ಭಾರತ ಮತ್ತು ಐರ್ಲೆಂಡ್ (India and Ireland) ನಡುವಿನ ಮೊದಲ ಟಿ20 ಪಂದ್ಯದಲ್ಲಿ ವೇಗದ ಬೌಲರ್ ಉಮ್ರಾನ್ ಮಲಿಕ್ (Umran Malik) ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೂನ್ 26 ಭಾನುವಾರ ಡಬ್ಲಿನ್‌ನ ಮಲಾಹೈಡ್‌ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಉಮ್ರಾನ್ ಮಲಿಕ್ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗಲಿದ್ದಾರೆ. ಪಂದ್ಯದ ಮೊದಲು, ತಂಡದ ಹಿರಿಯ ಬೌಲರ್ ಮತ್ತು ಉಪನಾಯಕ ಭುವನೇಶ್ವರ್ ಕುಮಾರ್ (Bhuvneshwar Kumar) ಅವರು ಟೀಮ್ ಇಂಡಿಯಾ ಕ್ಯಾಪ್ ನೀಡುವ ಮೂಲಕ ಉಮ್ರಾನ್ ಅವರನ್ನು ಭಾರತ ತಂಡಕ್ಕೆ ಸ್ವಾಗತಿಸಿದರು. ಇದರೊಂದಿಗೆ ಉಮ್ರಾನ್ ಮಲಿಕ್ ಅವರನ್ನು ಟೀಂ ಇಂಡಿಯಾ ಜೆರ್ಸಿಯಲ್ಲಿ ನೋಡುವ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿತು.
A dream come true moment!!Congratulations to Umran Malik who is all set to make his T20I debut for #TeamIndia
He gets ? No.98 #IREvIND pic.twitter.com/8JXXsRJFbW
— BCCI (@BCCI) June 26, 2022
ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20 ಸರಣಿಯ ಸಮಯದಲ್ಲಿ, ಹಲವಾರು ದಿಗ್ಗಜ ಕ್ರಿಕೆಟಿಗರು ಕೂಡ ಉಮ್ರಾನ್‌ನನ್ನು ನೀಲಿ ಜರ್ಸಿಯಲ್ಲಿ ನೋಡಲು ಬಯಸುವುದಾಗಿ ಹೇಳಿದರು. ಆದರೆ, ಅದು ಆಗಲಿಲ್ಲ. ಪ್ರೋಟೀಸ್ ವಿರುದ್ಧದ ಐದು ಟ್ವೆಂಟಿ-20 ಪಂದ್ಯಗಳಿಗೆ ಕೋಚ್ ದ್ರಾವಿಡ್ ಮತ್ತು ನಾಯಕ ಪಂಥ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಇದರಿಂದ ಉಮ್ರಾನ್ ಮೀಸಲು ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಯಿತು.
ಆದಾಗ್ಯೂ, ಹಿರಿಯ ಆಟಗಾರರ ಗುಂಪಿನ ಅನುಪಸ್ಥಿತಿಯಲ್ಲಿ, ಐರ್ಲೆಂಡ್ ಪ್ರವಾಸವನ್ನು ಘೋಷಿಸಲಾಯಿತು. ಇದರೊಂದಿಗೆ ಉಮ್ರಾನ್ ಅವರ ಚೊಚ್ಚಲ ಪಂದ್ಯವನ್ನು ಮಾಡುವ ಅಭ್ಯಾಸ ಪ್ರಾರಂಭವಾಯಿತು. ಈ ಸರಣಿಯಲ್ಲಿ ಭಾರತದ ಹಿರಿಯ ಸ್ಟಾರ್ ಬೌಲರ್ ಮತ್ತು ತಂಡದ ಉಪನಾಯಕ ಭುವನೇಶ್ವರ್ ಕುಮಾರ್ ಅವರಿಂದ ಉಮ್ರಾನ್ ಚೊಚ್ಚಲ ಕ್ಯಾಪ್ ಪಡೆದರು.
ಉಮ್ರಾನ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದರಲ್ಲಿ ನಿಪುಣರು. ಉಮ್ರಾನ್ ಐಪಿಎಲ್-2022ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಜೆರ್ಸಿಯಲ್ಲಿ ಆಡಿದ್ದರು. ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಡೇಲ್ ಸ್ಟೇಯ್ನ್ ಆ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಹೀಗಾಗಿ ಉಮ್ರಾನ್ ಅವರಿಂದ್ದ ಸಾಕಷ್ಟು ಕಲಿತಿದ್ದಾರೆ. ಐಪಿಎಲ್-15ರ 14 ಪಂದ್ಯಗಳಲ್ಲಿ ಆರೆಂಜ್ ಆರ್ಮಿ ಪರ ಉಮ್ರಾನ್ 22 ವಿಕೆಟ್ ಕಬಳಿಸಿದ್ದಾರೆ. ಈ ಬಾರಿ ರಾಷ್ಟ್ರೀಯ ತಂಡದ ಜೆರ್ಸಿಯಲ್ಲಿ ಅವಕಾಶವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಉಮ್ರಾನ್ ವಿಶೇಷ ಗಮನ ಹರಿಸಲಿದ್ದಾರೆ.
Published On - 8:31 pm, Sun, 26 June 22