VIRAL VIDEO: ಪ್ಯಾಡ್ ಧರಿಸಲು ಮರೆತು ಬ್ಯಾಟಿಂಗ್ ಬಂದ ಬ್ಯಾಟ್ಸ್ಮನ್
ಈ ಘಟನೆಯ ವಿಡಿಯೋವನ್ನು ದಟ್ಸ್ ಸೋ ವಿಲೇಜ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಕ್ರಿಕೆಟ್ ಸ್ಪರ್ಧಾತ್ಮಕ ಮತ್ತು ಗಂಭೀರ ಕ್ರೀಡೆಯಾಗಿದ್ದರೂ, ಕೆಲವೊಮ್ಮೆ ಮೈದಾನದಲ್ಲಿ ತಮಾಷೆಯ ಘಟನೆಗಳು ಸಂಭವಿಸುತ್ತಿರುತ್ತವೆ. ಇಂತಹದೊಂದು ವಿಲಕ್ಷಣ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುನೈಟೆಡ್ ಕಿಂಗ್ಡಮ್ನಲ್ಲಿ ನಡೆದ ಪಂದ್ಯದಲ್ಲಿ ಸೌತೆಂಡ್ ಸಿವಿಕ್ ಕ್ರಿಕೆಟ್ ಕ್ಲಬ್ ಆಟಗಾರ ಮಾರ್ಟಿನ್ ಹ್ಯೂಸ್ ಬ್ಯಾಟಿಂಗ್ಗೆ ಇಳಿದಿದ್ದರು. ಆದರೆ ಬ್ಯಾಟಿಂಗ್ ಬರುವಾಗ ಪ್ಯಾಡ್ ಧರಿಸಲು ಮಾರ್ಟಿನ್ ಮೆರೆತಿದ್ದಾರೆ. ಇತ್ತ ಸೀದಾ ಕ್ರೀಸ್ಗೆ ಆಗಮಿಸಿದ ಮಾರ್ಟಿನ್ ಅಂಪೈರ್ ಜೊತೆ ಮಿಡಲ್ ಸ್ಟಂಪ್ ಲೈನ್ ಕೇಳಿದ್ದಾರೆ. ಇದನ್ನು ಗಮನಿಸಿದ ವಿಕೆಟ್ ಕೀಪರ್ ಏನು ನಡೆಯುತ್ತಿದೆ ಎಂದು ಗೊಂದಲಕ್ಕೀಡಾಗಿದ್ದಾರೆ. ಏಕೆಂದರೆ ಅಂಪೈರ್ ಫೋನ್ನಲ್ಲಿದ್ದ ಕಾರಣ, ಬ್ಯಾಟ್ಸ್ಮನ್ ಕೋರಿಕೆಗೆ ಪ್ರತಿಕ್ರಿಯಿಸಿರಲಿಲ್ಲ.
ಈ ವೇಳೆ ಇದೆಲ್ಲಾ ನನಗೆ ಮ್ಯಾಟರ್ ಆಗಲ್ಲ, ನಾನು ಭರ್ಜರಿ ಸಿಕ್ಸ್ ಸಿಡಿಸುವುದಾಗಿ ಹೇಳಿದ್ದಾರೆ. ಅತ್ತ ಕಡೆಯಿಂದ ಏನಾಗ್ತಿದೆ ಎಂದು ಗಮನಿಸಿದ ವಿಕೆಟ್ ಕೀಪರ್, ನೀವು ಪ್ಯಾಡ್ ಧರಿಸದೇ ಬಂದಿದ್ದೀರಿ ಎಂದು ಸೂಚಿಸಿದರು. ಆದರೆ ಕೀಪರ್ ಕೆಣಕುತ್ತಿದ್ದಾರೆ ಎಂದು ಭಾವಿಸಿ, ಅದೆಲ್ಲಾ ನನಗೆ ಬೇಕಾಗಿಲ್ಲ ಎಂಬಾರ್ಥದಲ್ಲಿ ಉತ್ತರಿಸಿದ್ದಾರೆ. ಇದೇ ವೇಳೆ ನಿಜವಾಗಲೂ ನೀವು ಸೀರಿಯಸ್ ಆಗಿ ಹೇಳ್ತಿದ್ದೀರಾ ಎಂದು ವಿಕೆಟ್ ಕೀಪರ್ ಮರುಪ್ರಶ್ನಿಸುತ್ತಿದ್ದಂತೆ, ಪ್ಯಾಡ್ ಧರಿಸದೇ ಬಂದಿರುವುದು ಗೊತ್ತಾಗಿದೆ. ಪ್ಯಾಡ್ ಧರಿಸಿಲ್ಲ ಎಂಬುದು ತಿಳಿಯುತ್ತಿದ್ದಂತೆ ಬ್ಯಾಟ್ಸ್ಮನ್ ಮರಳಿ ಡಗೌಟ್ ಕಡೆಯತ್ತ ಓಡುತ್ತಿರುವುದು ಕಾಣಬಹುದು. ಅತ್ತ ಫೀಲ್ಡರ್ಗಳು ಹಾಗೂ ಅಂಪೈರ್ ನಗುತ್ತಾ ನಿಂತಿದ್ದರು.
— That’s so Village (@ThatsSoVillage) July 20, 2022
ಈ ಘಟನೆಯ ವಿಡಿಯೋವನ್ನು ದಟ್ಸ್ ಸೋ ವಿಲೇಜ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಅನೇಕರು ಬ್ಯಾಟ್ಸ್ಮನ್ ರಾತ್ರಿ ಫುಲ್ ಪಾರ್ಟಿ ಮಾಡಿ, ಬೆಳಿಗ್ಗೆ ಹ್ಯಾಂಗೋವರ್ನಲ್ಲಿ ಕಣಕ್ಕಿಳಿದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಬ್ಯಾಟ್ ಇಲ್ಲದೇ ಈತ ಬ್ಯಾಟಿಂಗ್ ಬರೆದಿದ್ದಿದ್ದೇ ಭಾಗ್ಯ ಎಂದು ಅನೇಕರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಒಟ್ಟಿನಲ್ಲಿ ಮಾರ್ಟಿನ್ ಹ್ಯೂಸ್ ಪ್ಯಾಡ್ ಧರಿಸದೇ ಕಣಕ್ಕಿಳಿದು ಇದೀಗ ಒಂದೇ ರಾತ್ರಿಗೆ ಫೇಮಸ್ ಆಗಿದ್ದಾರೆ.