ಸೆಂಚುರಿಯನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಮೊದಲ ಟೆಸ್ಟ್‌ನ ಎರಡನೇ ದಿನದ ಆಟಕ್ಕೆ ಮಳೆ ಅಡ್ಡಿ ಬರುತ್ತಿದೆ.ಮೊದಲ ಟೆಸ್ಟ್‌ನ ಮೊದಲ ದಿನ ಭಾರತದ ಪ್ರದರ್ಶನ ಉತ್ತಮವಾಗಿತ್ತು. ಹೀಗಾಗಿ ಎರಡನೇ ದಿನದಲ್ಲೂ ಆ ಆಟವನ್ನು ಮುಂದುವರೆಸಲು ಟೀಂ ಇಂಡಿಯಾ ಎದುರು ನೋಡುತ್ತಿದೆ. ಆದರೆ ಟೀಂ ಇಂಡಿಯಾದ ಈ ಗುರಿಗೆ ಮಳೆರಾಯ ಅಡ್ಡಿ ಪಡಿಸುತ್ತಿದ್ದಾನೆ. ಸೆಂಚುರಿಯನ್ ಟೆಸ್ಟ್‌ನಲ್ಲಿ ಭಾರತ ತನ್ನ ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್‌ಗೆ 272 ರನ್ ಗಳಿಸಿದೆ. ಕೆಎಲ್ ರಾಹುಲ್ 122 ರನ್ ಗಳಿಸಿ ಅಜೇಯರಾಗುಳಿದಿದ್ದು, ರಹಾನೆ 40 ರನ್ ಗಳಿಸಿ ಆಡುತ್ತಿದ್ದರು.
ಆದರೆ, ಮೊದಲ ದಿನ ಸೆಂಚುರಿಯನ್‌ನಲ್ಲಿ ರಾಹುಲ್ ಬ್ಯಾಟ್‌ನಿಂದ ರನ್‌ಗಳ ಮಳೆ ಕಂಡಿದ್ದೇವು. ಆದರೆ ಈಗ ಎರಡನೇ ದಿನದ ವಾತಾವರಣ ಕೆಟ್ಟದಾಗಿದೆ. ಮೋಡ ಕವಿದ ವಾತಾವರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಸೆಂಚುರಿಯನ್‌ನಿಂದ ಬಿಸಿಸಿಐ ಟ್ವೀಟ್ ಮಾಡಿರುವ ಚಿತ್ರಗಳನ್ನು ನೋಡಿದರೆ ಪಿಚ್ ಮೇಲೆ ಹೊದಿಕೆ ಹಾಸಿರುವುದು ಕಂಡು ಬರುತ್ತಿದೆ. ಅಂದರೆ ಎರಡನೇ ದಿನದಾಟದ ರೋಚಕತೆಗೆ ಭಂಗ ಬರುವುದು ಖಚಿತ.
It's a rainy morning here in Centurion ⛈️
We are waiting for the skies to clear up ??#TeamIndia | #SAvIND pic.twitter.com/wxkFWDEbnS
— BCCI (@BCCI) December 27, 2021
ಮಳೆ ಆಗುವ ಮುನ್ಸೂಚನೆ ಇತ್ತು
ಸೆಂಚುರಿಯನ್‌ನಲ್ಲಿ ಕೆಟ್ಟ ಹವಾಮಾನ ಹೊಸದೇನಲ್ಲ. ಟೆಸ್ಟ್ ಪಂದ್ಯದ ವೇಳೆ ಈಗಾಗಲೇ ಮಳೆಯ ಅಂದಾಜಿತ್ತು. ಮೊದಲ ದಿನವೇ ಮಳೆಯಾಗುತ್ತದೆ ಎಂಬ ಸುದ್ದಿ ಇತ್ತು. ಆದರೆ ಟೆಸ್ಟ್ ಪಂದ್ಯದ ಮೊದಲ ದಿನ ಚೆನ್ನಾಗಿಯೇ ಸಾಗಿತು. ಸಂಪೂರ್ಣ 90 ಓವರ್‌ಗಳನ್ನು ಆಡಲಾಯಿತು. ಆದರೆ ಟೆಸ್ಟ್ ಪಂದ್ಯದ ಎರಡನೇ ದಿನ ಮಳೆಯ ಭವಿಷ್ಯ ಸರಿಯಾಗಿದೆ.
ಸದ್ಯ ಸೆಂಚುರಿಯನ್‌ನಲ್ಲಿ ಮೋಡ ಕವಿದ ವಾತಾವರಣವಿದೆ. ಮೋಡ ತಿಳಿಗೊಂಡ ನಂತರ ಆಟವನ್ನು ಪ್ರಾರಂಭಿಸಬಹುದು. ಅಂದಹಾಗೆ, ಬಿಸಿಸಿಐ ಹಂಚಿಕೊಂಡಿರುವ ಚಿತ್ರವು ಮುಂಜಾನೆಯದ್ದಾಗಿದೆ, ಆದ್ದರಿಂದ ಪಂದ್ಯದ ವೇಳೆಗೆ ಹವಾಮಾನವು ಸ್ಪಷ್ಟವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಸೆಂಚುರಿಯನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಈಗ ಹವಾಮಾನವು ಅಡ್ಡಿಯಾಗದಿದ್ದರೆ, ಸೆಂಚುರಿಯನ್‌ನಲ್ಲಿ ತನ್ನ ಮೊದಲ ಗೆಲುವಿನ ಸ್ಕ್ರಿಪ್ಟ್ ಅನ್ನು ಭಾರತ ಬರೆಯುವುದನ್ನು ಕಾಣಬಹುದು. ಪಂದ್ಯದ ಮೂರು ಮತ್ತು ನಾಲ್ಕನೇ ದಿನಗಳಲ್ಲಿ ಯಾವುದೇ ಮಳೆಯಾಗದ ನಿರೀಕ್ಷೆಯಿದೆ. ಆದರೆ 5ನೇ ದಿನವೂ ಸೆಂಚುರಿಯನ್‌ನಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
Published On - 1:04 pm, Mon, 27 December 21