29 PM (IST)

    ರವಿ ಬಿಷ್ಣೋಯ್​ಗೆ ಮತ್ತೊಂದು ವಿಕೆಟ್

    11ನೇ ಓವರ್​ ಬೌಲ್ ಮಾಡಿದ ರವಿ ಬಿಷ್ಣೋಯ್ ಓವರ್​ನ ಮೂರನೇ ಎಸೆತದಲ್ಲಿ ಮಾರ್ಕ್​ ಅದೀರ್ ಅವರನ್ನು ಎಲ್​ಬಿ ಬಲೆಗೆ ಬೀಳಿಸಿದರು. ಅದೀರ್ 16 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು.

  • 18 Aug 2023 08:26 PM (IST)

    10 ಓವರ್ ಅಂತ್ಯ

    ಐರ್ಲೆಂಡ್ ಇನ್ನಿಂಗ್ಸ್​ನ 10 ಓವರ್​ ಅಂತ್ಯಗೊಂಡಿದೆ. ಈ 10 ಓವರ್​ಗಳಲ್ಲಿ ಐರ್ಲೆಂಡ್ 5 ವಿಕೆಟ್ ಕಳೆದುಕೊಂಡು 57 ರನ್ ಕಲೆಹಾಕಿದೆ.

  • 18 Aug 2023 08:08 PM (IST)

    ಪ್ರಸಿದ್ಧ್​ಗೆ 2ನೇ ವಿಕೆಟ್

    7ನೇ ಓವರ್​ನಲ್ಲಿ ದಾಳಿಗಿಳಿದ ಪ್ರಸಿದ್ಧ್ ಓವರ್​ನ ಮೂರನೇ ಎಸೆತದಲ್ಲಿ ಜಾರ್ಜ್ ಡಾಕ್ರೆಲ್ ವಿಕೆಟ್ ಪಡೆದರು. ಜಾರ್ಜ್ ಡಾಕ್ರೆಲ್ ಕವರ್ ಪಾಯಿಂಟ್​ನಲ್ಲಿ ನಿಂತಿದ್ದ ರುತುರಾಜ್​ಗೆ ಕ್ಯಾಚಿತ್ತು ಔಟಾದರು.

    7 ಓವರ್ ನಂತರ 35/5

  • 18 Aug 2023 08:00 PM (IST)

    4ನೇ ವಿಕೆಟ್ ಪತನ

    ಇನ್​ಸೈಡ್ ಔಟ್ ಹೊಡೆಯುವ ಯತ್ನದಲ್ಲಿ ಐರ್ಲೆಂಡ್ ನಾಯಕ ಸ್ಟಿರ್ಲಿಂಗ್ ಕ್ಲೀನ್ ಬೌಲ್ಡ್ ಆದರು. ಬಿಷ್ಣೋಯಿ ಬೌಲ್ ಮಾಡಿದ 6ನೇ ಓವರ್​ನ 2ನೇ ಎಸೆತದಲ್ಲಿ 4ನೇ ವಿಕೆಟ್ ಪತನವಾಯಿತು.

  • 18 Aug 2023 07:58 PM (IST)

    ಪ್ರಸಿದ್ಧ್​ಗೆ ವಿಕೆಟ್

    ಐದನೇ ಓವರ್ ಬೌಲ್ ಮಾಡಿದ ಪ್ರಸಿದ್ಧ್​ ಕೃಷ್ಣ ಓವರ್​ನ ಕೊನೆಯ ಎಸೆತದಲ್ಲಿ ಟೆಕ್ಟರ್ ವಿಕೆಟ್ ಪಡೆದರು. ಟೆಕ್ಟರ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.

    5 ಓವರ್ ಅಂತ್ಯಕ್ಕೆ 27/3

  • 18 Aug 2023 07:52 PM (IST)

    4 ಓವರ್ ಅಂತ್ಯಕ್ಕೆ 21/2

    ಅರ್ಷದೀಪ್ ಓವರ್​ನಲ್ಲಿ ಸ್ಟಿರ್ಲಿಂಗ್​ ಡೀಪ್ ಮಿಡ್ ವಿಕೆಟ್​ನಲ್ಲಿ ಬೌಂಡರಿ ಬಾರಿಸಿದರು.

  • 18 Aug 2023 07:48 PM (IST)

    ಟೆಕ್ಟರ್ ಬೌಂಡರಿ

    ಮೂರನೇ ಓವರ್ ಬೌಲ್ ಮಾಡಿದ ಬುಮ್ರಾ ಈ ಓವರ್​ನಲ್ಲಿ ಬೌಂಡರಿ ಸೇರಿದಂತೆ ಮತ್ತೆ 6 ರನ್ ನೀಡಿದರು.

  • 18 Aug 2023 07:40 PM (IST)

    ಬುಮ್ರಾಗೆ ಮತ್ತೊಂದು ವಿಕೆಟ್

    ಇನಿಂಗ್ಸ್‌ನ ಮೊದಲ ಓವರ್​ನಲ್ಲಿ ಜಸ್ಪ್ರೀತ್ ಬುಮ್ರಾ ಒಟ್ಟು ನಾಲ್ಕು ರನ್ ನೀಡಿ 2 ವಿಕೆಟ್ ಪಡೆದರು. ರ‍್ಯಾಂಪ್ ಶಾಟ್ ಆಡುವ ಯತ್ನದಲ್ಲಿ ಟಕರ್ ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು.

  • 18 Aug 2023 07:36 PM (IST)

    ಬುಮ್ರಾಗೆ ವಿಕೆಟ್

    ಬುಮ್ರಾ ಎಸೆದ ಮೊದಲ ಎಸೆತದಲ್ಲಿ ಬಾಲ್ಬಿರ್ನಿ ಬೌಂಡರಿ ಬಾರಿಸಿದರು. ಆದರೆ ಎರಡನೇ ಎಸೆತದಲ್ಲಿ ಬುಮ್ರಾ ಅವರನ್ನು ಬೌಲ್ಡ್ ಮಾಡಿದರು.

  • 18 Aug 2023 07:34 PM (IST)

    ಪಂದ್ಯ ಆರಂಭ

    ಪಂದ್ಯ ಆರಂಭವಾಗಿದೆ. ಐರ್ಲೆಂಡ್ ಪರ ಬಾಲ್ಬರ್ನಿ ಹಾಗೂ ಸ್ಟರ್ಲಿಂಗ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಬುಮ್ರಾ ಮೊದಲ ಓವರ್ ಬೌಲ್ ಮಾಡುತ್ತಿದ್ದಾರೆ.

  • 18 Aug 2023 07:17 PM (IST)

    ಐರ್ಲೆಂಡ್ ತಂಡ

    ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಮಾರ್ಕ್ ಅಡೇರ್, ಬೆನ್ ವೈಟ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ಕ್ರೇಗ್ ಯಂಗ್

  • 18 Aug 2023 07:17 PM (IST)

    ಭಾರತ ತಂಡ

    ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ (ನಾಯಕ), ರವಿ ಬಿಷ್ಣೋಯ್.

  • 18 Aug 2023 07:04 PM (IST)

    ಟಾಸ್ ಗೆದ್ದ ಬುಮ್ರಾ

    ಚೊಚ್ಚಲ ನಾಯಕತ್ವದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಜಸ್ಪ್ರೀತ್ ಬುಮ್ರಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟೀಂ ಇಂಡಿಯಾ ಪರ ಇಬ್ಬರು ಪದಾರ್ಪಣೆ ಮಾಡುತ್ತಿದ್ದಾರೆ. ಇವರಲ್ಲಿ ರಿಂಕು ಸಿಂಗ್ ಹಾಗೂ ಪ್ರಸಿದ್ಧ್ ಕೃಷ್ಣ ಸೇರಿದ್ದಾರೆ.

  • 18 Aug 2023 06:44 PM (IST)

    ಡಬ್ಲಿನ್‌ನಲ್ಲಿ ಭಾರೀ ಮಳೆ

    ಡಬ್ಲಿನ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಟಾಸ್‌ನಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.

  • 18 Aug 2023 06:41 PM (IST)

    ಬುಮ್ರಾ ರೀ ಎಂಟ್ರಿ

    ಇಂದು ಭಾರತ ಮತ್ತು ಐರ್ಲೆಂಡ್ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಿಂದ ಒಂದು ವರ್ಷದ ನಂತರ ಜಸ್ಪ್ರೀತ್ ಬುಮ್ರಾ ಮೈದಾನಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾರೆ.

Published On - 6:40 pm, Fri, 18 August 23

Follow us on