Asia cup 2023 IND vs SL Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
Asia cup 2023 India vs Sri Lanka Live Score in Kannada: ಏಕದಿನ ಕ್ರಿಕೆಟ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಇದುವರೆಗೆ 165 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಬರೋಬ್ಬರಿ 96 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ ಗೆದ್ದಿರುವುದು ಕೇವಲ 57 ಮ್ಯಾಚ್ಗಳಲ್ಲಿ ಮಾತ್ರ.
ಏಷ್ಯಾಕಪ್ನ ಸೂಪರ್-4 ಹಂತದ 4ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.1 ಓವರ್ಗಳಲ್ಲಿ 213 ರನ್ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವನ್ನು 41.3 ಓವರ್ಗಳಲ್ಲಿ ಆಲೌಟ್ ಮಾಡಿ ಟೀಮ್ ಇಂಡಿಯಾ 41 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಏಷ್ಯಾಕಪ್ನಲ್ಲಿ ಫೈನಲ್ಗೆ ಪ್ರವೇಶಿಸಿದೆ.
ಭಾರತ- 213 (49.1)
ಶ್ರೀಲಂಕಾ- 172 (41.3)
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಂಕಾ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಾಣ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.
LIVE Cricket Score & Updates
-
Asia cup 2023 IND vs SL Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
172 ರನ್ಗಳಿಗೆ ಶ್ರೀಲಂಕಾ ತಂಡ ಆಲೌಟ್.
ಭಾರತ ತಂಡಕ್ಕೆ 41 ರನ್ಗಳ ಭರ್ಜರಿ ಜಯ.
ಈ ಜಯದೊಂದಿಗೆ ಫೈನಲ್ಗೆ ಪ್ರವೇಶಿಸಿದ ಟೀಮ್ ಇಂಡಿಯಾ.
ಭಾರತದ ಪರ 4 ವಿಕೆಟ್ ಕಬಳಿಸಿದ ಕುಲ್ದೀಪ್ ಯಾದವ್. ತಲಾ 2 ವಿಕೆಟ್ ಪಡೆದ ಬುಮ್ರಾ ಹಾಗೂ ಜಡೇಜಾ.
IND 213 (49.1)
SL 172 (41.3)
-
Asia cup 2023 IND vs SL Live Score: ಟೀಮ್ ಇಂಡಿಯಾಗೆ 9ನೇ ಯಶಸ್ಸು
ಕುಲ್ದೀಪ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಬಲಗೈ ಬ್ಯಾಟರ್ ಕಸುನ್ ರಜಿತ.
2 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದ ಕಸುನ್ ರಜಿತ.
ಟೀಮ್ ಇಂಡಿಯಾಗೆ ಗೆಲ್ಲಲು 1 ವಿಕೆಟ್ನ ಅವಶ್ಯಕತೆ.
ಶ್ರೀಲಂಕಾ ತಂಡಕ್ಕೆ 42 ರನ್ಗಳ ಅಗತ್ಯತೆ
SL 172/9 (41.1)
-
Asia cup 2023 IND vs SL Live Score: ಸೂರ್ಯಕುಮಾರ್ ಸೂಪರ್ ಕ್ಯಾಚ್
ಹಾರ್ದಿಕ್ ಪಾಂಡ್ಯ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ ಮಹೀಶ್ ತೀಕ್ಷಣ..ಗಾಳಿಯಲ್ಲಿ ಚಿಮ್ಮಿದ ಚೆಂಡು…ಸೂರ್ಯ ಕುಮಾರ್ ಯಾದವ್ ಅದ್ಭುತ ಡೈವಿಂಗ್ ಕ್ಯಾಚ್. ಶ್ರೀಲಂಕಾ ತಂಡದ 8ನೇ ವಿಕೆಟ್ ಪತನ. ಗೆಲುವಿನತ್ತ ಮುನ್ನಡೆಯುತ್ತಿರುವ ಟೀಮ್ ಇಂಡಿಯಾ.
SL 171/8 (40.5)
Asia cup 2023 IND vs SL Live Score: ಶ್ರೀಲಂಕಾ ತಂಡದ 7ನೇ ವಿಕೆಟ್ ಪತನ
ರವೀಂದ್ರ ಜಡೇಜಾ ಎಸೆತದಲ್ಲಿ ಮಿಡ್ ಆನ್ ಸರ್ಕಲ್ನಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿದ ಧನಂಜಯ ಡಿ ಸಿಲ್ವಾ.
66 ಎಸೆತಗಳಲ್ಲಿ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಧನಂಜಯ ಡಿ ಸಿಲ್ವಾ.
ಟೀಮ್ ಇಂಡಿಯಾಗೆ 7ನೇ ಯಶಸ್ಸು.
SL 162/7 (37.3)
Asia cup 2023 IND vs SL Live Score: 35 ಓವರ್ಗಳು ಮುಕ್ತಾಯ
35 ಓವರ್ಗಳ ಮುಕ್ತಾಯದ ವೇಳೆಗೆ 154 ರನ್ ಕಲೆಹಾಕಿದ ಶ್ರೀಲಂಕಾ
ಕ್ರೀಸ್ನಲ್ಲಿ ಧನಂಜಯ ಡಿ ಸಿಲ್ವಾ ಹಾಗೂ ದುನಿತ್ ವೆಲ್ಲಾಲಗೆ ಬ್ಯಾಟಿಂಗ್.
SL 154/6 (35)
Asia cup 2023 IND vs SL Live Score: ಆಕರ್ಷಕ ಫೋರ್ ಬಾರಿಸಿದ ದುನಿತ್
ಕುಲ್ದೀಪ್ ಯಾದವ್ ಎಸೆತದಲ್ಲಿ ಮುನ್ನುಗ್ಗಿ ಬಂದ ಲಾಂಗ್ ಆನ್ನತ್ತ ಆಕರ್ಷಕ ಫೋರ್ ಬಾರಿಸಿದ ದುನಿತ್ ವೆಲ್ಲಾಲಗೆ.
ಕ್ರೀಸ್ನಲ್ಲಿ ದುನಿತ್ ವೆಲ್ಲಾಲಗೆ ಹಾಗೂ ಧನಂಜಯ ಡಿ ಸಿಲ್ವಾ ಬ್ಯಾಟಿಂಗ್.
ಲಂಕಾ ಬ್ಯಾಟರ್ಗಳ ಭರ್ಜರಿ ಬ್ಯಾಟಿಂಗ್.
SL 130/6 (30.2)
Asia cup 2023 IND vs SL Live Score: ಟೀಮ್ ಇಂಡಿಯಾಗೆ 6ನೇ ಯಶಸ್ಸು
ರವೀಂದ್ರ ಜಡೇಜಾ ಎಸೆತದಲ್ಲಿ ಸ್ಲಿಪ್ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿದ ದಸುನ್ ಶಾನಕ.
13 ಎಸೆತಗಳಲ್ಲಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶಾನಕ.
ಟೀಮ್ ಇಂಡಿಯಾಗೆ 6ನೇ ಯಶಸ್ಸು ತಂದುಕೊಟ್ಟ ಜಡೇಜಾ.
ಕ್ರೀಸ್ನಲ್ಲಿ ಧನಂಜಯ-ದುನಿತ್ ಬ್ಯಾಟಿಂಗ್
SL 99/6 (25.1)
Asia cup 2023 IND vs SL Live Score: ಟೀಮ್ ಇಂಡಿಯಾಗೆ 5ನೇ ಯಶಸ್ಸು
ಕುಲ್ದೀಪ್ ಯಾದವ್ ಎಸೆತದಲ್ಲಿ ಚರಿತ್ ಅಸಲಂಕಾ ಸ್ವೀಪ್ ಶಾಟ್ಗೆ ಯತ್ನ..ಕೆಎಲ್ ರಾಹುಲ್ ಅತ್ಯುತ್ತಮ ಕ್ಯಾಚ್.
35 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಚರಿತ್ ಅಸಲಂಕಾ.
ಈ ಪಂದ್ಯದಲ್ಲಿ 2ನೇ ವಿಕೆಟ್ ಪಡೆದ ಕುಲ್ದೀಪ್ ಯಾದವ್
SL 73/5 (19.2)
Asia cup 2023 IND vs SL Live Score: ಟೀಮ್ ಇಂಡಿಯಾಗೆ 4ನೇ ಯಶಸ್ಸು
ಕುಲ್ದೀಪ್ ಯಾದವ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯುವ ಯತ್ನ…ಸದೀರ ಸಮರ ವಿಕ್ರಮ ಸ್ಟಂಪ್ ಔಟ್.
ಟೀಮ್ ಇಂಡಿಯಾಗೆ ನಾಲ್ಕನೇ ಯಶಸ್ಸು ತಂದುಕೊಟ್ಟ ಕುಲ್ದೀಪ್ ಯಾದವ್.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಧನಂಜಯ ಡಿ ಸಿಲ್ವಾ ಬ್ಯಾಟಿಂಗ್
SL 68/4 (17.3)
Asia cup 2023 IND vs SL Live Score: ಅರ್ಧಶತಕ ಪೂರೈಸಿದ ಶ್ರೀಲಂಕಾ
15 ಓವರ್ ಮುಕ್ತಾಯದ ವೇಳೆಗೆ 56 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ ನಲ್ಲಿ ಚರಿತ್ ಅಸಲಂಕಾ (15) ಹಾಗೂ ಸದೀರ ಸಮರ ವಿಕ್ರಮ ಬ್ಯಾಟಿಂಗ್ (12).
ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾಗೆ 2 ವಿಕೆಟ್, ಮೊಹಮ್ಮದ್ ಸಿರಾಜ್ಗೆ 1 ವಿಕೆಟ್.
SL 56/3 (15)
Asia cup 2023 IND vs SL Live Score: 10 ಓವರ್ ಮುಕ್ತಾಯ: ಭಾರತ ಉತ್ತಮ ಬೌಲಿಂಗ್
ಮೊಹಮ್ಮದ್ ಸಿರಾಜ್ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಚರಿತ್ ಅಸಲಂಕಾ. 5ನೇ ಎಸೆತದಲ್ಲಿ ಬ್ಯಾಟ್ ಎಡ್ಜ್ ಆಗಿ ಹಿಂಬದಿಯತ್ತ ಫೋರ್.
ಮೊದಲ 10 ಓವರ್ಗಳಲ್ಲಿ 39 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್.
SL 39/3 (10)
Asia cup 2023 IND vs SL Live Score: ಶ್ರೀಲಂಕಾ ತಂಡದ 3ನೇ ವಿಕೆಟ್ ಪತನ
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಎಡಗೈ ದಾಂಡಿಗ ದಿಮುತ್ ಕರುಣರತ್ನೆ.
18 ಎಸೆತಗಳಲ್ಲಿ 2 ರನ್ಗಳಿಸಿ ವಿಕೆಟ್ ಒಪ್ಪಿಸಿದ ದಿಮುತ್ ಕರುಣರತ್ನೆ.
ಟೀಮ್ ಇಂಡಿಯಾಗೆ ಮೂರನೇ ಯಶಸ್ಸು ತಂದುಕೊಟ್ಟ ಸಿರಾಜ್. ಮೊದಲೆರಡು ವಿಕೆಟ್ ಪಡೆದ ಬುಮ್ರಾ.
SL 25/3 (7.1)
Asia cup 2023 IND vs SL Live Score: ಶ್ರೀಲಂಕಾ ತಂಡದ 2ನೇ ವಿಕೆಟ್ ಪತನ
ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಕುಸಾಲ್ ಮೆಂಡಿಸ್.
16 ಎಸೆತಗಳಲ್ಲಿ 15 ರನ್ ಬಾರಿಸಿದ ವಿಕೆಟ್ ಒಪ್ಪಿಸಿದ ಕುಸಾಲ್ ಮೆಂಡಿಸ್.
SL 25/2 (6.4)
ಟೀಮ್ ಇಂಡಿಯಾ ಪರ ಎರಡು ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ.
Asia cup 2023 IND vs SL Live Score: 6 ಓವರ್ಗಳು ಮುಕ್ತಾಯ
6 ಓವರ್ಗಳಲ್ಲಿ 21 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಟೀಮ್ ಇಂಡಿಯಾ ಪರ ಮೊದಲ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ.
ಕ್ರೀಸ್ನಲ್ಲಿ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್
SL 21/1 (6)
Asia cup 2023 IND vs SL Live Score: ಶ್ರೀಲಂಕಾ ತಂಡದ ಮೊದಲ ವಿಕೆಟ್ ಪತನ
ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.
7 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದ ಪಾತುಮ್ ನಿಸ್ಸಂಕಾ.
ಕೆಎಲ್ ರಾಹುಲ್ ಅತ್ಯುತ್ತಮ ಡೈವಿಂಗ್ ಕ್ಯಾಚ್.
ಟೀಮ್ ಇಂಡಿಯಾ ಮೊದಲ ಯಶಸ್ಸು ತಂದು ಕೊಟ್ಟ ಬುಮ್ರಾ
SL 7/1 (2.1)
Asia cup 2023 IND vs SL Live Score: ಟೀಮ್ ಇಂಡಿಯಾ ಆಲೌಟ್
ಮಹೀಶ್ ತೀಕ್ಷಣ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಅಕ್ಷರ್ ಪಟೇಲ್ (26)..ಬೌಂಡರಿ ಲೈನ್ನಲ್ಲಿ ಕ್ಯಾಚ್.
213 ರನ್ಗಳಿಗೆ ಟೀಮ್ ಇಂಡಿಯಾ ಆಲೌಟ್.
ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (53) ಗರಿಷ್ಠ ಸ್ಕೋರರ್.
ಶ್ರೀಲಂಕಾ ಪರ 5 ವಿಕೆಟ್ ಕಬಳಿಸಿದ ದುನಿತ್ ವೆಲ್ಲಲಾಗೆ
IND 213 (49.1)
Asia cup 2023 IND vs SL Live Score: ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್
ಮಹೀಶ್ ತೀಕ್ಷಣ ಎಸೆದ 48ನೇ ಓವರ್ನ ಕೊನೆಯ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್.
48 ಓವರ್ಗಳ ಮುಕ್ತಾಯದ ವೇಳೆಗೆ 208 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಅಕ್ಷರ್ ಪಟೇಲ್ ಹಾಗೂ ಸಿರಾಜ್ ಬ್ಯಾಟಿಂಗ್.
IND 208/9 (48)
Asia cup 2023 IND vs SL Live Score: 7.15 ಗಂಟೆಯಿಂದ ಪಂದ್ಯ ಶುರು
ಕೊಲಂಬೊದಲ್ಲಿ ಮಳೆ ಸ್ಥಗಿತ. ಯಾವುದೇ ಓವರ್ ಕಡಿತವಿಲ್ಲದೆ 7.15 ಗಂಟೆಯಿಂದ ಪಂದ್ಯ ಮತ್ತೆ ಶುರು.
ಕ್ರೀಸ್ನಲ್ಲಿ ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಬ್ಯಾಟಿಂಗ್.
ಟೀಮ್ ಇಂಡಿಯಾದ ಕೊನೆಯ ಮೂರು ಓವರ್ಗಳು ಮಾತ್ರ ಬಾಕಿ
IND 197/9 (47)
Asia cup 2023 IND vs SL Live Score: ಮಳೆಯಿಂದಾಗಿ ಪಂದ್ಯ ಸ್ಥಗಿತ
ಮಳೆಯಿಂದಾಗಿ ಭಾರತ-ಶ್ರೀಲಂಕಾ ನಡುವಣ ಪಂದ್ಯ ಸ್ಥಗಿತ.
ಈ ಪಂಧ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ.
47 ಓವರ್ಗಳ ಮುಕ್ತಾಯದ ವೇಳೆ 9 ವಿಕೆಟ್ ಕಳೆದುಕೊಂಡು 197 ರನ್ಗಳಿಸಿರುವ ಭಾರತ
ಕ್ರೀಸ್ನಲ್ಲಿ ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಬ್ಯಾಟಿಂಗ್.
IND 197/9 (47)
Asia cup 2023 IND vs SL Live Score: ಟೀಮ್ ಇಂಡಿಯಾದ 9ನೇ ವಿಕೆಟ್ ಪತನ
ಚರಿತ್ ಅಸಲಂಕಾ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಕುಲ್ದೀಪ್ ಯಾದವ್.
ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಅಸಲಂಕಾ.
ಕ್ರೀಸ್ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಅಕ್ಷರ್ ಪಟೇಲ್ ಬ್ಯಾಟಿಂಗ್
IND 186/9 (42.2)
Asia cup 2023 IND vs SL Live Score: ಟೀಮ್ ಇಂಡಿಯಾದ 8ನೇ ವಿಕೆಟ್ ಪತನ
ಚರಿತ್ ಅಸಲಂಕಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಜಸ್ಪ್ರೀತ್ ಬುಮ್ರಾ.
12 ಎಸೆತಗಳಲ್ಲಿ 5 ರನ್ಗಳಿಸಿ ನಿರ್ಗಮಿಸಿದ ಬುಮ್ರಾ.
ಟೀಮ್ ಇಂಡಿಯಾದ 8 ವಿಕೆಟ್ಗಳು ಪತನ.
ಟೀಮ್ ಇಂಡಿಯಾ 106 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಬಳಿಸಿದ ಶ್ರೀಲಂಕಾ ಸ್ಪಿನ್ನರ್ಗಳು
IND 186/8 (42.1)
Asia cup 2023 IND vs SL Live Score: ಟೀಮ್ ಇಂಡಿಯಾದ 7ನೇ ವಿಕೆಟ್ ಪತನ
ಚರಿತ್ ಅಸಲಂಕಾ ಎಸೆತದಲ್ಲಿ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ಗೆ ಕ್ಯಾಚ್ ನೀಡಿದ ರವೀಂದ್ರ ಜಡೇಜಾ.
19 ಎಸೆತಗಳಲ್ಲಿ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸಿದ ರವೀಂದ್ರ ಜಡೇಜಾ.
ಕ್ರೀಸ್ನಲ್ಲಿ ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್
IND 178/7 (38.5)
Asia cup 2023 IND vs SL Live Score: ಟೀಮ್ ಇಂಡಿಯಾದ 6ನೇ ವಿಕೆಟ್ ಪತನ
ದುನಿಲ್ ವೆಲ್ಲಲಾಗೆ ಎಸೆತದಲ್ಲಿ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ಗೆ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ.
18 ಎಸೆತಗಳಲ್ಲಿ 5 ರನ್ಗಳಿಸಿ ನಿರ್ಗಮಿಸಿದ ಹಾರ್ದಿಕ್ ಪಾಂಡ್ಯ
10 ಓವರ್ಗಳಲ್ಲಿ ಕೇವಲ 40 ರನ್ ನೀಡಿ 5 ವಿಕೆಟ್ ಕಬಳಿಸಿದ ದುನಿತ್ ವೆಲ್ಲಲಾಗೆ.
IND 172/6 (36)
Asia cup 2023 IND vs SL Live Score: ಟೀಮ್ ಇಂಡಿಯಾದ 5ನೇ ವಿಕೆಟ್ ಪತನ
ಚರಿತ್ ಅಸಲಂಕಾ ಎಸೆತದಲ್ಲಿ ಇಶಾನ್ ಕಿಶನ್ ಭರ್ಜರಿ ಹೊಡೆತಕ್ಕೆ ಯತ್ನ..ಫ್ರಂಟ್ ಫೀಲ್ಡರ್ ದುನಿತ್ ಅತ್ಯುತ್ತಮ ಜಂಪಿಂಗ್ ಕ್ಯಾಚ್…ಇಶಾನ್ ಕಿಶನ್ ಔಟ್.
61 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಶಾನ್ ಕಿಶನ್.
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಜಡೇಜಾ ಬ್ಯಾಟಿಂಗ್.
IND 170/5 (34.2)
Asia cup 2023 IND vs SL Live Score: ಸಿಡಿದ ಪಾಕೆಟ್ ಡೈನಾಮೊ: ಇಶಾನ್ ಸಿಕ್ಸ್
ದುನಿತ್ ವೆಲ್ಲಲಾಗೆ ಎಸೆದ 32ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಪಾಕೆಟ್ ಡೈನಾಮೊ ಖ್ಯಾತಿಯ ಇಶಾನ್ ಕಿಶನ್.
ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್.
IND 165/4 (32)
Asia cup 2023 IND vs SL Live Score: ಟೀಮ್ ಇಂಡಿಯಾದ 4ನೇ ವಿಕೆಟ್ ಪತನ
ದುನಿಲ್ ವೆಲ್ಲಲಾಗೆ ಎಸೆತದಲ್ಲಿ ನೇರವಾಗಿ ಬೌಲರ್ಗೆ ಸುಲಭ ಕ್ಯಾಚ್ ನೀಡಿದ ಕೆಎಲ್ ರಾಹುಲ್
44 ಎಸೆತಗಳಲ್ಲಿ 39 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್.
30 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿದ ಟೀಮ್ ಇಂಡಿಯಾ.
IND 154/4 (30)
Asia cup 2023 IND vs SL Live Score: ಕೆಎಲ್ ರಾಹುಲ್ ಬ್ಯಾಟ್ನಿಂದ ವೆಲ್ಕಂ ಬೌಂಡರಿ
ದುನಿತ್ ವೆಲ್ಲಲಾಗೆ ಎಸೆದ 27ನೇ ಓವರ್ನ ಮೊದಲ ಎಸೆತದಲ್ಲಿ ಥರ್ಡ್ ಮ್ಯಾನ್ ಬೌಂಡರಿಯತ್ತ ಫೋರ್ ಬಾರಿಸಿದ ಕೆಎಲ್ ರಾಹುಲ್.
2ನೇ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಮತ್ತೊಂದು ಫೋರ್ ಸಿಡಿಸಿದ ರಾಹುಲ್.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್
IND 142/3 (27.3)
Asia cup 2023 IND vs SL Live Score: ಸ್ಪಿನ್ನರ್ಗಳ ಮೋಡಿ: ರನ್ ಗತಿ ಇಳಿಕೆ
ಶ್ರೀಲಂಕಾ ಸ್ಪಿನ್ನರ್ಗಳ ಮೋಡಿ, ರನ್ ಗಳಿಸಲು ಪರದಾಡುತ್ತಿರುವ ಟೀಮ್ ಇಂಡಿಯಾ ಬ್ಯಾಟರ್ಗಳು.
44 ಎಸೆತಗಳಲ್ಲಿ ಕೇವಲ 1 ಫೋರ್ ಬಾರಿಸಿದ ಇಶಾನ್ ಕಿಶನ್.
33 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ಫೋರ್ ಬಾರಿಸದ ಕೆಎಲ್ ರಾಹುಲ್.
IND 134/3 (27)
Asia cup 2023 IND vs SL Live Score: ಟೀಮ್ ಇಂಡಿಯಾಗೆ ಇಶಾನ್-ರಾಹುಲ್ ಆಸರೆ
25 ಓವರ್ ಮುಕ್ತಾಯದ ವೇಳೆಗೆ ರನ್ ಕಲೆಹಾಕಿದ ಟೀಮ್ ಇಂಡಿಯಾ.
IND 128/3 (25)
ಕ್ರೀಸ್ನಲ್ಲಿ ಕೆಎಲ್ ರಾಹುಲ್ (18) ಹಾಗೂ ಇಶಾನ್ ಕಿಶನ್ (18) ಬ್ಯಾಟಿಂಗ್.
ಶ್ರೀಲಂಕಾ ಪರ 3 ವಿಕೆಟ್ ಕಬಳಿಸಿದ ಯುವ ಸ್ಪಿನ್ನರ್ ದುನಿತ್ ವೆಲ್ಲಲಾಗೆ.
ರೋಹಿತ್ ಶರ್ಮಾ (53), ಶುಭ್ಮನ್ ಗಿಲ್ (19) ಹಾಗೂ ವಿರಾಟ್ ಕೊಹ್ಲಿ (3) ಔಟ್.
Asia cup 2023 IND vs SL Live Score: 20 ಓವರ್ ಮುಕ್ತಾಯ: ಲಂಕಾ ಉತ್ತಮ ಬೌಲಿಂಗ್
20 ಓವರ್ ಮುಕ್ತಾಯದ ವೇಳೆಗೆ ಕಲೆಹಾಕಿದ ಟೀಮ್ ಇಂಡಿಯಾ
ಶ್ರೀಲಂಕಾ ಪರ 3 ವಿಕೆಟ್ ಕಬಳಿಸಿದ ದುನಿತ್ ವೆಲ್ಲಲಾಗೆ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.
IND 109/3 (20)
ಶುಭ್ಮನ್ ಗಿಲ್ (19), ರೋಹಿತ್ ಶರ್ಮಾ (53) ಹಾಗೂ ವಿರಾಟ್ ಕೊಹ್ಲಿ (3) ಔಟ್.
Asia cup 2023 IND vs SL Live Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ
ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ರೋಹಿತ್ ಶರ್ಮಾ
48 ಎಸೆತಗಳಲ್ಲಿ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹಿಟ್ಮ್ಯಾನ್.
2.1 ಓವರ್ಗಳಲ್ಲಿ ಕೇವಲ 2 ರನ್ ನೀಡಿ 3 ವಿಕೆಟ್ ಕಬಳಿಸಿದ ದುನಿತ್.
ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 91/3 (15.1)
Asia cup 2023 IND vs SL Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ
ದುನಿತ್ ವೆಲ್ಲಲಾಗೆ ಸ್ಪಿನ್ ಮೋಡಿ…ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ
ಕಳೆದ ಪಂದ್ಯದಲ್ಲಿ 122 ರನ್ ಬಾರಿಸಿದ್ದ ಕೊಹ್ಲಿ ಈ ಬಾರಿ ಕೇವಲ 3 ರನ್ಗಳಿಸಿ ಔಟ್.
ಶ್ರೀಲಂಕಾ ಪರ 2 ವಿಕೆಟ್ ಕಬಳಿಸಿದ ದುನಿತ್
IND 90/2 (13.5)
Asia cup 2023 IND vs SL Live Score: ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ
ಮಥೀಶ ಪತಿರಾಣ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿ 44 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ರೋಹಿತ್ ಶರ್ಮಾ
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್
IND 87/1 (12.2)
ಶುಭ್ಮನ್ ಗಿಲ್ (19) ಔಟ್.
Asia cup 2023 IND vs SL Live Score: ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ
ದುನಿತ್ ವೆಲ್ಲಲಾಗೆ ಸ್ಪಿನ್ ಮೋಡಿಗೆ ಶುಭ್ಮನ್ ಗಿಲ್ ಕ್ಲೀನ್ ಬೌಲ್ಡ್.
25 ಎಸೆತಗಳಲ್ಲಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶುಭ್ಮನ್ ಗಿಲ್.
ಶ್ರೀಲಂಕಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ದುನಿತ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 80/1 (11.1)
Asia cup 2023 IND vs SL Live Score: ರೋ-ಹಿಟ್-ಮ್ಯಾನ್= ಭರ್ಜರಿ ಸಿಕ್ಸ್
ಮಥೀಶ ಪತಿರಾಣ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
ಈ ಸಿಕ್ಸ್ನೊಂದಿಗೆ ರೋಹಿತ್ ಶರ್ಮಾ ಅವರ ವೈಯುಕ್ತಿಕ ಸ್ಕೋರ್ 47 ಕ್ಕೆ ಏರಿಕೆ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಜೊತೆ ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಶರ್ಮಾ.
IND 74/0 (10.3)
Asia cup 2023 IND vs SL Live Score: ಹಿಟ್ಮ್ಯಾನ್ ಅಬ್ಬರ ಶುರು
ದಸುನ್ ಶಾನಕ ಎಸೆದ 10ನೇ ಓವರ್ನಲ್ಲಿ ಒಟ್ಟು 4 ಫೋರ್ ಬಾರಿಸಿದ ರೋಹಿತ್ ಶರ್ಮಾ
10 ಓವರ್ ಮುಕ್ತಾಯದ ವೇಳೆಗೆ 65 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ (39) ಹಾಗೂ ಶುಭ್ಮನ್ ಗಿಲ್ (18) ಬ್ಯಾಟಿಂಗ್.
IND 65/0 (10)
Asia cup 2023 IND vs SL Live Score: ಹಿಟ್ಮ್ಯಾನ್: ವಾಟ್ ಎ ಟೈಮಿಂಗ್
ಕಸುನ್ ರಜಿತ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
ಈ ಸಿಕ್ಸ್ನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಹಿಟ್ಮ್ಯಾನ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
IND 43/0 (6.5)
Asia cup 2023 IND vs SL Live Score: ಶುಭ್ಮನ್ ಗಿಲ್-ಆಕರ್ಷಕ ಫೋರ್
ಕಸುನ್ ರಜಿತ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ಓವರ್ ಮಿಡ್ ಆಫ್ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
ಮೊದಲ 5 ಓವರ್ ಮುಕ್ತಾಯದ ವೇಳೆಗೆ 25 ರನ್ ಕಲೆಹಾಕಿದ ಭಾರತೀಯ ಆರಂಭಿಕರು.
IND 25/0 (5)
Asia cup 2023 IND vs SL Live Score: ಮೊದಲ ಓವರ್ ಮುಕ್ತಾಯ: ಭಾರತ ಉತ್ತಮ ಆರಂಭ
ಕಸುನ್ ರಜಿತ ಎಸೆದ ಮೊದಲ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ.’
ಮೊದಲ ಓವರ್ನಲ್ಲಿ 7 ರನ್ ಕಲೆಹಾಕಿ ಶುಭಾರಂಭ ಮಾಡಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 7/0 (1)
Asia cup 2023 IND vs SL Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ಟೀಮ್ ಇಂಡಿಯಾ ಆರಂಭಿಕರು- ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್
ಶ್ರೀಲಂಕಾ ಪರ ಮೊದಲ ಓವರ್- ಕಸುನ್ ರಜಿತ
______________________________________________________
ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.
ಟೀಮ್ ಇಂಡಿಯಾ ಪರ ಶಾರ್ದೂಲ್ ಠಾಕೂರ್ ಬದಲಿಗೆ ಅಕ್ಷರ್ ಪಟೇಲ್ ಕಣಕ್ಕೆ.
Asia cup 2023 IND vs SL Live Score: ಭಾರತದ ಪರ ಕಣಕ್ಕಿಳಿಯುವ ಕಲಿಗಳು
🚨 Team News 🚨
1⃣ change for #TeamIndia as Axar Patel is named in the team in place of Shardul Thakur.
A look at our Playing XI 🔽
Follow the match ▶️ https://t.co/P0ylBAiETu #AsiaCup2023 | #INDvSL pic.twitter.com/gLNXpW0rjN
— BCCI (@BCCI) September 12, 2023
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್.
Asia cup 2023 IND vs SL Live Score: ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಂಕಾ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಾಣ.
Asia cup 2023 IND vs SL Live Score: ಭಾರತ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್.
ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ.
ಶಾರ್ದೂಲ್ ಠಾಕೂರ್ ಬದಲಿಗೆ ಅಕ್ಷರ್ ಪಟೇಲ್ಗೆ ಸ್ಥಾನ.
Asia cup 2023 IND vs SL Live Score: ಟಾಸ್ ಗೆದ್ದ ಟೀಮ್ ಇಂಡಿಯಾ
ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Asia cup 2023 IND vs SL Live Score: ಶ್ರೀಲಂಕಾ ತಂಡಕ್ಕೆ ಭಾರತದ ಸವಾಲು
Match Day!
📍 Colombo
🏟️ India 🆚 Sri Lanka
🤝 Super 4⃣s
💻 https://t.co/Z3MPyeL1t7 #TeamIndia | #AsiaCup2023 | #INDvSL pic.twitter.com/l1sSxGAFTX
— BCCI (@BCCI) September 12, 2023
ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಏಷ್ಯಾಕಪ್ನ ಸೂಪರ್-4 ಹಂತದ 4ನೇ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ.
Published On - Sep 12,2023 2:22 PM