IND vs WI: ಯಾರು ಇನ್, ಯಾರು ಔಟ್? ಇಲ್ಲಿದೆ ಭಾರತ ಟಿ20 ತಂಡದಲ್ಲಾಗಿರುವ ಸಂಪೂರ್ಣ ಬದಲಾವಣೆ

|

Updated on: Jul 06, 2023 | 8:04 AM

IND vs WI: ಇದೆಲ್ಲದರ ನಡುವೆ ಭವಿಷ್ಯದ ಟಿ20 ತಂಡವನ್ನು ಕಟ್ಟುವ ಸಲುವಾಗಿ ಮೊದಲ ಹೆಜ್ಜೆ ಇಟ್ಟಿರುವ ಆಯ್ಕೆ ಮಂಡಳಿ, ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಖ್ಯಾತ ಹಿರಿಯ ತಲೆಗಳಿಗೆ ವಿಶ್ರಾಂತಿ ನೀಡಿದೆ.

IND vs WI: ಯಾರು ಇನ್, ಯಾರು ಔಟ್? ಇಲ್ಲಿದೆ ಭಾರತ ಟಿ20 ತಂಡದಲ್ಲಾಗಿರುವ ಸಂಪೂರ್ಣ ಬದಲಾವಣೆ
ಹಾರ್ದಿಕ್ ಪಾಂಡ್ಯ
Follow us on

ಭಾರತ ತಂಡ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲು ಕೆರಿಬಿಯನ್ (India vs West Indies) ನಾಡಿಗೆ ಕಾಲಿಟ್ಟಿದೆ. ಭಾರತ ತಂಡದ (Team India) ಈ ಪ್ರವಾಸವು ಜುಲೈ 12 ಮತ್ತು ಜುಲೈ 24 ರ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಆ ಬಳಿಕ ಜುಲೈ 27 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಕೊನೆಯ ಏಕದಿನ ಪಂದ್ಯ ಆಗಸ್ಟ್ 1 ರಂದು ನಡೆಯಲಿದೆ. ಅಂತಿಮವಾಗಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 5 ಟಿ20 ಪಂದ್ಯಗಳ ಸರಣಿಯು ಆಗಸ್ಟ್ 6 ರಿಂದ ಆಗಸ್ಟ್ 13 ರ ನಡುವೆ ನಡೆಯಲಿದೆ. ಇದೀಗ ಈ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಎಂದಿನಂತೆ ಹಾರ್ದಿಕ್ ಪಾಂಡ್ಯಗೆ ( Hardik Pandya) ತಂಡದ ನಾಯಕತ್ವ ನೀಡಲಾಗಿದ್ದು, ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.

ಆದರೆ ಇದೆಲ್ಲದರ ನಡುವೆ ಭವಿಷ್ಯದ ಟಿ20 ತಂಡವನ್ನು ಕಟ್ಟುವ ಸಲುವಾಗಿ ಮೊದಲ ಹೆಜ್ಜೆ ಇಟ್ಟಿರುವ ಆಯ್ಕೆ ಮಂಡಳಿ, ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಖ್ಯಾತ ಹಿರಿಯ ತಲೆಗಳಿಗೆ ವಿಶ್ರಾಂತಿ ನೀಡಿದೆ. ಅವರಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ ವಿರಾಕ್ ಕೊಹ್ಲಿ ಕೂಡ ಸೇರಿದ್ದಾರೆ. ಇನ್ನು ತಂಡದಲ್ಲಿ ಸ್ಥಾನ ಪಡೆದಿರುವ ಭಾಗಶಃ ಆಟಗಾರರು ಐಪಿಎಲ್​ನಲ್ಲಿ ಮಿಂಚಿದವರಾಗಿದ್ದು, ಇನ್ನು ಕೆಲವು ಐಪಿಎಲ್ ಸ್ಟಾರ್ ಆಟಗಾರರು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

IND Vs WI: 5 ಎಸೆತದಲ್ಲಿ 5 ಸಿಕ್ಸರ್ ಸಿಡಿಸಿದ್ದ ರಿಂಕು ಸಿಂಗ್‌ಗೆ ಟಿ20 ತಂಡದಲ್ಲಿಲ್ಲ ಸ್ಥಾನ..!

5 ಪಂದ್ಯಗಳ ಟಿ20 ಸರಣಿ

ವೇಳಾಪಟ್ಟಿಯಂತೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಆಗಸ್ಟ್ 3 ರಿಂದ ಐದು ಟಿ20 ಪಂದ್ಯಗಳ ಸರಣಿ ಆರಂಭವಾಗಲಿದೆ. ಮೊದಲ ಮೂರು ಪಂದ್ಯಗಳು ಕೆರಿಬಿಯನ್‌ನಲ್ಲಿ ನಡೆಯಲಿವೆ. ಸರಣಿಯ ಆರಂಭಿಕ ಪಂದ್ಯವನ್ನು ಟ್ರಿನಿಡಾಡ್‌ನಲ್ಲಿ ಮತ್ತು ಉಳಿದ ಎರಡು ಪಂದ್ಯಗಳು ಗಯಾನಾದಲ್ಲಿ ನಡೆಯಲಿದ್ದು, ಅಂತಿಮ ಎರಡು ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಲ್ಲಿವೆ. ಇನ್ನು ಹೊಸ ಟಿ20 ತಂಡ ಕಟ್ಟುವ ಸೂಚನೆ ನೀಡಿರುವ ಬಿಸಿಸಿಐ ಕಳೆದ ಜನವರಿಯಲ್ಲಿ ಆಡಿದ ಟಿ20 ತಂಡದಲ್ಲಿ ಹಲವು ಮುಖಗಳು ವಿಂಡೀಸ್ ಪ್ರವಾಸದಿಂದ ಮಾಯವಾಗಿವೆ. ಹಾಗೆಯೇ ಹಲವು ಹೊಸ ಮುಖಗಳು ಕೂಡ ಎಂಟ್ರಿಕೊಟ್ಟಿವೆ. ಹಾಗಿದ್ದರೆ ಕಳೆದ ಟಿ20 ತಂಡವನ್ನು ಗಮನಿಸಿದರೆ ಈಗ ಆಯ್ಕೆಯಾಗಿರುವ ಟಿ20 ತಂಡದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು ಏನು ಎಂಬುದನ್ನು ನೋಡುವುದಾದರೆ..

ಯಾರಿಗೆ ಅವಕಾಶ?

ಈ ಬಾರಿಯ ಐಪಿಎಲ್​ನಲ್ಲಿ ಮಿಂಚಿದ ಹಲವು ಯುವ ಪ್ರತಿಭೆಗಳು ತಂಡದಲ್ಲಿ ಆಯ್ಕೆಯಾಗಿವೆ. ಇದರಲ್ಲಿ ಪ್ರಮುಖವಾಗಿ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರಂತಃ ಎಡಗೈ ಬ್ಯಾಟರ್​ಗಳಿಗೆ ಬಿಸಿಸಿಐ ಆಧ್ಯತೆ ನೀಡಿದೆ. ಹಾಗೆಯೇ ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯ್ ಕಾಣಿಸಿಕೊಂಡರೆ, ವೇಗಿ ಅವೇಶ್ ಖಾನ್ ಕಳೆದ ವರ್ಷ ನಡೆದ ಏಷ್ಯಾಕಪ್ ನಂತರ ಮೊದಲ ಬಾರಿಗೆ ಭಾರತಕ್ಕಾಗಿ ಆಡಲಿದ್ದಾರೆ.

ಇನ್ನು ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಂತೆ ನ್ಯೂಜಿಲೆಂಡ್ ಸರಣಿಯನ್ನು ಆಡದ ಸಂಜು ಸ್ಯಾಮ್ಸನ್ ಮತ್ತೆ ವಿಕೆಟ್ ಕೀಪರ್ ಆಗಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ರವೀಂದ್ರ ಜಡೇಜಾ ಟಿ20 ಸರಣಿಯಿಂದ ದೂರವಿರುವುದರಿಂದ ತಮ್ಮ ಮದುವೆಯ ಕಾರಣದಿಂದಾಗಿ ನ್ಯೂಜಿಲೆಂಡ್ ಸರಣಿಯನ್ನು ತಪ್ಪಿಸಿಕೊಂಡಿದ್ದ ಅಕ್ಷರ್ ಪಟೇಲ್ ಟಿ20 ತಂಡಕ್ಕೆ ಮರಳಿದ್ದಾರೆ.

ಯಾರಿಗೆ ಕೋಕ್?

ಇನ್ನು ಭಾರತ ಟಿ20 ತಂಡದಿಂದ ಗೇಟ್​ಪಾಸ್​ ಪಡೆದ ಆಟಗಾರರನ್ನು ನೋಡುವುದಾದರೆ, ಆರಂಭಿಕ ಜೋಡಿ ಪೃಥ್ವಿ ಶಾ ಮತ್ತು ರುತುರಾಜ್ ಗಾಯಕ್ವಾಡ್ ಇಬ್ಬರೂ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಡೆಲ್ಲಿ ಡ್ಯಾಶರ್ ಪೃಥ್ವಿ ಶಾ ಐಪಿಎಲ್​ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರಿಂದ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಆದರೆ ಗಾಯಕ್ವಾಡ್ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಸ್ವಲ್ಪ ಗೊಂದಲಮಯವಾಗಿದೆ. ಹಾಗೆಯೇ ವರ್ಷದ ಆರಂಭದಲ್ಲಿ ಐದು ಪಂದ್ಯಗಳಲ್ಲಿ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ತ್ರಿಪಾಠಿ ಅವರನ್ನು ಸಹ ಕೈಬಿಡಲಾಗಿದೆ.

ಹಾಗೆಯೇ ಐಪಿಎಲ್​ನಲ್ಲಿ ಅಟ್ಟರ್ ಫ್ಲಾಪ್ ಆಗಿದ್ದ ದೀಪಕ್ ಹೂಡಾ ಕೂಡ ಅವಕಾಶ ಪಡೆದಿಲ್ಲ. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಅತ್ಯುತ್ತಮ ಗೇಮ್ ಫಿನಿಶರ್‌ಗಳೆನಿಸಿಕೊಂಡಿದ್ದ ಜಿತೇಶ್ ಶರ್ಮಾ ಮತ್ತು ರಿಂಕು ಸಿಂಗ್​ಗೆ ಬಿಸಿಸಿಐ ಅವಕಾಶ ನೀಡದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹಾಗೆಯೇ ಬೌಲರ್‌ಗಳ ಪೈಕಿ, ಐಪಿಎಲ್‌ನಲ್ಲಿ ಗಾಯದ ಸಮಸ್ಯೆ ಎದುರಿಸಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ನಿರ್ಲಕ್ಷಿಸಲಾಗಿದ್ದು, ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಕೇಂದ್ರ ವಲಯದ ನಾಯಕರಾಗಿರುವ ಶಿವಂ ಮಾವಿ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 am, Thu, 6 July 23