IND vs SL: ಉಮ್ರಾನ್ ಬೆಂಕಿ ಚೆಂಡಿಗೆ ಶನಕ ಶಾಕ್; ಬುಮ್ರಾ ದಾಖಲೆ ಮುರಿದ ಜಮ್ಮು ಎಕ್ಸ್​ಪ್ರೆಸ್

Umran Malik: ವೇಗದ ಬೌಲಿಂಗ್​ಗೆ ಹೆಸರುವಾಸಿಯಾಗಿರುವ ಉಮ್ರಾನ್, ಈ ಪಂದ್ಯದಲ್ಲೂ ತನ್ನ ವೇಗದ ಬೌಲಿಂಗ್ ಮೂಲಕ ಬುಮ್ರಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ.

IND vs SL: ಉಮ್ರಾನ್ ಬೆಂಕಿ ಚೆಂಡಿಗೆ ಶನಕ ಶಾಕ್; ಬುಮ್ರಾ ದಾಖಲೆ ಮುರಿದ ಜಮ್ಮು ಎಕ್ಸ್​ಪ್ರೆಸ್
ಬುಮ್ರಾ ದಾಖಲೆ ಮುರಿದ ಉಮ್ರಾನ್
Follow us
TV9 Web
| Updated By: ಪೃಥ್ವಿಶಂಕರ

Updated on: Jan 04, 2023 | 11:30 AM

ಮಂಗಳವಾರ ನಡೆದ ಟೀಂ ಇಂಡಿಯಾ ಮತ್ತು ಶ್ರೀಲಂಕಾ (India Vs Sri Lanka) ನಡುವಿನ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಡೆ 2 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಲಂಕಾ ಪರ ತಂಡದ ನಾಯಕ ದಸುನ್ ಶನಕ ಗೆಲುವಿಗಾಗಿ ಹೋರಾಟ ನಡೆಸಿದರಾದರೂ ಉಮ್ರಾನ್ ಮಲಿಕ್ (Umran Malik) ಎಸೆದ ದಾಖಲೆಯ ವೇಗದ ಎಸೆತಕ್ಕೆ ಶನಕ ತನ್ನ ಆಟವನ್ನು ಕೊನೆಗೊಳಿಸ ಬೇಕಾಯಿತು. ವಾಸ್ತವವಾಗಿ ಈ ಪಂದ್ಯದಲ್ಲಿ 155 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್ ಲಂಕಾ ತಂಡದ ನಾಯಕ ಶನಕ ಅವರ ವಿಕೆಟ್ ಪಡೆದಿದಲ್ಲದೆ, ತಮ್ಮ ವೇಗದ ಎಸೆತದೊಂದಿಗೆ ಟೀಂ ಇಂಡಿಯಾದ ಇನ್ನೊಬ್ಬ ವೇಗಿ ಬುಮ್ರಾ ಅವರು ಈ ಹಿಂದೆ ಸೃಷ್ಟಿಸಿದ್ದ ದಾಖಲೆಯನ್ನೂ ಸಹ ಮುರಿದರು.

ಶನಕ ಏಕಾಂಗಿ ಹೋರಾಟ

ಈ ಪಂದ್ಯದಲ್ಲಿ ಶನಕ ಕ್ರೀಸ್‌ನಲ್ಲಿ ಇರುವ ತನಕವೂ ಶ್ರೀಲಂಕಾ ಗೆಲುವಿನ ಸಾಧ್ಯತೆ ಎದ್ದು ಕಾಣುತ್ತಿತ್ತು. ಆದರೆ ನಾಯಕ ಔಟಾದ ತಕ್ಷಣ ತಂಡ ಹಿನ್ನಡೆ ಅನುಭವಿಸಿತು. ಚರಿತ ಅಸಲಂಕಾ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಶನಕ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 45 ರನ್ ಗಳಿಸಿದರು. ಅಸಲಂಕಾ 16 ಎಸೆತಗಳಲ್ಲಿ 23 ರನ್ ಗಳಿಸಿದರು.

IND vs SL: ಚಿರತೆಯಂತೆ ಎಗರಿ ಅದ್ಭುತ ಕ್ಯಾಚ್ ಹಿಡಿದ ಕಿಶನ್! ವಿಡಿಯೋ ಸಖತ್ ವೈರಲ್

155 ಕಿ.ಮೀ ವೇಗಕ್ಕೆ ಶನಕ ಶಾಕ್

ವೇಗದ ಗತಿಯಲ್ಲಿ ರನ್ ಗಳಿಸುತ್ತಿದ್ದ ಶ್ರೀಲಂಕಾ ನಾಯಕ ಶನಕ ತಂಡಕ್ಕೆ ಗೆಲುವು ತಂದುಕೊಡಲು ಏಕಾಂಗಿ ಹೋರಾಟ ಆರಂಭಿಸಿದರು. ಈ ವೇಳೆ ನಾಯಕ ಹಾರ್ದಿಕ್ ಪಾಂಡ್ಯ 17ನೇ ಓವರ್​ನಲ್ಲಿ ಉಮ್ರಾನ್ ಮಲಿಕ್ ಕೈಗೆ ಚೆಂಡನ್ನು ಒಪ್ಪಿಸಿದರು. ಈ ಓವರ್​ನ ನಾಲ್ಕನೇ ಎಸೆತವನ್ನು 155 ಕಿ.ಮೀ ವೇಗದಲ್ಲಿ ಎಸೆದ ಮಲಿಕ್, ಶನಕ ಅವರನ್ನು ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಈ ವೇಗದ ಎಸೆತವನ್ನು ಕವರ್‌ ಮೇಲೆ ಆಡಿದ ಶನಕ, ಯುಜುವೇಂದ್ರ ಚಹಾಲ್‌ಗೆ ಸುಲಭ ಕ್ಯಾಚ್ ನೀಡಿ ತಮ್ಮ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

ಬುಮ್ರಾ ದಾಖಲೆ ಮುರಿದ ಉಮ್ರಾನ್

ವೇಗದ ಬೌಲಿಂಗ್​ಗೆ ಹೆಸರುವಾಸಿಯಾಗಿರುವ ಉಮ್ರಾನ್, ಈ ಪಂದ್ಯದಲ್ಲೂ ತನ್ನ ವೇಗದ ಬೌಲಿಂಗ್ ಮೂಲಕ ಬುಮ್ರಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, 153.36 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ, ಟೀಂ ಇಂಡಿಯಾ ಪರ ವೇಗಿಯೊಬ್ಬ ಎಸೆದ ಅತ್ಯಂತ ವೇಗದ ಎಸೆತ ಎಂಬ ದಾಖಲೆಯನ್ನು ಬರೆದಿದ್ದರು. ಆದರೆ ಈಗ 155 ಕಿ. ಮೀ ವೇಗದಲ್ಲಿ ಚೆಂಡನ್ನ ಎಸೆದಿರುವ ಮಲಿಕ್ ಹಳೆಯ ದಾಖಲೆಗಳನ್ನೆಲ್ಲ ಉಡೀಸ್ ಮಾಡಿದ್ದಾರೆ. ಮಲಿಕ್ ಹಾಗೂ ಬುಮ್ರಾರನ್ನು ಹೊರತುಪಡಿಸಿದರೆ, ಮೊಹಮ್ಮದ್ ಶಮಿ 153.3 ಕಿಮೀ ವೇಗದಲ್ಲಿ ಚೆಂಡನ್ನು ಎಸೆದ ದಾಖಲೆ ಮಾಡಿದ್ದಾರೆ. ಹಾಗೆಯೇ ನವದೀಪ್ ಸೈನಿ ಕೂಡ 152.85 ಕಿಮೀ ವೇಗದಲ್ಲಿ ಚೆಂಡನ್ನು ಎಸೆದು ಇವರ ನಂತರದ ಸ್ಥಾನದಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?