IND vs NZ ICC World Cup 2023: ನ್ಯೂಝಿಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ
India vs New Zealand, ICC world Cup 2023: ಏಕದಿನ ಕ್ರಿಕೆಟ್ನಲ್ಲಿ ಭಾರತ-ನ್ಯೂಝಿಲೆಂಡ್ ತಂಡಗಳು ಇದುವರೆಗೆ 117 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಟೀಮ್ ಇಂಡಿಯಾ 59 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕಿವೀಸ್ ಪಡೆ 50 ಮ್ಯಾಚ್ಗಳನ್ನು ಗೆದ್ದುಕೊಂಡಿದೆ.
ಏಕದಿನ ವಿಶ್ವಕಪ್ನ 21ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ದ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 273 ರನ್ಗಳಿಗೆ ಆಲೌಟ್ ಆಯಿತು. 274 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 95 ರನ್ ಬಾರಿಸಿ ಮಿಂಚಿದರು. ಪರಿಣಾಮ ಭಾರತ ತಂಡವು 48 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಏಕದಿನ ಕ್ರಿಕೆಟ್ನಲ್ಲಿ ಭಾರತ-ನ್ಯೂಝಿಲೆಂಡ್ ತಂಡಗಳು ಇದುವರೆಗೆ 117 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಟೀಮ್ ಇಂಡಿಯಾ 59 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕಿವೀಸ್ ಪಡೆ 50 ಮ್ಯಾಚ್ಗಳನ್ನು ಗೆದ್ದುಕೊಂಡಿದೆ. ಇನ್ನು 7 ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ, ಒಂದು ಪಂದ್ಯವು ಟೈನಲ್ಲಿ ಅಂತ್ಯ ಕಂಡಿತ್ತು.
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
LIVE Cricket Score & Updates
-
IND vs NZ ICC World Cup 2023 Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
ಮ್ಯಾಟ್ ಹೆನ್ರಿ ಎಸೆದ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ (95).
ಕೊನೆಯ ಎಸೆತದಲ್ಲಿ ಫೋರ್ ಬಾರಿಸಿ ಟೀಮ್ ಇಂಡಿಯಾಗೆ 4 ವಿಕೆಟ್ಗಳ ಜಯ ತಂದುಕೊಟ್ಟ ರವೀಂದ್ರ ಜಡೇಜಾ.
ನ್ಯೂಝಿಲೆಂಡ್- 273 (50)
ಭಾರತ– 274/6 (48)
-
IND vs NZ ICC World Cup 2023 Live Score: ಸಿಕ್ಸ್-ಫೋರ್ ಸಿಡಿಸಿದ ಕೊಹ್ಲಿ
ಟ್ರೆಂಟ್ ಬೌಲ್ಟ್ ಎಸೆದ 47ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ.
4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಕೊಹ್ಲಿ.
93 ರನ್ಗಳೊಂದಿಗೆ ಕ್ರೀಸ್ನಲ್ಲಿರುವ ಕೊಹ್ಲಿ.
ಟೀಮ್ ಇಂಡಿಯಾ ಗೆಲುವಿಗೆ 7 ರನ್ಗಳ ಅವಶ್ಯಕತೆ.
IND 267/5 (47)
-
IND vs NZ ICC World Cup 2023 Live Score: 45 ಓವರ್ಗಳು ಮುಕ್ತಾಯ
45 ಓವರ್ಗಳ ಮುಕ್ತಾಯದ ವೇಳೆಗೆ 248 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.
ಕೊನೆಯ 5 ಓವರ್ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 26 ರನ್ಗಳ ಅವಶ್ಯಕತೆ.
IND 248/5 (45)
IND vs NZ ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಜಡ್ಡು
ರಚಿನ್ ರವೀಂದ್ರ ಎಸೆದ 42ನೇ ಓವರ್ನ 2ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ರವೀಂದ್ರ ಜಡೇಜಾ.
ಟೀಮ್ ಇಂಡಿಯಾಗೆ ಗೆಲ್ಲಲು 48 ಎಸೆತಗಳಲ್ಲಿ 35 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.
IND 239/5 (42)
IND vs NZ ICC World Cup 2023 Live Score: 40 ಓವರ್ಗಳು ಮುಕ್ತಾಯ
40 ಓವರ್ಗಳಲ್ಲಿ 225 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (71) ಹಾಗೂ ರವೀಂದ್ರ ಜಡೇಜಾ (18) ಬ್ಯಾಟಿಂಗ್.
ಭಾರತ ತಂಡಕ್ಕೆ ಗೆಲ್ಲಲು 60 ಎಸೆತಗಳಲ್ಲಿ 49 ರನ್ಗಳ ಅವಶ್ಯಕತೆ.
IND 225/5 (40)
IND vs NZ ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಲಾಕಿ ಫರ್ಗುಸನ್ ಎಸೆದ 36ನೇ ಓವರ್ನ 3ನೇ ಮತ್ತು 4ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರವೀಂದ್ರ ಜಡೇಜಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.
IND 201/5 (36)
IND vs NZ ICC World Cup 2023 Live Score: 5ನೇ ವಿಕೆಟ್ ಪತನ
34ನೇ ಓವರ್ನಲ್ಲಿ ರನೌಟ್ ಆಗಿ ನಿರ್ಗಮಿಸಿದ ಸೂರ್ಯಕುಮಾರ್ ಯಾದವ್.
ಕೇವಲ 2 ರನ್ಗಳಿಸಿ ವಿಕೆಟ್ ಒಪ್ಪಿಸಿದ ಹೊಡಿಬಡಿ ದಾಂಡಿಗ ಸೂರ್ಯ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.
IND 191/5 (34)
IND vs NZ ICC World Cup 2023 Live Score: ಭಾರತ ತಂಡದ 4ನೇ ವಿಕೆಟ್ ಪತನ
ಮಿಚೆಲ್ ಸ್ಯಾಂಟ್ನರ್ ಎಸೆದ 33ನೇ ಓವರ್ನ ಮೊದಲ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದ ಕೆಎಲ್ ರಾಹುಲ್.
35 ಎಸೆತಗಳಲ್ಲಿ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.
IND 182/4 (32.1)
IND vs NZ ICC World Cup 2023 Live Score: ಆಕರ್ಷಕ ಫೋರ್ ಬಾರಿಸಿದ ಕೊಹ್ಲಿ
ಟ್ರೆಂಟ್ ಬೌಲ್ಟ್ ಎಸೆದ 32ನೇ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಸ್ಕ್ವೇರ್ನತ್ತ ಆಕರ್ಷಕ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
ಭಾರತ ತಂಡಕ್ಕೆ ಗೆಲ್ಲಲು 92 ರನ್ಗಳ ಅವಶ್ಯಕತೆ.
IND 182/3 (32)
IND vs NZ ICC World Cup 2023 Live Score: 30 ಓವರ್ಗಳು ಮುಕ್ತಾಯ
ಮ್ಯಾಟ್ ಹೆನ್ರಿ ಎಸೆದ 30ನೇ ಓವರ್ನ ಮೊದಲ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ವಿರಾಟ್ ಕೊಹ್ಲಿ
30 ಓವರ್ಗಳ ಮುಕ್ತಾಯದ ವೇಳೆಗೆ 168 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 168/3 (30)
IND vs NZ ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಕೊಹ್ಲಿ
ರಚಿನ್ ರವೀಂದ್ರ ಎಸೆದ 29ನೇ ಓವರ್ನ ಮೊದಲ ಎಸೆತದಲ್ಲಿ ಲಾಂಗ್ ಆಫ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 160/3 (29)
IND vs NZ ICC World Cup 2023 Live Score: ಕೊಹ್ಲಿ-ರಾಹುಲ್ ಉತ್ತಮ ಬ್ಯಾಟಿಂಗ್
ವಿರಾಟ್ ಕೊಹ್ಲಿ (26) ಹಾಗೂ ಕೆಎಲ್ ರಾಹಲ್ (16) ನಡುವೆ ಉತ್ತಮ ಜೊತೆಯಾಟ.
27 ಓವರ್ಗಳಲ್ಲಿ 147 ರನ್ ಕಲೆಹಾಕಿರುವ ಟೀಮ್ ಇಂಡಿಯಾ.
ಭಾರತ ತಂಡಕ್ಕೆ ಗೆಲ್ಲಲು 127 ರನ್ಗಳ ಅವಶ್ಯಕತೆ
IND 147/3 (27)
IND vs NZ ICC World Cup 2023 Live Score: 25 ಓವರ್ಗಳು ಮುಕ್ತಾಯ
25 ಓವರ್ಗಳ ಮುಕ್ತಾಯದ ವೇಳೆಗೆ 140 ರನ್ ಕಲೆಹಾಕಿದ ಟೀಮ್ ಇಂಡಿಯಾ.
3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 140-3
ರೋಹಿತ್ ಶರ್ಮಾ (46), ಶುಭ್ಮನ್ ಗಿಲ್ (26) ಹಾಗೂ ಶ್ರೇಯಸ್ ಅಯ್ಯರ್ (33) ಔಟ್.
IND vs NZ ICC World Cup 2023 Live Score: ಪಂದ್ಯ ಪುನರಾರಂಭ
16 ಓವರ್ಗಳ ಮುಕ್ತಾಯದ ವೇಳೆಗೆ 102 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 102/2 (16)
ಟೀಮ್ ಇಂಡಿಯಾಗೆ 274 ರನ್ಗಳ ಗುರಿ ನೀಡಿರುವ ನ್ಯೂಝಿಲೆಂಡ್
IND vs NZ ICC World Cup 2023 Live Score: ಮಂಜಿನ ಮುಸುಕು: ಪಂದ್ಯ ಸ್ಥಗಿತ
ಮೈದಾನದಲ್ಲಿ ಮಂಜು ಮುಸುಕಿನ ಸಮಸ್ಯೆ ಎದುರಾಗಿದ್ದು, ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
What a beauty Fogg coming in the ground… Also Interupt The match…#INDvsNZ pic.twitter.com/3SMsSubRjw
— kirti_sharma🦋 (@kirti_sharmaa) October 22, 2023
ಪಂದ್ಯ ಸ್ಥಗಿತಕ್ಕೂ ಮುನ್ನ 2 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ಭಾರತ- 100/2 (15.4)
IND vs NZ ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ 91 ರನ್ ಕಲೆಹಾಕಿದ ಟೀಮ್ ಇಂಡಿಯಾ.
ನ್ಯೂಝಿಲೆಂಡ್ ಪರ 2 ವಿಕೆಟ್ ಕಬಳಿಸಿದ ಲಾಕಿ ಫರ್ಗುಸನ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 91/2 (15)
ರೋಹಿತ್ ಶರ್ಮಾ (46) ಹಾಗೂ ಶುಭ್ಮನ್ ಗಿಲ್ (26) ಔಟ್.
IND vs NZ ICC World Cup 2023 Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ
ಲಾಕಿ ಫರ್ಗುಸನ್ ಎಸೆದ 14ನೇ ಓವರ್ನ 2ನೇ ಎಸೆತದಲ್ಲಿ ಡೇರಿಲ್ ಮಿಚೆಲ್ಗೆ ಕ್ಯಾಚ್ ನೀಡಿದ ಶುಭ್ಮನ್ ಗಿಲ್.
31 ಎಸೆತಗಳಲ್ಲಿ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಟೀಮ್ ಇಂಡಿಯಾ ಆರಂಭಿಕ ಆಟಗಾರ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 84/2 (14)
IND vs NZ ICC World Cup 2023 Live Score: ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ
ಲಾಕಿ ಫರ್ಗುಸನ್ ಎಸೆದ 12ನೇ ಓವರ್ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದ ರೋಹಿತ್ ಶರ್ಮಾ.
40 ಎಸೆತಗಳಲ್ಲಿ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹಿಟ್ಮ್ಯಾನ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 75/1 (12)
IND vs NZ ICC World Cup 2023 Live Score: 10 ಓವರ್ಗಳು ಮುಕ್ತಾಯ
10 ಓವರ್ಗಳ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 63 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 63/0 (10)
ಟೀಮ್ ಇಂಡಿಯಾ 274 ರನ್ಗಳ ಗುರಿ ನೀಡಿರುವ ನ್ಯೂಝಿಲೆಂಡ್.
IND vs NZ ICC World Cup 2023 Live Score: ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ
8 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ.
ಟೀಮ್ ಇಂಡಿಯಾಗೆ ಗೆಲ್ಲಲು 222 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ನ್ಯೂಝಿಲೆಂಡ್- 273 (50)
ಭಾರತ- 52/0 (8)
IND vs NZ ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಟ್ರೆಂಟ್ ಬೌಲ್ಟ್ ಎಸೆದ 7ನೇ ಓವರ್ನ 3ನೇ ಮತ್ತು 4ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್.
ಟೀಮ್ ಇಂಡಿಯಾದಿಂದ ಭರ್ಜರಿ ಬ್ಯಾಟಿಂಗ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 48/0 (7)
IND vs NZ ICC World Cup 2023 Live Score: 5 ಓವರ್ಗಳು ಮುಕ್ತಾಯ
ಟ್ರೆಂಟ್ ಬೌಲ್ಟ್ ಎಸೆದ 5ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
5 ಓವರ್ಗಳ ಮುಕ್ತಾಯದ ವೇಳೆಗೆ 32 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 32/0 (5)
IND vs NZ ICC World Cup 2023 Live Score: ಆಕರ್ಷಕ ಬೌಂಡರಿ
ಮ್ಯಾಟ್ ಹೆನ್ರಿ ಎಸೆದ 4ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಶುಭ್ಮನ್ ಗಿಲ್.
ಟೀಮ್ ಇಂಡಿಯಾದಿಂದ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 26/0 (4)
IND vs NZ ICC World Cup 2023 Live Score: ಹಿಟ್ಮ್ಯಾನ್ ಭರ್ಜರಿ ಹಿಟ್
ಮ್ಯಾಟ್ ಹೆನ್ರಿ ಎಸೆದ 2ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ರೋಹಿತ್ ಶರ್ಮಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 15/0 (2)
IND vs NZ ICC World Cup 2023 Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ಟ್ರೆಂಟ್ ಬೌಲ್ಟ್ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಇದು ಟೀಮ್ ಇಂಡಿಯಾ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 4/0 (1)
IND vs NZ ICC World Cup 2023 Live Score: ನ್ಯೂಝಿಲೆಂಡ್ ಇನಿಂಗ್ಸ್ ಅಂತ್ಯ
ಕೊನೆಯ ಓವರ್ನಲ್ಲಿ 10 ರನ್ ನೀಡಿ 2 ವಿಕೆಟ್ ಪಡೆದ ಮೊಹಮ್ಮದ್ ಶಮಿ.
50 ಓವರ್ಗಳಲ್ಲಿ 273 ರನ್ಗಳಿಸಿ ಆಲೌಟ್ ಆದ ನ್ಯೂಝಿಲೆಂಡ್.
ನ್ಯೂಝಿಲೆಂಡ್– 273 (50)
ಟೀಮ್ ಇಂಡಿಯಾಗೆ 274 ರನ್ಗಳ ಗುರಿ ನೀಡಿದ ನ್ಯೂಝಿಲೆಂಡ್.
IND vs NZ ICC World Cup 2023 Live Score: ನ್ಯೂಝಿಲೆಂಡ್ 6ನೇ ವಿಕೆಟ್ ಪತನ
ಜಸ್ಪ್ರೀತ್ ಬುಮ್ರಾ ಎಸೆದ 47ನೇ ಓವರ್ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ ಮಾರ್ಕ್ ಚಾಪ್ಮನ್.
ನ್ಯೂಝಿಲೆಂಡ್ ತಂಡದ 6ನೇ ವಿಕೆಟ್ ಪತನ.
ಕೊನೆಯ 3 ಓವರ್ಗಳು ಮಾತ್ರ ಬಾಕಿ.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್.
NZ 257/6 (47)
IND vs NZ ICC World Cup 2023 Live Score: ನ್ಯೂಝಿಲೆಂಡ್ 5ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆದ 45ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿದ ಗ್ಲೆನ್ ಫಿಲಿಪ್ಸ್.
26 ಎಸೆತಗಳಲ್ಲಿ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಫಿಲಿಪ್ಸ್.
45 ಓವರ್ಗಳ ಮುಕ್ತಾಯದ ವೇಳೆಗೆ 245 ರನ್ ಕಲೆಹಾಕಿದ ನ್ಯೂಝಿಲೆಂಡ್.
NZ 245/5 (45)
IND vs NZ ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಫಿಲಿಪ್ಸ್
ಮೊಹಮ್ಮದ್ ಸಿರಾಜ್ ಎಸೆದ 44ನೇ ಓವರ್ನ ಮೊದಲ ಎಸೆತದಲ್ಲೇ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಗ್ಲೆನ್ ಫಿಲಿಪ್ಸ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
NZ 243/4 (44)
IND vs NZ ICC World Cup 2023 Live Score: 7 ಓವರ್ಗಳು ಬಾಕಿ
43 ಓವರ್ಗಳ ಮುಕ್ತಾಯದ ವೇಳೆಗೆ 232 ರನ್ ಕಲೆಹಾಕಿದ ನ್ಯೂಝಿಲೆಂಡ್ ತಂಡ.
ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
NZ 232/4 (43)
ಕೊನೆಯ 7 ಓವರ್ಗಳು ಮಾತ್ರ ಬಾಕಿ.
IND vs NZ ICC World Cup 2023 Live Score: ಶತಕ ಪೂರೈಸಿದ ಡೇರಿಲ್ ಮಿಚೆಲ್
100 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಶತಕ ಪೂರೈಸಿದ ಡೇರಿಲ್ ಮಿಚೆಲ್.
41 ಓವರ್ಗಳ ಮುಕ್ತಾಯದ ವೇಳೆಗೆ 222 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
NZ 222/4 (41)
IND vs NZ ICC World Cup 2023 Live Score: 40 ಓವರ್ಗಳ ಮುಕ್ತಾಯ
40 ಓವರ್ಗಳ ಮುಕ್ತಾಯದ ವೇಳೆಗೆ 219 ರನ್ ಕಲೆಹಾಕಿದ ನ್ಯೂಝಿಲೆಂಡ್.
ನಾಲ್ಕು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ ಬೌಲರ್ಗಳು.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ (99) ಹಾಗೂ ಗ್ಲೆನ್ ಫಿಲಿಪ್ಸ್ (9) ಬ್ಯಾಟಿಂಗ್.
NZ 219/4 (40)
IND vs NZ ICC World Cup 2023 Live Score: ನ್ಯೂಝಿಲೆಂಡ್ 4ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆದ 37ನೇ ಓವರ್ನ 5ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದ ಟಾಮ್ ಲಾಥಮ್.
7 ಎಸೆತಗಳಲ್ಲಿ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನ್ಯೂಝಿಲೆಂಡ್ ತಂಡದ ನಾಯಕ ಟಾಮ್ ಲಾಥಮ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
NZ 205-4
IND vs NZ ICC World Cup 2023 Live Score: 35 ಓವರ್ಗಳು ಮುಕ್ತಾಯ
ಕುಲ್ದೀಪ್ ಯಾದವ್ ಎಸೆದ 35ನೇ ಓವರ್ನ 4ನೇ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಫೋರ್ ಬಾರಿಸಿದ ಟಾಮ್ ಲಾಥಮ್.
35 ಓವರ್ಗಳ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ ತಂಡದ ಸ್ಕೋರ್ 187 ರನ್ಗಳು.
ಡೆವೊನ್ ಕಾನ್ವೆ (0), ವಿಲ್ ಯಂಗ್ (17) ಹಾಗೂ ರಚಿನ್ ರವೀಂದ್ರ (75) ಔಟ್.
NZ 187/3 (35)
IND vs NZ ICC World Cup 2023 Live Score: ನ್ಯೂಝಿಲೆಂಡ್ 3ನೇ ವಿಕೆಟ್ ಪತನ
ಮೊಹಮ್ಮದ್ ಶಮಿ ಎಸೆದ 34ನೇ ಓವರ್ನ 3ನೇ ಎಸೆತದಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿದ ರಚಿನ್ ರವೀಂದ್ರ.
87 ಎಸೆತಗಳಲ್ಲಿ 75 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ರಚಿನ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.
NZ 180/3 (34)
IND vs NZ ICC World Cup 2023 Live Score: ಕ್ಯಾಚ್ ಡ್ರಾಪ್-ಫೋರ್
ಕುಲ್ದೀಪ್ ಯಾದವ್ ಎಸೆದ 33ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಬಾರಿಸಿದ ಡೇರಿಲ್ ಮಿಚೆಲ್. ಬೌಂಡರಿ ಲೈನ್ನಲ್ಲಿ ಸುಲಭ ಕ್ಯಾಚ್ ಡ್ರಾಪ್ ಮಾಡಿದ ಜಸ್ಪ್ರೀತ್ ಬುಮ್ರಾ. ಚೆಂಡು ಬೌಂಡರಿ ಲೈನ್ ದಾಟಿ..ಫೋರ್.
NZ 173/2 (33)
IND vs NZ ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಮಿಚೆಲ್
ಕುಲ್ದೀಪ್ ಯಾದವ್ ಎಸೆದ 31ನೇ ಓವರ್ನ 4ನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಡೇರಿಲ್ ಮಿಚೆಲ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
NZ 160/2 (31)
IND vs NZ ICC World Cup 2023 Live Score: 30 ಓವರ್ಗಳ ಮುಕ್ತಾಯ
30 ಓವರ್ಗಳಲ್ಲಿ 147 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕೇವಲ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದ ಟೀಮ್ ಇಂಡಿಯಾ.
3ನೇ ವಿಕೆಟ್ಗೆ 132 ರನ್ಗಳ ಜೊತೆಯಾಟವಾಡಿರುವ ಮಿಚೆಲ್-ರಚಿನ್
NZ 147/2 (30)
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ (66) ಹಾಗೂ ರಚಿನ್ ರವೀಂದ್ರ (68) ಬ್ಯಾಟಿಂಗ್.
IND vs NZ ICC World Cup 2023 Live Score: ಸಖತ್ ಸಿಕ್ಸ್ ಸಿಡಿಸಿದ ಮಿಚೆಲ್
ಕುಲ್ದೀಪ್ ಯಾದವ್ ಎಸೆದ 21ನೇ ಓವರ್ನ 2ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಡೇರಿಲ್ ಮಿಚೆಲ್.
21 ಓವರ್ಗಳಲ್ಲಿ ಶತಕ ಪೂರೈಸಿದ ನ್ಯೂಝಿಲೆಂಡ್.
ಡೇರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಉತ್ತಮ ಜೊತೆಯಾಟ.
NZ 100/2 (21)
IND vs NZ ICC World Cup 2023 Live Score: 20 ಓವರ್ಗಳು ಮುಕ್ತಾಯ
20 ಓವರ್ಗಳಲ್ಲಿ 93 ರನ್ ಕಲೆಹಾಕಿದ ನ್ಯೂಝಿಲೆಂಡ್ ತಂಡ.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ನ್ಯೂಝಿಲೆಂಡ್– 91/2 (20)
ಆರಂಭಿಕರಾದ ಡೆವೊನ್ ಕಾನ್ವೆ (0) ಹಾಗೂ ವಿಲ್ ಯಂಗ್ (17) ಔಟ್.
ಟೀಮ್ ಇಂಡಿಯಾ ಪರ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ.
IND vs NZ ICC World Cup 2023 Live Score: ಭರ್ಜರಿ ಸಿಕ್ಸಸ್
ಕುಲ್ದೀಪ್ ಯಾದವ್ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರಚಿನ್ ರವೀಂದ್ರ.
ನಾಲ್ಕನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಡೇರಿಲ್ ಮಿಚೆಲ್.
NZ 90/2 (19)
IND vs NZ ICC World Cup 2023 Live Score: ಅರ್ಧಶತಕದ ಜೊತೆಯಾಟ
3ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿದ ಡೇರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ.
53 ಎಸೆತಗಳಲ್ಲಿ 50 ರನ್ ಕಲೆಹಾಕಿದ ಮಿಚೆಲ್-ರಚಿನ್ ಜೋಡಿ.
17 ಓವರ್ಗಳ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ ತಂಡದ ಸ್ಕೋರ್ 72 ರನ್ಗಳು.
NZ 72/2 (17)
IND vs NZ ICC World Cup 2023 Live Score: 15 ಓವರ್ಗಳು ಮುಕ್ತಾಯ
ಮೊಹಮ್ಮದ್ ಶಮಿ ಎಸೆದ 15ನೇ ಓವರ್ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಡ್ರೈವ್ ಫೋರ್ ಬಾರಿಸಿದ ರಚಿನ್ ರವೀಂದ್ರ.
15 ಓವರ್ಗಳ ಮುಕ್ತಾಯದ ವೇಳೆಗೆ 61 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ (14) ಹಾಗೂ ರಚಿನ್ ರವೀಂದ್ರ (26) ಬ್ಯಾಟಿಂಗ್.
ನ್ಯೂಝಿಲೆಂಡ್ 61/2 (15)
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ.
IND vs NZ ICC World Cup 2023 Live Score: ಆಕರ್ಷಕ ಬೌಂಡರಿ ಬಾರಿಸಿದ ರವೀಂದ್ರ
ರವೀಂದ್ರ ಜಡೇಜಾ ಎಸೆದ 12ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಚಿನ್ ರವೀಂದ್ರ.
12 ಓವರ್ಗಳಲ್ಲಿ 48 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
NZ 48/2 (12)
IND vs NZ ICC World Cup 2023 Live Score: 10 ಓವರ್ಗಳು ಮುಕ್ತಾಯ
ಮೊಹಮ್ಮದ್ ಸಿರಾಜ್ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಡೇರಿಲ್ ಮಿಚೆಲ್.
10 ಓವರ್ಗಳ ಮುಕ್ತಾಯದ ವೇಳೆಗೆ 34 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
NZ 34/2 (10)
IND vs NZ ICC World Cup 2023 Live Score: ನ್ಯೂಝಿಲೆಂಡ್ನ 2ನೇ ವಿಕೆಟ್ ಪತನ
ಮೊಹಮ್ಮದ್ ಶಮಿ ಎಸೆದ 9ನೇ ಓವರ್ನ ಮೊದಲ ಎಸೆತದಲ್ಲೇ ಬೌಲ್ಡ್ ಆಗಿ ನಿರ್ಗಮಿಸಿದ ವಿಲ್ ಯಂಗ್.
27 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ ವಿಲ್ ಯಂಗ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
NZ 26/2 (9)
IND vs NZ ICC World Cup 2023 Live Score: ಬ್ಯಾಟ್ ಎಡ್ಜ್-ಬೌಂಡರಿ
ಜಸ್ಪ್ರೀತ್ ಬುಮ್ರಾ ಎಸೆದ 7ನೇ ಓವರ್ನ 3ನೇ ಎಸೆತದಲ್ಲಿ ವಿಲ್ ಯಂಗ್ ಬ್ಯಾಟ್ ಎಡ್ಜ್ ಆಗಿ ಹಿಂಬದಿಯತ್ತ ಚೆಂಡು ಬೌಂಡರಿಗೆ…ಫೋರ್.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
NZ 18/1 (7)
IND vs NZ ICC World Cup 2023 Live Score: 5 ಓವರ್ಗಳು ಮುಕ್ತಾಯ
5 ಓವರ್ಗಳ ಮುಕ್ತಾಯದ ವೇಳೆಗೆ 11 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
NZ 11/1 (5)
ಡೆವೊನ್ ಕಾನ್ವೆ (0) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಮೊಹಮ್ಮದ್ ಸಿರಾಜ್.
Karnataka Breaking News Live: ತಲವಾರ್‌ನಿಂದ ಬೆರಳು ಕೊಯ್ದುಕೊಂಡು ದುರ್ಗಾದೇವಿಗೆ ರಕ್ತದ ತಿಲಕವಿಟ್ಟ ಶ್ರೀರಾಮಸೇನೆ ಕಾರ್ಯಕರ್ತ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಶ್ರೀರಾಮಸೇನೆ ಕಾರ್ಯಕರ್ತ ತಲವಾರ್‌ನಿಂದ ಬೆರಳು ಕೊಯ್ದುಕೊಂಡು ದುರ್ಗಾದೇವಿ ಮೂರ್ತಿಗೆ ತಿಲಕವಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
IND vs NZ ICC World Cup 2023 Live Score: ಟೀಮ್ ಇಂಡಿಯಾಗೆ ಮೊದಲ ಯಶಸ್ಸು
ಮೊಹಮ್ಮದ್ ಸಿರಾಜ್ ಎಸೆದ 3ನೇ ಓವರ್ನ 3ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಬಾರಿಸಲು ಯತ್ನಿಸಿದ ಡೆವೊನ್ ಕಾನ್ವೆ. ಲೆಗ್ ಸೈಡ್ನ ಫ್ರಂಟ್ ಫೀಲ್ಡಿಂಗ್ನಲ್ಲಿದ್ದ ಶ್ರೇಯಸ್ ಅಯ್ಯರ್ ಅತ್ಯುತ್ತಮ ಡೈವಿಂಗ್ ಕ್ಯಾಚ್. ಡೆವೊನ್ ಕಾನ್ವೆ (0) ಔಟ್.
4 ಓವರ್ನಲ್ಲಿ ಯಾವುದೇ ರನ್ ನೀಡದೇ ಒಂದು ವಿಕೆಟ್ ಕಬಳಿಸಿದ ಸಿರಾಜ್.
NZ 9/1 (4)
IND vs NZ ICC World Cup 2023 Live Score: ಆಕರ್ಷಕ ಬೌಂಡರಿ
ಜಸ್ಪ್ರೀತ್ ಬುಮ್ರಾ ಎಸೆದ 3ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ವಿಲ್ ಯಂಗ್.
ಮೂರು ಓವರ್ಗಳಲ್ಲಿ 9 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್.
NZ 9/0 (3)
IND vs NZ ICC World Cup 2023 Live Score: ಮೊದಲ ಬೌಂಡರಿ
ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿಲ್ ಯಂಗ್. ಇದು ನ್ಯೂಝಿಲೆಂಡ್ ಇನಿಂಗ್ಸ್ನ ಮೊದಲ ಫೋರ್.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್.
NZ 5/0 (2)
IND vs NZ ICC World Cup 2023 Live Score: ನ್ಯೂಝಿಲೆಂಡ್ ಇನಿಂಗ್ಸ್ ಆರಂಭ
ಮೊದಲ ಓವರ್ ಅನ್ನು ಮೇಡನ್ ಮಾಡಿದ ಜಸ್ಪ್ರೀತ್ ಬುಮ್ರಾ.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್.
NZ 0/0 (1)
2ನೇ ಓವರ್ ಎಸೆಯಲು ಸಜ್ಜಾಗಿರುವ ಮೊಹಮ್ಮದ್ ಸಿರಾಜ್.
Karnataka Breaking News Live: ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ ಸಿಸಿಬಿ
ಬೆಂಗಳೂರಿನ ದೊಡ್ಡನಾಗಮಂಗಲದ ವೀರಭದ್ರಸ್ವಾಮಿ ಲೇಔಟ್ನಲ್ಲಿ ಸಿಸಿಬಿ ಪೊಲೀಸರು 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 2 ಕೋಟಿ ಮೌಲ್ಯದ MDMA, 2 ಮೊಬೈಲ್, ಯಂತ್ರ ಜಪ್ತಿ ಮಾಡಿ ನೈಜೀರಿಯಾ ಪ್ರಜೆ ವಿಕ್ಟರ್ನನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿ, ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ. ಡ್ರಗ್ ಪೆಡ್ಲರ್ ಮೆಸ್ಸೋ ಎಂಬುವನಿಂದ ಡ್ರಗ್ಸ್ ತರಿಸುತ್ತಿದ್ದ. ಮನೆಯಲ್ಲಿ ಪ್ಯಾಕ್ ಮಾಡಿ ಹಲವು ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಸದ್ಯ ಆರೋಪಿ ವಿಕ್ಟರ್ನನ್ನು ವಶಕ್ಕೆ ಪಡೆದು ಸಿಸಿಬಿ ತೀವ್ರ ವಿಚಾರಣೆ ನಡೆಸುತ್ತಿದೆ.
IND vs NZ ICC World Cup 2023 Live Score: ನ್ಯೂಝಿಲೆಂಡ್ ಪ್ಲೇಯಿಂಗ್ ಇಲೆವೆನ್ ಹೀಗಿದೆ
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
IND vs NZ ICC World Cup 2023 Live Score: ಭಾರತ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
IND vs NZ ICC World Cup 2023 Live Score: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ 2 ಬದಲಾವಣೆ
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ 2 ಬದಲಾವಣೆ ಮಾಡಲಾಗಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದು, ಹಾಗೆಯೇ ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಕಣಕ್ಕಿಳಿಯಲಿದ್ದಾರೆ.
IND vs NZ ICC World Cup 2023 Live Score: ಟಾಸ್ ಗೆದ್ದ ಭಾರತ
ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - Oct 22,2023 1:33 PM