
ತಿರುವನಂತಪುರದಲ್ಲಿ ಭಾರತ ಮತ್ತು ಶ್ರೀಲಂಕಾ (India and Sri Lanka) ನಡುವೆ ನಡೆಯುತ್ತಿರುವ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭೀಕರ ಅವಘಡ ಸಂಭವಿಸಿದೆ. ಚೆಂಡನ್ನು ತಡೆಯುವ ಯತ್ನದಲ್ಲಿ ಶ್ರೀಲಂಕಾದ ಫೀಲ್ಡರ್‌ಗಳಿಬ್ಬರು (Sri Lankan fielders) ಗಂಭೀರವಾಗಿ ಗಾಯಗೊಂಡಿದ್ದಾರೆ. ಚೆಂಡನ್ನು ತಡೆಯುವ ಯತ್ನದಲ್ಲಿ ಲಂಕಾ ತಂಡದ ಇಬ್ಬರು ಆಟಗಾರರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡಿದ್ದಾರೆ. ಇವರಿಬ್ಬರ ನಡುವೆ ನಡೆದ ಈ ಅವಘಡ ಎಷ್ಟು ಅಪಾಯಕಾರಿಯಾಗಿತ್ತೆಂದರೆ ಈ ಇಬ್ಬರೂ ಆಟಗಾರರನ್ನು ಸ್ಟ್ರೆಚರ್ (stretchers) ಮೇಲೆ ಮಲಗಿಸಿಕೊಂಡು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಗಿದೆ.
ವಾಸ್ತವವಾಗಿ, ಟೀಂ ಇಂಡಿಯಾ ಇನ್ನಿಂಗ್ಸ್ನ 43ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಬೌಲರ್ ಕರುಣಾರತ್ನೆ ಲೆಗ್ ಸೈಡ್ನಲ್ಲಿ ಎಸೆದ ಎಸೆತವನ್ನು ವಿರಾಟ್ ಕೊಹ್ಲಿ, ಡೀಪ್ ಮಿಡ್‌ವಿಕೆಟ್ ಮತ್ತು ಡೀಪ್ ಸ್ಕ್ವೇರ್ ಲೆಗ್ ನಡುವೆ ಆಡಿದರು. ಚೆಂಡು ಸೀದಾ ಬೌಂಡರಿ ಕಡೆ ಹೋಗುತ್ತಿತ್ತು. ಈ ವೇಳೆ, ಲಂಕಾದ ಇಬ್ಬರು ಆಟಗಾರರಾದ ಜೆಫ್ರಿ ವಾಂಡರ್ಸೆ ಮತ್ತು ಬಂಡಾರಾ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಒಂದು ಹಂತಕ್ಕೆ ಚೆಂಡನ್ನು ಬೌಂಡರಿಯಿಂದ ತಡೆಯುವಲ್ಲಿ ಯಶಸ್ವಿಯಾದರಾದರೂ, ಈ ಪ್ರಯತ್ನದಲ್ಲಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡರು. ಡಿಕ್ಕಿಯ ರಬಸಕ್ಕೆ ಇಬ್ಬರೂ ತೀವ್ರ ನೋವಿನಿಂದ ನರಳಲಾರಂಭಿಸಿದರು. ಈ ನಡುವೆ ಚೆಂಡು ಮತ್ತೆ ಬೌಂಡರಿ ಗೆರೆ ಮುಟ್ಟುವಲ್ಲಿ ಯಶಸ್ವಿಯಾಯಿತು.
— MINI BUS 2022 (@minibus2022) January 15, 2023
ಕೊಹ್ಲಿ ಬಾರಿಸಿದ ಈ ಚೆಂಡನ್ನು ತಡೆಯಲು ಲಂಕಾ ಆಟಗಾರ ವಂಡರ್ಸೆ ಎಡಭಾಗದಿಂದ ಓಡಿ ಬಂದರೆ, ಬಂಡಾರ ಕೂಡ ಚೆಂಡನ್ನು ನಿಲ್ಲಿಸಲು ಇನ್ನೊಂದು ಬದಿಯಿಂದ ಓಡಿ ಬಂದರು. ಆದರೆ ಇಬ್ಬರೂ ಆಟಗಾರರ ನಡುವಿನ ಸಂವಹನದ ಕೊರತೆಯಿಂದಾಗಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡರು.ಈ ಅವಘಡದಲ್ಲಿ ವಂಡರ್ಸೆ ಅವರ ತಲೆಗೆ ತೀವ್ರ ನೋವಾದರೆ, ಬಂಡಾರ ಅವರ ಕಾಲಿಗೆ ಗಂಭೀರವಾಗಿ ಗಾಯವಾದಂತೆ ತೋರುತ್ತಿತ್ತು. ತಕ್ಷಣ ಅಲ್ಲಿಗೆ ಓಡಿ ಬಂದ ಶ್ರೀಲಂಕಾದ ಫಿಸಿಯೋ, ಈ ಇಬ್ಬರನ್ನು ಪರೀಕ್ಷಿಸಿದರು. ಇದೇ ವೇಳೆ ಭಾರತ ತಂಡದ ವೈದ್ಯಕೀಯ ಸಿಬ್ಬಂದಿ ಕೂಡ ಮೈದಾನ ತಲುಪಿ, ಇಬ್ಬರು ಆಟಗಾರರ ನೆರವಿಗೆ ನಿಂತರು.
Not so good scenes from Trivandrum.
Just hoping that the injuries aren’t serious. #INDvsSL#GreenfieldStadium pic.twitter.com/7RhrzHOq18— Nirmal Jyothi (@majornirmal) January 15, 2023
IND vs SL 3rd ODI: LIVE सामन्यात धक्कादायक घटना
Jeffrey Vandersay, Ashen Bandara, IND vs SL 3rd ODI pic.twitter.com/sArftUKcqX
— Saurabh Spotlight (@spot_the_lights) January 15, 2023
ಇಬ್ಬರೂ ಆಟಗಾರರ ನಡುವಿನ ಈ ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಇಬ್ಬರಿಗೂ ಎದ್ದು ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ಟ್ರೆಚರ್‌ಗಳ ಮೂಲಕ ಈ ಇಬ್ಬರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Sun, 15 January 23