IND vs SA: ಆಫ್ರಿಕಾ ವಿರುದ್ಧ ಸುಲಭ ಜಯ; ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಭಾರತ
IND vs SA: ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ಗಳ ಬೃಹತ್ ಗೆಲುವು ದಾಖಲಿಸಿದೆ. ಆಫ್ರಿಕಾ ನೀಡಿದ 117 ರನ್ಗಳ ಅಲ್ಪ ಗುರಿಯನ್ನು ಟೀಂ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು 17ನೇ ಓವರ್ನಲ್ಲಿಯೇ ಸಾಧಿಸಿತು.
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (India vs South Africa) 8 ವಿಕೆಟ್ಗಳ ಬೃಹತ್ ಗೆಲುವು ದಾಖಲಿಸಿದೆ. ಆಫ್ರಿಕಾ ನೀಡಿದ 117 ರನ್ಗಳ ಅಲ್ಪ ಗುರಿಯನ್ನು ಟೀಂ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು 17ನೇ ಓವರ್ನಲ್ಲಿಯೇ ಸಾಧಿಸಿತು. ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅರ್ಷದೀಪ್ ಸಿಂಗ್ (Arshdeep Singh) 5 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರೆ, ಅವರೊಂದಿಗೆ ಅವೇಶ್ ಖಾನ್ (Avesh Khan) ಕೂಡ 4 ವಿಕೆಟ್ ಉರುಳಿಸಿ ದಾಖಲೆ ಬರೆದರು. ಇನ್ನು ಬ್ಯಾಟಿಂಗ್ನಲ್ಲಿ ಮಿಂಚಿದ ಆರಂಭಿಕ ಸಾಯಿ ಸುದರ್ಶನ್ (Sai Sudharsan) ಚೊಚ್ಚಲ ಪಂದ್ಯದಲ್ಲೇ ಅಜೇಯ ಅರ್ಧಶತಕ ಶತಕ ಸಿಡಿಸಿದರೆ, ಶ್ರೇಯಸ್ ಅಯ್ಯರ್ (Shreyas Iyer) ಕೂಡ ಅರ್ಧಶತಕದ ಗೆಲುವಿನ ಇನ್ನಿಂಗ್ಸ್ ಆಡಿದರು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರಿಣ ಪಡೆ ಆರಂಭದಲ್ಲೇ ಎಡವಿತು. ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ದಾಳಿಗೆ ನಲುಗಿದ ಆಫ್ರಿಕಾ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಳ್ಳಲು ಆರಂಭಿಸಿದರು. ಹೀಗಾಗಿ ಆತಿಥೇಯ ತಂಡ 58 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ತಮ್ಮ ಮೊದಲ ಓವರ್‌ಗಳಲ್ಲಿ 2 ಪ್ರಮುಖ ವಿಕೆಟ್‌ಗಳನ್ನು ಪಡೆದರು.
IND vs SA: ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ ಭಾರತದ ಏಕೈಕ ಬೌಲರ್ ಅರ್ಷದೀಪ್ ಸಿಂಗ್..!
ಸುದರ್ಶನ್ ಚೊಚ್ಚಲ ಅರ್ಧಶತಕ
ಆಫ್ರಿಕಾ ಪರ ಆಲ್ರೌಂಡರ್ ಆಂಡಿಲೆ ಫೆಹ್ಲುಕ್ವಾಯೊ ಗರಿಷ್ಠ 33 ರನ್ ಸಿಡಿಸಿದರೆ, ತಂಡದ ಪರ ಆರಂಭಿಕ ಹೋರಾಟ ನೀಡಿದ ಟೋನಿ 22 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 28 ರನ್ ಗಳಿಸಿದರು. ಉಳಿದವರಿಂದ ಯಾವುದೇ ಗಮನಾರ್ಹ ಪ್ರದರ್ಶನ ಹೊರಬರಲಿಲ್ಲ. ಹೀಗಾಗಿ ಆಫ್ರಿಕಾ ತಂಡ 116 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಟೀಂ ಇಂಡಿಯಾ 16.4 ಓವರ್‌ಗಳಲ್ಲಿ 117 ರನ್ ಗಳಿಸಿ ಗೆಲುವು ಸಾಧಿಸಿತು. ಭಾರತದ ಪರ ಪದಾರ್ಪಣೆ ಮಾಡಿದ ಸಾಯಿ ಸುದರ್ಶನ್ 43 ಎಸೆತಗಳ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಸಹಿತ ಅಜೇಯ 55 ರನ್ ಬಾರಿಸಿದರು.
ಅಯ್ಯರ್ ಅರ್ಧಶತಕ
ಸಾಯಿ ಸುದರ್ಶನ್ಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 45 ಎಸೆತಗಳಲ್ಲಿ 52 ರನ್ ಗಳಿಸಿದರು. ಅಯ್ಯರ್ ಅವರ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಸೇರಿತ್ತು. ಮತ್ತೊಬ್ಬ ಆರಂಭಿಕ ರುತುರಾಜ್ ಗಾಯಕ್ವಾಡ್ ಐದು ರನ್ ಗಳಿಸಿ ಔಟಾದರೆ, ತಿಲಕ್ ವರ್ಮಾ ಒಂದು ರನ್ ಗಳಿಸಿ ಅಜೇಯರಾಗಿ ಉಳಿದರು. ದಕ್ಷಿಣ ಆಫ್ರಿಕಾ ಪರ ವಿಯಾನ್ ಮುಲ್ಡರ್ ಮತ್ತು ಆಂಡಿಲ್ ಫೆಹ್ಲುಕ್ವಾಯೊ ತಲಾ ಒಂದು ವಿಕೆಟ್ ಪಡೆದರು.
ಅರ್ಷದೀಪ್- ಆವೇಶ್ ಬೌಲಿಂಗ್ ಮ್ಯಾಜಿಕ್
ಇನ್ನು ಭಾರತದ ಪರ ವೇಗಿಗಳು ಅದ್ಭುತ ಪ್ರದರ್ಶನ ನೀಡಿದರು. ವೇಗಿ ಮುಖೇಶ್ ಕುಮಾರ್ 7 ಓವರ್‌ಗಳಲ್ಲಿ 46 ರನ್ ನೀಡಿ, ಕೊಂಚ ದುಬಾರಿ ಎನಿಸಿಕೊಂಡರೆ, ಅರ್ಷದೀಪ್ ಸಿಂಗ್ 10 ಓವರ್‌ಗಳಲ್ಲಿ 37 ರನ್ ನೀಡಿ 5 ವಿಕೆಟ್ ಪಡೆದರು. ಹಾಗೆಯೇ ಆವೇಶ್ ಖಾನ್ 8 ಓವರ್‌ಗಳಲ್ಲಿ 27 ರನ್ ನೀಡಿ 4 ವಿಕೆಟ್ ಪಡೆದರು. ಕುಲ್ದೀಪ್ ಯಾದವ್ 2.3 ಓವರ್‌ಗಳಲ್ಲಿ 3 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Sun, 17 December 23