NZ vs AFG: ಅಫ್ಘಾನಿಸ್ತಾನ್​ ವಿರುದ್ಧ ನ್ಯೂಝಿಲೆಂಡ್​ಗೆ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Oct 18, 2023 | 9:13 PM

New Zealand vs Afghanistan, ICC world Cup 2023: ಉಭಯ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 3 ಬಾರಿ ಮಾತ್ರ ಮುಖಾಮುಖಿಯಾಗಿವೆ. ಈ ಮೂರು ಪಂದ್ಯಗಳನ್ನು ನ್ಯೂಝಿಲೆಂಡ್ ತಂಡವೇ ಗೆದ್ದುಕೊಂಡಿದೆ. 

NZ vs AFG: ಅಫ್ಘಾನಿಸ್ತಾನ್​ ವಿರುದ್ಧ ನ್ಯೂಝಿಲೆಂಡ್​ಗೆ ಜಯ
New Zealand vs Afghanistan

ಏಕದಿನ ವಿಶ್ವಕಪ್​ನ 16ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ್ ತಂಡದ ನಾಯಕ ಹಶ್ಮತ್ ಶಾಹಿದಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50 ಓವರ್​ಗಳಲ್ಲಿ6 ವಿಕೆಟ್ ನಷ್ಟಕ್ಕೆ 288 ರನ್​ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 34.4 ಓವರ್​ಗಳಲ್ಲಿ ಕೇವಲ 139 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ನ್ಯೂಝಿಲೆಂಡ್ ತಂಡವು 149 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ಉಭಯ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 3 ಬಾರಿ ಮಾತ್ರ ಮುಖಾಮುಖಿಯಾಗಿವೆ. ಈ ಮೂರು ಪಂದ್ಯಗಳನ್ನು ನ್ಯೂಝಿಲೆಂಡ್ ತಂಡವೇ ಗೆದ್ದುಕೊಂಡಿದೆ.

ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಖಿ.

ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.

ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್​ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.

LIVE Cricket Score & Updates

The liveblog has ended.
  • 18 Oct 2023 08:58 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್​ ಆಲೌಟ್

    ಮಿಚೆಲ್ ಸ್ಯಾಂಟ್ನರ್ ಹಾಗೂ ಲಾಕಿ ಫರ್ಗುಸನ್ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ್ ತಂಡ.

    139 ರನ್​ಗಳಿಗೆ ಅಫ್ಗಾನಿಸ್ತಾನ್ ತಂಡ ಆಲೌಟ್.

    7 ಓವರ್​ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿದ ಲಾಕಿ ಫರ್ಗುಸನ್.

    7.4 ಓವರ್​ಗಳಲ್ಲಿ 39 ರನ್​ಗಳಿಗೆ 3 ವಿಕೆಟ್ ಪಡೆದ ಮಿಚೆಲ್ ಸ್ಯಾಂಟ್ನರ್.

    ನ್ಯೂಝಿಲೆಂಡ್– 288/6 (50)

    ಅಫ್ಘಾನಿಸ್ತಾನ್– 139 (34.4)

      

  • 18 Oct 2023 08:36 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್​ 6ನೇ ವಿಕೆಟ್ ಪತನ

    ಮಿಚೆಲ್ ಸ್ಯಾಂಟ್ನರ್ ಎಸೆದ 31ನೇ ಓವರ್​ನ 4ನೇ ಎಸೆತದಲ್ಲಿ ಮೊಹಮ್ಮದ್ ನಬಿ ಕ್ಲೀನ್ ಬೌಲ್ಡ್​.

    31 ಓವರ್​ಗಳ ಮುಕ್ತಾಯದ ವೇಳೆಗೆ 126 ರನ್ ಕಲೆಹಾಕಿದ ಅಫ್ಘಾನಿಸ್ತಾನ್.

    ಕ್ರೀಸ್​ನಲ್ಲಿ ರಶೀದ್ ಖಾನ್ ಹಾಗೂ ಇಕ್ರಮ್ ಅಲಿಖಿಲ್ ಬ್ಯಾಟಿಂಗ್.

    AFG 126/6 (31)

      

      

  • 18 Oct 2023 08:23 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್​ 5ನೇ ವಿಕೆಟ್ ಪತನ

    ರಚಿನ್ ರವೀಂದ್ರ ಎಸೆದ 29ನೇ ಓವರ್​ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ರಹಮತ್ ಶಾ.

    62 ಎಸೆತಗಳಲ್ಲಿ 36 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಗಾನ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ರಹಮತ್ ಶಾ.

    ಕ್ರೀಸ್​ನಲ್ಲಿ ಮೊಹಮ್ಮದ್ ನಬಿ ಹಾಗೂ ಇಕ್ರಮ್ ಅಲಿಖಿಲ್ ಬ್ಯಾಟಿಂಗ್.

    AFG 107/5 (28.1)

      

  • 18 Oct 2023 08:16 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್​ 4ನೇ ವಿಕೆಟ್ ಪತನ

    ಟ್ರೆಂಟ್ ಬೌಲ್ಟ್ ಎಸೆದ 26ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ಅಝ್ಮತ್.

    32 ಎಸೆತಗಳಲ್ಲಿ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಝ್ಮತ್ ಒವರ್​ಝಾಹಿ.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಇಕ್ರಮ್ ಅಲಿಖಿಲ್ ಬ್ಯಾಟಿಂಗ್.

    AFG 99/4 (26)

      

  • 18 Oct 2023 08:06 PM (IST)

    NZ vs AFG ICC World Cup 2023 Live Score: 25 ಓವರ್​ಗಳು ಮುಕ್ತಾಯ

    ರಚಿನ್ ರವೀಂದ್ರ 25ನೇ ಓವರ್​ನ 4ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಅಝ್ಮತ್ ಒಮರ್​ಝಾಹಿ.

    25 ಓವರ್​ಗಳ ಮುಕ್ತಾಯದ ವೇಳೆಗೆ 94 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಅಝ್ಮತ್ ಒಮರ್​ಝಾಹಿ ಬ್ಯಾಟಿಂಗ್.

    AFG 94/3 (25)

      

  • 18 Oct 2023 07:53 PM (IST)

    NZ vs AFG ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ 68 ರನ್ ಕಲೆಹಾಕಿದ ಅಫ್ಘಾನಿಸ್ತಾನ್.

    ಅತ್ಯುತ್ತಮ ಬೌಲಿಂಗ್ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಅಝ್ಮತ್ ಒಮರ್​ಝಾಹಿ ಬ್ಯಾಟಿಂಗ್.

    AFG 68/3 (20)

      

  • 18 Oct 2023 07:30 PM (IST)

    NZ vs AFG ICC World Cup 2023 Live Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳ ಮುಕ್ತಾಯದ ವೇಳೆಗೆ ಕೇವಲ 48 ರನ್ ಕಲೆಹಾಕಿದ ಅಫ್ಘಾನಿಸ್ತಾನ್.

    3 ವಿಕೆಟ್ ಕಬಳಿಸಿ ಅಫ್ಗಾನ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಅಝ್ಮತ್ ಒಮರ್​ಝಾಹಿ ಬ್ಯಾಟಿಂಗ್.

    AFG 48/3 (15)

      

  • 18 Oct 2023 07:26 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್​ 3ನೇ ವಿಕೆಟ್ ಪತನ

    ಲಾಕಿ ಫರ್ಗುಸನ್ ಎಸೆದ 14ನೇ ಓವರ್​ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಹಶ್ಮತ್ ಶಾಹಿದಿ. ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್.

    ನ್ಯೂಝಿಲೆಂಡ್ ತಂಡಕ್ಕೆ ಮೂರನೇ ಯಶಸ್ಸು.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಅಝ್ಮತ್ ಒಮರ್​ಝಾಹಿ ಬ್ಯಾಟಿಂಗ್.

    AFG 43/3 (14)

      

  • 18 Oct 2023 07:09 PM (IST)

    NZ vs AFG ICC World Cup 2023 Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ 28 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.

    ನ್ಯೂಝಿಲೆಂಡ್​ ಬೌಲರ್​ಗಳಿಂದ ಅತ್ಯುತ್ತಮ ಬೌಲಿಂಗ್.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.

    AFG 28/2 (10)

    ಇಬ್ರಾಹಿಂ ಝದ್ರಾನ್ ಹಾಗೂ ರಹಮಾನುಲ್ಲಾ ಗುರ್ಬಾಝ್ ಔಟ್.

      

  • 18 Oct 2023 06:56 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್​ 2ನೇ ವಿಕೆಟ್ ಪತನ

    ಟ್ರೆಂಟ್ ಬೌಲ್ಟ್ ಎಸೆದ 7ನೇ ಓವರ್​ನ ಮೊದಲ ಎಸೆತದಲ್ಲೇ ಸುಲಭ ಕ್ಯಾಚ್ ನೀಡಿದ ಇಬ್ರಾಹಿಂ ಝದ್ರಾನ್.

    15 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಬ್ಯಾಟರ್ ಇಬ್ರಾಹಿಂ.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.

    AFG 28/2 (7)

      

  • 18 Oct 2023 06:53 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್​ ಮೊದಲ ವಿಕೆಟ್ ಪತನ

    ಮ್ಯಾಟ್ ಹೆನ್ರಿ ಎಸೆದ  6ನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಹಮಾನುಲ್ಲಾ ಗುರ್ಬಾಝ್.

    5ನೇ ಎಸೆತದಲ್ಲಿ ಗುರ್ಬಾಝ್ ರನ್ನು ಕ್ಲೀನ್ ಬೌಲ್ಡ್ ಮಾಡಿದ ಮ್ಯಾಟ್ ಹೆನ್ರಿ.

    ನ್ಯೂಝಿಲೆಂಡ್ ತಂಡಕ್ಕೆ ಮೊದಲ ಯಶಸ್ಸು.

    AFG 27/1 (6)

      

  • 18 Oct 2023 06:47 PM (IST)

    NZ vs AFG ICC World Cup 2023 Live Score: 5 ಓವರ್​ಗಳು ಮುಕ್ತಾಯ

    5 ಓವರ್​ಗಳ ಮುಕ್ತಾಯದ ವೇಳೆಗೆ 19 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    ಅಫ್ಘಾನ್ ತಂಡದ ಉತ್ತಮ ಆರಂಭ.

    AFG 19/0 (5)

      

  • 18 Oct 2023 06:43 PM (IST)

    NZ vs AFG ICC World Cup 2023 Live Score: ಮೊದಲ ಬೌಂಡರಿ

    ಮ್ಯಾಟ್ ಹೆನ್ರಿ ಎಸೆದ 4ನೇ ಓವರ್​ನ 2ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.

    ಇದು ಅಫ್ಘಾನಿಸ್ತಾನ್ ಇನಿಂಗ್ಸ್​ನ ಮೊದಲ ಬೌಂಡರಿ.

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 13/0 (4)

      

  • 18 Oct 2023 06:32 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್​ ಇನಿಂಗ್ಸ್ ಆರಂಭ

    ಮೊದಲ ಓವರ್​ನಲ್ಲಿ ಕೇವಲ 3 ರನ್ ನೀಡಿದ ಎಡಗೈ ವೇಗಿ ಟ್ರೆಂಟ್ ಬೌಲ್ಟ್.

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 3/0 (1)

      

  • 18 Oct 2023 05:56 PM (IST)

    NZ vs AFG ICC World Cup 2023 Live Score: ನ್ಯೂಝಿಲೆಂಡ್ ಇನಿಂಗ್ಸ್​ ಅಂತ್ಯ

    50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 288 ರನ್​ ಕಲೆಹಾಕಿದ ನ್ಯೂಝಿಲೆಂಡ್.

    ಅಫ್ಘಾನಿಸ್ತಾನ್ ತಂಡಕ್ಕೆ 289 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ಕಿವೀಸ್ ಪಡೆ.

    NZ 288/6 (50)

      

  • 18 Oct 2023 05:51 PM (IST)

    NZ vs AFG ICC World Cup 2023 Live Score: ಒಂದೇ ಓವರ್​ನಲ್ಲಿ 20 ರನ್

    ಅಝ್ಮತ್ ಒಮರ್​ಝಾಹಿ ಎಸೆದ 49ನೇ ಓವರ್​ನಲ್ಲಿ 2 ಫೋರ್​ ಹಾಗೂ 1 ಸಿಕ್ಸ್ ಸಿಡಿಸಿದ ನ್ಯೂಝಿಲೆಂಡ್ ಬ್ಯಾಟರ್​ಗಳು.

    ಕ್ರೀಸ್​ನಲ್ಲಿ ಮಾರ್ಕ್​ ಚಾಪ್ಮನ್​ ಹಾಗು ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್.

    ಕೊನೆಯ ಓವರ್ ಬಾಕಿ.

    NZ 277/6 (49)

      

  • 18 Oct 2023 05:45 PM (IST)

    NZ vs AFG ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್

    ನವೀನ್ ಉಲ್ ಹಕ್ ಎಸೆದ 48ನೇ ಓವರ್​ನ ಮೊದಲ ಎಸೆತದಲ್ಲಿ ಕ್ಯಾಚ್ ನೀಡಿದ ಗ್ಲೆನ್ ಫಿಲಿಪ್ಸ್​ (71).

    ಮೂರನೇ ಎಸೆತದಲ್ಲಿ ಟಾಮ್ ಲಾಥಮ್ (68) ಕ್ಲೀನ್ ಬೌಲ್ಡ್​.

    ಕ್ರೀಸ್​ನಲ್ಲಿ ಮಾರ್ಕ್​ ಚಾಪ್ಮನ್​ ಹಾಗು ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್.

    NZ 257/6 (48)

      

  • 18 Oct 2023 05:25 PM (IST)

    NZ vs AFG ICC World Cup 2023 Live Score: 45 ಓವರ್​ಗಳು ಮುಕ್ತಾಯ

    45ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಸಿಕ್ಸ್ ಸಿಡಿಸಿದ ಗ್ಲೆನ್ ಫಿಲಿಪ್ಸ್​.

    4ನೇ ಎಸೆತದಲ್ಲಿ ಫಿಲಿಪ್ಸ್​ ಬ್ಯಾಟ್​ನಿಂದ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್​.

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.

    NZ 226/4 (45)

      

  • 18 Oct 2023 05:12 PM (IST)

    NZ vs AFG ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಫಿಲಿಪ್ಸ್

    ಮುಜೀಬ್ ಉರ್ ರೆಹಮಾನ್ ಎಸೆದ 42ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಗ್ಲೆನ್ ಫಿಲಿಪ್ಸ್.

    5ನೇ ವಿಕೆಟ್​ಗೆ 89 ರನ್​ಗಳ ಜೊತೆಯಾಟವಾಡಿದ ಲಾಥಮ್ – ಫಿಲಿಪ್ಸ್

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.

    NZ 199/4 (42)

      

  • 18 Oct 2023 05:09 PM (IST)

    NZ vs AFG ICC World Cup 2023 Live Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳ ಮುಕ್ತಾಯದ ವೇಳೆಗೆ 185 ರನ್ ಕಲೆಹಾಕಿದ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.

    NZ 185/4 (40)

     ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ ಹಾಗೂ ಡೇರಿಲ್ ಮಿಚೆಲ್…ಔಟ್.

      

  • 18 Oct 2023 04:55 PM (IST)

    NZ vs AFG ICC World Cup 2023 Live Score: ಲಾಥಮ್ – ಫಿಲಿಪ್ಸ್ ಉತ್ತಮ ಜೊತೆಯಾಟ

    ಐದನೇ ವಿಕೆಟ್​ಗೆ 67 ರನ್​ಗಳ ಜೊತೆಯಾಟವಾಡಿದ ಲಾಥಮ್ – ಫಿಲಿಪ್ಸ್​

    38 ಓವರ್​ಗಳ ಮುಕ್ತಾಯದ ವೇಳೆಗೆ 177 ರನ್​ ಕಲೆಹಾಕಿದ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.

    NZ 177/4 (38)

      

  • 18 Oct 2023 04:41 PM (IST)

    NZ vs AFG ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳಲ್ಲಿ 163 ರನ್ ಕಲೆಹಾಕಿದ ನ್ಯೂಝಿಲೆಂಡ್ ಬ್ಯಾಟರ್​ಗಳು.

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.

    5ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿರುವ ಫಿಲಿಪ್ಸ್ ಹಾಗೂ ಲಾಥಮ್.

    NZ 163/4 (35)

      

  • 18 Oct 2023 04:20 PM (IST)

    NZ vs AFG ICC World Cup 2023 Live Score: 30 ಓವರ್​ಗಳು ಮುಕ್ತಾಯ

    ಮೊಹಮ್ಮದ್ ನಬಿ ಎಸೆದ 30ನೇ ಓವರ್​ನ 3ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಗ್ಲೆನ್ ಫಿಲಿಪ್ಸ್.

    30 ಓವರ್​ಗಳ ಮುಕ್ತಾಯದ ವೇಳೆಗೆ 138 ರನ್ ಕಲೆಹಾಕಿದ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.

    NZ 138/4 (30)

      

  • 18 Oct 2023 04:12 PM (IST)

    NZ vs AFG ICC World Cup 2023 Live Score: ಮೇಡನ್ ಓವರ್​

    28ನೇ ಓವರ್​ ಅನ್ನು ಮೇಡನ್ ಮಾಡಿದ ಮೊಹಮ್ಮದ್ ನಬಿ.

    ಅಫ್ಘಾನಿಸ್ತಾನ್ ತಂಡದಿಂದ ಉತ್ತಮ ಬೌಲಿಂಗ್.

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.

    NZ 126/4 (28)

      

  • 18 Oct 2023 04:01 PM (IST)

    NZ vs AFG ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ 120 ರನ್​ ಕಲೆಹಾಕಿದ ನ್ಯೂಝಿಲೆಂಡ್.

    4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಅಫ್ಘಾನ್ ಬೌಲರ್​ಗಳು.

    ಕ್ರೀಸ್​ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.

    NZ 120/4 (25)

     ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ ಹಾಗೂ ಡೇರಿಲ್ ಮಿಚೆಲ್…ಔಟ್.

  • 18 Oct 2023 03:49 PM (IST)

    NZ vs AFG ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್​

    ಅಝ್ಮತ್ ಒಮರ್​ಝಾಹಿ ಎಸೆದ 21ನೇ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ವಿಲ್ ಯಂಗ್ (54).

    ರಶೀದ್ ಖಾನ್ ಎಸೆದ 22ನೇ ಓವರ್​ನ 4ನೇ ಎಸೆತದಲ್ಲಿ ಕ್ಯಾಚ್ ನೀಡಿದ ಡೇರಿಲ್ ಮಿಚೆಲ್ (1).

    ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿದ ಅಫ್ಘಾನ್ ಬೌಲರ್​ಗಳು.

    NZ 113/4 (22)

      

  • 18 Oct 2023 03:40 PM (IST)

    NZ vs AFG ICC World Cup 2023 Live Score: ನ್ಯೂಝಿಲೆಂಡ್ ತಂಡದ 2ನೇ ವಿಕೆಟ್ ಪತನ

    ಅಝ್ಮತ್ ಒಮರ್​ಝಾಹಿ ಎಸೆದ 21ನೇ ಓವರ್​ನ 2ನೇ ಎಸೆತದಲ್ಲಿ ಎಡಗೈ ದಾಂಡಿಗ ರಚಿನ್ ರವೀಂದ್ರ ಕ್ಲೀನ್ ಬೌಲ್ಡ್​.

    42 ಎಸೆತಗಳಲ್ಲಿ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಚಿನ್ ರವೀಂದ್ರ.

    ಅಫ್ಘಾನಿಸ್ತಾನ್ ತಂಡಕ್ಕೆ 2ನೇ ಯಶಸ್ಸು.

    ಕ್ರೀಸ್​ನಲ್ಲಿ ಡೇರಿಲ್ ಮಿಚೆಲ್ ಹಾಗೂ ವಿಲ್ ಯಂಗ್ ಬ್ಯಾಟಿಂಗ್.

    NZ 109/2 (20.2)

      

  • 18 Oct 2023 03:36 PM (IST)

    NZ vs AFG ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ 109 ರನ್ ಕಲೆಹಾಕಿದ ನ್ಯೂಝಿಲೆಂಡ್.

    ಕೇವಲ ಡೆವೊನ್ ಕಾನ್ವೆ (20) ವಿಕೆಟ್ ಪಡೆಯಲು ಮಾತ್ರ ಯಶಸ್ವಿಯಾಗಿರುವ ಅಫ್ಘಾನಿಸ್ತಾನ್.

    ಕ್ರೀಸ್​ನಲ್ಲಿ ಎಡಗೈ ದಾಂಡಿಗ ರಚಿನ್ ರವೀಂದ್ರ (32) ಹಾಗೂ ಬಲಗೈ ಬ್ಯಾಟರ್ ವಿಲ್ ಯಂಗ್ (54) ಬ್ಯಾಟಿಂಗ್.

    NZ 109/1 (20)

      

  • 18 Oct 2023 03:26 PM (IST)

    NZ vs AFG ICC World Cup 2023 Live Score: ಅರ್ಧಶತಕ ಪೂರೈಸಿದ ವಿಲ್ ಯಂಗ್ರ

    ರಶೀದ್ ಖಾನ್ ಎಸೆದ 18ನೇ ಓವರ್​ನ ಮೊದಲ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ವಿಲ್ ಯಂಗ್.

    ಈ ಫೋರ್​ನೊಂದಿಗೆ 57 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್ ತಂಡದ ಆರಂಭಿಕ ಆಟಗಾರ ವಿಲ್ ಯಂಗ್.

    ಕ್ರೀಸ್​ನಲ್ಲಿ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಬ್ಯಾಟಿಂಗ್.

    NZ 98/1 (18)

      

  • 18 Oct 2023 03:10 PM (IST)

    NZ vs AFG ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಯಂಗ್

    ಮೊಹಮ್ಮದ್ ನಬಿ ಎಸೆದ 15ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ವಿಲ್ ಯಂಗ್.

    15 ಓವರ್​ಗಳ ಮುಕ್ತಾಯದ ವೇಳೆಗೆ 80 ರನ್ ಕಲೆಹಾಕಿದ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಬ್ಯಾಟಿಂಗ್.

    NZ 80/1 (15)

      

  • 18 Oct 2023 02:57 PM (IST)

    NZ vs AFG ICC World Cup 2023 Live Score: ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್

    12 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್ ತಂಡ.

    ಕ್ರೀಸ್​ನಲ್ಲಿ ಎಡಗೈ ದಾಂಡಿಗ ರಚಿನ್ ರವೀಂದ್ರ ಹಾಗೂ ಬಲಗೈ ಬ್ಯಾಟರ್ ವಿಲ್ ಯಂಗ್ ಬ್ಯಾಟಿಂಗ್.

    ಅಫ್ಘಾನ್ ತಂಡದಿಂದ ಉತ್ತಮ ಬೌಲಿಂಗ್.

    NZ 50/1 (12)

    ಡೆವೊನ್ ಕಾನ್ವೆ (20) ಔಟ್.

      

  • 18 Oct 2023 02:48 PM (IST)

    NZ vs AFG ICC World Cup 2023 Live Score: 10 ಓವರ್​​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ 43 ರನ್​ ಕಲೆಹಾಕಿದ ನ್ಯೂಝಿಲೆಂಡ್​.

    ಕ್ರೀಸ್​ನಲ್ಲಿ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಬ್ಯಾಟಿಂಗ್.

    ಡೆವೊನ್ ಕಾನ್ವೆ (20) ವಿಕೆಟ್ ಪಡೆದ ಮುಜೀಬ್ ಉರ್ ರೆಹಮಾನ್.

    NZ 43/1 (10)

    ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡುತ್ತಿರುವ ಅಫ್ಘಾನಿಸ್ತಾನ್.

     

  • 18 Oct 2023 02:39 PM (IST)

    NZ vs AFG ICC World Cup 2023 Live Score: ಆಕರ್ಷಕ ಬೌಂಡರಿ

    ಫಝಲ್ಹಕ್ ಫಾರೂಖಿ ಎಸೆದ 8ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿಲ್ ಯಂಗ್.

    ಕ್ರೀಸ್​ನಲ್ಲಿ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಬ್ಯಾಟಿಂಗ್.

    NZ 37/1 (8)

    ಡೆವೊನ್ ಕಾನ್ವೆ (20) ಔಟ್.

      

  • 18 Oct 2023 02:32 PM (IST)

    NZ vs AFG ICC World Cup 2023 Live Score: ನ್ಯೂಝಿಲೆಂಡ್ ಮೊದಲ ವಿಕೆಟ್ ಪತನ

    ಮುಜೀಬ್ ಉರ್ ರೆಹಮಾನ್ ಎಸೆದ 7ನೇ ಓವರ್​ನ ಮೂರನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದ ಡೆವೊನ್ ಕಾನ್ವೆ.

    18 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಡೆವೊನ್ ಕಾನ್ವೆ.

    ಕ್ರೀಸ್​ನಲ್ಲಿ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಬ್ಯಾಟಿಂಗ್.

    NZ 30/1 (7)

      

  • 18 Oct 2023 02:12 PM (IST)

    NZ vs AFG ICC World Cup 2023 Live Score: ಮೊದಲ ಬೌಂಡರಿ

    ಮುಜೀಬ್ ಉರ್ ರೆಹಮಾನ್ ಎಸೆದ 3ನೇ ಓವರ್​ನ ಮೊದಲ ಎಸೆತದಲ್ಲೇ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಡೆವೊನ್ ಕಾನ್ವೆ.

    ಇದು ನ್ಯೂಝಿಲೆಂಡ್ ಇನಿಂಗ್ಸ್​ನ ಮೊದಲ ಬೌಂಡರಿ.

    ಮೂರು ಓವರ್​ಗಳ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ ಸ್ಕೋರ್ 12 ರನ್​ಗಳು.

    NZ 12/0 (3)

      

  • 18 Oct 2023 02:10 PM (IST)

    NZ vs AFG ICC World Cup 2023 Live Score: ಸುಲಭ ಕ್ಯಾಚ್ ಡ್ರಾಪ್

    ಫಝಲ್ಹಕ್ ಫಾರೂಖಿ ಎಸೆದ 2ನೇ ಓವರ್​ನ 5ನೇ ಎಸೆತದಲ್ಲಿ ವಿಲ್ ಯಂಗ್ ಸ್ಲಿಪ್​ನಲ್ಲಿ ನೀಡಿದ ಸುಲಭ ಕ್ಯಾಚ್ ಡ್ರಾಪ್ ಮಾಡಿದ ರಹಮತ್ ಶಾ.

    2ನೇ ಓವರ್ ಮೇಡನ್ ಮಾಡಿದ ಫಝಲ್ಹಕ್ ಫಾರೂಖಿ.

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್ ಬ್ಯಾಟಿಂಗ್.

    NZ 2/0 (2)

      

  • 18 Oct 2023 02:06 PM (IST)

    NZ vs AFG ICC World Cup 2023 Live Score: ಅಫ್ಘಾನ್ ಉತ್ತಮ ಆರಂಭ

    ಮೊದಲ ಓವರ್​ನಲ್ಲಿ ಕೇವಲ 2 ರನ್ ನೀಡಿದ ಮುಜೀಬ್ ಉರ್ ರೆಹಮಾನ್.

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್ ಬ್ಯಾಟಿಂಗ್.

    NZ 2/0 (1)

    ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಅಫ್ಘಾನಿಸ್ತಾನ್.

      

  • 18 Oct 2023 02:01 PM (IST)

    NZ vs AFG ICC World Cup 2023 Live Score: ನ್ಯೂಝಿಲೆಂಡ್ ಇನಿಂಗ್ಸ್ ಆರಂಭ

    ನ್ಯೂಝಿಲೆಂಡ್ ಆರಂಭಿಕರು: ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್.

    ಅಫ್ಘಾನಿಸ್ತಾನ್ ಪರ ಮೊದಲ ಓವರ್: ಮುಜೀಬ್ ಉರ್ ರೆಹಮಾನ್.

    ನ್ಯೂಝಿಲೆಂಡ್ ಬ್ಯಾಟಿಂಗ್ ಲೈನಪ್: ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

  • 18 Oct 2023 01:47 PM (IST)

    Karnataka News Live: ಒಂದೂವರೆ ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನ; ಸಂಸದ ಎಸ್​​ ಮುನಿಸ್ವಾಮಿ

    ಬೆಂಗಳೂರು: ಮುಂದಿನ ಒಂದೂವರೆ ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಮನೆಯೊಂದು ನೂರಾರು ಬಾಗಿಲಾಗಿದೆ. ಒಂದು ಟೀಂ 20 ಜನರನ್ನು ಕರೆದುಕೊಂಡು ಒಂದು ಕಡೆ ಹೋದರೆ, ಇನ್ನೊಂದು ಟೀಂ 10 ಜನರನ್ನು ಕರೆದುಕೊಂಡು ಬೇರೆಡೆ ಹೋಗುತ್ತೆ. ಒಂದು ಟೀಂ ಮೂವರನ್ನು ಡಿಸಿಎಂ ಮಾಡಬೇಕು ಎಂದು ಹೇಳುತ್ತೆ. ಮತ್ತೊಂದು ಟೀಂ ಬೇರೆಯವರನ್ನು ಸಿಎಂ ಮಾಡಬೇಕು ಎನ್ನುತ್ತಿದೆ. ರಾಜ್ಯದ ಜನ ಕಾಂಗ್ರೆಸ್​ನವರನ್ನು ಥೂ.. ಛೀ.. ಎಂದು ಉಗೀತಿದ್ದಾರೆ ಎಂದು ಕೋಲಾರ ನಗರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

  • 18 Oct 2023 01:43 PM (IST)

    NZ vs AFG ICC World Cup 2023 Live Score: ಅಫ್ಘಾನಿಸ್ತಾನ್ ಪ್ಲೇಯಿಂಗ್ ಇಲೆವೆನ್

    ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಖಿ.

  • 18 Oct 2023 01:42 PM (IST)

    NZ vs AFG ICC World Cup 2023 Live Score: ನ್ಯೂಝಿಲೆಂಡ್ ಪ್ಲೇಯಿಂಗ್ ಇಲೆವೆನ್

    ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್

  • 18 Oct 2023 01:34 PM (IST)

    NZ vs AFG ICC World Cup 2023 Live Score: ಟಾಸ್ ಗೆದ್ದ ಅಫ್ಘಾನಿಸ್ತಾನ್

    ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಅಫ್ಗಾನಿಸ್ತಾನ್ ತಂಡದ ನಾಯಕ ಹಶ್ಮತ್ ಶಾಹಿದಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • Published On - Oct 18,2023 1:34 PM

    Follow us