ಹಾರ್ದಿಕ್ ಇನ್ಸ್ವಿಂಗರ್ ಬ್ರಹ್ಮಾಸ್ತ್ರಕ್ಕೆ ಬೆದರಿದ ಬಾಬರ್; ಮೀಟರ್ ದೂರ ಹಾರಿ ಬಿದ್ದ ಬೇಲ್ಸ್! ವಿಡಿಯೋ ನೋಡಿ
IND vs PAK: ಭಾರತದ ವೇಗಿಗಳ ಕರಾರುವಕ್ಕಾದ ದಾಳಿಗೆ ಪಾಕ್ ಬ್ಯಾಟರ್ಗಳ ಹುಟ್ಟಡಗಿ ಹೋಯಿತು. ಅದರಲ್ಲೂ ಪಾಕ್ ನಾಯಕ ಬಾಬರ್ ಆಝಂರನ್ನು, ಹಾರ್ದಿಕ್ ಪಾಂಡ್ಯ ಬೌಲ್ಡ್ ಮಾಡಿದ ದೃಶ್ಯ ಮಾತ್ರ, ಟೀಂ ಇಂಡಿಯಾದ ಅಭಿಮಾನಿಗಳು ಹುಚ್ಚೆದು ಕುಣಿಯುಂತೆ ಮಾಡಿತು. ತಮ್ಮ ಇನ್ನಿಂಗ್ಸ್ನಲ್ಲಿ 24 ಎಸೆತಗಳನ್ನು ಎದುರಿಸಿ 2 ಬೌಂಡರಿಗಳ ಸಹಾಯದಿಂದ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ (India vs Pakistan) ಏಕಪಕ್ಷೀಯ ಗೆಲುವು ಸಾಧಿಸಿದೆ. ಕೊಲಂಬೊದಲ್ಲಿ ನಡೆದ ಈ ಪಂದ್ಯ ಮೊದಲ ದಿನ ಮಳೆಯಿಂದಾಗಿ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಮೀಸಲು ದಿನದಂದು ಮಳೆಯ ಅಡಚಣೆಯ ನಡುವೆಯೂ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (Virat Kohli, KL Rahul) ಶತಕದ ಆಧಾರದ ಮೇಲೆ 356 ರನ್ ಕಲೆಹಾಕಿತು. ಭಾರತೀಯ ಬ್ಯಾಟ್ಸ್‌ಮನ್‌ಗಳು ಪಾಕ್ ಬೌಲರ್ಗಳನ್ನು ಬೆವರಿಳಿಸಿದ್ದನ್ನು ನೋಡಿದಾಗ, ಪಾಕ್ ಬ್ಯಾಟರ್ಗಳಿಂದಲೂ ಇದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಪಾಕ್ ಇನ್ನಿಂಗ್ಸ್ ಆರಂಭವಾದ ಬಳಿಕ ಕಂಡುಬಂದಿದ್ದು ಬೇರೆಯದ್ದೆ ಕಥೆ ಹೇಳಿತು. ಭಾರತದ ವೇಗಿಗಳ ಕರಾರುವಕ್ಕಾದ ದಾಳಿಗೆ ಪಾಕ್ ಬ್ಯಾಟರ್ಗಳ ಹುಟ್ಟಡಗಿ ಹೋಯಿತು. ಅದರಲ್ಲೂ ಪಾಕ್ ನಾಯಕ ಬಾಬರ್ ಆಝಂರನ್ನು (Babar Azam), ಹಾರ್ದಿಕ್ ಪಾಂಡ್ಯ (Hardik Pandya) ಬೌಲ್ಡ್ ಮಾಡಿದ ದೃಶ್ಯ ಮಾತ್ರ, ಟೀಂ ಇಂಡಿಯಾದ ಅಭಿಮಾನಿಗಳು ಹುಚ್ಚೆದು ಕುಣಿಯುಂತೆ ಮಾಡಿತು.
ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 11 ರ ಮೀಸಲು ದಿನದಂದು ನಡೆದ ಈ ಪಂದ್ಯದಲ್ಲಿ ಭಾರತ ನೀಡಿದ 357 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜುಲೈ 2022 ರ ನಂತರ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ಭಾರತದ ಸ್ಟಾರ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಪಾಕಿಸ್ತಾನದ ಅಗ್ರ ಕ್ರಮಾಂಕ ಸರಾಗವಾಗಿ ರನ್ ಕದಿಯುವುದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಪಾಕ್ ಆರಂಭಿಕರು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದರು.
ಹೆಲ್ಮೆಟ್ ಧರಿಸದೆ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟರ್ ಸಲ್ಮಾನ್; ಮುಖದಿಂದ ಹರಿಯಿತು ನೆತ್ತರು! ವಿಡಿಯೋ ನೋಡಿ
ಆರಂಭಿಕರ ಪೆವಿಲಿಯನ್ ಪರೇಡ್
ಶೀಘ್ರದಲ್ಲೇ ಇದರ ಲಾಭ ಪಡೆದ ಟೀಂ ಇಂಡಿಯಾ ವೇಗಿ ಬುಮ್ರಾ, ಆರಂಭಿಕ ಇಮಾಮ್ ಉಲ್ ಹಕ್ ಅವರನ್ನು ಔಟ್ ಮಾಡಿದರು. ಆ ನಂತರ ಮೂರನೇ ಕ್ರಮಾಂಕದಲ್ಲಿ ಬಂದ ಪಾಕ್ ನಾಯಕ ಬಾಬರ್, ಆರಂಭದಿಂದಲೂ ರನ್ ಕದಿಯಲು ಹೆಣಗಾಡ ಬೇಕಾಯ್ತು. ಅಂತಿಮವಾಗಿ 11 ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದ ಇನ್ಸ್ವಿಂಗರ್ ಎಸೆತಕ್ಕೆ ಬಾಬರ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು.
ಇನ್ಸ್ವಿಂಗ್ ದಾಳಿಗೆ ಬಾಬರ್ ಬಲಿ
ವಾಸ್ತವವಾಗಿ ಆರಂಭದಿಂದ ನಿಧಾನಗತಿಯ ಬ್ಯಾಟಿಂಗ್ಗೆ ಮುಂದಾಗಿದ್ದ ಬಾಬರ್, ತಮ್ಮ ಇನ್ನಿಂಗ್ಸ್ನಲ್ಲಿ 23 ಎಸೆತಗಳನ್ನು ಎದುರಿಸಿ 2 ಬೌಂಡರಿಗಳ ಸಹಾಯದಿಂದ 10 ರನ್ ಗಳಿಸಿ ಆಡುತ್ತಿದ್ದರು. ಈ ವೇಳೆ ಪಾಕ್ ಇನ್ನಿಂಗ್ಸ್ನ 11ನೇ ಓವರ್ ಬೌಲ್ ಮಾಡಲು ಬಂದ ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ, ಓವರ್ನ ಮೊದಲ ಮೂರು ಎಸೆತಗಳಲ್ಲಿ ಯಾವುದೇ ಇನ್ಸ್ವಿಂಗ್ ಆಗಲಿ ಅಥವಾ ಔಟ್ ಸ್ವಿಂಗರ್ ಆಗಲಿ ಬೌಲ್ ಮಾಡದೆ, ನೇರವಾಗಿ ಉತ್ತಮ ಲೈನ್ ಅಂಡ್ ಲೆಂಗ್ತ್ ಮೂಲಕ ಬೌಲಿಂಗ್ ಮಾಡಿದರು.
Massive moment in the game! 🤯@hardikpandya7 swung them big, eventually knocking @babarazam258‘s stumps over! HUGE wicket in the context of the game! #TeamIndia on 🔝
Tune-in to #AsiaCupOnStar, LIVE NOW on Star Sports Network#INDvPAK #Cricket pic.twitter.com/2w59Vv1mSi
— Star Sports (@StarSportsIndia) September 11, 2023
ಆದರೆ ಓವರ್ನ 4 ಎಸೆತದಲ್ಲಿ ತಮ್ಮ ಬ್ರಹ್ಮಾಸ್ತ್ರವನ್ನು ಹೊರತೆಗೆದ ಪಾಂಡ್ಯ, ಇನ್ಸ್ವಿಂಗರ್ ಬೌಲ್ ಮಾಡಿದರು. ಪಾಂಡ್ಯ ಎಸೆತವನ್ನುನ ಡೆಫೆಂಡ್ ಮಾಡಲು ಯತ್ನಿಸಿದ ಬಾಬರ್ಗೆ ಚೆಂಡು ಅಷ್ಟು ಸ್ವಿಂಗ್ ಆಗಿದ್ದು, ಕೊಂಚ ಗೊಂದಲಕ್ಕೀಡು ಮಾಡಿತು. ಅಂತಿಮವಾಗಿ ಬಾಬರ್ ಅವರ ಬ್ಯಾಟ್ ಅನ್ನು ತಪ್ಪಿಸಿಕೊಂಡ ಚೆಂಡು ನೇರವಾಗಿ ಮಧ್ಯದ ವಿಕೆಟ್ನ ಮೇಲ್ಭಾಗಕ್ಕೆ ಹೋಗಿ ಬಡಿಯಿತು. ಪಾಂಡ್ಯ ಬೌಲ್ ಮಾಡಿದ ಈ ಮ್ಯಾಜಿಕಲ್ ಎಸೆತವನ್ನು ನೋಡಿ ದಂಗಾದ ಬಾಬರ್ ಕೊಂಚ ಸಮಯ ಮೈದಾನದಲ್ಲಿ ಬ್ಲಾಂಕ್ ಆಗಿ ನಿಂತುಬಿಟ್ಟರು. ಬಳಿಕ ಸಪ್ಪೆ ಮೊರೆ ಹಾಕಿಕೊಂಡು ಮೈದಾನದಿಂದ ಹೊರನಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:20 am, Tue, 12 September 23