AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Under 19 World Cup: ಭಾರತದ ಕಿರಿಯರಿಗಿಂದು ದಕ್ಷಿಣ ಆಫ್ರಿಕಾ ಸವಾಲು: ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆ

IND-U19 vs SA-U19: ಐಸಿಸಿ ಅಂಡರ್ – 19 ವಿಶ್ವಕಪ್ ಟೂರ್ನಿಯಲ್ಲಿ ಇಂದು ಭಾರತ ಅಂಡರ್-19 ತಂಡ ತನ್ನ ಅಭಿಯಾನ ಆರಂಭಿಸಲಿದೆ. ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಭಾರತೀಯ ಕಿರಿಯರ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ICC Under 19 World Cup: ಭಾರತದ ಕಿರಿಯರಿಗಿಂದು ದಕ್ಷಿಣ ಆಫ್ರಿಕಾ ಸವಾಲು: ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆ
IND-U19 vs SA-U19
TV9 Web
| Edited By: |

Updated on: Jan 15, 2022 | 8:53 AM

Share

ಕೆರಿಬಿಯನ್ನರ ನಾಡಿನಲ್ಲಿ ಐಸಿಸಿ ಅಂಡರ್ – 19 ವಿಶ್ವಕಪ್ ಟೂರ್ನಿಗೆ (ICC Under 19 World Cup) ಭರ್ಜರಿ ಚಾಲನೆ ಸಿಕ್ಕಿದೆ. ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ಅಂಡರ್ 19 ತಂಡವನ್ನು ಆಸ್ಟ್ರೇಲಿಯಾ ಅಂಡರ್-19 ತಂಡ ಮಣಿಸಿ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಶ್ರೀಲಂಕಾ 40 ರನ್​ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಇಂದು ಭಾರತ ಅಂಡರ್-19 ತಂಡ ತನ್ನ ಅಭಿಯಾನ ಆರಂಭಿಸಲಿದೆ. ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಭಾರತೀಯ ಕಿರಿಯರ ತಂಡ ದಕ್ಷಿಣ ಆಫ್ರಿಕಾ (India U19 vs South Africa U19) ತಂಡವನ್ನು ಎದುರಿಸಲಿದೆ. ಅಂಡರ್‌19 ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಭಾರತ ಈ ಬಾರಿ ಮೊದಲ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಎರಡೂ ಬಲಿಷ್ಠ ತಂಡ ಆಗಿರುವುದರಿಂದ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ.

ದಿಲ್ಲಿಯ ಸ್ಟಾರ್ ಬ್ಯಾಟರ್ ಯಶ್‌ ಧುಲ್‌ ಭಾರತ ತಂಡದ ನಾಯಕನಾಗಿದ್ದು ಸಾಕಷ್ಟು ನಂಬಿಕೆ ಇಡಲಾಗಿದೆ. ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್, ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (ವಿ.ಕೀ), ಕೌಶಲ್ ತಾಂಬೆ ಸ್ಟಾರ್ ಆಟಗಾರರಾಗಿದ್ದಾರೆ. 2000, 2008, 2012 ಹಾಗೂ 2018ರ ಆವೃತ್ತಿಗಳಲ್ಲಿ ಭಾರತ ಅಂಡರ್‌ 19 ತಂಡ ಕಿರಿಯರ ವಿಶ್ವಕಪ್‌ ಗೆದ್ದಿದೆ. ಇದರ ಜೊತೆಗೆ 2016 ಹಾಗೂ 2020ರ ಆವೃತ್ತಿಯಲ್ಲಿಯೂ ಭಾರತ ರನ್ನರ್‌ ಅಪ್‌ ಆಗಿತ್ತು. ಈ ಬಾರಿ ಮತ್ತೊಂದು ಪ್ರಶಸ್ತಿ ನಿರೀಕ್ಷಿಸಲಾಗಿದೆ.

ವಿಶ್ವಕಪ್‌ ಪಂದ್ಯ ಅಧಿಕೃತ ಆರಂಭಕ್ಕೂ ಮುನ್ನ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ ಕಿರಿಯರ ತಂಡ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಗಳಿಸಿಕೊಂಡಿದೆ. ಆದರೆ ದಕ್ಷಿಣ ಆಫ್ರಿಕಾ ಅಂಡರ್‌19 ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಹೀಗಾಗಿ ಇವರು ಭಾರತ ತಂಡಕ್ಕೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ.

ಭಾರತ 19 ವಯೋಮಿತಿ ತಂಡ: ಯಶ್‌ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್, ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (ವಿ.ಕೀ), ಆರಾಧ್ಯ ಯಾದವ್ (ವಿ.ಕೀ), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ, ಆರ್‌ಎಸ್ ಹಂಗರ್ಗೆಕರ್ ವತ್ಸ್‌, ವಿಕ್ಕಿ ಒಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್.

ಸ್ಟ್ಯಾಂಡ್‌ಬೈ ಆಟಗಾರರು: ರಿಷಿತ್ ರೆಡ್ಡಿ, ಉದಯ್ ಸಹರನ್, ಅಂಶ್ ಗೋಸಾಯಿ, ಅಮೃತ್ ರಾಜ್ ಉಪಾಧ್ಯಾಯ, ಪಿಎಂ ಸಿಂಗ್ ರಾಥೋಡ್.

ದಕ್ಷಿಣ ಆಫ್ರಿಕಾ ಅಂಡರ್‌ 19 ತಂಡ: ಜಾರ್ಜ್ ವ್ಯಾನ್ ಹೀರ್ಡನ್ (ನಾಯಕ), ಲಿಯಾಮ್ ಆಲ್ಡರ್, ಮ್ಯಾಥ್ಯೂ ಬೋಸ್ಟ್, ಡೆವಾಲ್ಡ್ ಬ್ರೆವಿಸ್, ಮೈಕೆಲ್ ಕೋಪ್ಲ್ಯಾಂಡ್, ಎಥಾನ್ ಕನ್ನಿಂಗ್ಹ್ಯಾಮ್, ವ್ಯಾಲೆಂಟೈನ್ ಕಿಟೈಮ್, ಕ್ವೆನಾ ಮಫಕಾ, ಗೆರ್ಹಾರ್ಡ್ ಮೇರಿ, ಅಫಿವೆ ಮ್ನ್ಯಾಂಡಾ, ಆಂಡಿಲ್ ಸಿಮೆಲೇನ್, ಜೇಡ್ ಸ್ಮಿತ್, ಜೋಸ್ ಸೊಲೊಮನ್ಸ್, ಜೋಸ್ ಸೊಲೊಮನ್ಸ್ ಸ್ಟೀಫನ್ಸನ್, ಅಸಾಖೆ ತ್ಶಾಕಾ.

ಮೀಸಲು ಆಟಗಾರರು: ಹಾರ್ಡಸ್ ಕೋಯೆಟ್ಜರ್, ರೊನಾನ್ ಹರ್ಮನ್, ಕ್ಯಾಲೆಬ್ ಸೆಲೆಕಾ.

ನೇರಪ್ರಸಾರ: ಈ ಪಂದ್ಯ ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭವಾಗಲಿವೆ. ಸ್ಟಾರ್‌ ಸೋರ್ಟ್ಸ್ ನಲ್ಲಿ ನೇರ ಪ್ರಸಾರ ಮೂಡಿಬರಲಿದೆ. ಜೊತೆಗೆ ಡಿಸ್ನಿ+ ಹಾಟ್​ಸ್ಟಾರ್​ನಲ್ಲೂ ಲೈವ್ ವೀಕ್ಷಿಸಬಹುದು.

Pro Kabaddi: ಪವನ್‌ ಪವರ್: ಪ್ರೊ ಕಬಡ್ಡಿ ಲೀಗ್​ನಲ್ಲಿ ಗುಜರಾತ್ ಅನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​