IND vs SA 1st Test: ಸೆಂಚುರಿಯನ್ ಪಿಚ್ ಯಾರಿಗೆ ಹೆಚ್ಚು ಸಹಕಾರಿ?, ಭಾರತದ ಪ್ಲೇಯಿಂಗ್ XI ಹೇಗಿದ್ದರೆ ಬಲಿಷ್ಠ?

IND vs SA 1st Test: ಸೆಂಚುರಿಯನ್ ಪಿಚ್ ಯಾರಿಗೆ ಹೆಚ್ಚು ಸಹಕಾರಿ?, ಭಾರತದ ಪ್ಲೇಯಿಂಗ್ XI ಹೇಗಿದ್ದರೆ ಬಲಿಷ್ಠ?
India vs South Africa

India vs South Africa 1st Match: ಪಿಚ್‌ ರಿಪೋರ್ಟ್‌ ಬಗ್ಗೆ ನೋಡುವುದಾದರೆ ಸೆಂಚುರಿಯನ್​ನ ಸೂಪರ್‌ಸ್ಪೋರ್ಟ್‌ ಪಾರ್ಕ್‌ ಪಿಚ್‌ ವೇಗಿಗಳ ಸ್ನೇಹಿಯಾಗಿದೆ. ಹೀಗಾಗಿ ಭಾರತ ಐವರು ವೇಗಿಗಳಲ್ಲಿ ಕಣಕ್ಕಿಳಿಸುವ ಯೋಜನೆಯಲ್ಲಿದೆಯಂತೆ.

TV9kannada Web Team

| Edited By: Vinay Bhat

Dec 26, 2021 | 9:18 AM

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂದು ಮಧ್ಯಾಹ್ನ ಸೂಪರ್‌ಸ್ಪೋರ್ಟ್‌ ಪಾರ್ಕ್‌ ಮೈದಾನದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಆಫ್ರಿಕಾದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿಯೊಂದನ್ನು ಗೆಲ್ಲುವ ಕನಸಿನೊಂದಿಗೆ ಆಗಮಿಸಿರುವ ಟೀಮ್‌ ಇಂಡಿಯಾ (Team India) ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಕಳೆದ ಒಂದು ತಿಂಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ನಾಯಕ ವಿರಾಟ್ ಕೊಹ್ಲಿ (Virat Kohli) ಪಾಲಿಗೆ ವೈಯಕ್ತಿಕವಾಗಿ ಈ ಸರಣಿ ಸತ್ವ ಪರೀಕ್ಷೆಯಾಗಿದೆ. ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಅವರಿಗೆ ಇದು ಅತ್ಯಂತ ಮಹತ್ವದ ಸರಣಿಯಾಗಿದ್ದು ಆಫ್ರಿಕಾ ನೆಲದಲ್ಲಿ ಭಾರತ (India) ತಂಡಕ್ಕೆ ಯಶಸ್ಸು ತಂದುಕೊಡುವ ಜವಾಬ್ದಾರಿ ಇವರ ಮೇಲಿದೆ.

ಸೆಂಚುರಿಯನ್ ಮೈದಾನ ಆತಿಥೇಯರ ಪಾಲಿಗೆ ಅದೃಷ್ಟದ ಮೈದಾನದವೂ ಹೌದು. 2014ರಿಂದ ದ. ಆಫ್ರಿಕಾ ತಂಡ ಈ ಮೈದಾನದಲ್ಲಿ ಸೋತಿಲ್ಲ, ಅಲ್ಲದೆ, ಇದುವರೆಗೂ ಭಾರತದ ವಿರುದ್ಧ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಕಂಡಿದೆ. ಉಭಯ ತಂಡಗಳು ಈವರೆಗೆ ಒಟ್ಟು 39 ಬಾರಿ ಮುಖಾಮುಖಿ ಆಗಿದ್ದು ಇದರಲ್ಲಿ ಭಾರತ 14 ಪಂದ್ಯಗಳಲ್ಲಿ ಗೆದ್ದರೆ ದ.ಆಫ್ರಿಕಾ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 10 ಪಂದ್ಯಗಳು ಡ್ರಾ ಆಗಿವೆ.

ಪಿಚ್‌ ರಿಪೋರ್ಟ್‌ ಬಗ್ಗೆ ನೋಡುವುದಾದರೆ ಸೆಂಚುರಿಯನ್​ನ ಸೂಪರ್‌ಸ್ಪೋರ್ಟ್‌ ಪಾರ್ಕ್‌ ಪಿಚ್‌ ವೇಗಿಗಳ ಸ್ನೇಹಿಯಾಗಿದೆ. ಔಟ್‌ಫೀಲ್ಡ್‌ ವೇಗವಾಗಿರುವ ಹಿನ್ನೆಲೆಯಲ್ಲಿ ಬ್ಯಾಟ್ಸ್‌ಮನ್‌ಗಳ ಹೊಡೆತಗಳಿಗೆ ಚೆಂಡು ಬಹುಬೇಗ ಬೌಂಡರಿ ಗೆರೆ ದಾಟಲಿದೆ. ಅಂದಹಾಗಿ ದಿನಪೂರ್ತಿ ಇಲ್ಲಿನ ವಿಕೆಟ್‌ನಲ್ಲಿ ವೇಗಿಗಳು ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಾಬಲ್ಯ ಸಾಧಿಸಲಿದ್ದಾರೆ. ಹೀಗಾಗಿ ಭಾರತ ಐವರು ವೇಗಿಗಳಲ್ಲಿ ಕಣಕ್ಕಿಳಿಸುವ ಯೋಜನೆಯಲ್ಲಿದೆಯಂತೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ : ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್/ಅಜಿಂಕ್ಯಾ ರಹಾನೆ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್/ಹನುಮಾ ವಿಹಾರಿ, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ : ಡೀನ್‌ ಎಲ್ಗರ್‌ (ನಾಯಕ), ಏಡೆನ್‌ ಮಾರ್ಕ್ರಮ್, ತೆಂಬಾ ಬವೂಮ, ರಾಸಿ ವ್ಯಾನ್‌ ಡೆರ್‌ ಡುಸೆನ್, ಕ್ವಿಂಟನ್‌ ಡಿ’ಕಾಕ್‌ (ವಿಕೆಟ್‌ಕೀಪರ್‌), ಕೈಲ್‌ ವೆರ್ರೆಯೆನ್, ವಿಯಾನ್‌ ಮುಲ್ಡರ್‌, ಕೇಶವ್‌ ಮಹಾರಾಜ್, ಕಗಿಸೊ ರಬಾಡ, ಡುವಾನ್‌ ಓಲಿವರ್‌, ಲುಂಗಿ ಎನ್ಗಿಡಿಕೌಂಟ್‌ಡೌನ್

ದಿನಾಂಕ: ಡಿ.26, 2021 ಭಾನುವಾರ

ಸಮಯ: ಮಧ್ಯಾಹ್ನ 1:30ಕ್ಕೆ (ಭಾರತೀಯ ಕಾಲಮಾನ)

ಸ್ಥಳ: ಸೂಪರ್‌ಸ್ಪೋರ್ಟ್‌ ಪಾರ್ಕ್‌, ಸೆಂಚೂರಿಯನ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

India vs South Africa: ಇಂದಿನಿಂದ ಬಹು ನಿರೀಕ್ಷೆಯ ಭಾರತ- ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯ ಆರಂಭ

(India vs South Africa 1st Match Start Today Here is the Dream11 Prediction Playing XI and Pitch Report)

Follow us on

Related Stories

Most Read Stories

Click on your DTH Provider to Add TV9 Kannada