
ಟಿ20 ಸರಣಿ ಪೂರ್ಣಗೊಂಡ ನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ ಪೈಪೋಟಿ ಇದೀಗ ಏಕದಿನ ಮಾದರಿಯಲ್ಲಿ ಪ್ರಾರಂಭವಾಗುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಲಕ್ನೋದಲ್ಲಿ ಆರಂಭವಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಶಿಖರ್ ಧವನ್ (Shikhar Dhawan) ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಆದರೆ, ಮಳೆಯಿಂದಾಗಿ ಪಂದ್ಯ ಆರಂಭ 2 ಗಂಟೆಗೂ ಹೆಚ್ಚು ವಿಳಂಬವಾಗಿದ್ದು, ಇದೀಗ ಪಂದ್ಯವನ್ನು 50 ಓವರ್‌ಗಳ ಬದಲು ತಲಾ 40 ಓವರ್‌ಗಳಿಗೆ ಇಳಿಸಲಾಗಿದೆ.
ಟೀಮ್ ಇಂಡಿಯಾದಲ್ಲಿ ಇಬ್ಬರು ಪದಾರ್ಪಣೆ
ಟಿ20 ವಿಶ್ವಕಪ್‌ಗಾಗಿ ಅಕ್ಟೋಬರ್ 6 ರ ಗುರುವಾರ ಬೆಳಿಗ್ಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ತೆರಳಿದೆ. ಹಾಗಾಗಿ ಹಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಟೀಂ ಇಂಡಿಯಾದ ಬಾಗಿಲು ತೆರೆದಿದ್ದು ಇಬ್ಬರಿಗೆ ಈ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಪಂದ್ಯದಲ್ಲಿ ಬದಲಾವಣೆ
ಇನ್ನು ಪಂದ್ಯದ ಬಗ್ಗೆ ಮಾತನಾಡುವುದಾದರೆ, ಮಳೆಯಿಂದಾಗಿ ಪಂದ್ಯ ಆರಂಭ ತಡವಾದ ಕಾರಣ ಎರಡೂ ಇನಿಂಗ್ಸ್‌ಗಳಿಂದ ತಲಾ 10 ಓವರ್‌ಗಳನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಪವರ್‌ಪ್ಲೇನಲ್ಲಿ ಬೌಲರ್‌ಗಳ ಬಳಕೆಯಲ್ಲೂ ಬದಲಾವಣೆಗಳನ್ನು ಮಾಡಲಾಗಿದ್ದು, ಮೊದಲ ಪವರ್‌ಪ್ಲೇ ಆರಂಭಿಕ 8 ಓವರ್ ಮಾತ್ರ ಇರುತ್ತದೆ. ಅಲ್ಲದೆ 5 ಬೌಲರ್‌ಗಳ ಬದಲಿಗೆ 4 ಬೌಲರ್‌ಗಳಿಗೆ ಮಾತ್ರ ತಲಾ 10 ಓವರ್‌ಗಳನ್ನು ಬೌಲ್ ಮಾಡುವ ಅವಕಾಶ ಸಿಗುತ್ತದೆ. ಹಾಗೆಯೇ ಎರಡನೇ ಪವರ್‌ಪ್ಲೇ 30 ಓವರ್ ಬದಲಿಗೆ 24 ಓವರ್‌ಗಳಾಗಿರುತ್ತದೆ ಮತ್ತು ಕೊನೆಯ ಪವರ್‌ಪ್ಲೇ 10 ಓವರ್ ಬದಲಿಗೆ 8 ಓವರ್‌ಗಳಾಗಿರುತ್ತದೆ.
UPDATE:
Toss to take place at 3:30 PM IST and play will start at 3:45 PM IST if there are no further delays.
Each team to play 40 overs per side.
Maximum 8 Overs Per Bowler.
Powerplay 1 – 8 overs
Powerplay 2 – 24 Overs
Powerplay 3 – 8 Overs#TeamIndia #INDvSA https://t.co/3Cos7tvlha— BCCI (@BCCI) October 6, 2022
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತ ತಂಡ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಯನಮನ್ ಮಲನ್, ಏಡನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪೆರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ ಮತ್ತು ತಬ್ರೇಜ್ ಶಮ್ಸಿ
Published On - 4:02 pm, Thu, 6 October 22