ಮಿಂಚಿದ ಅಭಿಮನ್ಯು- ಸೌರಭ್; ಬಾಂಗ್ಲಾ ಎ ಮಣಿಸಿ ಅನಧಿಕೃತ ಟೆಸ್ಟ್ ಸರಣಿ ಗೆದ್ದ ಭಾರತ ಎ ತಂಡ..!

| Updated By: ಪೃಥ್ವಿಶಂಕರ

Updated on: Dec 09, 2022 | 3:46 PM

ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್ ಅವರಂತಹ ಆಟಗಾರರು ಬಹಳ ಸಮಯದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಈ ಆಟಗಾರರಿಗೆ ಇನ್ನು ಟೀಂ ಇಂಡಿಯಾದ ಕದ ತೆರೆದಿಲ್ಲ.

ಮಿಂಚಿದ ಅಭಿಮನ್ಯು- ಸೌರಭ್; ಬಾಂಗ್ಲಾ ಎ ಮಣಿಸಿ ಅನಧಿಕೃತ ಟೆಸ್ಟ್ ಸರಣಿ ಗೆದ್ದ ಭಾರತ ಎ ತಂಡ..!
India A
Follow us on

ಬಾಂಗ್ಲಾದೇಶ-ಎ ವಿರುದ್ಧದ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಭಾರತ-ಎ ತಂಡ (India-A vs Bangladesh-A) 1-0 ಅಂತರದಲ್ಲಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ತಂಡ ಇನ್ನಿಂಗ್ಸ್ ಮತ್ತು 123 ರನ್‌ಗಳ ಜಯ ಸಾಧಿಸಿದೆ. ಭಾರತ ಎ ತಂಡ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 562 ರನ್​ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ-ಎ ತಂಡಕ್ಕೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತ-ಎ ಸ್ಕೋರ್ ದಾಟಲು ಸಾಧ್ಯವಾಗಲಿಲ್ಲ. ಬಾಂಗ್ಲಾದೇಶ-ಎ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 252 ರನ್‌ಗಳಿಗೆ ಆಲೌಟ್ ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 187 ರನ್‌ಗಳಿಗೆ ಕುಸಿಯಿತು. ಭಾರತ-ಎ ತಂಡದ ಗೆಲುವಿನಲ್ಲಿ ನಾಯಕ ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್ ಮತ್ತು ಮುಖೇಶ್ ಕುಮಾರ್ (Abhimanyu Easwaran , Saurabh Kumar and Mukesh Kumar.) ಪ್ರಮುಖ ಪಾತ್ರವಹಿಸಿದರು.

ಅಭಿಮನ್ಯು ಈಶ್ವರನ್ ಮೊದಲ ಇನ್ನಿಂಗ್ಸ್​ನಲ್ಲಿ 157 ರನ್ ಗಳಿಸಿದರೆ, ಬೌಲಿಂಗ್​ನಲ್ಲಿ ಮುಖೇಶ್ ಕುಮಾರ್ ಮೊದಲ ಇನ್ನಿಂಗ್ಸ್​ನಲ್ಲಿ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಾಗೆಯೇ ಎರಡನೇ ಇನ್ನಿಂಗ್ಸ್​ನಲ್ಲಿ ಸೌರಭ್ ಕುಮಾರ್ 6 ವಿಕೆಟ್ ಪಡೆದರೆ, ಸೌರಭ್ ಕುಮಾರ್ ಕೂಡ 55 ರನ್​ಗಳ ಇನಿಂಗ್ಸ್ ಆಡಿದರು.

INDvs BAN: ನಾಯಕ ಸೇರಿದಂತೆ ಮೂವರು ತಂಡದಿಂದ ಔಟ್! ಕೊನೆಯ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ

ಅಭಿಮನ್ಯು ಈಶ್ವರನ್ ಅದ್ಭುತ ಪ್ರದರ್ಶನ

ಈ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಭಿಮನ್ಯು ಈಶ್ವರನ್ ಅವರು 2 ಇನ್ನಿಂಗ್ಸ್‌ಗಳಲ್ಲಿ 149 ಸರಾಸರಿಯಲ್ಲಿ 298 ರನ್ ಗಳಿಸಿದರು. ಅದರಲ್ಲೂ ಈಶ್ವರನ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದು ಇಲ್ಲಿ ವಿಶೇಷವಾಗಿತ್ತು. ಇವರಲ್ಲದೆ ಯಶಸ್ವಿ ಜೈಸ್ವಾಲ್ 2 ಇನ್ನಿಂಗ್ಸ್‌ಗಳಲ್ಲಿ 158 ರನ್ ಗಳಿಸಿ ಮಿಂಚಿದರು. ಈ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಭಾರತ ಪರ ಉತ್ತಮ ಪ್ರದರ್ಶನ ನೀಡಿದ ಅಭಿಮನ್ಯು ಈಶ್ವರನ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಗಾಯಗೊಂಡಿರುವ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿದರೆ, ಈಶ್ವರನ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ.

ಬೌಲಿಂಗ್​ನಲ್ಲಿ ಮಿಂಚಿದ ಸೌರಭ್ ಕುಮಾರ್

ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಕೂಡ ಬಾಂಗ್ಲಾದೇಶ-ಎ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಈ ಆಟಗಾರ 2 ಟೆಸ್ಟ್‌ಗಳಲ್ಲಿ ಒಟ್ಟಾರೆ 15 ವಿಕೆಟ್ ಪಡೆದು ಮಿಂಚಿದರು. ಅದರಲ್ಲೂ ಎರಡು ಇನ್ನಿಂಗ್ಸ್‌ಗಳಲ್ಲಿ ತಲಾ ಐದು ವಿಕೆಟ್ ಕಬಳಿಸುವಲ್ಲಿ ಸೌರಭ್ ಯಶಸ್ವಿಯಾದರು. ಸೌರಭ್ ಹೊರತುಪಡಿಸಿ, ಮುಖೇಶ್ ಕುಮಾರ್ 9 ವಿಕೆಟ್ ಪಡೆದರೆ, ನವದೀಪ್ ಸೈನಿ ಕೂಡ 6 ವಿಕೆಟ್ ಪಡೆದರು.

ಟೀಮ್ ಇಂಡಿಯಾದಲ್ಲಿ ಇವರಿಗೆ ಯಾವಾಗ ಅವಕಾಶ?

ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್ ಅವರಂತಹ ಆಟಗಾರರು ಬಹಳ ಸಮಯದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಈ ಆಟಗಾರರಿಗೆ ಇನ್ನು ಟೀಂ ಇಂಡಿಯಾದ ಕದ ತೆರೆದಿಲ್ಲ. ಅಲ್ಲದೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಈ ಆಟಗಾರರಿಗೆ ಅವಕಾಶ ಸಿಗಲಿಲ್ಲ. ಈಗ ತಂಡದಲ್ಲಿರುವ ಯಾರಾದರೂ ಟೆಸ್ಟ್ ಸರಣಿಯಿಂದ ಹೊರಬಿದ್ದರೆ, ಈ ಆಟಗಾರರು ಬಹುಶಃ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಡಿಸೆಂಬರ್ 14 ರಿಂದ ಪ್ರಾರಂಭವಾಗಲಿದೆ. ಹಾಗೆಯೇ ಎರಡನೇ ಟೆಸ್ಟ್ ಡಿಸೆಂಬರ್ 22 ರಿಂದ ಚಿತ್ತಗಾಂಗ್‌ನಲ್ಲಿ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Fri, 9 December 22