IND vs WI: ನಾಳೆ ಮೊದಲ ಏಕದಿನ: ಕೆರಿಬಿಯನ್ನರ ನಾಡಿಗೆ ತಲುಪಿದ ಟೀಮ್ ಇಂಡಿಯಾ ಆಟಗಾರರು

| Updated By: Vinay Bhat

Updated on: Jul 21, 2022 | 9:20 AM

India vs West Indies ODI: ಭಾರತ ಕ್ರಿಕೆಟ್ ತಂಡ ಇದೀಗ ಮತ್ತೊಂದು ಅಗ್ನಿ ಪರೀಕ್ಷೆಗಾಗಿ ಕೆರಿಬಿಯನ್ನರ ನಾಡಿಗೆ ತಲುಪಿದೆ. ಇಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

IND vs WI: ನಾಳೆ ಮೊದಲ ಏಕದಿನ: ಕೆರಿಬಿಯನ್ನರ ನಾಡಿಗೆ ತಲುಪಿದ ಟೀಮ್ ಇಂಡಿಯಾ ಆಟಗಾರರು
Team India
Follow us on

ಇಂಗ್ಲೆಂಡ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿ ಏಕದಿನ ಮತ್ತು ಟಿ20 ಸರಣಿ ವಶಪಡಿಸಿಕೊಂಡ ಭಾರತ ಕ್ರಿಕೆಟ್ ತಂಡ ಇದೀಗ ಮತ್ತೊಂದು ಅಗ್ನಿ ಪರೀಕ್ಷೆಗಾಗಿ ಕೆರಿಬಿಯನ್ನರ ನಾಡಿಗೆ ತಲುಪಿದೆ. ಇಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ (India vs West Indies) ಮೂರು ಪಂದ್ಯಗಳ ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಪೈಕಿ ನಾಳೆ (ಜು. 22) ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್ ಓವಲ್​ನಲ್ಲಿ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಟೀಮ್ ಇಂಡಿಯಾದ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಪಡೆ ಈ ಸರಣಿಯಲ್ಲಿ ಕಣಕ್ಕಿಳಿಯಲಿದೆ. ರೋಹಿತ್‌ ಶರ್ಮ (Rohit Sharma) ಅವರ ಅನುಪಸ್ಥಿತಿಯಲ್ಲಿ ಏಕದಿನ ಸರಣಿಗೆ ತಂಡದ ನಾಯಕತ್ವವನ್ನು ಶಿಖರ್‌ ಧವನ್‌ (Shikhar Dhawan) ಅವರು ವಹಿಸಿಕೊಳ್ಳಲಿದ್ದಾರೆ. ಭಾರತ ತಂಡದ ಆಟಗಾರರು ವೆಸ್ಟ್​ ಇಂಡೀಸ್​ನಲ್ಲಿರುವ ಹೊಟೇಲ್‌ಗೆ ಪ್ರವೇಶಿಸಿದ ಬಳಿಕ ವಿಡಿಯೋವೊಂದನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

ಯುಜ್ವೇಂದ್ರ ಚಹಲ್‌, ಆವೇಶ್‌ ಖಾನ್‌, ಶ್ರೇಯಸ್‌ ಅಯ್ಯರ್, ಇಶಾನ್‌ ಕಿಶನ್‌, ಮೊಹಮ್ಮದ್‌ ಸಿರಾಜ್‌ ಮತ್ತು ಪ್ರಸಿದ್ಧ್ ಕೃಷ್ಣ ಅವರು ಹೊಟೇಲ್‌ಗೆ ಆಗಮಿಸಿದರು. ರಿಷಬ್‌ ಪಂತ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ವಿಂಡಿಸ್‌ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಜಸ್‌ಪ್ರೀತ್‌ ಬುಮ್ರಾ ಮತ್ತು ವಿರಾಟ್‌ ಕೊಹ್ಲಿ ಪೂರ್ಣ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ರೋಹಿತ್ ಟಿ20 ಸರಣಿ ಹೊತ್ತಿಗೆ ತಂಡ ಸೇರಿಕೊಳ್ಳಲಿದ್ದಾರೆ. ಹಾಗೆಯೇ ಈ ಸರಣಿಯ ಮೂಲಕ ಇಂಜುರಿಗೆ ತುತ್ತಾಗಿದ್ದ ಕೆಎಲ್ ರಾಹುಲ್ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ.

ಇದನ್ನೂ ಓದಿ
BCCI: ಬಿಸಿಸಿಐ ತಿದ್ದುಪಡಿ ಮನವಿಯ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್​
ಮೈದಾನದಲ್ಲಿ ಮೊಳಗಿದ DK..DK ಘೋಷಣೆ: ಕೈ ಮುಗಿದು ಬಿಟ್ಟು ಬಿಡ್ರಪ್ಪಾ ಎಂದ ಮುರಳಿ ವಿಜಯ್
Dinesh Karthik: ವಿರಾಟ್ ಕೊಹ್ಲಿ, ರಿಚಾರ್ಜ್ ಆಗಿ ಹೇಗೆ ಕಂಬ್ಯಾಕ್ ಮಾಡ್ತಾರೆ ನೋಡ್ತಾ ಇರಿ..!
ICC ODI Rankings: ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ನಾಲ್ವರಿಗೆ ಸ್ಥಾನ

 

ಇತ್ತ ಬಾಂಗ್ಲಾದೇಶ ವಿರುದ್ದ 3-0 ಅಂತರದಿಂದ ಸರಣಿ ಸೋತಿರುವ ವೆಸ್ಟ್ ಇಂಡೀಸ್​ ಅನುಭವಿ ಆಟಗಾರರನ್ನು ತಂಡಕ್ಕೆ ಕರೆಸಿಕೊಂಡಿದೆ. ಅದರಂತೆ ಜೇಸನ್ ಹೋಲ್ಡರ್ ಟೀಮ್ ಇಂಡಿಯಾ ವಿರುದ್ದ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ತಂಡದಿಂದ ಆ್ಯಂಡರ್ಸನ್ ಫಿಲಿಪ್ ಹಾಗೂ ರೊಮಾರಿಯೊ ಶೆಫರ್ಡ್ ಅನ್ನು ಕೈಬಿಡಲಾಗಿದೆ. ಇನ್ನು ತಂಡದಲ್ಲಿ ಟ್ರಂಪ್ ಕಾರ್ಡ್ ಆಗಿ ರೋವ್ಮನ್ ಪೊವೆಲ್ ಇದ್ದು, ಟೀಮ್ ಇಂಡಿಯಾ ವಿರುದ್ದ ಹೇಗೆ ಪ್ರದರ್ಶನ ನೀಡಲಿದ್ದಾರೆ ಕಾದು ನೋಡಬೇಕಿದೆ.

ಏಕದಿನ ಸರಣಿ ವೇಳಾಪಟ್ಟಿ:

ಜುಲೈ 22- ಮೊದಲ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)

ಜುಲೈ 24- 2ನೇ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)

ಜುಲೈ 27- 3ನೇ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)

ಟಿ20 ಸರಣಿ ವೇಳಾಪಟ್ಟಿ:

ಜುಲೈ 29 – ಮೊದಲ ಟಿ20 ಪಂದ್ಯ (ಲಾರಾ ಕ್ರಿಕೆಟ್ ಸ್ಟೇಡಿಯಂ)

ಆಗಸ್ಟ್ 1​- 2ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್ ಸ್ಟೇಡಿಯಂ)

ಆಗಸ್ಟ್​ 2- 3ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್)

ಆಗಸ್ಟ್​ 6- 4ನೇ ಟಿ20 ಪಂದ್ಯ (ಕೌಂಟಿ ಕ್ರಿಕೆಟ್ ಸ್ಟೇಡಿಯಂ)

ಆಗಸ್ಟ್ 7- 5ನೇ ಟಿ20 ಪಂದ್ಯ (ಕೌಂಟಿ ಕ್ರಿಕೆಟ್ ಸ್ಟೇಡಿಯಂ)

ಭಾರತ ಏಕದಿನ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್‌), ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ವೆಸ್ಟ್ ಇಂಡೀಸ್ ಏಕದಿನ ತಂಡ: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮ್ರಾ ಬ್ರೂಕ್ಸ್, ಕೆಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೈಯರ್ಸ್, ಗುಡಕೇಶ್ ಮೋತಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್ ಮತ್ತು ಜೇಡನ್ ಸೀಲ್ಸ್.

Published On - 9:20 am, Thu, 21 July 22