ಟಿ20 ಮಾದರಿಯಲ್ಲಿ ಮೌನಕ್ಕೆ ಶರಣಾದ ಗಿಲ್ ಬ್ಯಾಟ್; ಆಯ್ಕೆ ಮಂಡಳಿಗೆ ಹೊಸ ಟೆನ್ಷನ್

|

Updated on: Dec 15, 2023 | 11:43 AM

Shubman Gill: ಅಂತಾರಾಷ್ಟ್ರೀಯ ಟಿ20ಯಲ್ಲಿ ಪದೇ ಪದೇ ಎಡವುತ್ತಿರುವ ಗಿಲ್, ಐಪಿಎಲ್​ನಲ್ಲಿ ಮಾತ್ರ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಗಿಲ್ ಐಪಿಎಲ್‌ನಲ್ಲಿ ಒಟ್ಟು 91 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 37.70 ಸರಾಸರಿಯಲ್ಲಿ 3 ಶತಕ ಸೇರಿದಂತೆ ಒಟ್ಟು 2790 ರನ್ ಗಳಿಸಿದ್ದಾರೆ.

ಟಿ20 ಮಾದರಿಯಲ್ಲಿ ಮೌನಕ್ಕೆ ಶರಣಾದ ಗಿಲ್ ಬ್ಯಾಟ್; ಆಯ್ಕೆ ಮಂಡಳಿಗೆ ಹೊಸ ಟೆನ್ಷನ್
ಶುಭ್​ಮನ್ ಗಿಲ್
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಡ್ರಾದಲ್ಲಿ ಅಂತ್ಯಗೊಳಿಸಿರುವ ಟೀಂ ಇಂಡಿಯಾ (India vs South Africa) ಇದೀಗ ಏಕದಿನ ಸರಣಿಗಾಗಿ ತಯಾರಿ ನಡೆಸುತ್ತಿದೆ. ಟಿ20 ವಿಶ್ವಕಪ್​ನ (T20 World Cup 2023) ಪೂರ್ವ ತಯಾರಿಯಾಗಿದ್ದ ಟಿ20 ಸರಣಿಯನ್ನು ಟೀಂ ಇಂಡಿಯಾ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಆಯ್ಕೆ ಮಂಡಳಿ ಹುಡುಕುತ್ತಿದ್ದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಆದರೆ ಯುವ ಆರಂಭಿಕ ಶುಭ್​ಮನ್ ಗಿಲ್ (Shubman Gill) ಮಾತ್ರ ತಮ್ಮ ಕಳಪೆ ಟಿ20 ಫಾರ್ಮ್​ನಿಂದ ತಂಡದ ಆತಂಕ ಹೆಚ್ಚಿಸಿದ್ದಾರೆ. ವಾಸ್ತವವಾಗಿ ಗಿಲ್ ಕಳೆದ ಒಂದು ವರ್ಷದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ 2023ರ ಏಕದಿನ ವಿಶ್ವಕಪ್‌ನಲ್ಲೂ ಶುಭ್‌ಮನ್ ಗಿಲ್ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ ಟಿ20 ಮಾದರಿಯಲ್ಲಿ ಗಿಲ್‌ ಅವರ ಕಳಪೆ ಫಾರ್ಮ್​ ಆಫ್ರಿಕಾ ಪ್ರವಾಸದಲ್ಲೂ ಮುಂದುವರೆದಿರುವುದು ತಂಡದ ಚಿಂತೆಗೆ ಕಾರಣವಾಗಿದೆ.

ವಾಸ್ತವವಾಗಿ, ಭಾರತೀಯ ತಂಡದ ಆಯ್ಕೆಗಾರರು ಟಿ20 ಸ್ವರೂಪದ ಜವಾಬ್ದಾರಿಯನ್ನು ಯುವಕರಿಗೆ ನೀಡಲು ನಿರ್ಧರಿಸಿದ್ದಾರೆ. ಆದ್ದರಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯಂತಹ ಆಟಗಾರರು ಕಳೆದ ಹಲವಾರು ಟಿ20 ಸರಣಿಗಳಲ್ಲಿ ಆಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶುಭ್‌ಮನ್ ಗಿಲ್ ಅವರಂತಹ ಆಟಗಾರರ ಜವಾಬ್ದಾರಿ ಬಹಳಷ್ಟು ಹೆಚ್ಚಾಗುತ್ತದೆ. ಏಕೆಂದರೆ ಅವರು ಯುವ ಆಟಗಾರ, ಆದರೆ ಹಿರಿಯ ಆಟಗಾರರ ತಂಡದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಅನುಭವ ಮತ್ತು ಆಟವು ಟಿ20 ಸ್ವರೂಪದಲ್ಲಿ ಟೀಂ ಇಂಡಿಯಾಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ.

IND vs SA: ಜನ್ಮದಿನದಂದು ಈ ದಾಖಲೆ ಬರೆದ ಮೊದಲ ಬೌಲರ್ ಕುಲ್ದೀಪ್ ಯಾದವ್..!

ಗಿಲ್ ಫಾರ್ಮ್ ಕಳವಳಕಾರಿ

ಆದಾಗ್ಯೂ, ಕಳೆದ 13 ಟಿ20 ಪಂದ್ಯಗಳಲ್ಲಿ ಗಿಲ್ ಅವರ ಫಾರ್ಮ್ ಉತ್ತಮವಾಗಿಲ್ಲ. ಕಳೆದ 13 ಟಿ20 ಪಂದ್ಯಗಳಲ್ಲಿ ಗಿಲ್ ಕೇವಲ 26ರ ಸರಾಸರಿಯಲ್ಲಿ ಒಟ್ಟು 312 ರನ್ ಗಳಿಸಿದ್ದಾರೆ. ಕಳೆದ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಗಿಲ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲೂ ಶುಭ್​ಮನ್ ಗಿಲ್ ಕೇವಲ 8 ರನ್​ಗಳಿಗೆ ಸುಸ್ತಾದರು. ನಂತರ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಆದರೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಇನ್ನಿಂಗ್ಸ್‌ ಆಧಾರದ ಮೇಲೆ ಟೀಂ ಇಂಡಿಯಾ ದೊಡ್ಡ ಸ್ಕೋರ್ ಗಳಿಸಿತು.

ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ

ಅಂತಾರಾಷ್ಟ್ರೀಯ ಟಿ20ಯಲ್ಲಿ ಪದೇ ಪದೇ ಎಡವುತ್ತಿರುವ ಗಿಲ್, ಐಪಿಎಲ್​ನಲ್ಲಿ ಮಾತ್ರ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಗಿಲ್ ಐಪಿಎಲ್‌ನಲ್ಲಿ ಒಟ್ಟು 91 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 37.70 ಸರಾಸರಿಯಲ್ಲಿ 3 ಶತಕ ಸೇರಿದಂತೆ ಒಟ್ಟು 2790 ರನ್ ಗಳಿಸಿದ್ದಾರೆ. ಆದರೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ, ಗಿಲ್ ಇದುವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದ್ದಾರೆ ಮತ್ತು ಕೇವಲ 4 ಬಾರಿ ಎರಡಂಕಿಯ ಸ್ಕೋರ್ ಗಳಿಸಿದ್ದಾರೆ. ಉಳಿದ 9 ಇನ್ನಿಂಗ್ಸ್‌ಗಳಲ್ಲಿ ಗಿಲ್ ಒಂದಂಕಿಗೆ ಸುಸ್ತಾಗಿದ್ದಾರೆ. ಕಳೆದ 7 ಪಂದ್ಯಗಳಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ಗಿಲ್ ಒಮ್ಮೆ ಮಾತ್ರ 77 ರನ್‌ಗಳ ಇನ್ನಿಂಗ್ಸ್ ಆಡಿದ್ದರೆ, ಉಳಿದ 6 ಇನ್ನಿಂಗ್ಸ್‌ಗಳಲ್ಲಿ 10 ರನ್‌ಗಳನ್ನು ಸಹ ಗಳಿಸಲು ಸಾಧ್ಯವಾಗಿಲ್ಲ.

  • ಮೊದಲ ಪಂದ್ಯ: ಶ್ರೀಲಂಕಾ ವಿರುದ್ಧ 5 ಎಸೆತಗಳಲ್ಲಿ 7 ರನ್
  • ಎರಡನೇ ಪಂದ್ಯ: ಶ್ರೀಲಂಕಾ ವಿರುದ್ಧ 3 ಎಸೆತಗಳಲ್ಲಿ 5 ರನ್
  • ಮೂರನೇ ಪಂದ್ಯ: ಶ್ರೀಲಂಕಾ ವಿರುದ್ಧ 36 ಎಸೆತಗಳಲ್ಲಿ 46 ರನ್
  • ನಾಲ್ಕನೇ ಪಂದ್ಯ: ನ್ಯೂಜಿಲೆಂಡ್ ವಿರುದ್ಧ 6 ಎಸೆತಗಳಲ್ಲಿ 7 ರನ್
  • ಐದನೇ ಪಂದ್ಯ: ನ್ಯೂಜಿಲೆಂಡ್ ವಿರುದ್ಧ 9 ಎಸೆತಗಳಲ್ಲಿ 11 ರನ್
  • ಆರನೇ ಪಂದ್ಯ: ನ್ಯೂಜಿಲೆಂಡ್ ವಿರುದ್ಧ 63 ಎಸೆತಗಳಲ್ಲಿ 126 ರನ್
  • ಏಳನೇ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 9 ಎಸೆತಗಳಲ್ಲಿ 3 ರನ್
  • ಎಂಟನೇ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 9 ಎಸೆತಗಳಲ್ಲಿ 7 ರನ್
  • ಒಂಬತ್ತನೇ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 11 ಎಸೆತಗಳಲ್ಲಿ 6 ರನ್
  • ಹತ್ತನೇ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 47 ಎಸೆತಗಳಲ್ಲಿ 77 ರನ್
  • ಹನ್ನೊಂದನೇ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 9 ಎಸೆತಗಳಲ್ಲಿ 9 ರನ್
  • ಹನ್ನೆರಡನೇ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ 2 ಎಸೆತಗಳಲ್ಲಿ 0 ರನ್
  • ಹದಿಮೂರನೇ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ 6 ಎಸೆತಗಳಲ್ಲಿ 8 ರನ್

ಗಿಲ್ ಸ್ಥಾನ ಅಪಾಯದಲ್ಲಿ

ಐಪಿಎಲ್‌ನಲ್ಲಿ ರನ್​ಗಳ ಶಿಖರ ಕಟ್ಟಿರುವ ಗಿಲ್, ಅಂತಾರಾಷ್ಟ್ರೀಯ ಟಿ20ಯಲ್ಲಿ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಇದು ಆಯ್ಕೆ ಮಂಡಳಯ ಟೆನ್ಷನ್ ಹೆಚ್ಚಿಸಿದೆ. ಅಲ್ಲದೆ ಈ ಮಾದರಿಯಲ್ಲಿ ಗಿಲ್ ಅವರ ಸ್ಥಾನವನ್ನು ಅನುಮಾನಕ್ಕೆ ತಳ್ಳಿದೆ. ಏಕೆಂದರೆ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಗಿಲ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್‌ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಗಿಲ್ ಅವರ ಅನುಭವದ ಆಧಾರದ ಮೇಲೆ ಅವರಿಗೆ ಆಫ್ರಿಕಾ ಸರಣಿಯಲ್ಲಿ ಆರಂಭಿಕನಾಗಿ ಅವಕಾಶ ನೀಡಲಾಯಿತು. ಆದರೆ ಆಡಿದ 2 ಪಂದ್ಯಗಳಲ್ಲೂ ಗಿಲ್ ಉತ್ತಮ ಪ್ರದರ್ಶನ ನೀಡಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Fri, 15 December 23