IND vs PAK: ಭಾರತ-ಪಾಕ್ ನಡುವೆ ಇದುವರೆಗೆ ಎಷ್ಟು ಪಂದ್ಯ ನಡೆದಿವೆ?: ಯಾರು ಹೆಚ್ಚು ಗೆಲುವು ಸಾಧಿಸಿದ್ದು?

| Updated By: Vinay Bhat

Updated on: Sep 04, 2022 | 12:26 PM

Asia Cup 2022: ಟಿ20 ಯಲ್ಲಿ ಭಾರತ-ಪಾಕ್ ಇದುವರೆಗೆ ಒಟ್ಟು ಹತ್ತು ಪಂದ್ಯಗಳಲ್ಲಿ ಎದುರಾಗಿದೆ. ಇದರಲ್ಲಿ ಭಾರತ ಎಂಟು ಪಂದ್ಯಗಳನ್ನು ಗೆದ್ದರೆ ಪಾಕಿಸ್ತಾನ ಎರಡು ಪಂದ್ಯಗಳಲ್ಲಷ್ಟೆ ಜಯ ಸಾಧಿಸಿದೆ. ಅಂತೆಯೆ ಏಷ್ಯಾಕಪ್​ನಲ್ಲಿ ಉಭಯ ತಂಡಗಳು ಈವರೆಗೆ 15 ಬಾರಿ ಮುಖಾಮುಖಿ ಆಗಿದೆ.

IND vs PAK: ಭಾರತ-ಪಾಕ್ ನಡುವೆ ಇದುವರೆಗೆ ಎಷ್ಟು ಪಂದ್ಯ ನಡೆದಿವೆ?: ಯಾರು ಹೆಚ್ಚು ಗೆಲುವು ಸಾಧಿಸಿದ್ದು?
IND vs PAK Asia Cup 2022
Follow us on

ಏಷ್ಯಾಕಪ್ 2022ರಲ್ಲಿ (Asia Cup 2022) ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಿದ್ದು ಇಂದು ಎರಡನೇ ಪಂದ್ಯ ಆಯೋಜಿಸಲಾಗಿದೆ. ಕ್ರಿಕೆಟ್ ಲೋಕದ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ನಡುವೆ ಭಾನುವಾರ ಮುಖಾಮುಖಿ ನಡೆಯಲಿದೆ. ಈ ಬಾರಿಯ ಏಷ್ಯಾಕಪ್​ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಅಮೋಘ ಗೆಲುವು ಕಂಡಿರುವ ಟೀಮ್ ಇಂಡಿಯಾ (Team India) ಜಯದ ನಾಗಾಲೋಟವನ್ನು ಮುಂದುವರೆಸುವ ತವಕದಲ್ಲಿದೆ. ಏಷ್ಯಾಕಪ್​ ಇತಿಹಾಸದಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಟೂರ್ನಿಯನ್ನು ಗೆದ್ದಿರುವುದು ಭಾರತ. ಒಟ್ಟು ಏಳು ಬಾರಿ ಏಷ್ಯಾಕಪ್ ಕಿರೀಟವನ್ನು ಭಾರತ ತೊಟ್ಟಿದ್ದರೆ, ಪಾಕ್ ಎರಡು ಬಾರಿ ಮಾತ್ರ ಪ್ರಶಸ್ತಿ ಗೆದ್ದಿದೆ.

ಟಿ20 ಯಲ್ಲಿ ಭಾರತಪಾಕ್ ಇದುವರೆಗೆ ಒಟ್ಟು ಹತ್ತು ಪಂದ್ಯಗಳಲ್ಲಿ ಎದುರಾಗಿದೆ. ಇದರಲ್ಲಿ ಭಾರತ ಎಂಟು ಪಂದ್ಯಗಳನ್ನು ಗೆದ್ದರೆ ಪಾಕಿಸ್ತಾನ ಎರಡು ಪಂದ್ಯಗಳಲ್ಲಷ್ಟೆ ಜಯ ಸಾಧಿಸಿದೆ. ಅಂತೆಯೆ ಏಷ್ಯಾಕಪ್​ನಲ್ಲಿ ಉಭಯ ತಂಡಗಳು ಈವರೆಗೆ 15 ಬಾರಿ ಮುಖಾಮುಖಿ ಆಗಿದೆ. ಇದರಲ್ಲಿ ಭಾರತ ಒಂಬತ್ತು ಹಾಗೂ ಪಾಕಿಸ್ತಾನ 5 ಪಂದ್ಯ ಗೆದ್ದರೆ ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಕಂಡಿದೆ.

ಭಾರತಪಾಕಿಸ್ತಾನ ಕೊನೆಯ ಬಾರಿ ಮುಖಾಮುಖಿ ಆಗಿದ್ದು ಇದೇ ಏಷ್ಯಾಕಪ್ 2022 ರಲ್ಲಿ. ಈ ಮ್ಯಾಚ್​ನಲ್ಲಿ ಭಾರತ 5 ವಿಕೆಟ್​ಗಳ ಜಯ ಕಂಡಿತ್ತು. ಇದಕ್ಕೂ ಮುನ್ನ 2021ರ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಎದುರೆದುರಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಅವರ ಕೊಡುಗೆಯ ನೆರವಿನಿಂದ 151 ರನ್ ಗಳಿಸಿತು. ಆದರೆ, ಪಾಕ್ ಈ ಪಂದ್ಯದಲ್ಲಿ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಅವರ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನದಿಂದ 10 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿತು.

ಇದನ್ನೂ ಓದಿ
Viral Video: ಅಭಿ ಲಡ್ಕೋ ಕಾ ಭೀ ಫಾರ್ಮ್ ಆಗಾಯ.. ‘ಮಾರೋ ಮುಜೆ‘ ಖ್ಯಾತಿಯ ಯುವಕನಿಗೆ ಪಠಾಣ್ ಪ್ರತ್ಯುತ್ತರ
IND vs PAK: ಹೈವೋಲ್ಟೇಜ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧತೆ ಹೇಗಿದೆ ನೋಡಿ: ಫೋಟೋ
IND vs PAK: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ, ಪಿಚ್ ರಿಪೋರ್ಟ್
Virat Kohli: ಪಾಕಿಸ್ತಾನ ವಿರುದ್ಧ 3 ಸಿಕ್ಸ್ ಸಿಡಿಸಿದ್ರೆ ಸಾಕು: ವಿರಾಟ್ ಕೊಹ್ಲಿ ಖಾತೆಗೆ ಸೇರಲಿದೆ ಶತಕದ ದಾಖಲೆ

ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ:

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 3 ಸಿಕ್ಸರ್ ಸಿಡಿಸಿದರೆ ವಿಶೇಷ ಶತಕದ ದಾಖಲೆ ನಿರ್ಮಾಣವಾಗಲಿದೆ. ಕೊಹ್ಲಿ ಬ್ಯಾಟ್​ನಿಂದ ಇಂದು ಮೂರು ಸಿಕ್ಸ್ ಬಂದರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಸಿಕ್ಸರ್ ಬಾರಿಸಿದ ಸಾಧನೆ ಮಾಡಲಿದ್ದಾರೆ. ಈ ವಿಶೇಷ ದಾಖಲೆ ನಿರ್ಮಿಸಿದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ. ಜೊತೆಗೆ ಡೇವಿಡ್ ವಾರ್ನರ್, ಕ್ರಿಸ್ ಗೇಲ್ ಮತ್ತು ಇಯಾನ್ ಮಾರ್ಗನ್ ಸಾಲಿಗೆ ಸೇರಲಿದ್ದಾರೆ.

ಕೊಹ್ಲಿ ಸದ್ಯ 101 ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ 97 ಸಿಕ್ಸರ್ ಬಾರಿಸಿದ್ದಾರೆ. ಭಾರತ ಪರ ಅತಿ ಹೆಚ್ಚು ಸಿಕ್ಸ್ ಸಿಡಿಸಿದವರ ಸಾಲಿನಲ್ಲಿ ರೋಹಿತ್ ಶರ್ಮಾ ಅವರಿದ್ದು 134 ಪಂದ್ಯಗಳಿಂದ 165 ಸಿಕ್ಸ್ ಸಿಡಿಸಿದ್ದಾರೆ. ಇದೀಗ ಕೊಹ್ಲಿ ಬ್ಯಾಟ್​ನಿಂದ ಮೂರು ಸಿಕ್ಸರ್ ಬಂದರೆ ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ 100 ಸಿಕ್ಸರ್ ಬಾರಿಸಿದ ಭಾರತದ ಎರಡನೇ ಹಾಗೂ ವಿಶ್ವದ 10ನೇ ಆಟಗಾರ ಆಗಲಿದ್ದಾರೆ.

Published On - 12:26 pm, Sun, 4 September 22