IND vs WI: ಡೊಮಿನಿಕಾದಲ್ಲಿ ಟೀಂ ಇಂಡಿಯಾ; ಅಪರೂಪದ ಕ್ಷಣವನ್ನು ಸ್ಮರಿಸಿದ ಕಿಂಗ್ ಕೊಹ್ಲಿ

Virat Kohli- Rahul Dravid: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್​ಗೆ ಡೊಮಿನಿಕಾದಲ್ಲಿ ಭವ್ಯ ಸ್ವಾಗತ ದೊರಕಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

IND vs WI: ಡೊಮಿನಿಕಾದಲ್ಲಿ ಟೀಂ ಇಂಡಿಯಾ; ಅಪರೂಪದ ಕ್ಷಣವನ್ನು ಸ್ಮರಿಸಿದ ಕಿಂಗ್ ಕೊಹ್ಲಿ
ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Jul 10, 2023 | 12:15 PM

ವೆಸ್ಟ್ ಇಂಡೀಸ್ ವಿರುದ್ಧ ಜುಲೈ 12 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ (India vs West Indies) ಆಟಗಾರರು ಡೊಮಿನಿಕಾ ತಲುಪಿದ್ದಾರೆ. ವಾರದಿಂದ ಬಾರ್ಬಡೋಸ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್ ಪಡೆ ಪೂರ್ಣ ತಯಾರಿಯೊಂದಿಗೆ ಮೊದಲ ಟೆಸ್ಟ್​ಗೆ ಎಂಟ್ರಿಕೊಡುತ್ತಿದೆ. ನಿರೀಕ್ಷೆಯಂತೆ ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಅದರಲ್ಲೂ ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್​ಗೆ (Virat Kohli, Rahul Dravid ) ಡೊಮಿನಿಕಾದಲ್ಲಿ (Dominica) ಭವ್ಯ ಸ್ವಾಗತ ದೊರಕಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಇಬ್ಬರು ದಿಗ್ಗಜರಿಗೆ ಈ ರೀತಿಯ ಸ್ವಾಗತ ಸಿಗಲು ಇನ್ನೊಂದು ಕಾರಣವೂ ಇದೆ. ಈ ಕಾರಣವನ್ನು ಕಿಂಗ್ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇದೀಗ ಹಂಚಿಕೊಂಡಿದ್ದಾರೆ.

ಆರು ವರ್ಷಗಳ ನಂತರ ವಿಂಡ್ಸರ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಇದಾಗಿದೆ. 2011 ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈ ಮೈದಾನದಲ್ಲಿ ಮೊದಲ ಪಂದ್ಯವನ್ನು ಆಡಿದ್ದವು. ಅಲ್ಲಿಂದ ಇಲ್ಲಿಯವರೆಗೆ ಈ ಮೈದಾನದಲ್ಲಿ ಕೇವಲ ಐದು ಟೆಸ್ಟ್ ಪಂದ್ಯಗಳು ಮಾತ್ರ ನಡೆದಿವೆ. 12 ವರ್ಷಗಳ ಬಳಿಕ ಇದೀಗ ಡೊಮಿನಿಕಾದಲ್ಲಿ ಟೆಸ್ಟ್ ಪಂದ್ಯವನ್ನಾಡಲು ತೆರಳಿರುವ ವಿರಾಟ್ ಕೊಹ್ಲಿ 12 ವರ್ಷಗಳ ಹಿಂದಿನ ಘಟನೆಯೊಂದನ್ನು ಸ್ಮರಿಸಿದ್ದಾರೆ.

IND vs WI: ಮೊದಲ ಟೆಸ್ಟ್​ಗೆ ವಿಂಡೀಸ್ ತಂಡ ಪ್ರಕಟ; ಐತಿಹಾಸಿಕ ಟೆಸ್ಟ್​ಗೆ ಉಭಯ ತಂಡಗಳು ಹೀಗಿವೆ

2011ರ ಘಟನೆ ನೆನೆದ ವಿರಾಟ್

ಮೇಲೆ ಹೇಳಿದಂತೆ 2011ರಲ್ಲಿ ಟೀಂ ಇಂಡಿಯಾ ಡೊಮಿನಿಕಾದಲ್ಲಿ ಟೆಸ್ಟ್ ಪಂದ್ಯವನ್ನಾಡಿತ್ತು. ಆ ಟೆಸ್ಟ್‌ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಟೀಂ ಇಂಡಿಯಾ ಪರ ಆಡಿದ್ದರು. ಅಲ್ಲದೆ ಆಸಕ್ತದಾಯಕವೆಂಬಂತೆ ಇಂದು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಕೂಡ ಟೀಂ ಇಂಡಿಯಾದ ಭಾಗವಾಗಿದ್ದರು. ಇದೀಗ ಆ ಘಟನೆಯನ್ನು ನೆನೆದಿರುವ ಕೊಹ್ಲಿ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು 12 ವರ್ಷಗಳ ಹಿಂದಿನ ಘಟನೆಯನ್ನು ಸ್ಮರಿಸಿದ್ದಾರೆ.

ನಡೆದಿರುವುದು ಐದೇ ಪಂದ್ಯ

12 ವರ್ಷಗಳ ಹಿಂದೆ ಅಂದರೆ, 2011 ರಲ್ಲಿ ಡೊಮಿನಿಕಾದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಭಾರತ ಆ ಟೆಸ್ಟ್ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತ್ತು. ಆ ಬಳಿಕ ವಿಂಡ್ಸರ್ ಪಾರ್ಕ್‌ ಮೈದಾನದಲ್ಲಿ 4 ಟೆಸ್ಟ್ ಪಂದ್ಯಗಳು ನಡೆದಿದ್ದು, ಇಲ್ಲಿ ಆಸ್ಟ್ರೇಲಿಯಾ ಎರಡು ಪಂದ್ಯಗಳಲ್ಲಿ ಗೆದ್ದಿದ್ದರೆ, 2017 ರಲ್ಲಿ ಆತಿಥೇಯರ ವಿರುದ್ಧ ಪಾಕಿಸ್ತಾನ ಒಮ್ಮೆ ಜಯಗಳಿಸಿತು. ಬಳಿಕ ವೆಸ್ಟ್ ಇಂಡೀಸ್ ಈ ಸ್ಥಳದಲ್ಲಿ 2013 ರಲ್ಲಿ ಜಿಂಬಾಬ್ವೆ ವಿರುದ್ಧ 65 ರನ್​ಗಳ ಇನ್ನಿಂಗ್ಸ್ ಜಯ ಸಾಧಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Mon, 10 July 23

ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು