South Africa vs India: ಟೆಸ್ಟ್ ಸರಣಿ ಮುಗೀತು: ಏಕದಿನ ಸರಣಿ ಯಾವಾಗ ಆರಂಭ?: ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

| Updated By: Vinay Bhat

Updated on: Jan 15, 2022 | 11:31 AM

IND vs SA ODI Series: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಯಾವಾಗ ಆರಂಭ?, ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?, ಭಾರತ ತಂಡ ಹೇಗಿದೆ? ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

South Africa vs India: ಟೆಸ್ಟ್ ಸರಣಿ ಮುಗೀತು: ಏಕದಿನ ಸರಣಿ ಯಾವಾಗ ಆರಂಭ?: ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ
India vs South Africa 3rd ODI
Follow us on

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟೆಸ್ಟ್ ಸರಣಿ ಅಂತ್ಯಕಂಡಿದೆ. 1-2 ಅಂತರದಿಂದ ಟೀಮ್ ಇಂಡಿಯಾ ಸರಣಿಯಲ್ಲಿ ಸೋಲು ಕಂಡಿದ್ದು, ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಎಡವಿತು. ಬ್ಯಾಟರ್​ಗಳ ಕಳಪೆ ಪ್ರದರ್ಶನ ಕೊಹ್ಲಿ (Virat Kohli) ಪಡೆಯ ಹಿನ್ನಡೆಗೆ ಪ್ರಮುಖ ಕಾರಣ. ಸದ್ಯ ಟೆಸ್ಟ್ ಸರಣಿ ಬಳಿಕ ಇದೀಗ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಸಜ್ಜಾಗಬೇಕಿದೆ. ಕೆಲವೇ ದಿನಗಳಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಕೆಎಲ್ ರಾಹುಲ್ (KL Rahul) ಮುನ್ನಡೆಸುತ್ತಿದ್ದಾರೆ. ಜಸ್​ಪ್ರೀತ್ ಬುಮ್ರಾ ಉಪ ನಾಯಕನಾಗಿದ್ದಾರೆ. ಹಾಗಾದ್ರೆ ಇಂಡೋ-ಆಫ್ರಿಕಾ ಏಕದಿನ ಸರಣಿ ಯಾವಾಗ ಆರಂಭ?, ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?, ಭಾರತ ತಂಡ ಹೇಗಿದೆ? ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಜನವರಿ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಪಾರ್ಲ್​ನ ಬೋಲ್ಯಾಂಡ್ ಪಾರ್ಕ್​ನಲ್ಲಿ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. ಎರಡನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಜನವರಿ 21 ರಂದು ಆಯೋಜಿಸಲಾಗಿದೆ. ಇದುಕೂಡ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಅಂತಿಮ ಮೂರನೇ ಏಕದಿನ ಪಂದ್ಯ ಕೇಪ್ ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಜನವರಿ 23 ರಂದು ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

ಸುಂದರ್-ಸಿರಾಜ್ ಔಟ್:

ಕೋವಿಡ್-19 ಸೋಂಕಿಗೆ ಒಳಗಾಗಿರುವ ಭಾರತದ ಆಫ್-ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಜ ಸುಂದರ್‌ರಿಂದ ತೆರವಾದ ಸ್ಥಾನಕ್ಕೆ ಜಯಂತ್ ಯಾದವ್‌ರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಅಂತೆಯೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೀಸಲು ಆಟಗಾರನಾಗಿ ವೇಗದ ಬೌಲರ್ ನವದೀಪ್ ಸೈನಿ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ರೋಹಿತ್ ಶರ್ಮಾ ಹೆಗಲಿಗೆ ಭಾರತ ಏಕದಿನ ತಂಡದ ನಾಯಕತ್ವವನ್ನು ಹಾಕಿದ ಬೆನ್ನಲ್ಲೇ ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯದ ಸಮಸ್ಯೆಗೆ ಒಳಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದರು. ಇವರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಪಡೆದುಕೊಳ್ಳಲು ಶ್ರಮಿಸಿದ್ದು ಫಿಟ್ ಆಗದ ಕಾರಣ ಏಕದಿನ ಸರಣಿಗೂ ಅಲಭ್ಯರಾಗಿದ್ದಾರೆ. ಹೀಗಾಗಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕನ್ನಡಿಗ ಕೆಎಲ್ ರಾಹುಲ್ ಹೆಗಲಿಗೆ ಬಿಸಿಸಿಐ ಹಾಕಿದೆ.

ಏಕದಿನ ಸರಣಿಗೆ ಭಾರತ ತಂಡ:

ಕೆ.ಎಲ್.ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮುಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ.

ನೇರಪ್ರಸಾರ:

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎಲ್ಲ ಏಕದಿನ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್​ ನೆಟ್​ವರ್ಕ್​​ನಲ್ಲಿ ನೇರಪ್ರಸಾರ ಕಾಣಲಿದೆ. ಡಿಸ್ನಿ+ ಹಾಟ್​ಸ್ಟಾರ್​ನಲ್ಲೂ ಲೈವ್ ಸ್ಟ್ರೀಮ್ ಆಗಲಿದೆ.

Keegan Petersen: ಆಫ್ರಿಕಾ ಗೆಲುವಿಗೆ ಕಾರಣವಾದ ಆಟಗಾರನಲ್ಲಿ ಬೆಂಗಳೂರಿನ ಗುಂಡಪ್ಪ ವಿಶ್ವನಾಥ್​​ರನ್ನು ಕಂಡ ​ ರವಿ ಶಾಸ್ತ್ರಿ

ICC Under 19 World Cup: ಭಾರತದ ಕಿರಿಯರಿಗಿಂದು ದಕ್ಷಿಣ ಆಫ್ರಿಕಾ ಸವಾಲು: ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆ