AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: 62.2 ಓವರ್​ಗಳಲ್ಲಿ ಟೀಮ್ ಇಂಡಿಯಾ ಆಲೌಟ್

India vs South Africa, 1st Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಮುಗಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 159 ರನ್​ಗಳಿಸಿದರೆ, ಟೀಮ್ ಇಂಡಿಯಾ 189 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 30 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

IND vs SA: 62.2 ಓವರ್​ಗಳಲ್ಲಿ ಟೀಮ್ ಇಂಡಿಯಾ ಆಲೌಟ್
Team India
ಝಾಹಿರ್ ಯೂಸುಫ್
|

Updated on: Nov 15, 2025 | 1:52 PM

Share

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಭಾರತ ತಂಡವು 189 ರನ್​ಗಳಿಸಿ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿತ್ತು.

ಬೃಹತ್ ಮೊತ್ತ ಪೇರಿಸುವ ಇರಾದೆಯೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡಕ್ಕೆ ಬುಮ್ರಾ ಆಘಾತದ ಮೇಲೆ ಆಘಾತ ನೀಡಿದ್ದರು. ಪರಿಣಾಮ ಸೌತ್ ಆಫ್ರಿಕಾ ತಂಡವು ಕೇವಲ 159 ರನ್​ಗಳಿಸಿ ಆಲೌಟ್ ಆಯಿತು. ಭಾರತದ ಪರ ಜಸ್​ಪ್ರೀತ್ ಬುಮ್ರಾ ಕೇವಲ 27 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.

ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ 12 ರನ್​ಗಳಿಸಿ ಔಟಾದರೆ, ಕೆಎಲ್ ರಾಹುಲ್ 39 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್ ಕಲೆಹಾಕಿದ್ದು 29 ರನ್​ಗಳು ಮಾತ್ರ.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶುಭ್​ಮನ್ ಗಿಲ್ ಕೇವಲ 4 ರನ್​ಗಳಿಸಿ ಗಾಯಗೊಂಡು ಹೊರ ನಡೆದರು. ಆ ಬಳಿಕ ಬಂದ ರಿಷಭ್ ಪಂತ್ 27 ರನ್​ಗಳಿಸಿದರೆ, ರವೀಂದ್ರ ಜಡೇಜಾ 27 ರನ್​ ಬಾರಿಸಿದರು.

ಇನ್ನು ಧ್ರುವ್ ಜುರೆಲ್ ಕಲೆಹಾಕಿದ್ದು ಕೇವಲ 14 ರನ್​ ಮಾತ್ರ. ಇದರ ಬೆನ್ನಲ್ಲೇ ಅಕ್ಷರ್ ಪಟೇಲ್ (16) ಕೂಡ ವಿಕೆಟ್ ಒಪ್ಪಿಸಿದರು.  ಇನ್ನುಳಿದಂತೆ ಕುಲ್ದೀಪ್ ಯಾದವ್, ಜಸ್​​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ರನ್​ ಕಲೆಹಾಕಲಷ್ಟೇ ಶಕ್ತರಾದರು.

ಈ ಮೂಲಕ ಟೀಮ್ ಇಂಡಿಯಾ 62.2 ಓವರ್​ಗಳಲ್ಲಿ 189 ರನ್​ಗಳಿಸಿ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿದೆ.  ಸೌತ್ ಆಫ್ರಿಕಾ ಪರ ಸೈಮನ್ ಹರ್ಮರ್ 4 ವಿಕೆಟ್ ಪಡೆದರೆ, ಮಾರ್ಕೊ ಯಾನ್ಸೆನ್ 3 ವಿಕೆಟ್ ಕಬಳಿಸಿ ಮಿಂಚಿದರು.

ಭಾರತ ಪ್ಲೇಯಿಂಗ್ 11:  ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್ , ಶುಭ್​ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ಧ್ರುವ್ ಜುರೆಲ್ , ಅಕ್ಷರ್ ಪಟೇಲ್ , ಕುಲ್ದೀಪ್ ಯಾದವ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ಬರೋಬ್ಬರಿ 3977 ದಿನಗಳು… ನಿಧಾನದೊಂದಿಗೆ ದಾಖಲೆ ಪಟ್ಟಿ ಸೇರಿದ ಕೆಎಲ್ ರಾಹುಲ್

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕಲ್ಟನ್ , ವಿಯಾನ್ ಮುಲ್ಡರ್ , ಟೆಂಬಾ ಬವುಮಾ (ನಾಯಕ) , ಟೋನಿ ಡಿ ಝೋರ್ಝಿ , ಟ್ರಿಸ್ಟನ್ ಸ್ಟಬ್ಸ್ , ಕೈಲ್ ವೆರ್ರೆನ್ (ವಿಕೆಟ್ ಕೀಪರ್ ), ಮಾರ್ಕೊ ಯಾನ್ಸೆನ್ , ಕಾರ್ಬಿನ್ ಬಾಷ್ , ಸೈಮನ್ ಹಾರ್ಮರ್ , ಕೇಶವ ಮಹಾರಾಜ್

ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟ
ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟ
ಮುಸ್ಲಿಮರಿಗೆ ಬೆಡ್​ಶೀಟ್ ಕೊಡದ ಬಿಜೆಪಿ ಮಾಜಿ ಸಂಸದ ಸುಖ್​ಬೀರ್
ಮುಸ್ಲಿಮರಿಗೆ ಬೆಡ್​ಶೀಟ್ ಕೊಡದ ಬಿಜೆಪಿ ಮಾಜಿ ಸಂಸದ ಸುಖ್​ಬೀರ್
‘ರಾಮ ಹಾಗೂ ಹನುಮನ ಭಕ್ತರು ಖುಷಿಯಿಂದ ನೋಡುವ ಸಿನಿಮಾ ಇದು’; ರಿಷಬ್ ಶೆಟ್ಟಿ
‘ರಾಮ ಹಾಗೂ ಹನುಮನ ಭಕ್ತರು ಖುಷಿಯಿಂದ ನೋಡುವ ಸಿನಿಮಾ ಇದು’; ರಿಷಬ್ ಶೆಟ್ಟಿ
ಮೆಕ್ಸಿಕೋದಲ್ಲಿ ಡ್ರಗ್ ಲಾರ್ಡ್​ ಎಲ್ ಮೆಂಚೊ ಹತ್ಯೆ, ಭುಗಿಲೆದ್ದ ಹಿಂಸಾಚಾರ
ಮೆಕ್ಸಿಕೋದಲ್ಲಿ ಡ್ರಗ್ ಲಾರ್ಡ್​ ಎಲ್ ಮೆಂಚೊ ಹತ್ಯೆ, ಭುಗಿಲೆದ್ದ ಹಿಂಸಾಚಾರ
ಜಬಲ್ಪುರ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆಯ ದೊಡ್ಡ ಭಾಗ ಕುಸಿತ
ಜಬಲ್ಪುರ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆಯ ದೊಡ್ಡ ಭಾಗ ಕುಸಿತ
ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಕೇಸ್! ಏನಿದು ಹೊಸ ಕೇಸ್?
ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಕೇಸ್! ಏನಿದು ಹೊಸ ಕೇಸ್?
ಪರ್ಸ್​​ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದು?
ಪರ್ಸ್​​ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದು?
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ