IND vs IRE 1st T20: ಸಂಜುಗೆ ಕೊನೆಯ ಅವಕಾಶ? ಐರ್ಲೆಂಡ್ ವಿರುದ್ಧ ಭಾರತ ಸಂಭಾವ್ಯ ತಂಡ ಹೀಗಿದೆ

IND vs IRE 1st T20: ಏಷ್ಯಾಕಪ್​ಗೂ ಮುನ್ನ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಮಾಡಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಬದಲಾಗಿ ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ.

IND vs IRE 1st T20: ಸಂಜುಗೆ ಕೊನೆಯ ಅವಕಾಶ? ಐರ್ಲೆಂಡ್ ವಿರುದ್ಧ ಭಾರತ ಸಂಭಾವ್ಯ ತಂಡ ಹೀಗಿದೆ
ಟೀಂ ಇಂಡಿಯಾImage Credit source: insidesport
Follow us
ಪೃಥ್ವಿಶಂಕರ
|

Updated on: Aug 17, 2023 | 8:07 AM

ಏಷ್ಯಾಕಪ್​ಗೂ (Asia Cup 2023) ಮುನ್ನ ಟೀಂ ಇಂಡಿಯಾ, ಐರ್ಲೆಂಡ್ ಪ್ರವಾಸ (India vs Ireland) ಮಾಡಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ (Team India) ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಬದಲಾಗಿ ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ, ಈ ಟಿ20 ಸರಣಿಯ ಸಂದರ್ಭದಲ್ಲಿ ಕೆಲವು ಆಟಗಾರರು ಟೀಂ ಇಂಡಿಯಾ ಪುನರಾಗಮನ ಮಾಡಿದ್ದು ತಂಡದ ನಾಯಕತ್ವವನ್ನು ಜಸ್ಪ್ರೀತ್ ಬುಮ್ರಾಗೆ (Jasprit Bumrah) ನೀಡಲಾಗಿದೆ. ವೇಗಿಯೊಬ್ಬ ಮೊದಲ ಬಾರಿಗೆ ಭಾರತ ಟಿ20 ತಂಡವನ್ನು ಮುನ್ನಡೆಸುತ್ತಿರುವುದರಿಂದ ಬುಮ್ರಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅಲ್ಲದೆ ಏಷ್ಯಾಕಪ್​ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಯುವ ಆಟಗಾರರಿಗೆ ಈ ಸರಣಿ ಬಹಳ ಮಹತ್ವದ್ದಾಗಿದೆ.

ಆರಂಭಿಕರು ಯಾರು?

ಮೇಲೆ ಹೇಳಿದಂತೆ ತಂಡದಲ್ಲಿ ಅನುಭವಿಗಳಿಲ್ಲ. ಹೀಗಾಗಿ ಯುವಕರಿಗೆ ಉತ್ತಮ ಪ್ರದರ್ಶನ ನೀಡಲು ಇದು ಒಂದೊಳ್ಳೆ ಅವಕಾಶವಾಗಿದೆ. ಉಪನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗುವುದು ಸ್ಪಷ್ಟವಾಗಿದೆ. ಹಾಗೆಯೇ ವೆಸ್ಟ್ ಇಂಡೀಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ತಿಲಕ್ ವರ್ಮಾ ಮೂರನೇ ಕ್ರಮಾಂಕವನ್ನು ತುಂಬಲ್ಲಿದ್ದಾರೆ. ಈ ಸರಣಿಗೆ ಶಿವಂ ದುಬೆ ಕೂಡ ಆಯ್ಕೆಯಾಗಿದ್ದು, ಅವರಿಗೂ ಸ್ಥಾನ ಸಿಗುವ ಸಾಧ್ಯತೆಗಳಿವೆ. ಗೇಮ್ ಫಿನಿಶರ್ ಪಾತ್ರದಲ್ಲಿ ರಿಂಕು ಸಿಂಗ್ ಚೊಚ್ಚಲ ಟಿ20 ಪಂದ್ಯವನ್ನು ಆಡಲಿದ್ದಾರೆ.

IND vs IRE: ಐರ್ಲೆಂಡ್ ಪ್ರವಾಸದಲ್ಲಿ ಭಾರತದ ಈ ನಾಲ್ವರು ಕ್ರಿಕೆಟಿಗರಿಗೆ ಸಿಗಲಿದೆ ಚೊಚ್ಚಲ ಅವಕಾಶ

ಸಂಜುಗೆ ಮತ್ತೊಂದು ಅವಕಾಶ?

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಸಂಜುಗೆ ಇದು ಕೊನೆಯ ಅವಕಾಶವಾಗಿದೆ. ವಿಂಡೀಸ್ ವಿರುದ್ಧ ಬ್ಯಾಟ್ ಮಾಡಿದ ಮೂರು ಪಂದ್ಯಗಳಲ್ಲಿ ಸಂಜು ಕ್ರಮವಾಗಿ 12, 7 ಮತ್ತು 13 ಸ್ಕೋರ್‌ ದಾಖಲಿಸಿದ್ದರು. ಹೀಗಾಗಿ ಸಂಜು ಸ್ಯಾಮ್ಸನ್​ಗೆ ಈ ಪ್ರವಾಸದಲ್ಲಿ ಅವಕಾಶ ಸಿಗುವುದು ಅನುಮಾನವಾಗಿದೆ. ಏಕೆಂದರೆ ಮತ್ತೊಬ್ಬ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಆಯ್ಕೆಯಾಗಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಯಾರಿಗೆ ಅವಕಾಶ?

ಇನ್ನು ನಾಯಕ ಜಸ್ಪ್ರೀತ್ ಬುಮ್ರಾ ಸುಮಾರು ಒಂದು ವರ್ಷದ ಬಳಿಕ ತಂಡಕ್ಕೆ ಮರಳುತ್ತಿದ್ದು, ಬೌಲಿಂಗ್ ವಿಭಾಗದಲ್ಲಿ ಅವರೊಂದಿಗೆ ಪ್ರಸಿದ್ಧ್ ಕೃಷ್ಣ ಆಡುವುದು ಖಚಿತವಾಗಿದೆ. ಈ ಇಬ್ಬರೊಂದಿಗೆ ಎಡಗೈ ವೇಗಿಯಾಗಿ ಅರ್ಷದೀಪ್ ಸಿಂಗ್ ಆಡಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯ್ ಮೊದಲ ಆಯ್ಕೆಯಾಗಲಿದ್ದು, ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ಅವರು 7ನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಸ್ಥಾನಕ್ಕಾಗಿ ಸೆಣಸಾಡಲಿದ್ದಾರೆ.

ಭಾರತ ಸಂಭಾವ್ಯ ತಂಡ: ರುತುರಾಜ್ ಗಾಯಕವಾಡ, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಶಿವಂ ದುಬೆ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ / ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ / ಶಹಬಾಜ್ ಅಹ್ಮದ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ (ನಾಯಕ).

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್