ಟಿ20 ವಿಶ್ವಕಪ್ ಇತಿಹಾಸದಲ್ಲಿ 11 ಬಾರಿ ಬಲಿಷ್ಠ ತಂಡಗಳಿಗೆ ಸೋಲಿನ ಶಾಕ್ ನೀಡಿದ ದುರ್ಬಲ ತಂಡಗಳು..!
T20 World Cup: ಇದುವರೆಗೆ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಇಂತಹ ಒಟ್ಟು 11 ಅಚ್ಚರಿಯ ಪಲಿತಾಂಶಗಳು ಹೊರಬಿದ್ದಿವೆ. ಜಿಂಬಾಬ್ವೆ ಹೊರತು ಪಡಿಸಿ ಬಾಂಗ್ಲಾದೇಶ, ನೆದರ್ಲೆಂಡ್, ಹಾಂಕಾಂಗ್, ಅಫ್ಘಾನಿಸ್ತಾನ, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳು ಬಲಿಷ್ಠ ತಂಡಗಳಿಗೆ ನೀರುಣಿಸಿವೆ.
2022 ರ ಟಿ 20 ವಿಶ್ವಕಪ್‌ನಲ್ಲಿ (T20 World Cup 2022) ಜಿಂಬಾಬ್ವೆ ಎದುರು ಸೋಲುಂಡಿರುವ ಬಾಬರ್ ಪಡೆ ಸೆಮಿಫೈನಲ್ಗೇರಲು ಇತರ ತಂಡಗಳ ಫಲಿತಾಂಶದ ಅವಲಂಬಿತವಾಗಿದೆ. ಸೂಪರ್ 12 ಸುತ್ತಿನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ 1 ರನ್‌ನಿಂದ ಬಾಬರ್ ಅಜಮ್ ತಂಡವನ್ನು ಸೋಲಿಸಿತು. ಇದರೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಹಾದಿಯೂ ಕಷ್ಟಕರವಾಗಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಇದು ಸತತ ಎರಡನೇ ಸೋಲು. ಇದಕ್ಕೂ ಮುನ್ನ ಭಾರತ, ಬಾಬರ್ ಪಡೆಯನ್ನು ಸೋಲಿಸಿತ್ತು. ಈ ಮೂಲಕ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ 5 ಅಚ್ಚರಿಯ ಪಲಿತಾಂಶಗಳು ಹೊರಬಿದ್ದರೆ, ಒಟ್ಟಾರೆ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ 11 ಬಾರಿ ಈ ರೀತಿಯ ಶಾಕಿಂಗ್ ರಿಸಲ್ಟ್ ಹೊರಬಿದ್ದಿದೆ.
2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತನಗಿಂತ ಬಲಿಷ್ಠ ತಂಡವಾದ ಆಸ್ಟ್ರೇಲಿಯವನ್ನು ಮಣಿಸುವ ಅದ್ಭುತ ಕೆಲಸ ಮಾಡಿತ್ತು. ಆ ಪಂದ್ಯದಲ್ಲಿ ಜಿಂಬಾಬ್ವೆ ಆಸ್ಟ್ರೇಲಿಯ ನೀಡಿದ 139 ರನ್‌ಗಳ ಗುರಿಯನ್ನು 5 ವಿಕೆಟ್ಗಳನ್ನು ಕಳೆದುಕೊಂಡು, ಒಂದು ಎಸೆತ ಬಾಕಿ ಇರುವಂತೆಯೇ ಸಾಧಿಸಿತ್ತು. ಆಡಮ್ ಗಿಲ್ ಕ್ರಿಸ್ಟ್, ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್, ಆಂಡ್ರ್ಯೂ ಸೈಮಂಡ್ಸ್, ಬ್ರೆಟ್ ಲೀ, ಮಿಚೆಲ್ ಜಾನ್ಸನ್ ಅವರಿಂದ ಕಂಗೊಳಿಸುತ್ತಿದ್ದ ವಿಶ್ವ ಚಾಂಪಿಯನ್ ತಂಡದ ಈ ಸೋಲಿಗೆ ವಿಶ್ವದಾದ್ಯಂತ ಟೀಕೆ ವ್ಯಕ್ತವಾಗಿತ್ತು.
ಟಿ20 ವಿಶ್ವಕಪ್‌ನಲ್ಲಿ 11 ಅಚ್ಚರಿಯ ಪಲಿತಾಶಂಶಗಳು
ಇದುವರೆಗೆ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಇಂತಹ ಒಟ್ಟು 11 ಅಚ್ಚರಿಯ ಪಲಿತಾಂಶಗಳು ಹೊರಬಿದ್ದಿವೆ. ಜಿಂಬಾಬ್ವೆ ಹೊರತು ಪಡಿಸಿ ಬಾಂಗ್ಲಾದೇಶ, ನೆದರ್ಲೆಂಡ್, ಹಾಂಕಾಂಗ್, ಅಫ್ಘಾನಿಸ್ತಾನ, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳು ಬಲಿಷ್ಠ ತಂಡಗಳಿಗೆ ನೀರುಣಿಸಿವೆ. ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ತಂಡವು ಇತಿಹಾಸದಲ್ಲಿ ಎರಡು ಬಾರಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿವೆ.
ಈ ಆವೃತ್ತಿಯ ವಿಶ್ವಕಪ್‌ನಲ್ಲಿ 5 ಅಚ್ಚರಿಯ ಪಲಿತಾಂಶಗಳು
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಬಾರಿಯ ಪಂದ್ಯಾವಳಿಯಲ್ಲಿ 5 ಪ್ರಮುಖ ಅಚ್ಚರಿಯ ಪಲಿತಾಂಶಗಳು ಹೊರಬಿದ್ದಿವೆ. ಮೊದಲನೆಯದಾಗಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ನಮೀಬಿಯಾ ಈ ಟೂರ್ನಿಗೆ ರೋಚಕ ತಿರುವು ನೀಡಿತ್ತು. ಇದರ ನಂತರ ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದರೆ, ಆ ನಂತರ ಎರಡು ಬಾರಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ಐರ್ಲೆಂಡ್ ವಿರುದ್ಧವೂ ಸೋಲನುಭವಿಸಿತ್ತು. ಈ ಮೂಲಕ ವಿಂಡೀಸ್ ವಿಶ್ವಕಪ್ ಪ್ರಯಾಣ ಅಲ್ಲಿಗೆ ಅಂತ್ಯಗೊಂಡರೆ, ಐರ್ಲೆಂಡ್ ಮಾತ್ರ ಸೂಪರ್ 12 ಸುತ್ತಿಗೆ ಎಂಟ್ರಿಕೊಟ್ಟಿತ್ತು. ಇಲ್ಲೂ ಸಹ ಶಾಕಿಂಗ್ ರಿಸಲ್ಟ್ ಕೊಟ್ಟಿದ್ದ ಐರ್ಲೆಂಡ್ ತಂಡ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಂಗ್ಲರಿಗೆ ಶಾಕ್ ನೀಡಿತ್ತು.
ವರ್ಷ |
ವಿಜೇತ ತಂಡ | ಸೋತ ತಂಡ |
2007 | ಜಿಂಬಾಬ್ವೆ |
ಆಸ್ಟ್ರೇಲಿಯಾ |
2007 |
ಬಾಂಗ್ಲಾದೇಶ | ವೆಸ್ಟ್ ಇಂಡೀಸ್ |
2009 | ನೆದರ್ಲ್ಯಾಂಡ್ಸ್ |
ಇಂಗ್ಲೆಂಡ್ |
2014 |
ಹಾಂಗ್ ಕಾಂಗ್ | ಬಾಂಗ್ಲಾದೇಶ |
2014 | ನೆದರ್ಲ್ಯಾಂಡ್ಸ್ |
ಇಂಗ್ಲೆಂಡ್ |
2016 |
ಅಫ್ಘಾನಿಸ್ತಾನ | ವೆಸ್ಟ್ ಇಂಡೀಸ್ |
2022 | ನಮೀಬಿಯಾ |
ಶ್ರೀಲಂಕಾ |
2022 |
ಸ್ಕಾಟ್ಲೆಂಡ್ | ವೆಸ್ಟ್ ಇಂಡೀಸ |
2022 | ಐರ್ಲೆಂಡ್ |
ವೆಸ್ಟ್ ಇಂಡೀಸ್ |
2022 |
ಐರ್ಲೆಂಡ್ | ಇಂಗ್ಲೆಂಡ್ |
2022 | ಜಿಂಬಾಬ್ವೆ |
ಪಾಕಿಸ್ತಾನ |