ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ (India vs Sri Lanka 2nd T20i) ಎರಡನೇ ಪಂದ್ಯ ಇಂದು ಧರ್ಮಶಾಲಾ (Dharamsala)ದಲ್ಲಿ ನಡೆಯುತ್ತಿದೆ. ಭಾರತ ತಂಡವು ಈಗಾಗಲೇ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಇಂದು ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ತನ್ನ ಆಡುವ XI ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಲಕ್ನೋದಲ್ಲಿ ಸುಲಭ ಗೆಲುವುಗಳನ್ನು ದಾಖಲಿಸಿದ 11 ಆಟಗಾರರ ಮೇಲೆ ತನ್ನ ನಂಬಿಕೆಯನ್ನು ಇರಿಸಿದೆ. ಅದೇ ಸಮಯದಲ್ಲಿ, ಶ್ರೀಲಂಕಾ ತಂಡವು ತನ್ನ ಪ್ಲೇಯಿಂಗ್ XI ನಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ಜೆಫ್ರಿ ವಾಂಡರ್ಸೆ ಮತ್ತು ಜನಿತ್ ಲಿಯಾಂಗೆ ಕೋಕ್ ನೀಡಲಾಗಿದೆ. ಅವರ ಸ್ಥಾನದಲ್ಲಿ ಬುನೂರ ಫೆರ್ನಾಂಡೋ ಮತ್ತು ದನುಷ್ಕಾ ಗುಣತಿಲ್ಕ ಅವರಿಗೆ ಅವಕಾಶ ನೀಡಲಾಗಿದೆ.
ಧರ್ಮಶಾಲಾದಲ್ಲಿ ಸುಮಾರು ಎರಡೂವರೆ ವರ್ಷಗಳ ನಂತರ ಕ್ರಿಕೆಟ್ ಮರಳುತ್ತಿದೆ. ಇದಕ್ಕೂ ಮುನ್ನ 2019ರಲ್ಲಿ ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ಪಂದ್ಯ ನಡೆಯಬೇಕಿತ್ತು, ಆದರೆ ಮಳೆಯಿಂದಾಗಿ ರದ್ದಾಯಿತು. ಇಂದಿನ ಪಂದ್ಯದಲ್ಲೂ ಮಳೆಯಾಗುವ ಸಾಧ್ಯತೆ ಇದ್ದು, ಸದ್ಯ ಯಾವುದೇ ಅಡಚಣೆಯಿಲ್ಲದೆ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಿದೆ. ಈ ಅರ್ಥದಲ್ಲಿ ಟೀಂ ಇಂಡಿಯಾ ಉತ್ತಮ ಟಾಸ್ ಗೆದ್ದಿದೆ, ಅದರ ಮೂಲಕ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಶ್ರೀಲಂಕಾವನ್ನು ಸಣ್ಣ ಸ್ಕೋರ್‌ಗೆ ಕಟ್ಟಿಹಾಕಬಹುದು.
ಸಂಜು ಸ್ಯಾಮ್ಸನ್ ಮೇಲೆ ನಿಗಾ
ಸರಣಿಯ ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯದಲ್ಲೂ ಸರಣಿ ವಶಪಡಿಸಿಕೊಳ್ಳಲು ಮುಂದಾಗಿದೆ. ಭಾರತ ತಂಡ ಆಡುವ XI ನಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, ಇಂದು ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಅದರಲ್ಲೂ ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್ ಅವಕಾಶ ಸಿಗುತ್ತದೆಯೇ ಎಂಬುದರ ಮೇಲೆ ಕಣ್ಣಿಟ್ಟಿದೆ. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಎಲ್ಲಾ ಕೆಲಸಗಳನ್ನು ಮಾಡಿದ್ದರಿಂದ ಸಂಜು ಸರದಿ ಬರಲಿಲ್ಲ. ಹೀಗಿರುವಾಗ ಇಂದಿನ ಪಂದ್ಯದಲ್ಲಿ ಅವರನ್ನು ಮೂರನೇ ಕ್ರಮಾಂಕಕ್ಕೆ ಇಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಇಂದಿನ ಪಂದ್ಯದ ಪ್ಲೇಯಿಂಗ್ XI
ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ
ಶ್ರೀಲಂಕಾ: ದಸುನ್ ಶನಕ (ನಾಯಕ), ಪಾತುಮ್ ನಿಸಂಕ, ಕಮಿಲ್ ಮಿಶ್ರಾ, ಚರಿತ್ ಅಸಲಂಕಾ, ದಿನೇಶ್ ಚಂಡಿಮಲ್, ಚಮಿಕ ಕರುಣರತ್ನೆ, ದುಷ್ಮಂತ ಚಮೀರಾ, ಪ್ರವೀಣ್ ಜಯವಿಕ್ರಮ, ಲಹಿರು ಕುಮಾರ, ಬುನುರಾ ಫೆರ್ನಾಂಡೋ ಮತ್ತು ದನುಷ್ಕಾ ಗುಂಟಿಲಕ.
Published On - 6:36 pm, Sat, 26 February 22