ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (Virat Kohli, KL Rahul ) ಅವರ ಶತಕದ ಇನ್ನಿಂಗ್ಸ್ ನಂತರ, ಕುಲ್ದೀಪ್ ಯಾದವ್ (Kuldeep Yadav) ಅವರ ಅದ್ಭುತ ಬೌಲಿಂಗ್ ಸಹಾಯದಿಂದ ಟೀಂ ಇಂಡಿಯಾ, ಏಷ್ಯಾಕಪ್ನ ಸೂಪರ್ -4 ಪಂದ್ಯದಲ್ಲಿ ಪಾಕಿಸ್ತಾನವನ್ನು (India vs Pakistan) 228 ರನ್ ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಅವರ ಅಜೇಯ 122 ಮತ್ತು ಕೆಎಲ್ ರಾಹುಲ್ ಅಜೇಯ 111 ರನ್‌ಗಳ ಆಧಾರದ ಮೇಲೆ ಒಟ್ಟು 50 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 356 ರನ್ ಗಳಿಸಿ ಪಾಕಿಸ್ತಾನಕ್ಕೆ ಪಂದ್ಯವನ್ನು ಗೆಲ್ಲಲು 357 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ಕೇವಲ 128 ರನ್ ಕಲೆಹಾಕಿ ಹೀನಾಯವಾಗಿ ಸೋಲುಂಡಿತು. ಆದರೆ ಪಂದ್ಯದ ನಡುವೆ ಪಾಕ್ ಬ್ಯಾಟರ್ ಮಾಡಿಕೊಂಡ ಎಡವಟ್ಟಿನಿಂದಾಗಿ ಮೈದಾನದಲ್ಲಿ ರಕ್ತ ಕೂಡ ಕಂಡು ಬಂತು.ವಾಸ್ತವವಾಗಿ ಹೆಲ್ಮೆಟ್ ಧರಿಸದೆ ಬ್ಯಾಟಿಂಗ್ ಮಾಡುತ್ತಿದ್ದ ಅಘಾ ಸಲ್ಮಾನ್ (Agha Salman) ಅವರ ಮುಖಕ್ಕೆ ಚೆಂಡು ಬಲವಾಗಿ ಬಡಿದ ಪರಿಣಾಮದಿಂದಾಗಿ ಅವರ ಮುಖಕ್ಕೆ ಗಾಯವಾಗಿ ರಕ್ತಸ್ರಾವವಾಯಿತು. ಇದರಿಂದ ಪಂದ್ಯವನ್ನು ಕೆಲಸಮಯ ನಿಲ್ಲಿಸಬೇಕಾಯ್ತು.
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೀಸಲು ದಿನದಂದು ನಡೆದ ಈ ಪಂದ್ಯದಲ್ಲಿ ಭಾರತ ನೀಡಿದ 357 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನದ ಬ್ಯಾಟಿಂಗ್‌ನ ಸ್ಥಿತಿ ಆರಂಭದಿಂದಲೂ ಕೆಟ್ಟದಾಗಿತ್ತು. ಅಲ್ಲದೆ ನಿರಂತರವಾಗಿ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಹೀಗಾಗಿ ಕೇವಲ 77 ರನ್‌ಗಳಿಗೆ 4 ವಿಕೆಟ್‌ಗಳ ಪತನದ ನಂತರ, ಅಘಾ ಸಲ್ಮಾನ್ ಕ್ರೀಸ್‌ನಲ್ಲಿದ್ದರು, ಇಫ್ತಿಕರ್ ಅಹ್ಮದ್ ಅವರೊಂದಿಗೆ ಇನ್ನಿಂಗ್ಸ್ ಅನ್ನು ಮುನ್ನಡೆಸುವ ಕೆಲಸವನ್ನು ಕೈಗೆತ್ತಿಕೊಂಡರು. ಇಬ್ಬರೂ ಸ್ವಲ್ಪ ಸಮಯದವರೆಗೆ ಈ ಕೆಲಸದಲ್ಲಿ ಯಶ ಕೂಡ ಆದರು. ಆದರೆ ಈ ಸಮಯದಲ್ಲಿ, ಸಲ್ಮಾನ್ ತಾವು ಮಾಡಿಕೊಂಡ ತಪ್ಪಿಗೆ ಬೆಲೆ ತೆರಬೇಕಾಯಿತು.
BREAKING: ಸೆ. 17 ರಂದು ನಡೆಯಲ್ಲಿರುವ ಏಷ್ಯಾಕಪ್ ಫೈನಲ್ ಪಂದ್ಯ ಕೊಲಂಬೊದಿಂದ ಸ್ಥಳಾಂತರ..!
ಪಾಕಿಸ್ತಾನ ಇನಿಂಗ್ಸ್‌ನ 21ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಮಾಡುತ್ತಿದ್ದರು. ಓವರ್‌ನ ಕೊನೆಯ ಎಸೆತದಲ್ಲಿ, ಅಘಾ ಸಲ್ಮಾನ್ ಚೆಂಡನ್ನು ಆಫ್ ಸ್ಟಂಪ್‌ನ ಹೊರಗೆ ಸ್ವೀಪ್ ಮಾಡಲು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ. ಚೆಂಡು ಅವರ ಬ್ಯಾಟ್‌ನ ಮೇಲ್ಭಾಗಕ್ಕೆ ತಾಗಿ ಮೇಲಕ್ಕೆ ಪುಟಿದು, ಅವರ ಬಲಗಣ್ಣಿನ ಕೆಳಗಿನ ಭಾಗಕ್ಕೆ ಬಲವಾಗಿ ಬಡಿಯಿತು. ತಕ್ಷಣ ಸಲ್ಮಾನ್ ಅವರ ಕಣ್ಣಿನ ಕೆಳಗಿನಿಂದ ರಕ್ತ ಹರಿಯತೊಡಗಿತು. ಭಾರತದ ವಿಕೆಟ್‌ಕೀಪರ್ ಕೆಎಲ್ ರಾಹುಲ್ ತಕ್ಷಣ ಹೋಗಿ ಅವರ ಸ್ಥಿತಿಯನ್ನು ವಿಚಾರಿಸಿದರು. ಸ್ವಲ್ಪ ಸಮಯದ ನಂತರ, ಪಾಕಿಸ್ತಾನಿ ತಂಡದ ವೈದ್ಯರು ಬಂದು, ಅವರ ಮುಖದಿಂದ ಆಗುತ್ತಿದ್ದ ರಕ್ತಸ್ರಾವವನ್ನು ನಿಲ್ಲಿಸಿ, ಚಿಕಿತ್ಸೆ ನೀಡಿದರು. ನಂತರ ಸಲ್ಮಾನ್ ಅವರು ತಮ್ಮ ಬ್ಯಾಟಿಂಗ್ ಮುಂದುವರೆಸಿದರು.
Ravindra Jadeja’s ball hits Agha Salman Face.
– Pakistani Player was not using helmet at that time. #INDvPAK #INDvsPAK #AsiaCup2023 pic.twitter.com/zdgttANZGE
— Jaddu Cricket (@Trigunjaddu) September 11, 2023
ವಾಸ್ತವವಾಗಿ ಜಡೇಜಾ ಸ್ಪಿನ್ ಬೌಲರ್ ಆಗಿದ್ದರೂ ಕೂಡ ಅವರ ಬೌಲಿಂಗ್ನಲ್ಲಿ ಚೆಂಡಿನ ವೇಗ ಹೆಚ್ಚಿರುತ್ತದೆ. ಅಲ್ಲದೆ ಕ್ರಿಕೆಟ್ ಪುಸ್ತಕದಲ್ಲಿರುವ ಇನ್ನೊಂದು ಪ್ರಮುಖ ಪಾಠವೆಂದರೆ ಅದು ಸ್ವೀಪ್ ಆಡುವ ಬ್ಯಾಟ್ಸ್‌ಮನ್‌ಗಳು ಹೆಲ್ಮೆಟ್ ಧರಿಸಬೇಕೆಂಬುದು. ಆದರೆ ಸಲ್ಮಾನ್ ಹೆಲ್ಮೆಟ್ ಧರಿಸದೇ ಸ್ವೀಪ್ ಆಡಿದ್ದು ಅವರ ದೊಡ್ಡ ತಪ್ಪು. ಸ್ಪಿನ್ನರ್‌ಗಳು ದಾಳಿಗಿಳಿದ ಕಾರಣ ಕ್ಯಾಪ್ ಮಾತ್ರ ಧರಿಸಿದ್ದ ಸಲ್ಮಾನ್, ಸ್ಟಂಪ್ ಲೈನ್‌ನಲ್ಲಿ ವೇಗವಾಗಿ ಬೌಲಿಂಗ್ ಮಾಡುವ ಜಡೇಜಾ ಅವರಂತಹ ಬೌಲರ್ ವಿರುದ್ಧ ಈ ಹೊಡೆತವನ್ನು ಆಡುವ ಯತ್ನದಲ್ಲಿ ತಮ್ಮ ಮುಖದ ಮೇಲೆ ಚೆಂಡಿನ ಮುದ್ರೆ ಒತ್ತಿಸಿಕೊಂಡರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ