IND vs ZIM: ಹೀನಾಯ ಸೋಲಿಗೆ ನಾಯಕ ಶುಭ್​ಮನ್ ಗಿಲ್ ದೂರಿದ್ದು ಯಾರನ್ನ? ವಿಡಿಯೋ ನೋಡಿ

|

Updated on: Jul 06, 2024 | 9:44 PM

IND vs ZIM: ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 13 ರನ್‌ಗಳ ಹೀನಾಯ ಸೋಲು ಅನುಭವಿಸಬೇಕಾಯಿತು. 116 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ಕೇವಲ 102 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನ ನಂತರ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮನ್ ಗಿಲ್ ಸೋಲಿಗೆ ವಿವರಣೆ ನೀಡಿದ್ದು ಹೀಗೆ.

IND vs ZIM: ಹೀನಾಯ ಸೋಲಿಗೆ ನಾಯಕ ಶುಭ್​ಮನ್ ಗಿಲ್ ದೂರಿದ್ದು ಯಾರನ್ನ? ವಿಡಿಯೋ ನೋಡಿ
ಶುಭ್​ಮನ್ ಗಿಲ್
Follow us on

ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಟೀಂ ಇಂಡಿಯಾ ಕೋಟ್ಯಂತರ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿತ್ತು. ಇಲ್ಲಿಯವರೆಗೂ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಆದರೆ ಜಿಂಬಾಬ್ವೆ ವಿರುದ್ಧ ಯುವ ತಂಡದ ನಾಚಿಕೆಗೇಡಿನ ಪ್ರದರ್ಶನವನ್ನು ನೋಡಿದ ಜನರು ಶಾಕ್ ಆಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 13 ರನ್‌ಗಳ ಹೀನಾಯ ಸೋಲು ಅನುಭವಿಸಬೇಕಾಯಿತು. 116 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ಕೇವಲ 102 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನ ನಂತರ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮನ್ ಗಿಲ್ ಸೋಲಿಗೆ ವಿವರಣೆ ನೀಡಿದ್ದು ಹೀಗೆ.

ತುಂಬಾ ನಿರಾಸೆಯಾಗಿದೆ; ಗಿಲ್

ಅವಮಾನಕರ ಸೋಲಿನ ನಂತರ ಮಾತನಾಡಿದ ಗಿಲ್, ‘ನಾವು ಚೆನ್ನಾಗಿ ಬೌಲ್ ಮಾಡಿದ್ದೇವು. ಆದರೆ ಫೀಲ್ಡಿಂಗ್‌ನಲ್ಲಿ ತಂಡ ಎಡವಿತು. ನಾವು ಸಮಯ ತೆಗೆದುಕೊಂಡು ಬ್ಯಾಟಿಂಗ್ ಆನಂದಿಸಲು ಬಯಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಅರ್ಧ ಇನ್ನಿಂಗ್ಸ್ ಮುಗಿಯುವ ವೇಳೆಗೆ ನಾವು ಐದು ವಿಕೆಟ್ ಕಳೆದುಕೊಂಡಿದ್ದೇವು. ನಾನು ಕೊನೆಯವರೆಗೂ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು.

ಆದರೆ ನಾನು ಔಟಾದ ರೀತಿ ಮತ್ತು ಉಳಿದ ಬ್ಯಾಟರ್​ಗಳು ಔಟಾದ ರೀತಿಯಿಂದ ನನಗೆ ತುಂಬಾ ನಿರಾಸೆಯಾಗಿದೆ. ವಾಷಿಂಗ್ಟನ್ ಸುಂದರ್ ಮೇಲೆ ಭರವಸೆ ಇಟ್ಟುಕೊಂಡಿದ್ದೇವು. ಹೀಗಾಗಿ ಕೊನೆಯವರೆಗೂ ನಿರೀಕ್ಷೆಗಳಿದ್ದವು, ಆದರೆ ನೀವು 115 ರನ್‌ಗಳನ್ನು ಬೆನ್ನಟ್ಟುವಾಗ 10ನೇ ಕ್ರಮಾಂಕದ ಬ್ಯಾಟ್ಸ್‌ಮನ್​ ಮೇಲೆ ಗೆಲುವಿನ ನಿರೀಕ್ಷೆ ಇಟ್ಟರೆ, ಏನೋ ತಪ್ಪಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದರು.

ಪಂದ್ಯ ಹೀಗಿತ್ತು

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಬಳಿಕ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 115 ರನ್‌ ಕಲೆಹಾಕಿತು. ಟೀಂ ಇಂಡಿಯಾ ಪರ ರವಿ ಬಿಷ್ಣೋಯ್ ನಾಲ್ಕು ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಎರಡು, ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಕೇವಲ 116 ರನ್​ಗಳ ಗುರಿ ಇತ್ತು. ಭಾರತ ತಂಡ ಅತ್ಯಂತ ಸುಲಭವಾಗಿ ಗೆಲ್ಲುವ ಉದ್ದೇಶದಿಂದ ಮೈದಾನಕ್ಕಿಳಿದಿತ್ತು. ಆದರೆ ಭಾರತ ತಂಡ ಈ ಗುರಿಯನ್ನು ಸಾಧಿಸಲು ಸಾಧ್ಯವಾಗದೆ 19.5 ಓವರ್‌ಗಳಲ್ಲಿ 102 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಕ್ಯಾಪ್ಟನ್ ಗಿಲ್ 29 ಎಸೆತಗಳಲ್ಲಿ 31 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರಲ್ಲದೇ ವಾಷಿಂಗ್ಟನ್ ಸುಂದರ್ 27 ರನ್ ಹಾಗೂ ಅವೇಶ್ ಖಾನ್ 12 ಎಸೆತಗಳಲ್ಲಿ 16 ರನ್ ಕಲೆಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ