ಶ್ರೇಯಸ್ ಚಿರತೆಯ ಜಿಗಿತಕ್ಕೆ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡ ಕಾನ್ವೆ..! ವಿಡಿಯೋ ನೋಡಿ

IND vs NZ, ICC World Cup 2023: ಭಾರತದ ಪರ ಬೌಲಿಂಗ್ ಆರಂಭಿಸಿದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರೂ ಉತ್ತಮ ಬೌಲಲಿಂಗ್ ಮಾಡಿದರು. ಹಾಗಾಗಿ ಡೆವೊನ್ ಕಾನ್ವೆಗೆ ಮೊದಲ 3 ಓವರ್‌ಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಡೆವೊನ್ ಕಾನ್ವೆ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದರು.

ಶ್ರೇಯಸ್ ಚಿರತೆಯ ಜಿಗಿತಕ್ಕೆ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡ ಕಾನ್ವೆ..! ವಿಡಿಯೋ ನೋಡಿ
ಶ್ರೇಯಸ್ ಅಯ್ಯರ್
Follow us
ಪೃಥ್ವಿಶಂಕರ
|

Updated on:Oct 22, 2023 | 4:00 PM

ವಿಶ್ವಕಪ್​ನಲ್ಲಿ (ICC World Cup 2023) ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್ (India Vs New Zealand) ಇಂದು ಮುಖಾಮುಖಿಯಾಗಿವೆ. ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಕಿವೀಸ್ ಪರ ಆರಂಭಿಕ ಜೋಡಿಯಾದ ಡೆವೊನ್ ಕಾನ್ವೆ (Devon Conway) ಮತ್ತು ವಿಲ್ ಯಂಗ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಈ ಆರಂಭಿಕ ಜೋಡಿಯನ್ನು ಬೇಗನೇ ಪೆವಿಲಿಯನ್​ಗಟ್ಟುವಲ್ಲಿ ಟೀಂ ಇಂಡಿಯಾದ (Team India) ಬೌಲರ್​ಗಳು ಯಶಸ್ವಿಯಾಗಿದ್ದಾರೆ. ಆರಂಭದಿಂದಲೇ ಈ ಇಬ್ಬರಿಗೆ ಬಿಗ್ ಶಾಟ್ ಆಡಲು ಅವಕಾಶ ನೀಡಿದ ಭಾರತದ ಬೌಲರ್​ಗಳು, ಈ ಇಬ್ಬರನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿ ವಿಕೆಟ್ ಉರುಳಿಸಿದರು.

ಡೈವಿಂಗ್ ಕ್ಯಾಚ್ ತೆಗೆದುಕೊಂಡ ಶ್ರೇಯಸ್

ಭಾರತದ ಪರ ಬೌಲಿಂಗ್ ಆರಂಭಿಸಿದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರೂ ಉತ್ತಮ ಬೌಲಲಿಂಗ್ ಮಾಡಿದರು. ಹಾಗಾಗಿ ಡೆವೊನ್ ಕಾನ್ವೆಗೆ ಮೊದಲ 3 ಓವರ್‌ಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಡೆವೊನ್ ಕಾನ್ವೆ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದರು. ಈ ವೇಳೆ ಪಂದ್ಯದ ನಾಲ್ಕನೇ ಓವರ್ ಬೌಲ್ ಮಾಡಲು ಬಂದ ಮೊಹಮ್ಮದ್ ಸಿರಾಜ್, ಕಾನ್ವೆರನ್ನು ಬಲೆಗೆ ಬೀಳಿಸಿದರು. ಈ ಓವರ್‌ನ ಮೂರನೇ ಎಸೆತವನ್ನು ಡೆವೊನ್ ಕಾನ್ವೆ ಲೆಗ್ ಸೈಡ್​ನತ್ತ ಬಾರಿಸಲು ಯತ್ನಿಸಿದರು. ಆದರೆ ಲೆಗ್ ಸೈಡ್​ನ ಫ್ರಂಟ್ ಫೀಲ್ಡಿಂಗ್​ನಲ್ಲಿದ್ದ ಶ್ರೇಯಸ್ ಅಯ್ಯರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಶ್ರೇಯಸ್ ತಮ್ಮ ಎಡ ಭಾಗಕ್ಕೆ ಜಿಗಿದ್ದು ಅತ್ಯುತ್ತಮ ಡೈವಿಂಗ್ ಕ್ಯಾಚ್ ತೆಗೆದುಕೊಂಡರು.

ಶಮಿಗೆ ಮೊದಲ ಎಸೆತದಲ್ಲೇ ವಿಕೆಟ್

ಸಿರಾಜ್ ಬಳಿಕ ದಾಳಿಗಿಳಿದ ಮೊಹಮ್ಮದ್ ಶಮಿ ಕೂಡ ನ್ಯೂಜಿಲೆಂಡ್‌ಗೆ ಎರಡನೇ ಹೊಡೆತವನ್ನು ನೀಡಿ ತಮ್ಮ ಮೊದಲ ವಿಕೆಟ್ ಪಡೆದರು. ಶಮಿ ತನ್ನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ವಿಲ್ ಯಂಗ್ ಅವರನ್ನು ಬೌಲ್ಡ್ ಮಾಡಿದರು. ಆದ್ದರಿಂದ ಟೀಂ ಇಂಡಿಯಾ ಮೊದಲ 10 ಓವರ್‌ಗಳ ಪವರ್ ಪ್ಲೇನಲ್ಲಿ 2 ವಿಕೆಟ್‌ ಕಬಳಿಸಿದರೆ, ನ್ಯೂಜಿಲೆಂಡ್ 34 ರನ್ ಗಳಿಸಲಷ್ಟೇ ಶಕ್ತವಾಯಿತು.

ರವೀಂದ್ರ ಅರ್ಧಶತಕ

ಆದರೆ ಈ ಎರಡು ಆರಂಭಿಕ ವಿಕೆಟ್​ಗಳ ಬಳಿಕ ಜೊತೆಯಾಟಗಿರುವ ರಚಿನ್ ರವೀಂದ್ರ ಹಾಗೂ ಡೆರೆಲ್ ಮಿಚೆಲ್ ಅದ್ಭುತ ಜೊತೆಯಾಟ ಆಡುತ್ತಿದ್ದಾರೆ. ಭಾರತ ಮೂಲದ ರವೀಂದ್ರ ಅರ್ಧಶತಕ ಸಿಡಿಸಿ ಮಿಂಚಿದರೆ, ಮಿಚೆಲ್ ಅರ್ಧಶತಕದ ಸನಿಹದಲ್ಲಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಆದಷ್ಟು ಬೇಗನೇ ಈ ಇಬ್ಬರ ವಿಕೆಟ್ ಕಬಳಿಸಬೇಕಿದೆ. ಈ ಸುದ್ದಿ ಬರೆಯುವ ವೇಳೆಗೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು 117 ರನ್ ಕಲೆಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Sun, 22 October 23

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ