ಪಾಕ್ ತಂಡವನ್ನು ಮಣಿಸಿದ ಬಳಿಕ ಟೀಂ ಇಂಡಿಯಾ ಆಟಗಾರರ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ

|

Updated on: Sep 12, 2023 | 12:43 PM

IND vs PAK: ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಭಾರತೀಯ ಆಟಗಾರರು ಈಜುಕೊಳದಲ್ಲಿ ಮೋಜು ಮಾಡುತ್ತಿರುವ ವೀಡಿಯೊವನ್ನು ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಈಜುಕೊಳದಲ್ಲಿ ಕುಣಿದು ಕುಪ್ಪಳಿಸಿದರೆ ನಾಯಕ ರೋಹಿತ್ ಶರ್ಮಾ ನೀರಿನಲ್ಲಿ ಭಾಂಗ್ರಾ ಡಾನ್ಸ್ ಕೂಡ ಮಾಡಿದರು.

ಪಾಕ್ ತಂಡವನ್ನು ಮಣಿಸಿದ ಬಳಿಕ ಟೀಂ ಇಂಡಿಯಾ ಆಟಗಾರರ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ
ಟೀಂ ಇಂಡಿಯಾ
Follow us on

ಏಷ್ಯಾಕಪ್ (Asia Cup 2023) ಸೂಪರ್-4 ಸುತ್ತಿನಲ್ಲಿ ಟೀಂ ಇಂಡಿಯಾ, ಅಭಿಮಾನಿಗಳು ಯಾವ ರೀತಿಯ ಫಲಿತಾಂಶವನ್ನು ಎದುರು ನೋಡುತ್ತಿದ್ದರೋ ಆ ಫಲಿತಾಂಶವನ್ನು ನೀಡಿದೆ. ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ (India vs Pakistan) ಏಕಪಕ್ಷೀಯವಾಗಿ 228 ರನ್‌ಗಳ ಜಯ ಸಾಧಿಸಿದಲ್ಲದೆ ಈ ಗೆಲುವನ್ನು ಸ್ಮರಣೀಯಗೊಳಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 356 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಕೇವಲ 128 ರನ್‌ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಪ್ರತಿಯೊಂದು ರಂಗದಲ್ಲೂ ಪಾಕಿಸ್ತಾನ ವಿರುದ್ಧ ಶ್ರೇಷ್ಠ ಪ್ರದರ್ಶನ ತೋರಿದ ಟೀಂ ಇಂಡಿಯಾ (Team India) ಆಟಗಾರರು ಗೆಲುವಿನ ನಂತರ ವಿಶೇಷವಾಗಿ ಸಂಭ್ರಮಾಚರಣೆ ಮಾಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಭಾರತೀಯ ಆಟಗಾರರು ಈಜುಕೊಳದಲ್ಲಿ ಮೋಜು ಮಾಡುತ್ತಿರುವ ವೀಡಿಯೊವನ್ನು ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ವಾಸ್ತವವಾಗಿ, ಪಂದ್ಯದ ಆಯಾಸವನ್ನು ಹೋಗಲಾಡಿಸಲು, ಟೀಂ ಇಂಡಿಯಾ ಪೂಲ್ ಸೆಷನ್‌ನಲ್ಲಿ ಭಾಗವಹಿಸಿತು. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಈಜುಕೊಳದಲ್ಲಿ ಕುಣಿದು ಕುಪ್ಪಳಿಸಿದರು. ನಾಯಕ ರೋಹಿತ್ ಶರ್ಮಾ ನೀರಿನಲ್ಲಿ ಭಾಂಗ್ರಾ ಡಾನ್ಸ್ ಕೂಡ ಮಾಡಿದರು. ಶುಭ್​ಮನ್ ಗಿಲ್ ಕೂಡ ಕೊಳದಲ್ಲಿ ಮೋಜು ಮಾಡುತ್ತಿರುವುದು ಕಂಡುಬಂದಿದೆ.

ಮಧ್ಯರಾತ್ರಿ ಟೀಂ ಇಂಡಿಯಾ ನೀರಿಗೆ ಹಾರಿದ್ದು ಯಾಕೆ?

ಇದೀಗ ಟೀಂ ಇಂಡಿಯಾ ಮಧ್ಯರಾತ್ರಿ ನೀರಿಗೆ ಹಾರಿದ್ದು ಏಕೆ ಎಂಬುದು ಪ್ರಶ್ನೆಯಾಗಿದೆ. ವಾಸ್ತವವಾಗಿ, ಇದು ಶ್ರೀಲಂಕಾ ವಿರುದ್ಧ ಸೆಪ್ಟೆಂಬರ್ 12 ರಂದು ಅಂದರೆ ಇಂದು ನಡೆಯಲಿರುವ ಮುಂದಿನ ಪಂದ್ಯದ ತಯಾರಿಯ ಒಂದು ಭಾಗವಾಗಿತ್ತು. ಪಾಕಿಸ್ತಾನದ ಪಂದ್ಯವು ಮೀಸಲು ದಿನದವರೆಗೆ ನಡೆದಿದ್ದರಿಂದ ಟೀಂ ಇಂಡಿಯಾ ಈಗ ಸತತ ಎರಡು ದಿನಗಳಲ್ಲಿ ಎರಡನೇ ಪಂದ್ಯವನ್ನು ಆಡಬೇಕಾಗಿದೆ. ಹೀಗಾಗಿ ಮುಂದಿನ ಪಂದ್ಯದ ಪೂರ್ವ ತಯಾರಿಯಾಗಿ ರೋಹಿತ್ ಪಡೆ ಮಧ್ಯರಾತ್ರಿಯಲ್ಲಿ ಈಜುಕೊಳಕ್ಕಿಳಿದಿತ್ತು.

ಕಿಂಗ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದನ್ನು ಒಪ್ಪದ ಗೌತಮ್ ಗಂಭೀರ್..!

ಟೀಂ ಇಂಡಿಯಾ ಸಿದ್ಧ

ಅಂದ್ಹಾಗೆ, ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಕೂಡ ಸಜ್ಜಾಗಿದೆ. ಪಂದ್ಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ನಾನು 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ. ಆದ್ದರಿಂದ ನಿರಂತರವಾಗಿ ಎರಡು ಪಂದ್ಯಗಳನ್ನು ಆಡುವುದು ನನಗೆ ಕಷ್ಟವಾಗುವುದಿಲ್ಲ ಎಂದು ಹೇಳಿದರು. ಇದೀಗ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಗೆದ್ದರೆ ಏಷ್ಯಾಕಪ್‌ನಲ್ಲಿ ನೇರವಾಗಿ ಫೈನಲ್‌ಗೆ ತಲುಪಲಿದೆ. ಇತ್ತ ದೊಡ್ಡ ಸೋಲಿನ ಬಳಿಕ ಇದೀಗ ಪಾಕ್ ತಂಡ ಫೈನಲ್ ತಲುಪಲು ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Tue, 12 September 23