ವಿಶ್ವಕಪ್ನಲ್ಲಿ (ICC World Cup 2023) ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್ (India Vs New Zealand) ಇಂದು ಮುಖಾಮುಖಿಯಾಗಿವೆ. ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಕಿವೀಸ್ ಪರ ಆರಂಭಿಕ ಜೋಡಿಯಾದ ಡೆವೊನ್ ಕಾನ್ವೆ (Devon Conway) ಮತ್ತು ವಿಲ್ ಯಂಗ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಈ ಆರಂಭಿಕ ಜೋಡಿಯನ್ನು ಬೇಗನೇ ಪೆವಿಲಿಯನ್ಗಟ್ಟುವಲ್ಲಿ ಟೀಂ ಇಂಡಿಯಾದ (Team India) ಬೌಲರ್ಗಳು ಯಶಸ್ವಿಯಾಗಿದ್ದಾರೆ. ಆರಂಭದಿಂದಲೇ ಈ ಇಬ್ಬರಿಗೆ ಬಿಗ್ ಶಾಟ್ ಆಡಲು ಅವಕಾಶ ನೀಡಿದ ಭಾರತದ ಬೌಲರ್ಗಳು, ಈ ಇಬ್ಬರನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿ ವಿಕೆಟ್ ಉರುಳಿಸಿದರು.
ಭಾರತದ ಪರ ಬೌಲಿಂಗ್ ಆರಂಭಿಸಿದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರೂ ಉತ್ತಮ ಬೌಲಲಿಂಗ್ ಮಾಡಿದರು. ಹಾಗಾಗಿ ಡೆವೊನ್ ಕಾನ್ವೆಗೆ ಮೊದಲ 3 ಓವರ್‌ಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಡೆವೊನ್ ಕಾನ್ವೆ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದರು. ಈ ವೇಳೆ ಪಂದ್ಯದ ನಾಲ್ಕನೇ ಓವರ್ ಬೌಲ್ ಮಾಡಲು ಬಂದ ಮೊಹಮ್ಮದ್ ಸಿರಾಜ್, ಕಾನ್ವೆರನ್ನು ಬಲೆಗೆ ಬೀಳಿಸಿದರು. ಈ ಓವರ್‌ನ ಮೂರನೇ ಎಸೆತವನ್ನು ಡೆವೊನ್ ಕಾನ್ವೆ ಲೆಗ್ ಸೈಡ್ನತ್ತ ಬಾರಿಸಲು ಯತ್ನಿಸಿದರು. ಆದರೆ ಲೆಗ್ ಸೈಡ್ನ ಫ್ರಂಟ್ ಫೀಲ್ಡಿಂಗ್ನಲ್ಲಿದ್ದ ಶ್ರೇಯಸ್ ಅಯ್ಯರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಶ್ರೇಯಸ್ ತಮ್ಮ ಎಡ ಭಾಗಕ್ಕೆ ಜಿಗಿದ್ದು ಅತ್ಯುತ್ತಮ ಡೈವಿಂಗ್ ಕ್ಯಾಚ್ ತೆಗೆದುಕೊಂಡರು.
Good Catch for Shreyas Iyer and Well Strike by Siraj
Devon Conway c Iyer b Mohammed Siraj 0 (9b 0x4 0x6)#CWC23 #INDvsNZ #TeamIndia #ShreyasIyer #SuryakumarYadav #MohammedShami #RavindraJadeja pic.twitter.com/CVpFcJzih7— एम. राहुल (@mrahulmatoshri) October 22, 2023
ಸಿರಾಜ್ ಬಳಿಕ ದಾಳಿಗಿಳಿದ ಮೊಹಮ್ಮದ್ ಶಮಿ ಕೂಡ ನ್ಯೂಜಿಲೆಂಡ್‌ಗೆ ಎರಡನೇ ಹೊಡೆತವನ್ನು ನೀಡಿ ತಮ್ಮ ಮೊದಲ ವಿಕೆಟ್ ಪಡೆದರು. ಶಮಿ ತನ್ನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ವಿಲ್ ಯಂಗ್ ಅವರನ್ನು ಬೌಲ್ಡ್ ಮಾಡಿದರು. ಆದ್ದರಿಂದ ಟೀಂ ಇಂಡಿಯಾ ಮೊದಲ 10 ಓವರ್‌ಗಳ ಪವರ್ ಪ್ಲೇನಲ್ಲಿ 2 ವಿಕೆಟ್ ಕಬಳಿಸಿದರೆ, ನ್ಯೂಜಿಲೆಂಡ್ 34 ರನ್ ಗಳಿಸಲಷ್ಟೇ ಶಕ್ತವಾಯಿತು.
Chopped 🔛
Mohd. Shami strikes in his very first delivery to dismiss Will Young!
Follow the match ▶️ https://t.co/Ua4oDBM9rn#TeamIndia | #CWC23 | #MenInBlue | #INDvNZ pic.twitter.com/Hu1NtEOq2u
— BCCI (@BCCI) October 22, 2023
ಆದರೆ ಈ ಎರಡು ಆರಂಭಿಕ ವಿಕೆಟ್ಗಳ ಬಳಿಕ ಜೊತೆಯಾಟಗಿರುವ ರಚಿನ್ ರವೀಂದ್ರ ಹಾಗೂ ಡೆರೆಲ್ ಮಿಚೆಲ್ ಅದ್ಭುತ ಜೊತೆಯಾಟ ಆಡುತ್ತಿದ್ದಾರೆ. ಭಾರತ ಮೂಲದ ರವೀಂದ್ರ ಅರ್ಧಶತಕ ಸಿಡಿಸಿ ಮಿಂಚಿದರೆ, ಮಿಚೆಲ್ ಅರ್ಧಶತಕದ ಸನಿಹದಲ್ಲಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಆದಷ್ಟು ಬೇಗನೇ ಈ ಇಬ್ಬರ ವಿಕೆಟ್ ಕಬಳಿಸಬೇಕಿದೆ. ಈ ಸುದ್ದಿ ಬರೆಯುವ ವೇಳೆಗೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು 117 ರನ್ ಕಲೆಹಾಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Sun, 22 October 23