AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಪಾಕಿಸ್ತಾನ ವಿರುದ್ಧ 3 ಸಿಕ್ಸ್ ಸಿಡಿಸಿದ್ರೆ ಸಾಕು: ವಿರಾಟ್ ಕೊಹ್ಲಿ ಖಾತೆಗೆ ಸೇರಲಿದೆ ಶತಕದ ದಾಖಲೆ

India vs Pakistan, Asia Cup 2022: ಇಂದು ಪಾಕಿಸ್ತಾನ ವಿರುದ್ಧ ಸೂಪರ್ 4 ಹಂತದಲ್ಲಿ ಭಾರತ ಪುನಃ ಮುಖಾಮುಖಿ ಆಗಲಿದೆ. ಇಲ್ಲಿ ವಿರಾಟ್ ಕೊಹ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.

Virat Kohli: ಪಾಕಿಸ್ತಾನ ವಿರುದ್ಧ 3 ಸಿಕ್ಸ್ ಸಿಡಿಸಿದ್ರೆ ಸಾಕು: ವಿರಾಟ್ ಕೊಹ್ಲಿ ಖಾತೆಗೆ ಸೇರಲಿದೆ ಶತಕದ ದಾಖಲೆ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ 30 ಪಂದ್ಯಗಳಲ್ಲಿ 61 ಸರಾಸರಿಯೊಂದಿಗೆ, 85.91 ಸ್ಟ್ರೈಕ್ ರೇಟ್‌ನಲ್ಲಿ 1403 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಪ್ರೋಟೀಸ್ ವಿರುದ್ಧ 4 ಶತಕ ಮತ್ತು 8 ಅರ್ಧ ಶತಕಗಳನ್ನು ಗಳಿಸಿದ್ದಾರೆ.
TV9 Web
| Updated By: Vinay Bhat|

Updated on:Sep 04, 2022 | 8:58 AM

Share

ಏಷ್ಯಾಕಪ್ 2022 ರಲ್ಲಿ (Asia Cup 2022) ವಿರಾಟ್ ಕೊಹ್ಲಿ ಬ್ಯಾಟ್​ನಿಂದ ರನ್​ಗಳು ಬರುತ್ತಿದ್ದು ಫಾರ್ಮ್​ಗೆ ಮರಳಿದಂತೆ ಗೋಚರಿಸುತ್ತಿದೆ. ಐಸಿಸಿ ಟಿ20 ವಿಶ್ವಕಪ್​ಗೂ ಮುನ್ನ ಕೊಹ್ಲಿಯ ಈ ಪ್ರದರ್ಶನ ಟೀಮ್ ಇಂಡಿಯಾಕ್ಕೆ ಖುಷಿ ತಂದಿದೆ. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 35 ರನ್ ಗಳಿದರೆ, ಹಾಂಗ್ ಕಾಂಗ್ ವಿರುದ್ಧ 44 ಎಸೆತಗಳಲ್ಲಿ ಅಜೇಯ 59 ರನ್ ಸಿಡಿಸಿದ್ದರು. ಇಂದು ಪಾಕಿಸ್ತಾನ ವಿರುದ್ಧ ಸೂಪರ್ 4 ಹಂತದಲ್ಲಿ ಭಾರತ (India vs Pakistan) ಪುನಃ ಮುಖಾಮುಖಿ ಆಗಲಿದೆ. ಇಲ್ಲಿ ವಿರಾಟ್ ಕೊಹ್ಲಿ (Virat Kohli) ಮೇಲೆ ಎಲ್ಲರ ಕಣ್ಣಿದ್ದು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ. ಇದರ ನಡುವೆ ಕಿಂಗ್ ಕೊಹ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 3 ಸಿಕ್ಸರ್ ಸಿಡಿಸಿದರೆ ವಿಶೇಷ ಶತಕದ ದಾಖಲೆ ನಿರ್ಮಾಣವಾಗಲಿದೆ. ಕೊಹ್ಲಿ ಬ್ಯಾಟ್​ನಿಂದ ಇಂದು ಮೂರು ಸಿಕ್ಸ್ ಬಂದರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಸಿಕ್ಸರ್ ಬಾರಿಸಿದ ಸಾಧನೆ ಮಾಡಲಿದ್ದಾರೆ. ಈ ವಿಶೇಷ ದಾಖಲೆ ನಿರ್ಮಿಸಿದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ. ಜೊತೆಗೆ ಡೇವಿಡ್ ವಾರ್ನರ್, ಕ್ರಿಸ್ ಗೇಲ್ ಮತ್ತು ಇಯಾನ್ ಮಾರ್ಗನ್ ಸಾಲಿಗೆ ಸೇರಲಿದ್ದಾರೆ.

ಕೊಹ್ಲಿ ಸದ್ಯ 101 ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ 97 ಸಿಕ್ಸರ್ ಬಾರಿಸಿದ್ದಾರೆ. ಭಾರತ ಪರ ಅತಿ ಹೆಚ್ಚು ಸಿಕ್ಸ್ ಸಿಡಿಸಿದವರ ಸಾಲಿನಲ್ಲಿ ರೋಹಿತ್ ಶರ್ಮಾ ಅವರಿದ್ದು 134 ಪಂದ್ಯಗಳಿಂದ 165 ಸಿಕ್ಸ್ ಸಿಡಿಸಿದ್ದಾರೆ. ಇದೀಗ ಕೊಹ್ಲಿ ಬ್ಯಾಟ್​ನಿಂದ ಮೂರು ಸಿಕ್ಸರ್ ಬಂದರೆ ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ 100 ಸಿಕ್ಸರ್ ಬಾರಿಸಿದ ಭಾರತದ ಎರಡನೇ ಹಾಗೂ ವಿಶ್ವದ 10ನೇ ಆಟಗಾರ ಆಗಲಿದ್ದಾರೆ.

ಇದನ್ನೂ ಓದಿ
Image
SL vs AFG: ಸೂಪರ್ 4 ನ ಮೊದಲ ಪಂದ್ಯ ಗೆದ್ದ ಶ್ರೀಲಂಕಾ: ರೋಚಕ ಕಾದಾಟದಲ್ಲಿ ಅಫ್ಘಾನ್​ಗೆ ಸೋಲು
Image
IND vs PAK: ಏಷ್ಯಾಕಪ್​ನಲ್ಲಿಂದು ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕದನ: ಕೊಹ್ಲಿ ಮೇಲೆ ಎಲ್ಲರ ಕಣ್ಣು
Image
India Playing XI: 2 ಬದಲಾವಣೆ ಖಚಿತ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
Image
IND vs PAK: ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ತಂಡಕ್ಕೆ ಬಿಗ್ ಶಾಕ್..!

ಇಂದು ಭಾರತಪಾಕ್ ಪಂದ್ಯ:

ಏಷ್ಯಾಕಪ್ 2022ರ ಸೂಪರ್ 4 ಹಂತದಲ್ಲಿ ಇಂದು ಎರಡನೇ ಪಂದ್ಯ ಆಯೋಜಿಸಲಾಗಿದ್ದು ಕ್ರಿಕೆಟ್ ಲೋಕದ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಬಾರಿಯ ಏಷ್ಯಾಕಪ್​ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಅಮೋಘ ಗೆಲುವು ಕಂಡಿರುವ ಟೀಮ್ ಇಂಡಿಯಾ ಜಯದ ನಾಗಾಲೋಟವನ್ನು ಮುಂದುವರೆಸುವ ತವಕದಲ್ಲಿದೆ. ಇತ್ತ ಲೀಗ್ ಹಂತದಲ್ಲಿ ಭಾರತ ವಿರುದ್ಧ ಸೋತ ಪಾಕಿಸ್ತಾನ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ನಾಯಕ ರೋಹಿತ್ ಶರ್ಮಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಫಾರ್ಮ್​ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ, ಕೆಎಲ್ ರಾಹುಲ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಬೌಲಿಂಗ್ ವಿಭಾಗದಲ್ಲಿ ಕೂಡ ಬದಲಾವಣೆ ಆಗಲೇಬೇಕಿದೆ. ಅರ್ಶ್​​ದೀಪ್ ಸಿಂಗ್ ಹಾಗೂ ಆವೇಶ್ ಖಾನ್ ದುಬಾರಿಯಾಗುತ್ತಿದ್ದಾರೆ. ವಿಕೆಟ್ ಕೂಡ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಭಾರತದ ಪ್ಲೇಯಿಂಗ್ ಇಲೆವೆನ್​ನಲ್ಲಿ ಮುಖ್ಯ ಬದಲಾವಣೆ ನಿರೀಕ್ಷಿಸಲಾಗಿದೆ.

Published On - 8:58 am, Sun, 4 September 22

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ