SHOCKING: ಅಂಪೈರ್ ಎಡವಟ್ಟು; ತೀರ ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಏಕದಿನ ಪಂದ್ಯ..!
SL vs NZ: ಕಿವೀಸ್ ಬೌಲರ್ ಏಡನ್ ಕಾರ್ಸನ್ 1993 ರ ಬಳಿಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ 11 ಓವರ್‌ಗಳ ಸ್ಪೆಲ್ ಬೌಲ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಕ್ರಿಕೆಟ್ ಆಟದಲ್ಲಿ ಅಂಪೈರ್ ಪ್ರಮುಖ ಪಾತ್ರ ವಹಿಸುತ್ತಾರೆ. ಅಂಪೈರ್ ನಿರ್ಧಾರದಿಂದ ಅನೇಕ ಪಂದ್ಯಗಳ ಫಲಿತಾಂಶವೇ ಬದಲಾಗಿ ಹೋಗಿದೆ. ಇದೀಗ ಇಂತಹದ್ದೇ ಘಟನೆ ನಡೆದಿದ್ದು, ಅಂಪೈರ್ ಮಾಡಿದ ಎಡವಟ್ಟಿನಿಂದ ಯಾವುದೇ ಅನಾಹುತವಾಗದಿದ್ದರೂ, ಏಕದಿನ ಕ್ರಿಕೆಟ್ (ODI Cricket) ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. ವಾಸ್ತವವಾಗಿ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಮಹಿಳಾ ( Sri Lanka women vs New Zealand women) ತಂಡಗಳ ನಡುವೆ ನಡೆದ ಎರಡನೇ ಏಕದಿನ ಪಂದ್ಯ, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ತೀರ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಅಂಪೈರ್ ಅಥವಾ ಮ್ಯಾಚ್ ರೆಫ್ರಿಯವರ ಅಜಾಗರೂಕತೆಯಿಂದ ಕಿವೀಸ್ ಬೌಲರ್ ಏಡನ್ ಕಾರ್ಸನ್ 1993 ರ ಬಳಿಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ 11 ಓವರ್‌ಗಳ ಸ್ಪೆಲ್ ಬೌಲ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
11 ಓವರ್‌ಗಳ ಸ್ಪೆಲ್ ಬೌಲ್ ಮಾಡಿದ ಬೌಲರ್
ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆದ ಪಂದ್ಯದಲ್ಲಿ ಕಿವೀಸ್ ಬೌಲರ್ ಏಡನ್ ಕಾರ್ಸನ್ 11 ಓವರ್‌ಗಳ ಸ್ಪೆಲ್ ಬೌಲ್ ಮಾಡಿದರು. ಪಂದ್ಯದ 45ನೇ ಓವರ್ ಬೌಲ್ ಮಾಡಿದ ತಕ್ಷಣ ಕಾರ್ಸನ್ ಅವರ 10 ಓವರ್‌ಗಳ ಖೋಟಾ ಪೂರ್ಣಗೊಂಡಿತ್ತು. ಆದಾಗ್ಯೂ, ನ್ಯೂಜಿಲೆಂಡ್ ಬೌಲರ್ ಇನ್ನಿಂಗ್ಸ್‌ನ 47 ನೇ ಓವರ್ ಬೌಲ್ ಮಾಡುವುದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 11 ಓವರ್ ಬೌಲ್ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇದು ಅಂಪೈರ್ ಅಥವಾ ಮ್ಯಾಚ್ ರೆಫ್ರಿಯವರ ಗಮನಕ್ಕೆ ಬಾರದಿರುವುದು, ಈ ಪಂದ್ಯದಲ್ಲಿ ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ICC World Cup 2023: ಭದ್ರತಾ ಪರಿಶೀಲನೆಗೆ ಭಾರತಕ್ಕೆ ಬರಲಿದೆ ಪಾಕ್ ಭದ್ರತಾ ನಿಯೋಗ..!
ಏಡನ್ ಕಾರ್ಸನ್ ಬೌಲಿಂಗ್ ಮ್ಯಾಜಿಕ್
ಏಡನ್ ಕಾರ್ಸನ್ ತಮ್ಮ 11 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 41 ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ಶ್ರೀಲಂಕಾದ ಇಬ್ಬರು ಸ್ಟಾರ್ ಆಟಗಾರ್ತಿಯರಿಗೆ ಪೆವಿಲಿಯನ್ ಹಾದಿಯನ್ನು ತೋರಿಸಿದರು. ಕಾರ್ಸನ್ ತನ್ನ 11ನೇ ಓವರ್‌ನಲ್ಲಿ ಐದು ಡಾಟ್ ಬಾಲ್‌ಗಳನ್ನು ಎಸೆದು ಕೇವಲ ಒಂದು ರನ್ ಮಾತ್ರ ಬಿಟ್ಟುಕೊಟ್ಟರು.
ಏಕದಿನ ಸರಣಿ 1-1ರಲ್ಲಿ ಸಮಬಲ
ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡ 329 ರನ್ ಬಾರಿಸಿತ್ತು. ತಂಡದ ಪರ ಸೋಫಿಯಾ ಡಿವೈನ್ ಮತ್ತು ಅಮಿಲಾ ಕೆರ್ ಶತಕ ಬಾರಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 229 ರನ್‌ಗಳ ದಾಖಲೆಯ ಜೊತೆಯಾಟವನ್ನು ಹಂಚಿಕೊಂಡರು. ಇದು ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಗರಿಷ್ಠ ಜೊತೆಯಾಟವಾಗಿದೆ. ಅಮಿಲಾ ಕೆರ್ 108 ರನ್ ಗಳಿಸಿದರೆ, ಡೆವಿನ್ 137 ರನ್ ಕಲೆ ಹಾಕಿದರು. 330 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 218 ರನ್‌ಗಳಿಗೆ ಆಲೌಟ್ ಆಗಿದ್ದು, ನ್ಯೂಜಿಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ