ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium in Ahmedabad) ಕಳೆದ ಶನಿವಾರ ಅಂದರೆ, ಅಕ್ಟೋಬರ್ 14 ರಂದು ನಡೆದ ಭಾರತ-ಪಾಕಿಸ್ತಾನ (India vs Pakistan) ನಡುವಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಕೇವಲ 191 ರನ್ಗಳಿಗೆ ಆಲೌಟ್ ಆಯಿತು. ನಂತರ ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ (Team India) ಕೇವಲ 31 ಓವರ್‌ಗಳಲ್ಲಿ ಗೆಲವಿನ ನಗೆ ಬೀರಿತು. ಭಾರತದ ಗೆಲುವಿನ ನಂತರ ತೀವ್ರ ಹತಾಶೆಗೊಳಗಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೀಗ ಐಸಿಸಿಗೆ (ICC) ದೂರು ಸಲ್ಲಿಸಿದೆ.
ವಾಸ್ತವವಾಗಿ ವಿಶ್ವಕಪ್ ಪಂದ್ಯಾವಳಿಯನ್ನು ವೀಕ್ಷಿಸಲು ಪಾಕಿಸ್ತಾನ ತಂಡದ ಅಭಿಮಾನಿಗಳಿಗೆ ಹಾಗೂ ಪಾಕಿಸ್ತಾನಿ ಪತ್ರಕರ್ತರಿಗೆ ಭಾರತದ ವೀಸಾ ನೀಡಲಾಗಿಲ್ಲ. ಹೀಗಾಗಿ ಭಾರತ ಸರ್ಕಾರದಿಂದಾಗುತ್ತಿರುವ ವೀಸಾ ವಿಳಂಬ ಮತ್ತು ವಿಸಿ ನೀತಿಯ ಅನುಪಸ್ಥಿತಿಯ ಬಗ್ಗೆ ಹಾಗೂ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಅಭಿಮಾನಿಗಳು ತೋರಿದ ಅನುಚಿತ ವರ್ತನೆಯ ಬಗ್ಗೆ ಪಿಸಿಬಿ, ಐಸಿಸಿಗೆ ದೂರು ನೀಡಿದೆ.
ಬೆಂಗಳೂರಿನಲ್ಲಿ ಆಸೀಸ್- ಪಾಕ್ ವಿಶ್ವಕಪ್ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂಗೆ ಬಿಗಿ ಪೊಲೀಸ್ ಭದ್ರತೆ
ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ‘ಪಾಕಿಸ್ತಾನದ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು ನಡೆಯುತ್ತಿರುವ ವಿಶ್ವಕಪ್ಗಾಗಿ ಪಾಕಿಸ್ತಾನಿ ಅಭಿಮಾನಿಗಳಿಗೆ ವೀಸಾ ನೀತಿಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ದೂರು ಸಲ್ಲಿಸಿದೆ’. ಅಲ್ಲದೆ ಅಕ್ಟೋಬರ್ 14 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನಿ ತಂಡವನ್ನು ಗುರಿಯಾಗಿಸಿಕೊಂಡು ಭಾರತದ ಅಭಿಮಾನಿಗಳು ತೋರಿದ ಅನುಚಿತ ವರ್ತನೆಯ ಬಗ್ಗೆ ಪಿಸಿಬಿ ದೂರು ದಾಖಲಿಸಿದೆ ಎಂದು ಪಿಸಿಬಿ ಮಾಧ್ಯಮ ಟ್ವೀಟ್ ಮಾಡಿದೆ.
The Pakistan Cricket Board (PCB) has lodged another formal protest with the ICC over delays in visas for Pakistani journalists and the absence of a visa policy for Pakistan fans for the ongoing World Cup 2023.
The PCB has also filed a complaint regarding inappropriate conduct…
— PCB Media (@TheRealPCBMedia) October 17, 2023
ಇದಕ್ಕೂ ಮೊದಲು ಭಾರತ ಹಾಗೂ ಪಾಕಿಸ್ತಾನ ಪಂದ್ಯದ ನಂತರ ಮಾತನಾಡಿದ್ದ ಪಾಕ್ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳನ್ನು ಎತ್ತಿದರು. ‘ಇದು ವಿಶ್ವಕಪ್ ಪಂದ್ಯಾವಳಿ ಅನಿಸಲಿಲ್ಲ. ಬದಲಿಗೆ ಇದು ಬಿಸಿಸಿಐ ಆಯೋಜಿಸಿದ ದ್ವಿಪಕ್ಷೀಯ ಸರಣಿಯಿಂದ ಬಾಸವಾಯಿತು. ಪಾಕಿಸ್ತಾನದ ಅಭಿಮಾನಿಗಳಿಗೆ ಭಾರತಕ್ಕೆ ಬರಲು ವೀಸಾ ನೀಡಲಾಗಿಲ್ಲ. ಇದು ತಂಡದ ಪ್ರದರ್ಶನಕ್ಕೆ ಕೊಂಚ ಹಿನ್ನಡೆಯುಂಟು ಮಾಡಿತು’ ಎಂದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ