ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ ಪಡೆ 259 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಉತ್ತಮ ಆರಂಭ ಪಡೆದುಕೊಂಡ ಹೊರತಾಗಿಯೂ ನ್ಯೂಜಿಲೆಂಡ್ ತಂಡದ ಕೆಳ ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಆರಂಭದಲ್ಲೇ ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದ್ದ ಕಿವೀಸ್ ಪಡೆ, ಎರಡು ಮತ್ತು ಮೂರನೇ ಸೆಷನ್ನಲ್ಲಿ ವಾಷಿಂಗ್ಟನ್ ಸುಂದರ್ ದಾಳಿಗೆ ನಲುಗಿ ರನ್ಗಳಿಗೆ 259 ಆಲೌಟ್ ಆಯಿತು. ಭಾರತದ ಪರ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ವಾಷಿಂಗ್ಟನ್ ಸುಂದರ್ ಪ್ರಮುಖ 7 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ 3 ವಿಕೆಟ್ ಪಡೆದರು. ಅಂದರೆ ಭಾರತದ ಕೇವಲ ಇಬ್ಬರು ಸ್ಪಿನ್ನರ್ಗಳು ಕಿವೀಸ್ ಪಡೆಯ ಅಷ್ಟೂ ವಿಕೆಟ್ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು.
ಮೊದಲ ಟೆಸ್ಟ್ನಂತೆ ಎರಡನೇ ಟೆಸ್ಟ್ ಪಂದ್ಯದಲ್ಲೂ ಕಿವೀಸ್ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ನಾಯಕ ಟಾಮ್ ಲೇಥಮ್ ಮತ್ತೊಮ್ಮೆ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡವಿ ಕೇವಲ 15 ರನ್ಗಳಿಗೆ ಸುಸ್ತಾದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ವಿಲ್ ಯುಂಗ್ ಕೂಡ 18 ರನ್ ಬಾರಿಸಿ ಪೆವಿಲಿಯ್ನ ಸೇರಿಕೊಂಡರು. ಆದರೆ ಆ ಬಳಿಕ ಜೊತೆಯಾದ ಕಾನ್ವೇ ಹಾಗೂ ರಚಿನ್ ರವೀಂದ್ರ ಜೋಡಿ, ಟೀಂ ಇಂಡಿಯಾ ಬೌಲರ್ಗಳನ್ನು ಕಾಡಿತು. ಅಂತಿಮವಾಗಿ ಅಶ್ವಿನ್ ಸ್ಪಿನ್ ದಾಳಿಯ ಮುಂದೆ ಮಂಡಿಯೂರಿದ ಕಾನ್ವೇ 76 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ನಂತರ ರವೀಂದ್ರ ಜೊತೆಗೂಡಿದ ಡೇರೆಲ್ ಮಿಚೆಲ್ ಬಿಗ್ ಇನ್ನಿಂಗ್ಸ್ ಆಡದಿದ್ದರೂ, ರವೀಂದ್ರಗೆ ಉತ್ತಮ ಸಾಥ್ ನೀಡಿದರು. ಹೀಗಾಗಿ ರವೀಂದ್ರ ತಮ್ಮ ಅರ್ಧಶತಕ ಪೂರೈಸಿದರು. ಆ ಬಳಿಕವೂ ಶತಕದತ್ತ ಸಾಗುತ್ತಿದ್ದ ರವೀಂದ್ರ, ಸುಂದರ್ ಎಸೆದ ಮ್ಯಾಜಿಕಲ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ರವೀಂದ್ರ ಔಟಾದ ಬಳಿಕ ಕಿವೀಸ್ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಹೀಗಾಗಿ 197 ರನ್ಗಳಿಗೆ ಕೇವಲ 4 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಪಡೆ ಕೇವಲ 62 ರನ್ಗಳ ಅಂತರದಲ್ಲಿ ಉಳಿದ 6 ವಿಕೆಟ್ಗಳನ್ನು ಕಳೆದುಕೊಂಡಿತು. ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮಿಚೆಲ್ ಸ್ಯಾಂಟ್ನರ್ ತಂಡಕ್ಕೆ 33 ರನ್ಗಳ ಕಾಣಿಕೆ ನೀಡಿದರು.
Innings Break!
Superb bowling display from #TeamIndia! 💪
7⃣ wickets for Washington Sundar
3⃣ wickets for R AshwinScorecard ▶️ https://t.co/YVjSnKCtlI #INDvNZ | @Sundarwashi5 | @ashwinravi99 | @IDFCFIRSTBank pic.twitter.com/TsWb5o07th
— BCCI (@BCCI) October 24, 2024
ವಾಸ್ತವವಾಗಿ ವಾಷಿಂಗ್ಟನ್ ಸುಂದರ್ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ರಣಜಿಯಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಸುಂದರ್ ಅವರನ್ನು ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಆಯ್ಕೆ ಮಾಡಲಾಯಿತು. ಹೀಗೆ ಆಕಸ್ಮಿಕವಾಗಿ ತಂಡಕ್ಕೆ ಎಂಟ್ರಿಕೊಟ್ಟಿದ್ದ ಸುಂದರ್, ಪ್ಲೇಯಿಂಗ್ 11ನಲ್ಲೂ ಅವಕಾಶ ಪಡೆದರು. ಕುಲ್ದೀಪ್ ಯಾದವ್ ಬದಲಿಗೆ ತಂಡ ಸೇರಿಕೊಂಡಿದ್ದ ಸುಂದರ್, ಮೊದಲ ಇನ್ನಿಂಗ್ಸ್ನಲ್ಲಿ ಏಳು ವಿಕೆಟ್ ಪಡೆಯುವ ಮೂಲಕ ವೃತ್ತಿ ಬದುಕಿನ ಶ್ರೇಷ್ಠ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್ನಲ್ಲಿ 23.1 ಓವರ್ ಬೌಲ್ ಮಾಡಿದ ಸುಂದರ್ 59 ರನ್‌ಜ್ ನೀಡಿ ಏಳು ವಿಕೆಟ್ ಪಡೆದರು.
ಈ ಪೈಕಿ ಐವರು ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡಿದ ಸುಂದರ್ ಒಂದು ಎಲ್ಬಿಡಬ್ಲ್ಯೂ ಮತ್ತು ಒಂದು ಕ್ಯಾಚ್ ಔಟ್ ಮಾಡಿದರು. ಸುಂದರ್ ಪಡೆದ 7 ವಿಕೆಟ್ಗಳ ಪೈಕಿ ಅರ್ಧಶತಕ ಸಿಡಿಸಿದ ರಚಿನ್ ರವೀಂದ್ರ, ಡೆರಿಲ್ ಮಿಚೆಲ್, ಟಾಮ್ ಬ್ಲಂಡೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಅಜಾಜ್ ಪಟೇಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಸೇರಿದ್ದವು. ಉಳಿದ ಮೂರು ವಿಕೆಟ್ ಪಡೆದ ಅಶ್ವಿನ್, ನಾಯಕ ಟಾಮ್ ಲೇಥಮ್, ವಿಲ್ ಯಂಗ್ ಮತ್ತು ಡೆವೊನ್ ಕಾನ್ವೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Thu, 24 October 24