India vs South Africa: ಹಿಂದಿನ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಆಫ್ರಿಕಾ ವಿರುದ್ಧ ಭಾರತ ಹೇಗೆ ಆಡಿತ್ತು?: ಇಲ್ಲಿದೆ ಫುಲ್ ಡಿಟೇಲ್ಸ್

| Updated By: Vinay Bhat

Updated on: Oct 29, 2022 | 9:22 AM

ICC T20 World Cup 2022: ಈ ಹಿಂದಿನ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತ- ದಕ್ಷಿಣ ಆಫ್ರಿಕಾ (India vs South Africa) ಐದು ಬಾರಿ ಮುಖಾಮುಖಿ ಆಗಿತ್ತು. ಈ ಸಂದರ್ಭ ಏನಾಗಿತ್ತು ಎಂಬುದನ್ನು ನೋಡೋಣ.

India vs South Africa: ಹಿಂದಿನ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಆಫ್ರಿಕಾ ವಿರುದ್ಧ ಭಾರತ ಹೇಗೆ ಆಡಿತ್ತು?: ಇಲ್ಲಿದೆ ಫುಲ್ ಡಿಟೇಲ್ಸ್
India vs South Africa
Follow us on

ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಭಾರತ ಮುಂದಿನ ಸವಾಲಿಗೆ ಸಜ್ಜಾಗುತ್ತಿದೆ. ಅಕ್ಟೋಬರ್ 30 ರಂದು ಟೀಮ್ ಇಂಡಿಯಾ (Team India) ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಪ್ರಾರಂಭವಾಗಲಿದೆ. ಗ್ರೂಪ್ 2 ರಲ್ಲಿರುವ ಭಾರತ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಜಯಿಸಿ +1.425 ರನ್​ರೇಟ್​ ಹೊಂದಿ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. ಇತ್ತ ಆಫ್ರಿಕಾ 3 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಗೆದ್ದ ತಂಡ ಸೆಮಿ ಫೈನಲ್ ಹಂತಕ್ಕೇರಲು ಮತ್ತಷ್ಟು ಸನಿಹವಾಗಲಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಹೂವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ. ಈ ಹಿಂದಿನ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತ-ಆಫ್ರಿಕಾ (India vs South Africa) ಐದು ಬಾರಿ ಮುಖಾಮುಖಿ ಆಗಿತ್ತು. ಈ ಸಂದರ್ಭ ಏನಾಗಿತ್ತು ಎಂಬುದನ್ನು ನೋಡೋಣ.

2007 ಟಿ20 ವಿಶ್ವಕಪ್: ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ಭಾರತ- ಆಫ್ರಿಕಾ ನಡುವಣ ಮುಖಾಮುಖಿ ರಣರೋಚಕವಾಗಿತ್ತು. ಯಾಕೆಂದರೆ ಸೆಮಿ ಫೈನಲ್​ಗೆ ತಲುಪಬೇಕಾದರೆ ಧೋನಿ ನೇತೃತ್ವದ ಟೀಮ್ ಇಂಡಿಯಾ ಗೆಲ್ಲಲೇ ಬೇಕಾಗಿತ್ತು. ಈ ಪಂದ್ಯದಲ್ಲಿ ಭಾರತ ರೋಹಿತ್ ಶರ್ಮಾ ಅವರ 40 ಎಸೆತದಲ್ಲಿ 50 ರನ್ ಮತ್ತು ಆರ್​ಪಿ ಸಿಂಗ್ 13 ರನ್​ಗೆ 4 ವಿಕೆಟ್ ಕಿತ್ತು 37 ರನ್​ಗಳ ಜಯ ಸಾಧಿಸುವಂತೆ ಮಾಡಿದರು.

2009 ಟಿ20 ವಿಶ್ವಕಪ್: ಟಿ20 ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತಿರುವುದು ಇದೊಂದೆ ಪಂದ್ಯದಲ್ಲಿ. ಟ್ರೆಂಟ್​ಬ್ರಿಡ್ಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತು. ಭಾರತಕ್ಕೆ ಇದುದೊಡ್ಡ ಟಾರ್ಗೆಟ್ ಏನೂ ಆಗಿರಲಿಲ್ಲ. ಆದರೆ, ಬ್ಯಾಟಿಂಗ್ ವೈಫಲ್ಯ ಅನುಭವಿಸಿ 12 ರನ್​ಗಳ ಸೋಲು ಕಂಡಿತು.

ಇದನ್ನೂ ಓದಿ
India vs South Africa: ಇಂದು ಮಧ್ಯಾಹ್ನ ರೋಹಿತ್ ಶರ್ಮಾ ಸುದ್ದಿಗೋಷ್ಠಿ: ಮಹತ್ವದ ಹೇಳಿಕೆ ಸಾಧ್ಯತೆ
ಟಿ20 ವಿಶ್ವಕಪ್ ಇತಿಹಾಸದಲ್ಲಿ 11 ಬಾರಿ ಬಲಿಷ್ಠ ತಂಡಗಳಿಗೆ ಸೋಲಿನ ಶಾಕ್ ನೀಡಿದ ದುರ್ಬಲ ತಂಡಗಳು..!
ಮ್ಯಾಥ್ಯೂ ವೇಡ್‌ಗೆ ಕೊರೊನಾ ಸೋಂಕು; ವಿಕೆಟ್ ಕೀಪಿಂಗ್ ಅಭ್ಯಾಸ ಆರಂಭಿಸಿದ ಮ್ಯಾಕ್ಸ್​ವೆಲ್- ವಾರ್ನರ್..!
T20 World Cup 2022: ಸೋಲಿನ ಬಳಿಕ ನೆಲಕ್ಕುರುಳಿ ಕಣ್ಣೀರಿಟ್ಟ ಪಾಕ್ ತಂಡದ ಉಪನಾಯಕ..! ವಿಡಿಯೋ

2010 ಟಿ20 ವಿಶ್ವಕಪ್: ಆಫ್ರಿಕಾ ವಿರುದ್ಧ ನಡೆದ ಈ ವಿಶ್ವಕಪ್ ಪಂದ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ಈ ಮ್ಯಾಚ್​ನಲ್ಲಿ ಸುರೇಶ್ ರೈನಾ ಕೇವಲ 60 ಎಸೆತಗಳಲ್ಲಿ 101 ರನ್ ಸಿಡಿಸಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಸಾಧನೆ ಮಾಡಿದರು. ರೈನಾ ಅವರ ಈ ಸ್ಫೋಟಕ ಆಟದ ನೆರವಿನಿಂದ ಭಾರತ 186 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದ ಪರಿಣಾಮ ಭಾರತ 14 ರನ್​ಗಳಿಂದ ಗೆದ್ದಿತು.

2012 ಟಿ20 ವಿಶ್ವಕಪ್: ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಭಾರತ 1 ರನ್​ಗಳ ಜಯ ಸಾಧಿಸಿತು. 153 ರನ್ ಗಳಿಸಿದ್ದ ಭಾರತ ಕೊನೆಯ ಓವರ್​ನಲ್ಲಿ ಗೆದ್ದಿತು. ಲಕ್ಷ್ಮೀಪತಿ ಬಾಲಾಜಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು.

2014 ಟಿ20 ವಿಶ್ವಕಪ್: ಈ ಟಿ20 ವಿಶ್ವಕಪ್​ನ ಸೆಮಿ ಫೈನಲ್​ನಲ್ಲಿ ಮುಖಾಮುಖಿ ಆದ ಭಾರತ ಭರ್ಜರಿ ಪ್ರದರ್ಶನ ತೋರಿತು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 72 ರನ್ ಚಚ್ಚಿ ಭಾರತಕ್ಕೆ 19.1 ಓವರ್​​ನಲ್ಲಿ 173 ರನ್ ಗಳಿಸವಂತೆ ಮಾಡಿ ಗೆಲುವು ತಂದುಕೊಟ್ಟರು. ಈ ಮೂಲಕ ಫೈನಲ್​ಗೆ ಟೀಮ್ ಇಂಡಿಯಾ ಲಗ್ಗೆಯಿಟ್ಟಿತು. ಅಲ್ಲದೆ ಟಿ20 ವಿಶ್ವಕಪ್​ನಲ್ಲಿ ಇದೇ ಕೊನೆಯ ಬಾರಿಗೆ ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ ಆಗಿದ್ದು.