IND vs SA: ಬರೋಬ್ಬರಿ ಎರಡೂವರೆ ವರ್ಷ, 925 ಎಸೆತಗಳ ನಂತರ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ..!

| Updated By: ಪೃಥ್ವಿಶಂಕರ

Updated on: Jan 19, 2022 | 6:55 PM

Jasprit Bumrah: ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧ ವಿಕೆಟ್ ಪಡೆಯುವ ಮೊದಲು, 9 ಜೂನ್ 2019 ರಂದು ವಿಶ್ವಕಪ್ ಸೆಮಿಫೈನಲ್‌ನ ಪವರ್‌ಪ್ಲೇನಲ್ಲಿ ಕೊನೆಯದಾಗಿ ವಿಕೆಟ್ ಪಡೆದಿದ್ದರು.

IND vs SA: ಬರೋಬ್ಬರಿ ಎರಡೂವರೆ ವರ್ಷ, 925 ಎಸೆತಗಳ ನಂತರ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ..!
ಜಸ್ಪ್ರೀತ್ ಬುಮ್ರಾ
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ, ಜಸ್ಪ್ರೀತ್ ಬುಮ್ರಾ ಮೊದಲ ವಿಕೆಟ್ ಪಡೆದರು. ಈ ವಿಕೆಟ್‌ನೊಂದಿಗೆ, ಜಸ್ಪ್ರೀತ್ ಬುಮ್ರಾ ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಪಡೆಯದ ಅವರ ಬರವನ್ನು ಕೊನೆಗೊಳಿಸಿದರು. ಈ ಪಂದ್ಯದ ಮೊದಲು, ಅವರು 2019 ರ ವಿಶ್ವಕಪ್‌ನಲ್ಲಿ ಪವರ್‌ಪ್ಲೇನಲ್ಲಿ ಕೊನೆಯದಾಗಿ ಬ್ಯಾಟ್ಸ್‌ಮನ್‌ನನ್ನು ಬಲಿಪಶು ಮಾಡಿದ್ದರು. ಮೊದಲ 10 ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಬಳಿಸಲು ಸಾಧ್ಯವಾಗದಿರುವುದು ಭಾರತ ತಂಡದ ದೌರ್ಬಲ್ಯವಾಗಿದೆ. ಇದರಿಂದಾಗಿ ಎದುರಾಳಿ ತಂಡಗಳು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು.

ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧ ವಿಕೆಟ್ ಪಡೆಯುವ ಮೊದಲು, 9 ಜೂನ್ 2019 ರಂದು ವಿಶ್ವಕಪ್ ಸೆಮಿಫೈನಲ್‌ನ ಪವರ್‌ಪ್ಲೇನಲ್ಲಿ ಕೊನೆಯದಾಗಿ ವಿಕೆಟ್ ಪಡೆದಿದ್ದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ, ಮೊದಲ 10 ಓವರ್‌ಗಳಲ್ಲಿ ಮಾರ್ಟಿನ್ ಗಪ್ಟಿಲ್ ಔಟಾಗಿದ್ದರು. ಇದಾದ ಬಳಿಕ ಇದೀಗ 925 ಎಸೆತಗಳನ್ನು ಹಾಕಿದ ನಂತರ ಅವರು ಎರಡು ವರ್ಷ ಏಳು ತಿಂಗಳ ಬಳಿಕ ಮೊದಲ 10 ಓವರ್‌ಗಳಲ್ಲಿ ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು ಪವರ್‌ಪ್ಲೇಯಲ್ಲಿ 233 ಎಸೆತಗಳನ್ನು ಎಸೆದು 170 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಆರು ಪಂದ್ಯಗಳನ್ನು, ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳನ್ನು ಆಡಿದರು, ಆದರೆ ಇವುಗಳಲ್ಲಿ ಅವರು ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಪಡೆಯಲಿಲ್ಲ.

ವಿಶ್ವಕಪ್ ನಂತರ 9 ಪಂದ್ಯಗಳಲ್ಲಿ ಕೇವಲ 5 ವಿಕೆಟ್
ಕುತೂಹಲಕಾರಿಯಾಗಿ, ವಿಶ್ವಕಪ್ ಸೆಮಿಫೈನಲ್ ಪಂದ್ಯದ ನಂತರ ಅವರು ಒಂಬತ್ತು ಪಂದ್ಯಗಳಲ್ಲಿ ಕೇವಲ ಐದು ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಅಂಕಿಅಂಶಗಳು ಅವರು ಏಕದಿನದಲ್ಲಿ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಬಿಂಬಿಸುತ್ತಿದ್ದಾರೆ. 2020 ರ ವರ್ಷವು ಬುಮ್ರಾಗೆ ತುಂಬಾ ಕೆಟ್ಟದಾಗಿದೆ. ಈ ವರ್ಷ ಒಂಬತ್ತು ಪಂದ್ಯಗಳಲ್ಲಿ ಅವರು 96.40 ಸರಾಸರಿಯಲ್ಲಿ ಕೇವಲ ಐದು ವಿಕೆಟ್‌ಗಳನ್ನು ಮಾತ್ರ ಗಳಿಸಿದರು. ಇದರೊಂದಿಗೆ, ಅವರ ಆರ್ಥಿಕತೆಯು 5.62 ಆಗಿತ್ತು, ಇದು ಅವರ ವೃತ್ತಿಜೀವನದಲ್ಲಿ ಇದುವರೆಗಿನ ಗರಿಷ್ಠವಾಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಅವರು ಮೂರು ODI ಸರಣಿಯಲ್ಲಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಅದೇ ಸಮಯದಲ್ಲಿ, ಅವರು 2021 ರಲ್ಲಿ ಒಂದೇ ಒಂದು ODI ಅನ್ನು ಆಡಲಿಲ್ಲ.

ಬೆನ್ನಿನ ಗಾಯದ ನಂತರ ಕಳಪೆ ಫಾರ್ಮ್
ಬುಮ್ರಾ ಅವರ ಬೆನ್ನಿನ ಗಾಯದ ನಂತರ ಅವರು ಫಾರ್ಮ್​ನಲ್ಲಿಲ್ಲ. ಅವರು 2019 ರಲ್ಲಿ ಗಾಯಗೊಂಡಾಗಿನಿಂದ, ಅವರ ಬೌಲಿಂಗ್‌ನಲ್ಲಿ ಫಾರ್ಮ್​ ಕೊರತೆಯಿದೆ. 2019 ರಲ್ಲಿ, ಅವರು ಗಾಯದ ಮೊದಲು 14 ಪಂದ್ಯಗಳಲ್ಲಿ 25 ವಿಕೆಟ್ಗಳನ್ನು ಪಡೆದಿದ್ದರು. 2023ರಲ್ಲಿ ಭಾರತದಲ್ಲಿ 50 ಓವರ್‌ಗಳ ವಿಶ್ವಕಪ್‌ ನಡೆಯಲಿದೆ. ಬುಮ್ರಾ ಫಾರ್ಮ್‌ ಇದೇ ರೀತಿ ಇದ್ದರೆ ಭಾರತಕ್ಕೆ ಸಮಸ್ಯೆಯಾಗಬಹುದು.