Pro Kabaddi: ಪವನ್‌ ಪವರ್: ಪ್ರೊ ಕಬಡ್ಡಿ ಲೀಗ್​ನಲ್ಲಿ ಗುಜರಾತ್ ಅನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್

Vinay Bhat

|

Updated on: Jan 15, 2022 | 7:51 AM

Bengaluru Bulls vs Gujarat Giants: ಬೆಂಗಳೂರು ಬುಲ್ಸ್ ತಂಡ ಈ ಗೆಲುವಿನೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು. ಪಟ್ನಾ ಪೈರೇಟ್ಸ್ ಎರಡನೇ ಸ್ಥಾನಕ್ಕೆ ಇಳಿದಿದೆ. ಬೆಂಗಳೂರು ಪರ ನಾಯಕ ಸೆಹ್ರಾವತ್‌ ಏಕವ್ಯಕ್ತಿ ಪ್ರದರ್ಶನ ತೋರಿದರು ಒಟ್ಟು 27 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 19 ಅಂಕ ಗಳಿಸಿದರು.

Pro Kabaddi: ಪವನ್‌ ಪವರ್: ಪ್ರೊ ಕಬಡ್ಡಿ ಲೀಗ್​ನಲ್ಲಿ ಗುಜರಾತ್ ಅನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್
Bengaluru Bulls

ಪ್ರೊ ಕಬಡ್ಡಿ 8ನೇ (Pro Kabaddi) ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ಪಾರುಪತ್ಯ ಮೆರೆದಿದೆ. ಪವನ್‌ ಸೆಹ್ರಾವತ್‌ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೈ ಫ್ಲಯರ್ ಪವನ್ ಶೆರಾವತ್ ಅವರ ಬೊಂಬಾಟ್ ಆಟದ ನೆರವಿನಿಂದ ಬುಲ್ಸ್ ತಂಡ ಸುಲಭ ಗೆಲುವು ಕಂಡಿತು. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 46-37 ಅಂಕಗಳಿಂದ ಬೆಂಗಳೂರು ಬುಲ್ಸ್ (Bengaluru Bulls) ಜಯಭೇರಿ ಭಾರಿಸಿತು. ಮೊದಲ ಇಪ್ಪತ್ತು ನಿಮಿಷಗಳಲ್ಲಿ ಬೆಂಗಳೂರು 22, ಗುಜರಾತ್‌ 17 ಅಂಕ ಗಳಿಸಿತ್ತು. ದ್ವಿತಿಯಾರ್ಧದಲ್ಲೂ ಮುನ್ನಡೆ ಬಿಟ್ಟು ಕೊಡದ ಬೆಂಗಳೂರು ಮೇಲುಗೈ ಸಾಧಿಸಿತು. ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ಪೂರ್ಣ ಪ್ರಾಬಲ್ಯ ಮೆರೆದರೂ ಎರಡನೇ ಅವಧಿಯ ಆರಂಭದಲ್ಲಿ ಗುಜರಾತ್ ಜೈಂಟ್ಸ್ ಪ್ರಬಲ ಪೈಪೋಟಿ ನೀಡಿತು. ಜೇಂಟ್ಸ್ ರೇಡರ್ ರಾಕೇಶ್ 14 ಅಂಕ ಗಳಿಸಿದರೂ ಬುಲ್ಸ್ ತಂಡವನ್ನು ಮಣಿಸಲು ಸಾಧ್ಯವಾಗಲಿಲ್ಲ.

ಬೆಂಗಳೂರು ಬುಲ್ಸ್ ತಂಡ ಈ ಗೆಲುವಿನೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು. ಪಟ್ನಾ ಪೈರೇಟ್ಸ್ ಎರಡನೇ ಸ್ಥಾನಕ್ಕೆ ಇಳಿದಿದೆ. ಬೆಂಗಳೂರು ಪರ ನಾಯಕ ಸೆಹ್ರಾವತ್‌ ಏಕವ್ಯಕ್ತಿ ಪ್ರದರ್ಶನ ತೋರಿದರು ಒಟ್ಟು 27 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 19 ಅಂಕ ಗಳಿಸಿದರು. ಇವರ ಅದ್ಭುತ ಆಟ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಈ ಸೀಸನ್​ನಲ್ಲಿ ಅವರು ಗಳಿಸಿದ ಪಾಯಿಂಟ್​ಗಳ ಮೊತ್ತ 146ಕ್ಕೆ ಏರಿತು. ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ಪವನ್ ಶೆರಾವತ್ ನವೀನ್ ಕುಮಾರ್ ಅವರನ್ನ ಹಿಂದಿಕ್ಕಿದ್ಧಾರೆ. ಅತಿ ಹೆಚ್ಚು ರೇಡಿಂಗ್ ಪಾಯಿಂಟ್ ಮತ್ತು ಅತಿ ಹೆಚ್ಚು ಯಶಸ್ವಿ ರೇಡ್​ಗಳಲ್ಲೂ ಪವನ್ ಶೆರಾವತ್ ಮುಂದಿದ್ಧಾರೆ.

ಇನ್ನೂ ಇದಕ್ಕೂ ಮುನ್ನ ನಡೆದ ದಿನದ ಮೊದಲ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ ಪ್ರಶಾಂತ್‌ ರೈ ಸಾರಥ್ಯದ ಪಾಟ್ನಾ ಪೈರೆಟ್ಸ್‌ ವಿರುದ್ಧ 38-28 ಅಂತರದಿಂದ ಗೆಲುವು ಸಾಧಿಸಿತು. ಪಾಟ್ನಾ ಈ ಸೊಲಿನೊಂದಿಗೆ ಅಗ್ರಸ್ಥಾನದಿಂದ ಕೆಳಗಿಳಿದು ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ದೀಪಕ್ ನಿವಾಸ್ ಹೂಡಾ ಮತ್ತು ಅರ್ಜುನ್ ದೇಶವಾಲ್ ಅವರು ಜೈಪುರ್ ಗೆಲುವಿಗೆ ಕಾರಣರಾದರು. 9 ಅಂಕ ಗಳಿಸಿದ ಅರ್ಜುನ್ ದೇಶವಾಲ್ ಈ ಸೀಸನ್​ನಲ್ಲಿ ಮೊದಲ ಬಾರಿಗೆ ಸೂಪರ್10 ರೇಡ್​ನಿಂದ ವಂಚಿತರಾದರು. 16 ರೇಡ್​ಗಳಿಂದ ಅವರು 9 ಅಂಕ ಗಳಿಸಿದರು.

ಪಟ್ನಾ ಪೈರೇಟ್ಸ್ ತಂಡ ರೇಡಿಂಗ್ ಮತ್ತು ಡಿಫೆನ್ಸ್ ಎರಡರಲ್ಲೂ ದುರ್ಬಲವಾಗಿ ಕಂಡಿತು. ಪಟ್ನಾ ನಾಯಕ ಕರ್ನಾಟಕದ ಪ್ರಶಾಂತ್ ಕುಮಾರ್ ರೈ 6 ಅಂಕ ಗಳಿಸಿದರು. ತಂಡದ ಸ್ಟಾರ್ ರೇಡರ್ ಮೋನು ಗೋಯತ್ 7 ಅಂಕ ಮಾತ್ರ ಗಳಿಸಿದರು. ತಂಡದ ಟಾಪ್ ಸ್ಕೋರರ್ ಸಚಿನ್ ಕೇವಲ 3 ಅಂಕಕ್ಕೆ ತೃಪ್ತಿಪಡಬೇಕಾಯಿತು.

IND vs SA: ಮೈದಾನದಲ್ಲಿ ಏನಾಗುತ್ತದೆ ಎಂದು ಹೊರಗಿನವರಿಗೆ ತಿಳಿದಿಲ್ಲ! ಡಿಆರ್‌ಎಸ್ ವಿವಾದದ ಬಗ್ಗೆ ಕೊಹ್ಲಿ ಹೇಳಿದ್ದಿದು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada