‘ನನಗೆ 365 ದಿನಗಳು ಬೇಕಾಯ್ತು’; ಕೊಹ್ಲಿಯ ಶತಕವನ್ನು ಸಚಿನ್ ತೆಂಡೂಲ್ಕರ್ ಅಭಿನಂದಿಸಿದ್ದು ಹೀಗೆ
Sachin Tendulkar: ಈ ಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿರುವ ವಿರಾಟ್, ಈ ಶತಕದೊಂದಿಗೆ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ ತನ್ನ ದಾಖಲೆಯನ್ನು ಸರಿಗಟ್ಟಿದ ಬಳಿಕ ಸೋಶಿಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ಲೋಕದ ಸಾಮ್ರಾಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ (India vs South Africa) 243 ರನ್ಗಳ ಬೃಹತ್ ಜಯ ದಾಖಲಿಸಿದೆ. ಟೀಂ ಇಂಡಿಯಾದ ಸಾಂಘಿಕ ಹೋರಾಟಕ್ಕೆ ತಲೆಬಾಗಿದ ದಕ್ಷಿಣ ಆಫ್ರಿಕಾ ತಂಡ ಕೇವಲ 83 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ (Ravindra Jadeja) 5 ವಿಕೆಟ್ ಪಡೆದು ಮಿಂಚಿದರೆ, ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ (Virat Kohli) ಅಜೇಯ 101 ರನ್ ಸಿಡಿಸುವ ಮೂಲಕ ತಂಡವನ್ನು 300 ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಈ ಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿರುವ ವಿರಾಟ್, ಈ ಶತಕದೊಂದಿಗೆ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ ತನ್ನ ದಾಖಲೆಯನ್ನು ಸರಿಗಟ್ಟಿದ ಬಳಿಕ ಸೋಶಿಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ಲೋಕದ ಸಾಮ್ರಾಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭವಿಷ್ಯ ನುಡಿದಿದ್ದ ಸಚಿನ್
ವಾಸ್ತವವಾಗಿ ಹಲವು ವರ್ಷಗಳ ಹಿಂದೆಯೇ ತನ್ನ ದಾಖಲೆಯನ್ನು ಮುರಿಯುವ ಆಟಗಾರರ ಬಗ್ಗೆ ಭವಿಷ್ಯ ನುಡಿದಿದ್ದ ಸಚಿನ್ ತೆಂಡೂಲ್ಕರ್, ನನ್ನ ದಾಖಲೆಯನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುರಿಯುತ್ತಾರೆ ಎಂದಿದ್ದಾರೆ. ಇಂದು ಸಚಿನ್ರ ಭವಿಷ್ಯದಂತೆಯೇ ವಿರಾಟ್ ಕೊಹ್ಲಿ, ಏಕದಿನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
‘ಬಾಲ್ಯದಿಂದಲೂ ಅವರು ನನ್ನ ಹೀರೋ’; ಕ್ರಿಕೆಟ್ ದೇವರ ಬಗ್ಗೆ ಕಿಂಗ್ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ
ನನಗೆ 365 ದಿನಗಳು ಬೇಕಾದವು
ಇನ್ನು 49ನೇ ಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿರುವ ಕ್ರಿಕೆಟ್ ದೇವರು, ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದು, ‘ವಿರಾಟ್ ತುಂಬಾ ಚೆನ್ನಾಗಿ ಆಡಿದರು. 49 ರಿಂದ 50ನೇ ವರ್ಷಕ್ಕೆ ಕಾಲಿಡಲು ನನಗೆ 365 ದಿನಗಳು ಬೇಕಾದವು. ಆದರೆ ನೀವು (ಕೊಹ್ಲಿ) ಶೀಘ್ರದಲ್ಲೇ 49 ಶತಕಗಳನ್ನು ಶೀಘ್ರದಲ್ಲೇ 50 ಶತಕಗಳಿಗೆ ಏರಿಸುತ್ತಿರಿ. ಇದರೊಂದಿಗೆ ಕೆಲವೇ ದಿನಗಳಲ್ಲಿ ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
View this post on Instagram
ಇದು ಏಕದಿನದ ವಿರಾಟ್ ಅವರ 49 ನೇ ಶತಕವಾಗಿದ್ದು, ಒಟ್ಟಾರೆಯಾಗಿ ವೈಟ್ ಬಾಲ್ ಕ್ರಿಕೆಟ್ನಲ್ಲಿ ಟಿ20ಯಲ್ಲಿ ಸಿಡಿಸಿರುವ ಒಂದು ಶತಕವನ್ನು ಸೇರಿದಂತೆ ಕೊಹ್ಲಿ 50 ಶತಕಗಳನ್ನು ಸಿಡಿಸಿರುವ ದಾಖಲೆ ಹೊಂದಿದ್ದಾರೆ. ಇನ್ನು ಏಕದಿನ ಮಾದರಿಯ ವಿಚಾರಕ್ಕೆ ಬಂದರೆ, ಕ್ರಿಕೆಟ್ ದೇವರು ಸಚಿನ್ ಕೂಡ ತಮ್ಮ ವೃತ್ತಿಬದುಕಿನಲ್ಲಿ 49 ಶತಕಗಳನ್ನು ಸಿಡಿಸಿದ್ದಾರೆ.
50 ಏಕದಿನ ಶತಕಗಳ ಸನಿಹದಲ್ಲಿ ವಿರಾಟ್
ಆದರೆ ವಿರಾಟ್ ಪ್ರಸ್ತುತ ಆಡುತ್ತಿದ್ದು, ಈಗಿರುವ ಅವರ ಫಾರ್ಮ್ ಗಮಿಸಿದರೆ, ಕೊಹ್ಲಿ 50ನೇ ಶತಕ ಬಾರಿಸಿ ಶೀಘ್ರದಲ್ಲೇ ಇತಿಹಾಸ ಸೃಷ್ಟಿಸಲಿದ್ದಾರೆ ಎನ್ನಬಹುದಾಗಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಮುರಿಯುವ ಮತ್ತು 50 ಏಕದಿನ ಶತಕಗಳನ್ನು ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಸನಿಹದಲ್ಲಿ ಕೊಹ್ಲಿ ಇದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ