ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ; ಹೊರಬಿತ್ತು ಕೆಎಲ್ ರಾಹುಲ್ ಫಿಟ್ನೆಸ್ ಅಪ್‌ಡೇಟ್! ಶ್ರೇಯಸ್ ಕಥೆ ಏನು?
KL Rahul: ಕೆಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿದ್ದು, ಏಷ್ಯಾಕಪ್ ತಂಡದಲ್ಲಿ ಅವರ ಆಯ್ಕೆ ಈಗ ಖಚಿತವಾಗಿದೆ ಎಂದು ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ. ವರದಿಯ ಪ್ರಕಾರ, ರಾಹುಲ್ ಈ ವಾರವೇ ಮ್ಯಾಚ್ ಸಿಮ್ಯುಲೇಶನ್ ಪ್ರಾರಂಭಿಸಿದ್ದು, ನಿರಂತರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಐಪಿಎಲ್ನಲ್ಲಿ (IPL 2023) ಗಾಯಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಕನ್ನಡಿಗ ಕೆಎಲ್ ರಾಹುಲ್ (KL Rahul) ಇದೀಗ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ (ODI World Cup 2023) ಆಡುತ್ತಾರಾ ಎಂಬ ಪ್ರಶ್ನೆ ಟೀಂ ಇಂಡಿಯಾ ಅಭಿಮಾನಿಗಳನ್ನು ಕಾಡಲಾರಂಭಿಸಿತ್ತು. ಆದರೆ ಇದೀಗ ಕೆಎಲ್ ರಾಹುಲ್ ಅವರ ಫಿಟ್ನೆಸ್ ವರದಿ ಹೊರಬಿದ್ದಿದ್ದು, ಈ ವಿಕೆಟ್ ಕೀಪರ್ ಬ್ಯಾಟರ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ರಿಹ್ಯಾಬ್ನಲ್ಲಿರುವ ರಾಹುಲ್, ದೀರ್ಘಕಾಲ ಬ್ಯಾಟಿಂಗ್ ಮಾಡುವುದರ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಿದ್ದು, ರಾಹುಲ್ ಅವರ ಪ್ರದರ್ಶನ ಎನ್ಸಿಎಗೆ ತೃಪ್ತಿ ನೀಡಿದೆ ಎಂದು ವರದಿಯಾಗಿದೆ.
ಅಲ್ಲದೆ ಕೆಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿದ್ದು, ಏಷ್ಯಾಕಪ್ ತಂಡದಲ್ಲಿ ಅವರ ಆಯ್ಕೆ ಈಗ ಖಚಿತವಾಗಿದೆ ಎಂದು ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ. ವರದಿಯ ಪ್ರಕಾರ, ರಾಹುಲ್ ಈ ವಾರವೇ ಮ್ಯಾಚ್ ಸಿಮ್ಯುಲೇಶನ್ ಪ್ರಾರಂಭಿಸಿದ್ದು, ನಿರಂತರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವರದಿಯಾಗಿದ್ದು, ಇದೇ ಶುಕ್ರವಾರದಿಂದ ರಾಹುಲ್ ವಿಕೆಟ್ ಕೀಪಿಂಗ್ ಕೂಡ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
Asia Cup 2023: ಏಷ್ಯಾಕಪ್ನಲ್ಲಿ ಕೆಎಲ್ ರಾಹುಲ್ರನ್ನು ಆಡಿಸಬಾರದು ಎಂದ ರವಿಶಾಸ್ತ್ರಿ..!
ಆಯ್ಕೆ ಬಹುತೇಕ ಖಚಿತ
ಮೇ ತಿಂಗಳ ಆರಂಭದಲ್ಲಿ ಐಪಿಎಲ್ ಪಂದ್ಯದ ವೇಳೆ ರಾಹುಲ್ ತೊಡೆಯ ಗಾಯಕ್ಕೆ ಒಳಗಾಗಿದ್ದರು. ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಹುಲ್ ಅಂದಿನಿಂದ ಎನ್‌ಸಿಎಯಲ್ಲಿ ರಿಹ್ಯಾಬ್ನಲ್ಲಿದ್ದರು. ಆದರೆ, ಕೆಲ ದಿನಗಳ ಹಿಂದೆಯಷ್ಟೇ ರಾಹುಲ್ ಏಷ್ಯಾಕಪ್‌ಗೆ ಫಿಟ್ ಆಗುವುದಿಲ್ಲ ಎಂಬ ವದಂತಿ ಹರಿದಾಡಿತ್ತು. ಆದರೆ ಕ್ಷಿಪ್ರವಾಗಿ ಚೇತರಿಸಿಕೊಂಡಿರುವ ರಾಹುಲ್ ಅಭ್ಯಾಸ ಪಂದ್ಯದ ಸಮಯದಲ್ಲಿ ಬ್ಯಾಟಿಂಗ್ ಮಾಡುವಾಗ ಅದ್ಭುತ ಫಿಟ್‌ನೆಸ್ ತೋರಿಸಿದ್ದಾರೆ ಎಂದು ವರದಿಯಾಗಿದೆ.
ಏಷ್ಯಾಕಪ್‌ಗೆ ಟೀಂ ಇಂಡಿಯಾದ ಆಯ್ಕೆ ಆಗಸ್ಟ್ 21 ಸೋಮವಾರ ನಡೆಯಲಿದ್ದು, ಅದಕ್ಕೂ ಮುನ್ನ ಏಕದಿನ ಮಾದರಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಸಂಕಷ್ಟ ಎದುರಿಸುತ್ತಿದ್ದ ಟೀಂ ಇಂಡಿಯಾಗೆ ಈ ಸುದ್ದಿ ಧೈರ್ಯ ತುಂಬಿದೆ. ರಾಹುಲ್ ಆಗಮನದಿಂದ ಆ ಸಮಸ್ಯೆ ದೂರವಾಗಲಿದೆ. ಅವರು ವಿಕೆಟ್ ಕೀಪಿಂಗ್ ಜೊತೆಗೆ ಮತ್ತೊಬ್ಬ ಬ್ಯಾಟ್ಸ್‌ಮನ್ ಆಗಿಯೂ ತಂಡಕ್ಕೆ ಬಲ ತಂದುಕೊಡಲಿದ್ದಾರೆ.
ಅಯ್ಯರ್ ಇನ್ನು ಕಾಯಬೇಕು
ಆದರೆ, ರಾಹುಲ್ ಹೊರತಾಗಿ ಶ್ರೇಯಸ್ ಅಯ್ಯರ್ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ ಮತ್ತು ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎನಿಸುತ್ತಿದೆ. ಶ್ರೇಯಸ್ ಬೆನ್ನುನೋವಿನಿಂದ ತೊಂದರೆಗೀಡಾಗಿದ್ದು, ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲಿಯೇ ತಂಡವನ್ನು ತೊರೆದಿದ್ದರು. ಇನ್ನೆರಡು ದಿನದಲ್ಲಿ ಶ್ರೇಯಸ್ ಬಗ್ಗೆ ನಿರ್ಧಾರ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಶ್ರೇಯಸ್ ಕೂಡ ಕೆಲವು ದಿನಗಳ ಹಿಂದೆ ಬ್ಯಾಟಿಂಗ್ ಆರಂಭಿಸಿದ್ದರು. ಒಂದು ವೇಳೆ ಶ್ರೇಯಸ್ ಏಷ್ಯಾಕಪ್‌ಗೆ ಫಿಟ್ ಆಗದಿದ್ದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ತಂಡಕ್ಕೆ ಮರಳುವ ಸಾಧ್ಯತೆ ಇದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:49 am, Sat, 19 August 23