IND vs SA: ಮೈದಾನದಲ್ಲಿ ಏನಾಗುತ್ತದೆ ಎಂದು ಹೊರಗಿನವರಿಗೆ ತಿಳಿದಿಲ್ಲ! ಡಿಆರ್‌ಎಸ್ ವಿವಾದದ ಬಗ್ಗೆ ಕೊಹ್ಲಿ ಹೇಳಿದ್ದಿದು
Virat Kohli: ವಿವಾದ ಸೃಷ್ಟಿಸಲು ಆ ಒಂದು ಕ್ಷಣ ಸಾಕಾಗಬಹುದು ಆದರೆ ವಿವಾದ ಸೃಷ್ಟಿಸಲು ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ. ಆ ಕ್ಷಣ ಮುಗಿದು ಅಲ್ಲಿಂದ ಮುಂದೆ ಸಾಗಿದೆವು. ನಮ್ಮ ಗಮನ ಆಟದ ಮೇಲೆ ಮಾತ್ರ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ (India vs Sout Africa) ಕೊನೆಗೊಂಡಿದೆ. ಆದರೆ ಈ ಸರಣಿಯ ಅಂತ್ಯದೊಂದಿಗೆ, ಡಿಆರ್‌ಎಸ್‌ನ ಮೇಲಿನ ಚರ್ಚೆ ಮತ್ತೆ ಹೊತ್ತಿಕೊಂಡಿದೆ. ಕೇಪ್ ಟೌನ್‌ನಲ್ಲಿ ಉಭಯ ತಂಡಗಳ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಡೀನ್ ಎಲ್ಗರ್ ಅವರು ರವಿಚಂದ್ರನ್ ಅಶ್ವಿನ್ ಅವರ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಆದರೆ ಡಿಆರ್ಎಸ್ನಲ್ಲಿ ಅದು ನಾಟ್ಔಟ್ ಎಂದು ಸಾಭೀತಾಯಿತು. ಇದಾದ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅಶ್ವಿನ್ ಮತ್ತು ಕೆಎಲ್ ರಾಹುಲ್ ಸ್ಟಂಪ್ ಮೈಕ್ ಬಳಿ ಬಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರನೇ ದಿನ ಭಾರತ ತಂಡದ ಆಟಗಾರರ ವರ್ತನೆಯನ್ನು ಹಲವು ದಿಗ್ಗಜರು ಟೀಕಿಸಿದ್ದಾರೆ. ಮೂರನೇ ಪಂದ್ಯದ ನಾಲ್ಕನೇ ದಿನದಂದು ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದು ಇತಿಹಾಸವನ್ನು ರಚಿಸಲು ಭಾರತಕ್ಕೆ ಅವಕಾಶ ನೀಡಲಿಲ್ಲ. ಭಾರತ ತಂಡ ಈ ಪಂದ್ಯವನ್ನು ಗೆದ್ದಿದ್ದರೆ, ಅದು ಸರಣಿಯನ್ನು ಗೆದ್ದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಸರಣಿಯನ್ನು ಗೆಲ್ಲುತ್ತಿತ್ತು.
ನಾನು ಮಾತನಾಡುವುದಿಲ್ಲ ಪಂದ್ಯದ ನಂತರ, ಈ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೊಹ್ಲಿ ಹೇಳಿದರು. ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮೈದಾನದಲ್ಲಿ ಏನಾಯಿತು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಮೈದಾನದಲ್ಲಿ ನಡೆಯುವ ಸಂಗತಿಗಳು ಹೊರಗಿನವರಿಗೆ ಸರಿಯಾಗಿ ಗೊತ್ತಿಲ್ಲ. ನಾವು ಅದನ್ನು ಲಘುವಾಗಿ ತೆಗೆದುಕೊಂಡಿದ್ದೇವೆ. ನಾವು ಅಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರೆ, ಅದು ಪಂದ್ಯವನ್ನು ಬದಲಾಯಿಸುವ ಕ್ಷಣವಾಗುತ್ತಿತ್ತು. ಪಂದ್ಯದುದ್ದಕ್ಕೂ ನಾವು ದೀರ್ಘಕಾಲ ಅವರ ಮೇಲೆ ಹೆಚ್ಚು ಒತ್ತಡ ಹೇರಲು ಸಾಧ್ಯವಾಗಲಿಲ್ಲ ಮತ್ತು ಅದಕ್ಕಾಗಿಯೇ ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ.
ವಿವಾದ ಮಾಡಲು ಬಯಸುವುದಿಲ್ಲ ತಾವು ಮತ್ತು ತಮ್ಮ ತಂಡ ಈ ವಿಚಾರದಿಂದ ಹಿಂದೆ ಸರಿದಿದ್ದು, ಯಾವುದೇ ವಿವಾದ ಸೃಷ್ಟಿಸಲು ಬಯಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ವಿವಾದ ಸೃಷ್ಟಿಸಲು ಆ ಒಂದು ಕ್ಷಣ ಸಾಕಾಗಬಹುದು ಆದರೆ ವಿವಾದ ಸೃಷ್ಟಿಸಲು ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ. ಆ ಕ್ಷಣ ಮುಗಿದು ಅಲ್ಲಿಂದ ಮುಂದೆ ಸಾಗಿದೆವು. ನಮ್ಮ ಗಮನ ಆಟದ ಮೇಲೆ ಮಾತ್ರ. ನಾವು ವಿಕೆಟ್ ಪಡೆಯಲು ಪ್ರಯತ್ನಿಸಿದೆವು.
ವಿವಾದ ಹುಟ್ಟುಹಾಕಿದೆ ಮೂರನೇ ದಿನದಂದು ದಕ್ಷಿಣ ಆಫ್ರಿಕಾದ ಇನಿಂಗ್ಸ್‌ನ 21 ನೇ ಓವರ್‌ನಲ್ಲಿ ಈ ವಿವಾದ ಸಂಭವಿಸಿದೆ. ಅಶ್ವಿನ್ ಎಸೆತವು ಡೀನ್ ಎಲ್ಗರ್ ಅವರ ಪ್ಯಾಡ್‌ಗೆ ಬಡಿದಿತ್ತು. ಭಾರತ ತಂಡ ಮೇಲ್ಮನವಿ ಸಲ್ಲಿಸಿತು ಮತ್ತು ಅಂಪೈರ್ ಮಾರಿಯಸ್ ಎರಾಸ್ಮಸ್ ಎಲ್ಗರ್ ಅವರು ಔಟ್ ಮಾಡಿದರು. ಎಲ್ಗರ್ ಅವರು ಈ ಬಗ್ಗೆ ಡಿಆರ್‌ಎಸ್ ಮನವಿ ಮಾಡಿದರು. ಡಿಆರ್ಎಸ್ನಲ್ಲಿ ಚೆಂಡು ಸ್ಟಂಪ್‌ನ ಮೇಲೆ ಹೋಗುತ್ತಿದೆ ಎಂದು ತೋರುತ್ತಿತ್ತು. ಆದರೂ ಮುಂಭಾಗದಿಂದ ನೋಡಿದಾಗ ಅದು ಸ್ಪಷ್ಟವಾಗಿ ಸ್ಟಂಪ್ಗೆ ಬಡಿಯುತ್ತಿರುವುದು ಕಾಣುತ್ತಿತ್ತು. ಆದರೆ ಮೂರನೇ ಅಂಪೈರ್ ಎಲ್ಗರ್ ಅವರನ್ನು ಡಿಆರ್‌ಎಸ್ ಅಡಿಯಲ್ಲಿ ನಾಟೌಟ್ ಎಂದು ಘೋಷಿಸಿದರು. ಇದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಂಪೈರ್ ಎರಾಸ್ಮಸ್ ಕೂಡ ಈ ನಿರ್ಧಾರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಲ್ಲದೆ ದಿಸ್ ಇಸ್ ಇಂಪಾಸಿಬಲ್ ಎಂದು ಹೇಳಿದ ಮಾತು ಸ್ಟಂಪ್ ಮೈಕ್‌ನಲ್ಲಿ ಸ್ಪಷ್ಟವಾಗಿ ಕೇಳುತ್ತಿತ್ತು.