ಭಾರತದ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವು ಅತ್ಯಂತ ಹೀನಾಯವಾಗಿ ಸೋತಿದೆ. ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ ನೀಡಿದ 574 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಶ್ರೀಲಂಕಾ ಮೊದಲ ಇನಿಂಗ್ಸ್ನಲ್ಲಿ ಕೇವಲ 174 ರನ್ಗಳಿಗೆ ಸರ್ವಪತನ ಕಂಡಿತು. ಇತ್ತ ಫಾಲೋಆನ್ ಪಡೆದ ಲಂಕಾ ಮತ್ತೆ 2ನೇ ಇನಿಂಗ್ಸ್ ಆರಂಭಿಸಿತು. ಈ ಬಾರಿ ಕೂಡ ಟೀಮ್ ಇಂಡಿಯಾ ಬೌಲರುಗಳ ಮುಂದೆ ಲಂಕಾ ಬ್ಯಾಟ್ಸ್ಮನ್ಗಳಿಗೆ ಕ್ರೀಸ್ ಕಚ್ಚಿ ನಿಲ್ಲಲಾಗಲಿಲ್ಲ. ಪರಿಣಾಮ ಮತ್ತೊಮ್ಮೆ 178 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 222 ರನ್ಗಳ ಭರ್ಜರಿ ಜಯ ಸಾಧಿಸಿತು. ಆದರೆ ಇದು ಶ್ರೀಲಂಕಾ ತಂಡದ 2ನೇ ಅತ್ಯಂತ ಹೀನಾಯ ಸೋಲಾಗಿದೆ.
ಇತ್ತ ಶ್ರೀಲಂಕಾ ತಂಡವನ್ನು ಬೃಹತ್ ಅಂತರದಿಂದ ಟೆಸ್ಟ್ನಲ್ಲಿ ಸೋಲಿಸಿದ ಹಿರಿಮೆ ಭಾರತ ತಂಡಕ್ಕೆ ಸಲ್ಲುತ್ತದೆ. ಆದರೆ ಅದು ಈ ಬಾರಿಯಲ್ಲ. ಬದಲಾಗಿ 2017 ರಲ್ಲಿ ಟೀಮ್ ಇಂಡಿಯಾ ನಾಗ್ಪುರ್ ಟೆಸ್ಟ್ನಲ್ಲಿ ಶ್ರೀಲಂಕಾ ವಿರುದ್ದ ಭರ್ಜರಿ ಜಯ ಸಾಧಿಸಿತ್ತು. ಅಂದು ನಾಯಕ ವಿರಾಟ್ ಕೊಹ್ಲಿ 213 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 610 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ ಮೊದಲ ಇನಿಂಗ್ಸ್ನಲ್ಲಿ 205 ಹಾಗೂ ಎರಡನೇ ಇನಿಂಗ್ಸ್ನಲ್ಲಿ ಕೇವಲ 166 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 239 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಬೃಹತ್ ಅಂತರದ ಟೀಮ್ ಇಂಡಿಯಾದ ಗೆಲುವು ಶ್ರೀಲಂಕಾ ತಂಡದ ಅತ್ಯಂತ ಹೀನಾಯ ಸೋಲಾಗಿದೆ. ಈ ಸೋಲನ್ನು ಮೀರಿಸುವ ಅವಕಾಶ ಈ ಬಾರಿ ಹೊಂದಿದ್ದರೂ, 17 ರನ್ಗಳನ್ನು ಹೆಚ್ಚುಗಳಿಸುವ ಮೂಲಕ ಶ್ರೀಲಂಕಾ 2017 ರ ಹೀನಾಯ ಸೋಲಿನ ದಾಖಲೆಯನ್ನೇ ಕಳಪೆ ದಾಖಲೆಯಾಗಿ ಮುಂದುವರೆಸಿದೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(IND vs SL: Biggest inngs defeats for Sri Lanka)