IND vs IRE: ಮೊದಲ ಓವರ್ನಲ್ಲೇ 2 ವಿಕೆಟ್ ಉರುಳಿಸಿದ ಬುಮ್ರಾ! ವಿಡಿಯೋ ನೋಡಿ
Jasprit Bumrah: ಬರೋಬ್ಬರಿ 1 ವರ್ಷದ ಬಳಿಕ ಟೀಂ ಇಂಡಿಯಾಕ್ಕೆ ಮರಳಿರುವ ಜಸ್ಪ್ರೀತ್ ಬುಮ್ರಾ ನಿರೀಕ್ಷೆಗೂ ಮೀರಿದ ಕಂಬ್ಯಾಕ್ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಂಡದ ನಾಯಕತ್ವವಹಿಸುವುದರೊಂದಿಗೆ, ಟೀಂ ಇಂಡಿಯಾಕ್ಕೆ ಪುನರಾಗಮನ ಮಾಡಿರುವ ಜಸ್ಪ್ರೀತ್ ಬುಮ್ರಾ ಬೌಲ್ ಮಾಡಿದ ಮೊದಲ ಓವರ್ನಲ್ಲೇ ಎರಡು ವಿಕೆಟ್ ಉರುಳಿಸಿದ್ದಾರೆ.
ಬರೋಬ್ಬರಿ 1 ವರ್ಷದ ಬಳಿಕ ಟೀಂ ಇಂಡಿಯಾಕ್ಕೆ (Team India) ಮರಳಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ನಿರೀಕ್ಷೆಗೂ ಮೀರಿದ ಕಂಬ್ಯಾಕ್ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಂಡದ ನಾಯಕತ್ವವಹಿಸುವುದರೊಂದಿಗೆ, ಟೀಂ ಇಂಡಿಯಾಕ್ಕೆ ಪುನರಾಗಮನ ಮಾಡಿರುವ ಜಸ್ಪ್ರೀತ್ ಬುಮ್ರಾ ಬೌಲ್ ಮಾಡಿದ ಮೊದಲ ಓವರ್ನಲ್ಲೇ ಎರಡು ವಿಕೆಟ್ ಉರುಳಿಸಿ, ತಂಡಕ್ಕೆ ಆರಂಭದಲ್ಲೇ ಯಶಸ್ಸು ತಂದುಕೊಟ್ಟಿದ್ದಲ್ಲದೆ, ತಂಡದ ಆಯ್ಕೆ ಮಂಡಳಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ವಾಸ್ತವವಾಗಿ ಬುಮ್ರಾ ಅಲಭ್ಯತೆಯಿಂದಾಗಿ ಟೀಂ ಇಂಡಿಯಾ ಪ್ರಮುಖ ಸರಣಿಗಳನ್ನು ಕಳೆದುಕೊಳ್ಳಬೇಕಾಯಿತು. ಇದರಲ್ಲಿ ಟಿ20 ವಿಶ್ವಕಪ್ (T20 World Cup) ಸೇರಿದಂತೆ, ಡಬ್ಲ್ಯುಟಿಸಿ ಫೈನಲ್ (WTC Final 2023) ಕೂಡ ಸೇರಿದ್ದವು. ಇದೀಗ ತಂಡಕ್ಕೆ ಭರ್ಜರಿ ಪುನರಾಗಮನ ಮಾಡಿರುವ ಬುಮ್ರಾ, ಏಷ್ಯಾಕಪ್ ಹಾಗೂ ವಿಶ್ವಕಪ್ಗೂ ಮುನ್ನ ತಂಡಕ್ಕಿದ್ದ ಬೌಲಿಂಗ್ ಸಮಸ್ಯೆಯನ್ನು ನಿವಾರಿಸಿದ್ದಾರೆ.
ಮಲೆಹೈಡ್‌ನಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟಾಸ್ ಗೆದ್ದ ಬುಮ್ರಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆ ಬಳಿಕ ಮೊದಲು ದಾಳಿಗಿಳಿದ ಬುಮ್ರಾ ಅವರ ಆರಂಭವು ನಿರೀಕ್ಷೆಯಂತೆಯೇ ಇತ್ತು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 327 ದಿನಗಳ ನಂತರ ಮೊದಲ ಎಸೆತವನ್ನು ಬೌಲ್ ಮಾಡಿದ ಬುಮ್ರಾ ಕೊಂಚ ಲಯ ಕಳೆದುಕೊಂಡರು. ಬುಮ್ರಾ ಬೌಲ್ ಮಾಡಿದ ಮೊದಲ ಎಸೆತ ಲೆಗ್ ಸ್ಟಂಪ್‌ನಲ್ಲಿತ್ತು ಮತ್ತು ಸಂಪೂರ್ಣವಾಗಿ ಓವರ್‌ಪಿಚ್ ಆಗಿತ್ತು. ಆ ಎಸೆತವನ್ನು ಆಂಡಿ ಬಾಲ್ಬಿರ್ನಿ ಫ್ಲಿಕ್ ಮಾಡಿ ಬೌಂಡರಿ ಬಾರಿಸಿದರು.
What a start from the #TeamIndia captain 🤩
Bumrah back to what he does best 💥#IREvIND #JioCinema #Sports18 pic.twitter.com/IryoviTKGo
— JioCinema (@JioCinema) August 18, 2023
2ನೇ ಎಸೆತದಲ್ಲಿ ಮೊದಲ ವಿಕೆಟ್
ಆದರೆ ತಮ್ಮ ಎರಡನೇ ಎಸೆತದಲ್ಲಿ ಮತ್ತೆ ಲಯಕ್ಕೆ ಮರಳಿದ ಬುಮ್ರಾ, ಬಾಲ್ಬಿರ್ನಿ ವಿರುದ್ಧ ಸೇಡು ತೀರಿಸಿಕೊಂಡರು. ತನ್ನ ಎರಡನೇ ಎಸೆತವನ್ನು ಬುಮ್ರಾ, ಆಫ್ ಸ್ಟಂಪ್‌ನ ಹೊರಗೆ ಗುಡ್ ಲೆಂಗ್ತ್ ಬೌಲ್ ಮಾಡಿದರು. ಈ ಚೆಂಡನ್ನು ಆಡುವ ಯತ್ನದಲ್ಲಿ ಬಲ್ಬಿರ್ನಿ ಅವರ ಬ್ಯಾಟ್ ಎಡ್ಜ್ ಆಗಿದ್ದು, ಚೆಂಡು ಸ್ಟಂಪ್‌ಗೆ ಬಡಿಯಿತು.
ಮತ್ತೊಂದು ವಿಕೆಟ್
ಅಂದಹಾಗೆ, ಬುಮ್ರಾ ಅವರ ವಿಕೆಟ್ ಭೇಟೆ ಇಲ್ಲಿಗೆ ನಿಲ್ಲಲಿಲ್ಲ. ಮೂರು ಚೆಂಡುಗಳ ನಂತರ ಬುಮ್ರಾ ಮತ್ತೊಂದು ವಿಕೆಟ್ ಪಡೆದರು. ಓವರ್‌ನ ಐದನೇ ಎಸೆತದಲ್ಲಿ ಅವರು ಲೋರ್ಕನ್ ಟಕ್ಕರ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ಈ ವೇಳೆ ಐರಿಶ್ ಬ್ಯಾಟ್ಸ್‌ಮನ್, ಬುಮ್ರಾ ಅವರ ಚೆಂಡನ್ನು ಸ್ಕೂಪ್ ಮಾಡುವ ಪ್ರಯತ್ನದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು. ಈ ರೀತಿಯಾಗಿ, ಬುಮ್ರಾ ತನ್ನ ಮೊದಲ ಓವರ್‌ನಲ್ಲಿ ಕೇವಲ 4 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಪುನರಾಗಮನವನ್ನು ಸ್ಮರಣೀಯವಾಗಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ