ನಿರೀಕ್ಷಿಸಿದಂತೆ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಮಳೆಯಿಂದ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ಪಿಚ್ನಲ್ಲಿ ಮೊದಲು ಬೌಲಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲಕಾರಿ ಎಂಬುಂದು ಗೊತ್ತಿದ್ದರೂ, ಮಳೆ ಬೀಳುವುದು ಖಚಿತವಾಗಿದ್ದರಿಂದ ನಾಯಕ ರೋಹಿತ್ (Rohit Sharma) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಮತ್ತೊಮ್ಮೆ ಪಾಕ್ ಬೌಲರ್ಗಳ ಮುಂದೆ ಭಾರತದ ಟಾಪ್ ಆರ್ಡರ್ ಮಂಕಾಯಿತು. ಹೀಗಾಗಿ ಆರಂಭದಲ್ಲೇ ಟೀಂ ಇಂಡಿಯಾ (Team India) ಸಂಕಷ್ಟಕ್ಕೆ ಸಿಲುಕಿತು. ಪಾಕ್ ವೇಗಿಗಳ ಘಾತುಕ ವೇಗಕ್ಕೆ ಉತ್ತರ ಹುಡುಕುವ ಗೊಜಿಗೆ ಹೋಗದ ಭಾರತದ ಬ್ಯಾಟರ್ಗಳು ಒಬ್ಬೊಬ್ಬರಾಗಿ ಪೆವಲಿಯನ್ ಸೇರಿಕೊಂಡರು. ಈ ನಡುವೆ ಮೈದಾನದಲ್ಲಿ ನಡೆದ ಅದೊಂದು ಘಟನೆ ಪಾಕ್ ಬೌಲರ್ಗಳ ಪರಾಕ್ರಮವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿತು.
ವಾಸ್ತವವಾಗಿ ಬಹಳ ವರ್ಷಗಳಿಂದ ಟೀಂ ಇಂಡಿಯಾವನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್. ಯುವರಾಜ್ ಸಿಂಗ್ ಬಳಿಕ ಈ ಕ್ರಮಾಂಕದಲ್ಲಿ ಸಮರ್ಥವಾಗಿ ಬ್ಯಾಟ್ ಬೀಸುವ ಮತ್ತೊಬ್ಬ ಆಟಗಾರ ಟೀಂ ಇಂಡಿಯಾಕ್ಕೆ ಸಿಕ್ಕಿಲ್ಲ. ಆದರೆ ಶ್ರೇಯಸ್ ಅಯ್ಯರ್ ರೂಪದಲ್ಲಿ ಈ ಸ್ಥಾನಕ್ಕೆ ಕೊಂಚ ನ್ಯಾಯ ಒದಗಿಸಲಬಲ್ಲ ಆಟಗಾರ ಸಿಕ್ಕಿದ್ದಾನೆ. ಆದರೆ ಇಂಜುರಿಯಿಂದ ಚೇತರಿಸಿಕೊಂಡು ಬಹಳ ದಿನಗಳ ಬಳಿಕ ಮೈದಾನಕ್ಕೆ ಮರಳಿರುವ ಅಯ್ಯರ್ ಕೂಡ ಪಾಕ್ ವಿರುದ್ಧ ಹೆಚ್ಚು ಸದ್ದು ಮಾಡಲಿಲ್ಲ.
ಮಳೆ ಬೀಳುವುದು ಖಚಿತ; ಭಾರತ- ನೇಪಾಳ ನಡುವಿನ ಪಂದ್ಯ ನಡೆಯುವುದು ಡೌಟ್..!
ಆರಂಭಿಕ ಆಘಾತದ ನಡುವೆ ಮೈದಾನಕ್ಕೆ ಬಂದ ಶ್ರೇಯಸ್ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಇದರಿಂದ ಶ್ರೇಯಸ್ ಉತ್ತಮ ಇನ್ನಿಂಗ್ಸ್ ಆಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. 14 ರನ್ ಗಳಿಸಿ ಆಡುತ್ತಿದ್ದ ಅಯ್ಯರ್ ಅವರನ್ನು ಪಾಕ್ ವೇಗಿ ಹ್ಯಾರಿಸ್ ರೌಫ್ 10 ನೇ ಓವರ್‌ನಲ್ಲಿ ಔಟ್ ಮಾಡಿದರು. ಆದರೆ ಇದಕ್ಕೂ ಮುನ್ನ ರೌಫ್ ಎಸೆದ ಮಾರಕ ಬಾಲ್ ಅಯ್ಯರ್ ಅವರ ಬ್ಯಾಟನ್ನು ಎರಡು ಹೊಳಾಗುವಂತೆ ಮಾಡಿತು. ವಾಸ್ತವವಾಗಿ ಅಯ್ಯರ್ ಬಾರಿಸಿದ 2 ಬೌಂಡರಿಗಳಲ್ಲಿ ಒಂದು ಬೌಂಡರಿ ರೌಫ್ ಎಸೆತದಲ್ಲಿ ಬಂತು. ಆದರೆ ಆ ಬೌಂಡರಿ ಬಂದಿದ್ದು ಮಾತ್ರ ವಿಚಿತ್ರವಾಗಿತ್ತು.
Haris rauf breaking iyer bat ..#AsiaCup2023 #INDvsPAK #BabarAzam𓃵 pic.twitter.com/kJhnxzhw4d
— Hamza Wasif (@HamzaWasif7) September 2, 2023
Haris Rauf unleashes a fiery ball 🔥 It shatters Shreyas Iyer’s bat in half 🏏
But the ball still flies to the rope 🌠 #asiacup23 #INDvsPAK pic.twitter.com/IfNcOUOyT6— Sitarah Anjum Official (@SitarahAnjum) September 2, 2023
After rain Break Virat Kohli and Rohit gone.
So much swing by shaheen Afridi
And Naseem shah in #INDvPAK match.
shreyas Iyer bat broke in haris Rauf bowling.
Still gill not started pic.twitter.com/BDnmGrrtga— Praneeth (@Spy_W_o_r_l_d) September 2, 2023
ರೌಫ್ ಎಸೆದ ಆ ಎಕ್ಸ್‌ಪ್ರೆಸ್ ವೇಗದ ಎಸೆತವು ಅಯ್ಯರ್ ಅವರ ಬ್ಯಾಟ್‌ಗೆ ಬಡಿಯಿತು. ರೌಫ್ ಎಸೆದ ಎಸೆತದ ವೇಗ ಎಷ್ಟಿತ್ತಂದರೆ, ಚೆಂಡು ಬಡಿದ ಕೂಡಲೇ ಶ್ರೇಯರ್ ಬ್ಯಾಟ್ ಎರಡು ಪೀಸ್ ಆಯಿತು. ಇಲ್ಲಿ ಇನ್ನೊಂದು ಮೋಜಿನ ಸಂಗತಿಯೆಂದರೆ, ಬ್ಯಾಟ್ ಹೊಳಾದ ನಂತರವೂ ಚೆಂಡು ಬೌಂಡರಿ ಗೆರೆ ದಾಟಿತು. ಇದೀಗ ಆ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ