ಸುಲಭ ಕ್ಯಾಚ್ ಕೈಚೆಲ್ಲಿದ ಬುಮ್ರಾ! ಮೈದಾನದಲ್ಲೇ ಬೇಸರಗೊಂಡ ಕೊಹ್ಲಿ; ವಿಡಿಯೋ ನೋಡಿ

|

Updated on: Oct 22, 2023 | 5:21 PM

IND vs NZ, ICC World Cup 2023: ಮಿಚೆಲ್ ಕ್ಯಾಚ್ ನೀಡಿದ್ದ ವೇಳೆ 71 ರನ್ ಗಳಿಸಿ ಆಡುತ್ತಿದ್ದರು. ಇದೀಗ ಜೀವದಾನದ ಲಾಭ ಪಡೆದ ಮಿಚೆಲ್ ಶತಕ ಸಿಡಿಸಿ ಮಿಂಚಿದ್ದಾರೆ. ಬುಮ್ರಾ ಅಲ್ಲದೆ ಈ ಪಂದ್ಯದಲ್ಲಿ ಭಾರತ ಇದುವರೆಗೆ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿದೆ.

ಸುಲಭ ಕ್ಯಾಚ್ ಕೈಚೆಲ್ಲಿದ ಬುಮ್ರಾ! ಮೈದಾನದಲ್ಲೇ ಬೇಸರಗೊಂಡ ಕೊಹ್ಲಿ; ವಿಡಿಯೋ ನೋಡಿ
ವಿರಾಟ್ ಕೊಹ್ಲಿ
Follow us on

ವಿಶ್ವಕಪ್​ನಲ್ಲಿ (ICC World Cup 2023) ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ (India Vs New Zealand) ತಂಡವನ್ನು ಧರ್ಮಶಾಲಾದಲ್ಲಿ ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ನ್ಯೂಜಿಲೆಂಡ್ ತಂಡ ಉತ್ತಮ ಸ್ಥಿತಿಯಲ್ಲಿದೆ. ತಂಡ ದ್ವಿಶತಕ ಕೂಡ ಪೂರ್ಣಗೊಳಿಸಿದೆ. ಭಾರತದ ಬೌಲರ್​ಗಳು ಕೂಡ ರನ್ ಬಿಟ್ಟುಕೊಟ್ಟರೂ ಯಾವುದೇ ಕೆಟ್ಟ ಎಸೆತವನ್ನು ಬೌಲ್ ಮಾಡುತ್ತಿಲ್ಲ. ಆದರೆ ಪಂದ್ಯದ ಆರಂಭದಲ್ಲಿ ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದ ರೋಹಿತ್ ಪಡೆ ಇದೀಗ ಮೂರು ಮೂರು ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿ, ಪಂದ್ಯವನ್ನು ಕೈಚೆಲ್ಲುವ ಹಂತಕ್ಕೆ ಬಂದು ನಿಂತಿದೆ.

ಸೂಪರ್ ಕ್ಯಾಚ್ ಹಿಡಿದ ಶ್ರೇಯಸ್

ವಾಸ್ತವವಾಗಿ ನ್ಯೂಜಿಲೆಂಡ್ ಇನ್ನಿಂಗ್ಸ್​ನ ನಾಲ್ಕನೇ ಓವರ್ ಬೌಲ್ ಮಾಡಲು ಬಂದ ಮೊಹಮ್ಮದ್ ಸಿರಾಜ್, ಕಾನ್ವೆರನ್ನು ಬಲೆಗೆ ಬೀಳಿಸಿದ್ದರು. ಈ ಓವರ್‌ನ ಮೂರನೇ ಎಸೆತವನ್ನು ಡೆವೊನ್ ಕಾನ್ವೆ ಲೆಗ್ ಸೈಡ್​ನತ್ತ ಬಾರಿಸಲು ಯತ್ನಿಸಿದರು. ಆದರೆ ಲೆಗ್ ಸೈಡ್​ನ ಫ್ರಂಟ್ ಫೀಲ್ಡಿಂಗ್​ನಲ್ಲಿದ್ದ ಶ್ರೇಯಸ್ ಅಯ್ಯರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಶ್ರೇಯಸ್ ತಮ್ಮ ಎಡ ಭಾಗಕ್ಕೆ ಜಿಗಿದ್ದು ಅತ್ಯುತ್ತಮ ಡೈವಿಂಗ್ ಕ್ಯಾಚ್ ತೆಗೆದುಕೊಂಡರು. ಈ ವೇಳೆ ಟೀಂ ಇಂಡಿಯಾದ ಅದ್ಭುತ ಫೀಲ್ಡಿಂಗ್ ಕಂಡು ಇಡೀ ಮೈದಾನವೇ ಹುಚ್ಚೆದ್ದು ಕುಣಿದಿತ್ತು. ಆದರೆ ಆ ನಂತರ ನಡೆದದ್ದು ಅಭಿಮಾನಿಗಳನ್ನು ನಿರಾಸೆಗೆ ತಳ್ಳಿದೆ.

ಶ್ರೇಯಸ್ ಚಿರತೆಯ ಜಿಗಿತಕ್ಕೆ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡ ಕಾನ್ವೆ..! ವಿಡಿಯೋ ನೋಡಿ

ಸುಲಭ ಕ್ಯಾಚ್ ಬಿಟ್ಟ ಬುಮ್ರಾ

ನ್ಯೂಜಿಲೆಂಡ್​ ಇನ್ನಿಂಗ್ಸ್​ನ 33ನೇ ಓವರ್‌ ಬೌಲ್ ಮಾಡುವ ಜವಬ್ದಾರಿ ಕುಲ್ದೀಪ್ ಹೆಗಲಿಕೆ ಬಿತ್ತು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಮಿಚೆಲ್​ ಬಿಗ್ ಶಾಟ್ ಆಡಲು ಮುಂದಾದರು. ಆದರೆ ಚೆಂಡು ಸರಿಯಾಗಿ ಕನೆಕ್ಟ್ ಆಗಲಿಲ್ಲ. ಹೀಗಾಗಿ ಚೆಂಡು​ ಜಸ್ಪ್ರೀತ್ ಬುಮ್ರಾಗೆ ಸುಲಭ ಕ್ಯಾಚ್ ಹೋಯಿತು. ಆದರೆ ಕ್ಯಾಚ್ ತೆಗೆದುಕೊಳ್ಳುವಲ್ಲಿ ಎಡವಿದ ಬುಮ್ರಾ ಕ್ಯಾಚನ್ನು ಕೈಚೆಲ್ಲಿದಲ್ಲದೆ, ಬೌಂಡರಿಯನ್ನು ನೀಡಿದರು. ಬುಮ್ರಾ ಸುಲಭ ಕ್ಯಾಚ್ ಹಿಡಿಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ಹಾಗಾಗಲಿಲ್ಲ. ಇದನ್ನು ನೋಡಿದ ವಿರಾಟ್ ಕೊಹ್ಲಿ ಕೂಡ ಮೈದಾನದಲ್ಲಿ ಸ್ತಬ್ದರಾದರು.

ಮೂರು ಕ್ಯಾಚ್ ಡ್ರಾಪ್

ಮಿಚೆಲ್ ಕ್ಯಾಚ್ ನೀಡಿದ್ದ ವೇಳೆ 71 ರನ್ ಗಳಿಸಿ ಆಡುತ್ತಿದ್ದರು. ಇದೀಗ ಜೀವದಾನದ ಲಾಭ ಪಡೆದ ಮಿಚೆಲ್ ಶತಕ ಸಿಡಿಸಿ ಮಿಂಚಿದ್ದಾರೆ. ಬುಮ್ರಾ ಅಲ್ಲದೆ ಈ ಪಂದ್ಯದಲ್ಲಿ ಭಾರತ ಇದುವರೆಗೆ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಟೀಂ ಇಂಡಿಯಾದ ಅತ್ಯುತ್ತಮ ಫೀಲ್ಡರ್ ಎನಿಸಿಕೊಂಡಿರುವ ರವೀಂದ್ರ ಜಡೇಜಾ ಇನಿಂಗ್ಸ್‌ನಲ್ಲಿ ರಚಿನ್ ರವೀಂದ್ರ ಅವರ ಸುಲಭ ಅವಕಾಶವನ್ನು ಕೈಬಿಟ್ಟರು. ಇವರ ಬೆನ್ನಲ್ಲೇ ಕೆಎಲ್ ರಾಹುಲ್ ಕೂಡ ಅವಕಾಶ ಕೈಬಿಟ್ಟರು. ಆ ಬಳಿಕ ಇನಿಂಗ್ಸ್‌ನ ಮೂರನೇ ಕ್ಯಾಚ್ ಅನ್ನು ಬುಮ್ರಾ ಕೈಬಿಟ್ಟರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sun, 22 October 23