AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ವೆಸ್ಟ್ ಇಂಡೀಸ್ ಟಿ20 ಮುಖಾಮುಖಿ ದಾಖಲೆ ಹೇಗಿದೆ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಕ್ಟೋಬರ್ 6 ರಿಂದ ಲಕ್ನೋದಲ್ಲಿ ಆರಂಭವಾಗಲಿದೆ. ಕಳೆದ ಸರಣಿಯಲ್ಲಿ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿದ್ದರಿಂದ ಈ ಬಾರಿ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಟಿ20 ದಾಖಲೆಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ವಿಶೇಷವಾಗಿ ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೂ, ವಿಂಡೀಸ್ ಆಟಗಾರರ IPL ಅನುಭವದಿಂದ ಎಚ್ಚರಿಕೆ ಅಗತ್ಯ.

ಭಾರತ- ವೆಸ್ಟ್ ಇಂಡೀಸ್ ಟಿ20 ಮುಖಾಮುಖಿ ದಾಖಲೆ ಹೇಗಿದೆ?
ಭಾರತ Vs ವೆಸ್ಟ್ ಇಂಡೀಸ್
ಪೃಥ್ವಿಶಂಕರ
|

Updated on: Oct 05, 2026 | 8:27 PM

Share

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 6 ರಿಂದ ಅರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಇದುವರೆಗಿನ ಮುಖಾಮುಖಿ ದಾಖಲೆ ಹಾಗೂ ತಂಡಗಳ ಬಲಾಬಲವನ್ನು ಗಮನಿಸಿರೆ, ಟೀಂ ಇಂಡಿಯಾ ಮೇಲುಗೈ ಸಾಧಿಸುವಂತೆ ತೋರುತ್ತದೆ. ಆದರೆ ಉಭಯ ತಂಡಗಳ ಕೊನೆಯ ಟಿ20 ಮುಖಾಮುಖಿಯ ಫಲಿತಾಂಶವನ್ನು ನೋಡಿದರೆ, ವಿಂಡೀಸ್ ಪಡೆ ಭಾರತ ತಂಡಕ್ಕೆ ಮರೆಯಾಗದ ಆಘಾತ ನೀಡಿದೆ. ಹೀಗಾಗಿ ಟೀಂ ಇಂಡಿಯಾ ಕಳೆದ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

ಸರಣಿ ಗೆದ್ದಿದ್ದ ವೆಸ್ಟ್ ಇಂಡೀಸ್

ಎರಡೂ ತಂಡಗಳ ಕೊನೆಯ ಬಾರಿಗೆ 2023 ರಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದವು. ಆ ಸರಣಿಯಲ್ಲಿ, ವೆಸ್ಟ್ ಇಂಡೀಸ್ ಮೊದಲ ಎರಡು ಪಂದ್ಯಗಳನ್ನು ಗೆದ್ದು ಮುನ್ನಡೆ ಪಡೆದುಕೊಂಡಿತ್ತು. ಆದಾಗ್ಯೂ ಭಾರತ ತಂಡ ಬಲವಾದ ಪುನರಾಗಮನ ಮಾಡಿ ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು 2-2 ರಲ್ಲಿ ಸಮಬಲಗೊಳಿಸಿತು. ಆದರೆ ಐದನೇ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ಏಕಪಕ್ಷೀಯ ಗೆಲುವು ಸಾಧಿಸಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿ ಸರಣಿಯನ್ನು 3-2 ರಿಂದ ಗೆದ್ದುಕೊಂಡಿತ್ತು.

ಆ ಕಹಿ ಸೋಲಿನ ನೋವು ಇನ್ನೂ ಭಾರತೀಯ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿದೆ, ಅದಕ್ಕಾಗಿಯೇ ಈ ಬಾರಿ ಟೀಂ ಇಂಡಿಯಾ ಅತ್ಯಂತ ಜಾಗರೂಕರಾಗಿರಬೇಕು. ವೆಸ್ಟ್ ಇಂಡೀಸ್ ಯಾವುದೇ ಕ್ಷಣದಲ್ಲಿ ತಿರುಗಿಬೀಳುವ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ಭಾರತದ ವಿರುದ್ಧದ ಏಕದಿನ ಸರಣಿಯನ್ನು ವೆಸ್ಟ್ ಇಂಡೀಸ್ ಸೋತರೂ, ಸರಣಿಯ ಅಂತಿಮ ಪಂದ್ಯದಲ್ಲಿ 352 ರನ್‌ಗಳನ್ನು ಬೆನ್ನಟ್ಟುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.

20 ಪಂದ್ಯಗಳನ್ನು ಗೆದ್ದಿರುವ ಭಾರತ

ಇನ್ನು ಟಿ20 ಸರಣಿಯಲ್ಲಿ ಭಾರತ ಹಾಗೂ ವಿಂಡೀಸ್ ನಡುವಿನ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ.. ಉಭಯ ತಂಡಗಳು 2009 ರಲ್ಲಿ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು 31 ಟಿ20 ಪಂದ್ಯಗಳು ನಡೆದಿವೆ. ಈ ಪಂದ್ಯಗಳಲ್ಲಿ ಭಾರತ 20 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ 10 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 2026 ರ ಟಿ20 ವಿಶ್ವಕಪ್‌ನ ಎರಡು ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಭಾರತ 5 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಟಿ20 ಸರಣಿ ಆರಂಭಕ್ಕೂ ಮುನ್ನವೇ ಭಾರತ- ವಿಂಡೀಸ್ ತಂಡಗಳಿಗೆ ದಂಡದ ಬರೆ ಎಳೆದ ಐಸಿಸಿ..!

ಟೀಂ ಇಂಡಿಯಾದ್ದೇ ಮೇಲುಗೈ

ಕೆರಿಬಿಯನ್ ತಂಡದ ವಿರುದ್ಧ ಭಾರತ ತಂಡದ ತವರು ದಾಖಲೆ ಅದ್ಭುತವಾಗಿದೆ. ಭಾರತದ ನೆಲದಲ್ಲಿ ಇದುವರೆಗೆ ಎರಡೂ ತಂಡಗಳ ನಡುವೆ ಒಟ್ಟು 11 ಟಿ20 ಪಂದ್ಯಗಳು ನಡೆದಿವೆ. ಈ 11 ಪಂದ್ಯಗಳಲ್ಲಿ ಭಾರತ ಒಂಬತ್ತು ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಹೀಗಾಗಿ ಭಾರತದಲ್ಲಿ ಟೀಂ ಇಂಡಿಯಾವನ್ನು ಮಣಿಸುವುದು ವಿಂಡೀಸ್​ಗೆ ಕಷ್ಟಕರವಾಗಿದ್ದರೂ, ಐಪಿಎಲ್‌ನಲ್ಲಿ ಆಡಿರುವ ಅನುಭವ ಹೊಂದಿರುವ ವಿಂಡೀಸ್ ಆಟಗಾರರಿಗೆ ಭಾರತದ ಪರಿಸ್ಥಿತಿಗಳು ಪರಿಚಿತವಾಗಿದೆ. ಹೀಗಾಗಿ ಶ್ರೇಯಸ್ ಪಡೆ ಎಚ್ಚರಿಕೆಯಿಂದ ವಿಂಡೀಸ್ ತಂಡವನ್ನು ಎದುರಿಸಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More