AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ನಲ್ಲಿ ಮೊದಲ ವಿಕೆಟ್ ಪಡೆದ ಕೊಹ್ಲಿ! ಹುಚ್ಚೆದು ಕುಣಿದ ಫ್ಯಾನ್ಸ್, ಅನುಷ್ಕಾ; ವಿಡಿಯೋ ನೋಡಿ

Virat Kohli, ICC World Cup 2023: ವಾಸ್ತವವಾಗಿ ಬರೋಬ್ಬರಿ 6 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆಯುತ್ತಿರುವ ಕೊಹ್ಲಿ, ನೆದರ್ಲೆಂಡ್ಸ್ ವಿರುದ್ಧ ವಿಕೆಟ್ ಪಡೆದು ಮಿಂಚಿದ್ದಾರೆ. ವಿಶೇಷವೆಂದರೆ ಏಕದಿನ ವಿಶ್ವಕಪ್​ನಲ್ಲಿ ಕೊಹ್ಲಿಗೆ ಇದು ಮೊದಲ ವಿಕೆಟ್​ ಸಹ ಆಗಿದೆ.

ವಿಶ್ವಕಪ್​ನಲ್ಲಿ ಮೊದಲ ವಿಕೆಟ್ ಪಡೆದ ಕೊಹ್ಲಿ! ಹುಚ್ಚೆದು ಕುಣಿದ ಫ್ಯಾನ್ಸ್, ಅನುಷ್ಕಾ; ವಿಡಿಯೋ ನೋಡಿ
ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on:Nov 12, 2023 | 8:47 PM

Share

ಬೆಂಗಳೂರಿನ ಎಂ ಚಿನ್ನಸ್ವಾಮಿ  ಮೈದಾನದಲ್ಲಿ (M. Chinnaswamy Stadium) ನಡೆಯುತ್ತಿರುವ ಭಾರತ ಹಾಗೂ ನೆದರ್ಲೆಂಡ್ಸ್ (India Vs Netherlands) ನಡುವಿನ ವಿಶ್ವಕಪ್ (ICC ODI World Cup 2023) ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ತಂಡದ ಟಾಪ್ ಐವರು ಬ್ಯಾಟರ್​ಗಳ 50+ ಸ್ಕೋರ್​ನಿಂದಾಗಿ ನೆದರ್ಲೆಂಡ್ಸ್ ತಂಡಕ್ಕೆ 411 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಇನ್ನು ಭಾರತ ನೀಡಿರುವ ಈ ಗುರಿ ಬೆನ್ನಟ್ಟಿರುವ ನೆದರ್ಲೆಂಡ್ಸ್ ತಂಡ ಆಗಾಗ್ಗೆ ವಿಕೆಟ್ ಕಳೆದುಕೊಳ್ಳುತ್ತ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ. ಕೇವಲ 100 ರನ್​ಗಳಿಗೆ ತಂಡದ ಪ್ರಮುಖ 4 ವಿಕೆಟ್ ಪತನವಾಗಿದೆ. ಈ 4 ವಿಕೆಟ್​ಗಳಲ್ಲಿ ಒಂದು ವಿಕೆಟ್​ ಕಿಂಗ್ ಕೊಹ್ಲಿ (Virat Kohli) ಉರುಳಿಸಿದ್ದು ಎಂಬುದು ಎಲ್ಲರಲ್ಲೂ ಅಚ್ಚರಿ ಮೂಡಿಸುವ ಸಂಗತಿಯಾಗಿದೆ. ವಾಸ್ತವವಾಗಿ ಬರೋಬ್ಬರಿ 6 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆಯುತ್ತಿರುವ ಕೊಹ್ಲಿ, ನೆದರ್ಲೆಂಡ್ಸ್ ವಿರುದ್ಧ ವಿಕೆಟ್ ಪಡೆದು ಮಿಂಚಿದ್ದಾರೆ. ವಿಶೇಷವೆಂದರೆ ಏಕದಿನ ವಿಶ್ವಕಪ್​ನಲ್ಲಿ ಕೊಹ್ಲಿಗೆ ಇದು ಮೊದಲ ವಿಕೆಟ್​ ಸಹ ಆಗಿದೆ.

ಈ ವಿಶ್ವಕಪ್​ನಲ್ಲಿ 2ನೇ ಬಾರಿಗೆ ಬೌಲಿಂಗ್

ವಾಸ್ತವವಾಗಿ 2023 ರ ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದು ಇದು ಎರಡನೇ ಬಾರಿಗೆ.ಇದಕ್ಕೂ ಮೊದಲು ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ 3 ಬಾಲ್​ಗಳನ್ನು ಬೌಲ್ ಮಾಡಿದ್ದರು. ಅದಕ್ಕೆ ಕಾರಣವೂ ಇದ್ದು, ಹಾರ್ದಿಕ್ ಪಾಂಡ್ಯ ಇಂಜುರಿಯಿಂದಾಗಿ ಓವರ್ ಮಧ್ಯದಲ್ಲೇ ಮೈದಾನವನ್ನು ತೊರಿದಿದ್ದರಿಂದಾಗಿ ಪಾಂಡ್ಯ ಓವರ್​ನ ಉಳಿದ 3 ಎಸೆತಗಳನ್ನು ಕೊಹ್ಲಿ ಬೌಲ್ ಮಾಡಿದ್ದರು. ಆದರೆ ಆ ವೇಳೆ ಕೊಹ್ಲಿಗೆ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ.

‘ನಿನ್ನಿಂದ ಮಾತ್ರ ಇದು ಸಾಧ್ಯ’; ಮ್ಯಾಕ್ಸ್​ವೆಲ್ ದ್ವಿಶತಕದ ಆಟಕ್ಕೆ ಕಿಂಗ್ ಕೊಹ್ಲಿ ಕ್ಲೀನ್ ಬೌಲ್ಡ್

ನೆದರ್ಲೆಂಡ್ಸ್ ನಾಯಕನ ಬಲಿ ಪಡೆದ ವಿರಾಟ್

ಆದರೆ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ಕೊಹ್ಲಿ, ತಾವು ಬೌಲ್ ಮಾಡಿದ 2ನೇ ಓವರ್​ನಲ್ಲೇ ವಿಕೆಟ್ ಪಡೆದಿದ್ದಾರೆ. ತಮ್ಮ ಖೋಟಾದ 2ನೇ ಓವರ್​ ಬೌಲ್ ಮಾಡಲು ಬಂದ ಕೊಹ್ಲಿ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಬಲಿ ಪಡೆದರು. ತಮ್ಮ ಇನ್ನಿಂಗ್ಸ್​ನಲ್ಲಿ 30 ಎಸೆತಗಳನ್ನು ಎದುರಿಸಿದ ಸ್ಕಾಟ್ ಎಡ್ವರ್ಡ್ಸ್ ಕೇವಲ 17 ರನ್ ಗಳಿಸಿ ಕೆಎಲ್ ರಾಹುಲ್ ಅವರಿಗೆ ಕ್ಯಾಚ್ ನೀಡಿದರು. ಇದು ಬರೋಬ್ಬರಿ 9 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಉರುಳಿಸಿದ ಮೊದಲ ವಿಕೆಟ್ ಆಗಿದೆ. ಇದಕ್ಕೂ ಮುನ್ನ ವಿರಾಟ್ 2014 ರಲ್ಲಿ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆದಿದ್ದರು.

ಕೊಹ್ಲಿ ಬೌಲಿಂಗ್ ಮಾಡುವುದನ್ನು ಕುಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಅವರು ವಿಕೆಟ್ ಉರುಳಿಸಿದ್ದು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಅದರಲ್ಲೂ ಪಂದ್ಯ ವೀಕ್ಷಿಸಲು ಬಂದಿದ್ದ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ, ಕೊಹ್ಲಿ ವಿಕೆಟ್ ಪಡೆಯುತ್ತಿದ್ದಂತೆ ಚೇರ್​ನಿಂದ ಮೇಲೆದ್ದು ಚಪ್ಪಾಳೆ ತಟ್ಟುತ್ತಾ ಸಂಭ್ರಮಾಚರಣೆ ಮಾಡಿದರು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಕೊಹ್ಲಿಗೆ ಇದು ಐದನೇ ವಿಕೆಟ್

ಇನ್ನು ವಿರಾಟ್ ಕೊಹ್ಲಿಯ ಬೌಲಿಂಗ್ ವಿಚಾರಕ್ಕೆ ಬಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದುವರೆಗೆ 644 ಎಸೆತಗಳನ್ನು ಎಸೆದಿರುವ ಕೊಹ್ಲಿ, 677 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿಗೆ ಐದನೇ ವಿಕೆಟ್ ಆಗಿದೆ. ಅವರು ಈ ಹಿಂದೆ ಅಲೈಸ್ಟರ್ ಕುಕ್, ಕ್ರೇಗ್ ಕೀಸ್ವೆಟರ್, ಬ್ರೆಂಡನ್ ಮೆಕಲಮ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Sun, 12 November 23

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!