AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಂಗ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದನ್ನು ಒಪ್ಪದ ಗೌತಮ್ ಗಂಭೀರ್..!

IND vs PAK: ಪಾಕಿಸ್ತಾನ ವಿರುದ್ಧ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ ಕಿಂಗ್ ಕೊಹ್ಲಿಯನ್ನು ಪಂದ್ಯ ಶ್ರೇಷ್ಠರನ್ನಾಗಿ ಆಯ್ಕೆ ಮಾಡಲಾಯಿತು. ಅದಕ್ಕೆ ಕೊಹ್ಲಿ ಅರ್ಹರೂ ಕೂಡ. ಆದರೆ ಗಂಭೀರ್ ಮಾತ್ರ ಎಂದಿನಂತೆ ಕೊಹ್ಲಿ ವಿರುದ್ಧದ ಹೋರಾಟವನ್ನು ಈ ಪ್ರಶಸ್ತಿ ವಿಚಾರದಲ್ಲೂ ಮುಂದುವರೆಸಿದರು.

ಕಿಂಗ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದನ್ನು ಒಪ್ಪದ ಗೌತಮ್ ಗಂಭೀರ್..!
ಗೌತಮ್ ಗಂಭೀರ್, ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on:Sep 12, 2023 | 10:57 AM

Share

ಏಷ್ಯಾಕಪ್‌ನ (Asia Cup 2023) ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ (India vs Pakistan) ಫೈನಲ್​ ಟಿಕೆಟ್ ಖಚಿತ ಪಡಿಸಿಕೊಳ್ಳುವ ಸನಿಹದಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ (Virat Kohli) ಮತ್ತು ಕೆಎಲ್ ರಾಹುಲ್ ಅವರ ಶತಕಗಳ ಆಧಾರದ ಮೇಲೆ 356 ರನ್ ಕಲೆಹಾಕಿತು. ಇನ್ನು ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಭಾರತದ ದಾಳಿಗೆ ನಲುಗಿ ಕೇವಲ 128 ರನ್​ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ (Team India) ಪರ 8 ಓವರ್ ಬೌಲ್ ಮಾಡಿದ ಕುಲ್ದೀಪ್ ಯಾದವ್ (Kuldeep Yadav) ಕೇವಲ 25 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದರು. ಅಂತಿಮವಾಗಿ ಪಾಕಿಸ್ತಾನ ವಿರುದ್ಧ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ ಕಿಂಗ್ ಕೊಹ್ಲಿಯನ್ನು ಪಂದ್ಯ ಶ್ರೇಷ್ಠರನ್ನಾಗಿ ಆಯ್ಕೆ ಮಾಡಲಾಯಿತು. ಅದಕ್ಕೆ ಕೊಹ್ಲಿ ಅರ್ಹರೂ ಕೂಡ. ಆದರೆ ಗಂಭೀರ್ (Gautam Gambhir) ಮಾತ್ರ ಎಂದಿನಂತೆ ಕೊಹ್ಲಿ ವಿರುದ್ಧದ ಹೋರಾಟವನ್ನು ಈ ಪ್ರಶಸ್ತಿ ವಿಚಾರದಲ್ಲೂ ಮುಂದುವರೆಸಿದರು.

ಪಂದ್ಯ ಮುಗಿದ ಬಳಿಕ ಸ್ಟಾರ್ ಸ್ಪೋಟ್ಸ್ ಸಂದರ್ಶನದಲ್ಲಿ ಮಾತನಾಡುವ ವೇಳೆ ಗೌತಮ್ ಗಂಭೀರ್ ಅವರನ್ನು ಈ ಪಂದ್ಯದಲ್ಲಿ ನಿಮ್ಮ ಪ್ರಕಾರ ಯಾವ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗಂಭೀರ್, ಕೊಹ್ಲಿಯನ್ನು ಬಿಟ್ಟು ಕುಲ್ದೀಪ್ ಯಾದವ್​ರನ್ನು ಆಯ್ಕೆ ಮಾಡಿದರು.

ಫಾದರ್ ಆಫ್ ಪಾಕಿಸ್ತಾನ್..! ಕಿಂಗ್ ಕೊಹ್ಲಿಯ ಶತಕವನ್ನು ನೆಟ್ಟಿಗರು ಸಂಭ್ರಮಿಸಿದ್ದು ಹೀಗೆ

ಐದು ವಿಕೆಟ್ ಉರುಳಿಸಿದ ಕುಲ್ದೀಪ್

ಇನ್ನು ತನ್ನ ಆಯ್ಕೆಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ ಗಂಭೀರ್, ಕುಲ್ದೀಪ್ ಪಾಕಿಸ್ತಾನದ ವಿರುದ್ಧ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಅಲ್ಲದೆ ಆರಂಭದಲ್ಲೇ ಪಾಕ್ ಬ್ಯಾಟಿಂಗ್ ವಿಭಾಗದ ಬೆನ್ನೇಲುಬು ಮುರಿಯುವ ಮೂಲಕ ಪಾಕ್ ತಂಡಕ್ಕೆ ಗುರಿಯನ್ನು ಬೆನ್ನಟ್ಟುವ ಅವಕಾಶವನ್ನು ನೀಡಲಿಲ್ಲ. ಅಲ್ಲದೆ ಸ್ಪಿನ್​ಗೆ ಉತ್ತಮವಾಗಿ ಆಡುವ ಪಾಕ್ ಬ್ಯಾಟರ್​ಗಳನ್ನು ಕುಲ್ದೀಪ್ ಬಲೆಗೆ ಕೆಡವಿದರು. ಹೀಗಾಗಿ ನಾನು ಅವರನ್ನು ಪಂದ್ಯದ ಆಟಗಾರನಾಗಿ ಆಯ್ಕೆ ಮಾಡುವುದಾಗಿ ಹೇಳಿದರು.

ಕುಲ್ದೀಪ್ ನನ್ನ ಪ್ರಕಾರ ಪಂದ್ಯದ ಆಟಗಾರ

ಮುಂದುವರೆದು ಮಾತನಾಡಿದ ಗಂಭೀರ್, ನನಗೆ ಈ ಪ್ರಶಸ್ತಿಗೆ ಕುಲ್ದೀಪ್ ಯಾದವ್ ಅವರನ್ನು ಮೀರಿ ನೋಡಲು ಸಾಧ್ಯವಿಲ್ಲ. ವಿರಾಟ್ ಹಾಗೂ ರಾಹುಲ್ ಶತಕ ಸಿಡಿಸಿದ್ದಾರೆಂದು ನನಗೆ ತಿಳಿದಿದೆ. ರೋಹಿತ್ ಮತ್ತು ಶುಭ್​ಮನ್ ಗಿಲ್ ಕೂಡ ಅರ್ಧಶತಕಗಳಿಸಿದ್ದಾರೆ. ಆದರೆ ವೇಗದ ಬೌಲರ್​ಗಳಿಗೆ ನೆರವಾಗುವ ಅಂತಹ ವಿಕೆಟ್​ನಲ್ಲಿ ಕೇವಲ 8 ಓವರ್‌ಗಳಲ್ಲಿ ಐದು ವಿಕೆಟ್‌ ಪಡೆಯುವುದು, ವಿಶೇಷವಾಗಿ ಸ್ಪಿನ್ ಬೌಲರ್​ಗಳನ್ನು ಅದ್ಭುತವಾಗಿ ಎದುರಿಸುವ ಪಾಕಿಸ್ತಾನದ ಬ್ಯಾಟರ್‌ಗಳ ವಿರುದ್ಧ ಆ ರೀತಿಯ ಪ್ರದರ್ಶನ ನೀಡಿದ್ದು ಇದೆಯಲ್ಲ ಅದು ಆಟವನ್ನು ಬದಲಾಯಿಸುವ ಕ್ಷಣವಾಗಿದೆ.

ಒಂದು ವೇಳೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಅಥವಾ ನ್ಯೂಜಿಲೆಂಡ್ ವಿರುದ್ಧ ಕುಲ್ದೀಪ್ ಈ ರೀತಿಯ ಪ್ರದರ್ಶನ ನೀಡಿದರೆ ಅದು ನನಗೆ ವಿಶೇಷವಾಗಿ ಕಾಣುತ್ತಿರಲಿಲ್ಲ. ಏಕೆಂದರೆ ನನಗೆ ಗೊತ್ತು ಅವರು ಸ್ಪಿನ್ ಬೌಲರ್ ವಿರುದ್ಧ ಚೆನ್ನಾಗಿ ಆಡುವುದಿಲ್ಲ. ಹೀಗಾಗಿ ಪಾಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಕುಲ್ದೀಪ್ ನನ್ನ ಪ್ರಕಾರ ಪಂದ್ಯದ ಆಟಗಾರ ಎಂದಿದ್ದಾರೆ.

ಪಂದ್ಯದ ನಂತರ ಕುಲ್ದೀಪ್ ಹೇಳಿದ್ದೇನು?

ಪಂದ್ಯ ಮುಗಿದ ಬಳಿಕ ಮಾತನಾಡಿದ ಕುಲ್ದೀಪ್, ನೀವು ದೊಡ್ಡ ತಂಡದ ವಿರುದ್ಧ 5 ವಿಕೆಟ್ ಪಡೆದರೆ, ನೀವು ಅದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೀರಿ. ನಾನು ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ ಬಳಿಕ, ನಾನು ಪಾಕಿಸ್ತಾನದ ವಿರುದ್ಧ 5 ವಿಕೆಟ್ ಪಡೆದಿದ್ದೇನೆ ಎಂದು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಇದು ದೊಡ್ಡ ವಿಷಯ ಏಕೆಂದರೆ ನೀವು ಉತ್ತಮವಾಗಿ ಆಡುವ ತಂಡಗಳ ವಿರುದ್ಧ ಅದರಲ್ಲೂ ಸ್ಪಿನ್ ಬೌಲರ್​ಗಳನ್ನು ಉತ್ತಮವಾಗಿ ಆಡುವ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ ಇದು ನಿಮ್ಮನ್ನು ತುಂಬಾ ಪ್ರೇರೇಪಿಸುತ್ತದೆ ಎಂದು ಕುಲ್ದೀಪ್ ಪಂದ್ಯದ ನಂತರ ಹೇಳಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 am, Tue, 12 September 23

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ