ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3-ಟೆಸ್ಟ್ ಸರಣಿಯ ಮೊದಲ ಪಂದ್ಯ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಸೆಂಚುರಿಯನ್ ಮೈದಾನದಲ್ಲಿ ಈಗ ಸ್ವಲ್ಪ ತಡವಾಗಿ ನಡೆಯಲಿದೆ. ಈ ಪಂದ್ಯದ ಟಾಸ್ ಮುಗಿದಿದ್ದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಟಾಸ್ ಗೆದ್ದ ನಂತರ, ಸ್ಕೋರ್ ಬೋರ್ಡ್‌ನಲ್ಲಿ ರನ್ ಗಳಿಸುವುದು ಲಾಭದಾಯಕ ವ್ಯವಹಾರವಾಗಿದೆ ಎಂದು ಕೊಹ್ಲಿ ಹೇಳಿದರು. ಟಾಸ್ ನಂತರ, ಎರಡೂ ತಂಡಗಳು ತಮ್ಮ ಪ್ಲೇಯಿಂಗ್ XI ಅನ್ನು ಘೋಷಿಸಿಕೊಂಡಿವೆ.
ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಭಾರತ ತಂಡದ ಇತಿಹಾಸ ಉತ್ತಮವಾಗಿರಲಿಲ್ಲ. ಇಲ್ಲಿ ಆಡಿದ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಆದರೆ, ಈ ಬಾರಿಯ ಉದ್ದೇಶವೇ ಬೇರೆ. ವಿರಾಟ್ ಕೊಹ್ಲಿ ಆಯ್ಕೆ ಮಾಡಿರುವ ಪ್ಲೇಯಿಂಗ್ ಇಲೆವೆನ್ ಇತಿಹಾಸ ಬದಲಿಸುವ ಉದ್ದೇಶದಿಂದ ಮೈದಾನಕ್ಕೆ ಬರಲಿದೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಭಾರತ ತಂಡವು ರಹಾನೆ ಮೇಲೆ ನಂಬಿಕೆ ಇರಿಸಿದೆ ಮತ್ತು ಅವರ ಅನುಭವಕ್ಕೆ ಬೆಲೆ ನೀಡಿದೆ ಎಂಬುದು ಒಳ್ಳೆಯ ವಿಚಾರ. 5 ಬೌಲರ್‌ಗಳೊಂದಿಗೆ ಭಾರತ ಕಣಕ್ಕಿಳಿಯುತ್ತಿದೆ.
ಭಾರತದ ಬೌಲಿಂಗ್ ವಿಭಾಗ ಹೀಗಿದೆ
ಅಶ್ವಿನ್, ಬುಮ್ರಾ, ಶಮಿ, ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಸೇರಿದಂತೆ 5 ಬೌಲರ್‌ಗಳನ್ನು ಭಾರತವು ಬೌಲಿಂಗ್ ವಿಭಾಗದಲ್ಲಿ ಸೇರಿಸಿದೆ. ಇದರರ್ಥ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಅವಕಾಶಕ್ಕಾಗಿ ಕಾಯಬೇಕಾಗಿದೆ.
ಸೆಂಚುರಿಯನ್ ಟೆಸ್ಟ್‌ಗಾಗಿ ಎರಡೂ ತಂಡಗಳ ಆಡುವ XI
ಭಾರತದ ಪ್ಲೇಯಿಂಗ್ XI
ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್. ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್
ದಕ್ಷಿಣ ಆಫ್ರಿಕಾದ ಪ್ಲೇಯಿಂಗ್ XI
ಡೀನ್ ಎಲ್ಗರ್ (ನಾಯಕ), ಏಡನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರೋಸಿ ವ್ಯಾನ್ ಡೆರ್ ದುಸಾಯ್, ಟೆಂಬಾ ಬೌಮಾ, ಕ್ವಿಂಟನ್ ಡಿ ಕಾಕ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಮಾರ್ಕೊ ಯಾನ್ಸನ್